ಕೇಜ್ರಿವಾಲ್ ಖುಷಿಪಡಬೇಕಾಗಿಲ್ಲ, ಮೋದಿಜೀ ಅವರ ಅವಧಿ ಪೂರ್ಣಗೊಳಿಸುತ್ತಾರೆ: ಅಮಿತ್ ಶಾ
ಮೋದಿಗೆ 75 ವರ್ಷ ತುಂಬಿದ ಬಗ್ಗೆ ಕೇಜ್ರಿವಾಲ್ ಸಂತೋಷ ಪಡಬೇಕಾಗಿಲ್ಲ . ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಬಿಜೆಪಿಯ ಸಂವಿಧಾನದಲ್ಲಿ ಎಲ್ಲಿಯೂ ಬರೆದಿಲ್ಲ. ಅವರು ಪ್ರಧಾನಿಯಾಗುತ್ತಾರೆ ಮತ್ತು ಅವರ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತೆಲಂಗಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ ಹೇಳಿದ್ದಾರೆ.
ದೆಹಲಿ ಮೇ 11: ನರೇಂದ್ರ ಮೋದಿ (Narendra Modi) 75 ವರ್ಷಕ್ಕೆ ಕಾಲಿಟ್ಟ ನಂತರ ನಿವೃತ್ತಿಯಾಗುತ್ತಾರೆ ಮತ್ತು ಅಮಿತ್ ಶಾ (Amit Shah) ಪ್ರಧಾನಿಯಾಗುತ್ತಾರೆ ಎಂಬ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಪ್ರಧಾನಿ ಮೋದಿಗೆ 75 ವರ್ಷ ತುಂಬಿದ ಬಗ್ಗೆ ಕೇಜ್ರಿವಾಲ್ ಸಂತೋಷ ಪಡಬೇಕಾಗಿಲ್ಲ . ಅವರು ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಬಿಜೆಪಿಯ ಸಂವಿಧಾನದಲ್ಲಿ ಎಲ್ಲಿಯೂ ಬರೆದಿಲ್ಲ. ಅವರು ಪ್ರಧಾನಿಯಾಗುತ್ತಾರೆ ಮತ್ತು ಅವರ ಅವಧಿಯನ್ನು ಪೂರ್ಣಗೊಳಿಸುತ್ತಾರೆ. ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ ಎಂದು ತೆಲಂಗಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ ಹೇಳಿದ್ದಾರೆ.
50 ದಿನಗಳ ನಂತರ ಜೈಲಿನಿಂದ ಹೊರಬಂದ ಒಂದು ದಿನದ ನಂತರ ಶನಿವಾರ ತಮ್ಮ ಮೊದಲ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಜ್ರಿವಾಲ್, 2024 ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ಮತ ಹಾಕುವುದು ಎಂದರೆ ಅಮಿತ್ ಶಾಗೆ ಮತ ಹಾಕುವುದು ಎಂದರ್ಥ. ಏಕೆಂದರೆ ನರೇಂದ್ರ ಮೋದಿ ಮುಂದಿನ ವರ್ಷ 75 ನೇ ವರ್ಷಕ್ಕೆ ಕಾಲಿಟ್ಟ ನಂತರ ಮತ್ತು ನರೇಂದ್ರ ಮೋದಿ ನಿವೃತ್ತರಾಗುತ್ತಾರೆ. ಅಮಿತ್ ಶಾ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದಾರೆ.
ಅಮಿತ್ ಶಾ ಸುದ್ದಿಗೋಷ್ಠಿ
#WATCH | Union Home Minister Amit Shah says “In the 3 phases of the Lok Sabha elections, NDA has reached around 200 seats. The 4th phase is going to be very good for NDA. We will get maximum success in this phase and we will move towards our target of ‘400 paar’. I can say with… pic.twitter.com/5auUfmbGMV
— ANI (@ANI) May 11, 2024
“ಈ ಜನರು ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಇಂಡಿಯಾ ಬಣವನ್ನು ಕೇಳುತ್ತಾರೆ. ನಾನು ಬಿಜೆಪಿಯನ್ನು ಕೇಳುತ್ತೇನೆ ಅವರ ಪ್ರಧಾನಿ ಯಾರು? ಮುಂದಿನ ವರ್ಷ ಸೆಪ್ಟೆಂಬರ್ 17 ರಂದು ಮೋದಿಜಿ 75 ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. 75 ವರ್ಷ ವಯಸ್ಸಿನವರು ನಿವೃತ್ತರಾಗುತ್ತಾರೆ ಎಂದು ಅವರು ನಿಯಮವನ್ನು ಮಾಡಿದ್ದರು. ಎಲ್‌ಕೆ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್ ಅವರನ್ನು ನಿವೃತ್ತ ಮಾಡಿದರು. ಮೋದಿ ಮುಂದಿನ ವರ್ಷ ನಿವೃತ್ತರಾಗಲಿದ್ದಾರೆ. ಅಮಿತ್ ಶಾ ಅವರನ್ನು ಪ್ರಧಾನಿ ಮಾಡಲು ಮತ ಕೇಳುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕರು ಮಾತ್ರವಲ್ಲ, ಅವರ ಪಕ್ಷದ ನಾಯಕರೂ ತಮ್ಮ ರಾಡಾರ್‌ನಲ್ಲಿದ್ದಾರೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬದಲಾಯಿಸುತ್ತದೆ. ಏಕೆಂದರೆ ಬಿಜೆಪಿ ‘ಒಂದು ರಾಷ್ಟ್ರ, ಒಂದು ನಾಯಕ’ ಹಾದಿಯಲ್ಲಿ ಸಾಗುತ್ತಿದೆ ಎಂದಿದ್ದಾರೆ ಕೇಜ್ರಿವಾಲ್.
ಇದನ್ನೂ ಓದಿ: Arvind Kejriwal: ನಮ್ಮ ದೇಶವನ್ನು ಸರ್ವಾಧಿಕಾರದಿಂದ ರಕ್ಷಿಸಬೇಕು, ನನಗೆ ದೇಶದ 140 ಕೋಟಿ ಜನರ ಬೆಂಬಲ ಬೇಕು: ಕೇಜ್ರಿವಾಲ್
ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ, ಕೇಜ್ರಿವಾಲ್ ಅವರು ಬಿಜೆಪಿಯ ಉತ್ತರಾಧಿಕಾರ ಯೋಜನೆಯ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಅವರ ಉತ್ತರಾಧಿಕಾರಿಯಾಗಲು ಅವರ ಯಾವುದೇ ಎಎಪಿ ಸಹೋದ್ಯೋಗಿಗಳನ್ನು ನಂಬಲು ಸಾಧ್ಯವಿಲ್ಲ. ಕೇಜ್ರಿವಾಲ್ ಅವರು ಅರಿವಿಲ್ಲದೆ ಸತ್ಯವನ್ನು ಬಹಿರಂಗಪಡಿಸಿದ್ದಾರೆ. ಮೋದಿ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ