ಪಿಲಿಭಿತ್‌ನಿಂದ ವರುಣ್ ಕೈಬಿಟ್ಟಿದ್ದಕ್ಕೆ ಎಕ್ಸ್ ಪೋಸ್ಟ್ ಕಾರಣ ಆಗಿರಬಹುದು ಎಂದ ಮೇನಕಾ ಗಾಂಧಿ
ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ವರುಣ್ ಅವರಿಗೆ ಟಿಕೆಟ್ ಸಿಗದೇ ಇರಲು ಬೇರೆ ಯಾವುದೇ ಕಾರಣವನ್ನು ಯೋಚಿಸಲು ಸಾಧ್ಯವಿಲ್ಲ ಎಂದು ಮೇನಕಾ ಹೇಳಿದ್ದಾರೆ. ತಾಯಿಯಾಗಿ, ವರುಣ್ ಬದಲಿಗೆ ಜಿತಿನ್ ಪ್ರಸಾದ ಅವರಿಗೆ ಟಿಕೆಟ್ ನೀಡಿರುವುದು ನನಗೆ ಬೇಸರ ತಂದಿದೆ. ಆದರೆ ಇದು ಪಕ್ಷದ ನಿರ್ಧಾರ."ಟಿಕೆಟ್ ಇಲ್ಲದಿದ್ದರೂ ವರುಣ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ.
ದೆಹಲಿ ಮೇ 11: ವರುಣ್ ಗಾಂಧಿಗೆ (Varun Gandhi) ಪಿಲಿಭಿತ್‌ನಿಂದ (Pilibhit) ಬಿಜೆಪಿ ಟಿಕೆಟ್ ಸಿಗದಿರಲು ಕಾರಣ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಮಾಡುತ್ತಿದ್ದ ಪೋಸ್ಟ್ಗಳೇ ಹೊರತು ಬೇರೇನಲ್ಲ ಎಂದು ಮೇನಕಾ ಗಾಂಧಿ (Maneka Gandhi) ಹೇಳಿದ್ದಾರೆ. ವರುಣ್ ಸಾಮಾಜಿಕ ಮಾಧ್ಯಮಗಳಲ್ಲಿ ಸರ್ಕಾರವನ್ನು ಟೀಕಿಸುತ್ತಿದ್ದರು. ಇತ್ತೀಚೆಗೆ ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ವರುಣ್ ಅವರಿಗೆ ಟಿಕೆಟ್ ಸಿಗದೇ ಇರಲು ಬೇರೆ ಯಾವುದೇ ಕಾರಣವನ್ನು ಯೋಚಿಸಲು ಸಾಧ್ಯವಿಲ್ಲ ಎಂದು ಮೇನಕಾ ಹೇಳಿದ್ದಾರೆ. ತಾಯಿಯಾಗಿ, ವರುಣ್ ಬದಲಿಗೆ ಜಿತಿನ್ ಪ್ರಸಾದ ಅವರಿಗೆ ಟಿಕೆಟ್ ನೀಡಿರುವುದು ನನಗೆ ಬೇಸರ ತಂದಿದೆ. ಆದರೆ ಇದು ಪಕ್ಷದ ನಿರ್ಧಾರ.”ಟಿಕೆಟ್ ಇಲ್ಲದಿದ್ದರೂ ವರುಣ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ವರುಣ್ ಇರಬೇಕಿತ್ತು ಎಂದು ನನಗೆ ಅನಿಸಿದೆ ಎಂದು ಮೇನಕಾ ಹೇಳಿದ್ದಾರೆ.
ಮೇ 25 ರಂದು ಆರನೇ ಸುತ್ತಿನ ಚುನಾವಣೆಯಲ್ಲಿ ಮೇನಕಾ ಅವರ ಸ್ಥಾನ ಸುಲ್ತಾನ್‌ಪುರಕ್ಕೆ ಮತದಾನ ನಡೆಯಲಿದ್ದು, ವರುಣ್ ಗಾಂಧಿ ಅವರ ಪರ ಪ್ರಚಾರ ನಡೆಸಬಹುದು. ವರುಣ್ ಪ್ರಚಾರಕ್ಕೆ ಬರಲು ಬಯಸಿದ್ದಾರೆ. ಆದರೆ ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಮೇನಕಾ ಹೇಳಿದ್ದಾರೆ.
ಮನೇಕಾ ಗಾಂಧಿ ಅವರ ಸಂದರ್ಶನ
VIDEO | Lok Sabha Elections 2024: Here’s what BJP candidate from UP’s Sultanpur Lok Sabha seat Maneka Gandhi (@Manekagandhibjp) said on being asked whether his son Varun Gandhi will switch back to Sultanpur or Pilibhit will remain his ‘karmabhoomi’.
“At the moment, India is his… pic.twitter.com/tzFGxaZDo8
— Press Trust of India (@PTI_News) May 11, 2024
ಬಿಜೆಪಿಯ ಜಿತಿನ್ ಪ್ರಸಾದ, ಸಮಾಜವಾದಿ ಪಕ್ಷದ ಭಗವಂತ್ ಸರನ್ ಗಂಗ್ವಾರ್ ಮತ್ತು ಬಹುಜನ ಸಮಾಜ ಪಕ್ಷದ ಅನಿಸ್ ಅಹ್ಮದ್ ಖಾನ್ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಪಿಲಿಭಿತ್‌ನಲ್ಲಿ ಏಪ್ರಿಲ್ 19 ರಂದು ಮೊದಲ ಹಂತದಲ್ಲಿ ಮತ ಚಲಾವಣೆ ಆಗಿದೆ. ವರುಣ್ ಗಾಂಧಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಬಹುದು ಎಂದು ಊಹಿಸಲಾಗಿತ್ತು. ಆದರೆ ವರುಣ್ ಗಾಂಧಿ 2024 ರ ಲೋಕಸಭಾ ಚುನಾವಣೆಯಿಂದ ದೂರವಾಗಿದ್ದರು.
ವರುಣ್ ಗಾಂಧಿ ಎಲ್ಲಿದ್ದಾರೆ?
ಟಿಕೆಟ್ ನಿರಾಕರಿಸಿದ ನಂತರ ವರುಣ್ ಗಾಂಧಿ ಪಿಲಿಭಿತ್‌ನಲ್ಲಿ ಕಾಣಿಸಿಕೊಂಡಿಲ್ಲ. ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ರ‍್ಯಾಲಿಗಳಲ್ಲಿಯೂ ಭಾಗವಹಿಸಲಿಲ್ಲ. ಟಿಕೆಟ್ ನಿರಾಕರಿಸಿದ ನಂತರ, ಅವರು ಪಿಲಿಭಿತ್ ಜನರಿಗೆ ಭಾವನಾತ್ಮಕ ಪತ್ರವನ್ನು ಬರೆದಿದ್ದು, ಅದರಲ್ಲಿ ಅವರು ಮೂರು ವರ್ಷದವನಾಗಿದ್ದಾಗ 1983 ರಲ್ಲಿ ಪಿಲಿಭಿತ್‌ಗೆ ಮೊದಲ ಬಾರಿಗೆ ಬಂದದ್ದನ್ನು ವಿವರಿಸಿದರು. “ಇಂದು ನಾನು ಈ ಪತ್ರವನ್ನು ಬರೆಯುವಾಗ ಅಸಂಖ್ಯಾತ ನೆನಪುಗಳು ನನ್ನನ್ನು ಭಾವುಕರನ್ನಾಗಿಸಿದೆ. 1983 ರಲ್ಲಿ ಪಿಲಿಭಿತ್‌ಗೆ ಮೊದಲ ಬಾರಿಗೆ ತನ್ನ ತಾಯಿಯ ಬೆರಳುಗಳನ್ನು ಹಿಡಿದುಕೊಂಡು ಬಂದ ಮೂರು ವರ್ಷದ ಪುಟ್ಟ ಮಗು ನನಗೆ ನೆನಪಿದೆ. ಒಂದು ದಿನ ಈ ಭೂಮಿ ನನ್ನ ಕರ್ಮಭೂಮಿ ಆಗುತ್ತದೆ ಮತ್ತು ಇಲ್ಲಿನ ಜನರು ನನ್ನ ಕುಟುಂಬವಾಗುತ್ತಾರೆ ಎಂದು ತಿಳಿದಿರಲಿಲ್ಲ ಎಂದು ಅವರ ಪತ್ರದಲ್ಲಿ ಬರೆಯಲಾಗಿದೆ. “ಪಿಲಿಭಿತ್ ನಲ್ಲಿ ಸಿಕ್ಕ ಆದರ್ಶಗಳು ಸಂಸದರಾಗಿ ಮಾತ್ರವಲ್ಲದೆ ವ್ಯಕ್ತಿಯಾಗಿಯೂ ನನ್ನ ಉನ್ನತಿ ಮತ್ತು ಬೆಳವಣಿಗೆಗೆ ಸಹಕಾರಿಯಾಗಿದೆ. ನಿಮ್ಮ ಪ್ರತಿನಿಧಿಯಾಗಿರುವುದು ನನ್ನ ಜೀವನದ ಶ್ರೇಷ್ಠ ಗೌರವವಾಗಿದೆ ಮತ್ತು ನಾನು ಯಾವಾಗಲೂ ನಿಮ್ಮ ಹಿತಾಸಕ್ತಿಗಳಿಗಾಗಿ ಧ್ವನಿ ಎತ್ತಿದ್ದೇನೆ.
ಸಂಸದನಾಗಿ ಅಲ್ಲದಿದ್ದರೂ ಮಗನಾಗಿಯಾದರೂ ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ಬದ್ಧನಾಗಿದ್ದು, ನನ್ನ ಬಾಗಿಲು ಹಿಂದಿನಂತೆ ನಿನಗಾಗಿ ಸದಾ ತೆರೆದಿರುತ್ತದೆ. ಸಾಮಾನ್ಯರ ಧ್ವನಿ ಎತ್ತಲು ರಾಜಕೀಯಕ್ಕೆ ಬಂದಿದ್ದೇನೆ. ಇಂದು ನಾನು ಇದಕ್ಕಾಗಿ ನಾನು ಯಾವುದೇ ವೆಚ್ಚವನ್ನು ಪಾವತಿಸಬೇಕಾಗಿದ್ದರೂ ಸಹ ಈ ಕೆಲಸವನ್ನು ಯಾವಾಗಲೂ ಮುಂದುವರಿಸಲು ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ ಎಂದು ವರುಣ್ ಹೇಳಿದ್ದಾರೆ.
ಇದನ್ನೂ ಓದಿ: Lok Sabha Polls: ಕಲ್ಯಾಣ್ ಸಿಂಗ್ ನಿಧನರಾದಾಗ ಬಾರದ ಅಖಿಲೇಶ್ ಯಾದವ್ ಮುಖ್ತಾರ್ ಅನ್ಸಾರಿ ಮನೆಗೆ ಹೋಗಿದ್ದಾರೆ; ಸಿಎಂ ಯೋಗಿ
ಪಿಲಿಭಿತ್ ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಅವರೊಂದಿಗೆ ಸುದೀರ್ಘ ಒಡನಾಟವನ್ನು ಹೊಂದಿದ್ದು, ಅವರ್ಯಾರೂ ಇಲ್ಲಿಂದ ಸ್ಪರ್ಧಿಸದಿರುವುದು ಇದೇ ಮೊದಲು. ಮೇನಕಾ ಗಾಂಧಿ 1989 ರಲ್ಲಿ ಜನತಾ ದಳ ಟಿಕೆಟ್‌ನಲ್ಲಿ ಪಿಲಿಭಿತ್‌ನಿಂದ ಗೆದ್ದರು. 1991 ರಲ್ಲಿ ಸೋತಿದ್ದರೂ 1996 ರಲ್ಲಿ ಮತ್ತೆ ಗೆದ್ದರು. ಅವರು 1998 ಮತ್ತು 1999 ರಲ್ಲಿ ಮತ್ತೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದರು. 2004 ಮತ್ತು 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು. ವರುಣ್ ಗಾಂಧಿ 2009 ಮತ್ತು 2019ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆದ್ದಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ