ಮಂಡ್ಯ, ಜೂನ್ 05: ತೀವ್ರ ಕೂತುಹಲ ಮೂಡಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ (Mandya Lok Sabha Constituency) ಹೊರ ಬಿದ್ದಿದೆ. ಅದರಲ್ಲೂ ರಾಜ್ಯದ ಗಮನ ಸೆಳೆದಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಭರ್ಜರಿ ಮತಗಳಿಂದ ಗೆಲವು ಸಾಧಿಸಿದ್ದಾರೆ. ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರು, ಕಾಂಗ್ರೆಸ್ ಅಭ್ಯರ್ಥಿ ಮಕಾಡೆ ಮಲಗಿದ್ದಾರೆ. ಯಾರು ನಿರೀಕ್ಷೆ ಮಾಡಿರದಂತಹ ಅಂತರದಲ್ಲಿ ಹೆಚ್ಡಿ ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು ಫಲಿತಾಂಶ ಹೊರಗೆ ಬಂದ ನಂತರ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ. ಅದರಲ್ಲೂ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕುಮಾರಸ್ವಾಮಿ ಗೆಲುವಿಗೆ ಹಲವು ಕಾರಣಗಳು ಇವೆ.
ಪ್ರಮುಖವಾಗಿ ಕುಮಾರಸ್ವಾಮಿ ಅವರೇ ಸ್ವರ್ಧೆ ಮಾಡಿದ್ದು ಅವರ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಅಲ್ಲದೆ ಕುಮಾರಸ್ವಾಮಿ ಅವರ ವರ್ಚಸ್ಸು, ಮಂಡ್ಯ ಈ ಹಿಂದಿನಿಂದಲೂ ಜೆಡಿಎಸ್ನ ಭದ್ರ ಕೋಟೆಯಾಗಿರುವುದು, ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕೂಡ ವರ್ಕೌಟ್ ಆಗಿದೆ. ಅಲ್ಲದೆ ಒಕ್ಕಲಿಗರು ಪ್ರಮುಖವಾಗಿ ಹೆಚ್ಡಿ ಕುಮಾರಸ್ವಾಮಿ ಕೈ ಹಿಡಿದ್ದಿದ್ದು ಕೂಡ ಪ್ರಮುಖ ಕಾರಣವಾಗಿದೆ.
ಜಿಲ್ಲೆಯ ಜೆಡಿಎಸ್ ಮಾಜಿ ಶಾಸಕರು ಒಗ್ಗಟ್ಟು ಪ್ರದರ್ಶನ ಮಾಡಿ ಒಟ್ಟಾಗಿ ಕೆಲಸ ಮಾಡಿದ್ದು ಕೂಡ ಗೆಲುವಿಗೆ ಕಾರಣವಾಗಿದೆ. ಇದರ ನಡುವೆ ಕುಮಾರಸ್ವಾಮಿ ಗೆದ್ದರೇ ಕೇಂದ್ರದಲ್ಲಿ ಮಂತ್ರಿ ಆಗುತ್ತಾರೆ. ಕಾವೇರಿ ಸಮಸ್ಯೆಗೆ ಪರಿಹಾರ ಸಿಗಬಹುದು, ಎದುರಾಗಿ ಅಭ್ಯರ್ಥಿ ಹೊಸ ಮುಖ. ಕಳೆದ ಬಾರಿ ಪುತ್ರ ನಿಖಿಲ್ರನ್ನ ಸೋಲಿನ ಸಿಂಪತಿ. ಗ್ಯಾರಂಟಿ ಯೋಜನೆಗಳು ಕೈ ಹಿಡಿಯದ್ದೆ ಇದ್ದದ್ದು, ಕಾಂಗ್ರೆಸ್ ನಾಯಕರುಗಳ ಹೇಳಿಕೆಗಳು ಕುಮಾರಸ್ವಾಮಿ ಗೆಲುವಿಗೆ ಪ್ರಮುಖ ಅಂಶಗಳಾಗಿವೆ.
ಮಂಡ್ಯ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಲ್ಲಿ ಆರು ಕಾಂಗ್ರೆಸ್ ಶಾಸಕರು ಹಾಗೂ ಒಬ್ಬ ಬೆಂಬಲಿತ ಶಾಸಕ ಇದ್ದರು ಕೂಡ ಮಂಡ್ಯದಲ್ಲಿ ಕಾಂಗ್ರೆಸ್ಗೆ ಹೀನಾಯ ಸೋಲು ಆಗಿದೆ. ಈ ಚುನಾವಣೆ ಕುಮಾರಸ್ವಾಮಿ ವರ್ಸಸ್ ಚಲುವರಾಯಸ್ವಾಮಿ ಎಂಬಂತೆ ಇತ್ತು. ಆದರೂ ಕೂಡ ಅತ್ಯಾಧಿಕ ಮತಗಳಿಂದ ಕುಮಾರಸ್ವಾಮಿ ಗೆಲುವು ಸಾಧಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಬಿಜೆಪಿ ಎಡವಿದ್ದೆಲ್ಲಿ? ಶ್ರೀರಾಮುಲು ಮುಂದಿನ ರಾಜಕೀಯ ಜೀವನ ಕಥೆ ಏನು?
ಇನ್ನು ಕೈ ಅಭ್ಯರ್ಥಿ ಸ್ಟಾರ್ ಚಂದ್ರು ಸೋಲಿಗೆ ಪ್ರಮುಖವಾಗಿ ಕಾಂಗ್ರೆಸ್ ನಾಯಕರುಗಳ ಅತಿಯಾದ ಆತ್ಮವಿಶ್ವಾಸ. ಪ್ರಮುಖವಾಗಿ ಕ್ಷೇತ್ರಕ್ಕೆ ಪರಿಚಯವೇ ಇಲ್ಲದ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಿದ್ದು. ಗ್ಯಾರಂಟಿ ಯೋಜನೆಗಳ ಮೇಲೆ ಮಹಿಳಾ ಮತಗಳು ಕಾಂಗ್ರೆಸ್ಗೆ ವಾಲದೆ ಇದ್ದದ್ದು. ಆರಂಭದಲ್ಲಿ ಇದ್ದ ಉತ್ಸಹ ಕೊನೆಯಲ್ಲಿ ಇಲ್ಲದೆ ಇದ್ದದ್ದು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ. ಅಲ್ಲದೆ ಪ್ರಮುಖದಲ್ಲಿ ಜಿಲ್ಲೆಯಲ್ಲಿ ಭೀಕರ ಬರ ಇದ್ದರು, ನಾಲೆಗಳಿಗೆ ನೀರು ಹರಿಸದೆ ಇದ್ದದ್ದು ಕೂಡ ಸೋಲಿಗೆ ಪ್ರಮುಖ ಕಾರಣವಾಗಿದೆ.
ಮೈತ್ರಿ ಅಭ್ಯರ್ಥಿ ಹೆಚ್ಡಿ ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿ, ಪುತ್ರ ಸೋಲಿನ ಸೇಡು ತೀರಿಸಿಕೊಂಡಿದ್ದಾರೆ. ಮತ್ತೊಂದು ಕಡೆ ಕಾಂಗ್ರೆಸ್ಗೆ ತೀವ್ರ ಮುಖಭಂಗವಾಗಿದ್ದು ಸೋಲಿನ
ಪರಾಮರ್ಶೆಗೆ ಕಾಂಗ್ರೆಸ್ ಮುಂದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.