ಲೋಕಸಭಾ ಚುನಾವಣೆಗೆ ಸಚಿವ ಚಲುವರಾಯಸ್ವಾಮಿ ಪತ್ನಿ ಸ್ವರ್ಧೆ? ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಧನಲಕ್ಷ್ಮೀಗೆ ಫಿಕ್ಸ್?

| Updated By: ಸಾಧು ಶ್ರೀನಾಥ್​

Updated on: Oct 28, 2023 | 12:04 PM

ಮಂಡ್ಯದಲ್ಲಿ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪೂರ್ವಭಾವಿ ಸಭೆ ನಡೆಸಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮೀ ಹೆಸರು ಕೇಳಿಬರುತ್ತಿದೆ. ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಧನಲಕ್ಷ್ಮೀಗೆ ಫಿಕ್ಸ್ ಎಂದು ಹೇಳಲಾಗುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಕ್ಷೇತ್ರಕ್ಕೆ ತಮ್ಮ ಪತ್ನಿಯನ್ನ ಪರಿಚಯಿಸಲು ಸಚಿವರು ಮುಂದಾಗಿದ್ದಾರೆ.

ಲೋಕಸಭಾ ಚುನಾವಣೆಗೆ ಸಚಿವ ಚಲುವರಾಯಸ್ವಾಮಿ ಪತ್ನಿ ಸ್ವರ್ಧೆ? ಮಂಡ್ಯ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಧನಲಕ್ಷ್ಮೀಗೆ ಫಿಕ್ಸ್?
ಲೋಕಸಭಾ ಚುನಾವಣೆಗೆ ಸಚಿವ ಚಲುವರಾಯಸ್ವಾಮಿ ಪತ್ನಿ ಸ್ವರ್ಧೆ?
Follow us on

ಮುಂದಿನ ವರ್ಷದ ಆದಿಯಲ್ಲಿ ನಡೆಯಲ್ಲಿರುವ ಲೋಕಸಭಾ ಚುನಾವಣೆಗೆ ಈಗಿಂದಲೇ ಕಾವೇರುತ್ತಿದೆ. ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ಈಗಾಗಲೇ ಲೋಕ ಸಮರಕ್ಕೆ ಭರ್ಜರಿ ತಯಾರಿ ಮಾಡುತ್ತಿದೆ. ಹೇಗಾದರೂ ಮಾಡಿ ಸಕ್ಕರಿನಗರಿಯನ್ನ ಕಬ್ಜ ಮಾಡಬೇಕು ಎಂಬ ಪ್ಯ್ಲಾನ್ ನಲ್ಲಿ ಇರುವ ಕೈ ಪಡೆ, ಈಗಾಗಲೇ ಚುನಾವಣೆಗೆ ತಯಾರಿ ನಡೆಸುತ್ತಿದೆ. ಈ ಮಧ್ಯೆ ಸಚಿವ ಚಲುವರಾಯಸ್ವಾಮಿ ಪತ್ನಿ ಹೆಸರು ಕೂಡ ಕೇಳಿಬರುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಹಲವು ಕಾರ್ಯಕ್ರಮಗಳಲ್ಲಿ ಚಲುವರಾಯಸ್ವಾಮಿ ಪತ್ನಿ ಕಾಣಿಸಿಕೊಳ್ಳುತ್ತಿದ್ದಾರೆ.

ಹೌದು ವಿಧಾನಸಭಾ ಚುನಾವಣೆಯಲ್ಲಿ ಯಾರೂ ನಿರೀಕ್ಷೆ ಮಾಡದ ಫಲಿತಾಂಶವನ್ನ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಕಂಡಿತ್ತು. ಚುನಾವಣೆ ಮುಗಿದು ಹಲವು ತಿಂಗಳು ಕಳೆದರೂ ಇನ್ನು ಸಹ ಚುನಾವಣಾ ಗೆಲುವಿನ ಗುಂಗಿನಲ್ಲಿದೆ ಕೈ ಪಡೆ. ಈ ಮಧ್ಯೆ ಲೋಕಸಭಾ ಚುನಾವಣೆಗೂ ಕೂಡ ಈಗಿನಿಂದಲೂ ಕೂಡ ತಯಾರಿ ಮಾಡಿಕೊಳ್ಳುತ್ತಿದೆ. ಅದರಲ್ಲೂ ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿರೋ ಮಂಡ್ಯವನ್ನ, ಈ ಬಾರಿ ಶತಾಯಗತಾಯ ಗೆಲ್ಲಲೇಬೇಕು ಎಂಬ ವಿಶ್ವಾಸದಲ್ಲಿದೆ ಕಾಂಗ್ರೆಸ್.

ಈ ನಿಟ್ಟಿನಲ್ಲಿ ಈಗಿನಿಂದಲೇ ಭರ್ಜರಿ ತಯಾರಿ ಕೂಡ ನಡೆಸುತ್ತಿದೆ. ಈಗಾಗಲೇ ಮಂಡ್ಯದಲ್ಲಿ ಕಾಂಗ್ರೆಸ್ ಪೂರ್ವಭಾವಿ ಸಭೆಯನ್ನ ಕೂಡ ನಡೆಸಿದೆ. ಈ ಮಧ್ಯೆ ಮಂಡ್ಯ ಜಿಲ್ಲಾ ಉಸ್ತುವಾರಿ ಹಾಗೂ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರ ಪತ್ನಿ ಧನಲಕ್ಷ್ಮೀ ಹೆಸರು ಕೇಳಿಬರುತ್ತಿದೆ. ಈ ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್ ಧನಲಕ್ಷ್ಮೀ ಅವರಿಗೆ ಫಿಕ್ಸ್ ಎಂತಲೂ ಹೇಳಲಾಗುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಕ್ಷೇತ್ರಕ್ಕೆ ತಮ್ಮ ಪತ್ನಿಯನ್ನ ಪರಿಚಯಿಸಲು ಸಚಿವರು ಮುಂದಾಗಿದ್ದಾರೆ.

Also Read: ಸಚಿವ ಚಲುವರಾಯಸ್ವಾಮಿ ಸಮ್ಮುಖದಲ್ಲಿ ರೌಡಿ ಶೀಟರ್​ನನ್ನು ಸನ್ಮಾನ ಮಾಡಿಸಿದ ಕಾಂಗ್ರೆಸ್ ಶಾಸಕ ಬಂಡಿ ಸಿದ್ದೇಗೌಡ!

ಹಲವು ಸರ್ಕಾರಿ ಹಾಗೂ ಖಾಸಗಿ ಕಾರ್ಯಕ್ರಮಗಳಲ್ಲಿ ಪತಿ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಚುನಾವಣೆಗೆ ಸ್ವರ್ಧೆ ಮಾಡುತ್ತಾರೆ ಎಂಬ ಚರ್ಚೆ ಶುರುವಾದ ಬೆನ್ನಲ್ಲೇ ಧನಲಕ್ಷ್ಮೀ ಫುಲ್ ಆಕ್ಟೀವ್ ಆಗಿದ್ದು, ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದಕ್ಕೆ ಪುಷ್ಠಿ ನೀಡುತ್ತಿದೆ. ಇನ್ನು ಈ ಬಗ್ಗೆ ಸಚಿವ ಚಲುವರಾಯಸ್ವಾಮಿ ಅವರನ್ನ ಕೇಳಿದ್ರೆ, ನಮ್ಮ ಕುಟುಂಬದಿಂದ ಯಾರು ಸ್ವರ್ಧೆ ಮಾಡಲ್ಲ ಅಂತಾ ಹೇಳುತ್ತಿದ್ದಾರೆ.

ಇನ್ನು ಸಚಿವ ಚಲುವರಾಯಸ್ವಾಮಿ, ಪರವಾಗಿ ಮಂಡ್ಯ ಶಾಸಕ ಗಣಿಗ ರವಿ ಕೂಡ ಬ್ಯಾಟಿಂಗ್ ಬೀಸಿದ್ದು, ಸಿಎಂ ಸಿದ್ದರಾಮಯ್ಯ ಬಳಿ ಕೂಡ ಚರ್ಚೆ ಮಾಡಿ, ಸಚಿವರ ಪತ್ನಿಗೆ ಟಿಕೆಟ್  ನೀಡಬೇಕು. ಅವರಿಗೆ ಟಿಕೆಟ್ ನೀಡಿದ್ರೆ ಮಂಡ್ಯದಲ್ಲಿ ಗೆಲವು ಸಾಧಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿರೋ ಶಾಸಕ ಗಣಿಗ ರವಿಕುಮಾರ್, ಎಸ್.ಎಂ. ಕೃಷ್ಣ ಪುತ್ರಿ ಶಾಂಭವಿ ಅಥವಾ ನಮ್ಮ ಮಂತ್ರಿಗಳು ನಿಲ್ಲಲಿ. ನಾವು ಗೆಲ್ಲಲೇ ಬೇಕು. ಇಲ್ಲ ಚಲುವರಾಯಸ್ವಾಮಿ ಅವರ ಪತ್ನಿ ಅವರೇ ಸ್ಪರ್ಧೆ ಮಾಡಲಿ. ಬಿಜೆಪಿ-ಜೆಡಿಎಸ್ ಒಗ್ಗಟ್ಟಾಗಿ ನಮ್ಮ ಮೇಲೆ ಹೋರಾಟ ಮಾಡ್ತಿದ್ದಾರೆ. ಈ ಮೂವರಲ್ಲಿ ಒಬ್ಬರನ್ನ ಹಾಕಿದ್ರೆ ಮಾತ್ರ ಗೆಲ್ಲಲ್ಲು ಸಾಧ್ಯ ಎನ್ನುತ್ತಿದ್ದಾರೆ ಗಣಿಗ ರವಿಕುಮಾರ್, ಮಂಡ್ಯ ಕಾಂಗ್ರೆಸ್ ಶಾಸಕ. ಒಟ್ಟಾರೆ ಮಂಡ್ಯದಲ್ಲಿ ಗೆಲವು ಸಾಧಿಸಲು ಕೈ ಪಡೆ ಮಾಸ್ಟರ್ ಪ್ಲ್ಯಾನ್ ಮಾಡ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:02 pm, Sat, 28 October 23