25000 ದಿಂದ 95 ಲಕ್ಷ ರೂ. ವರೆಗೆ: ಲೋಕಸಭೆ ಚುನಾವಣೆ ಖರ್ಚಿನ ಮಿತಿ ಹೆಚ್ಚಳ ಯಾವಾಗೆಲ್ಲ ಆಯ್ತು? ಇಲ್ಲಿದೆ ಮಾಹಿತಿ

Election Expenditure Limit: ದೇಶದಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಆದಾಗ ಅಭ್ಯರ್ಥಿಯ ಖರ್ಚಿಗೆ ಎಷ್ಟು ಮೊತ್ತ ನಿಗದಿಪಡಿಸಲಾಗಿತ್ತು? ಆಮೇಲೆ ಯಾವಾಗಲೆಲ್ಲ ಚುನಾವಣಾ ಖರ್ಚಿನ ಮಿತಿ ಹೆಚ್ಚು ಮಾಡಲಾಯಿತು? ಈಗ ಎಷ್ಟಾಗಿದೆ ಎಂಬುದರ ಇಣುಕು ನೋಟ ಇಲ್ಲಿದೆ.

25000 ದಿಂದ 95 ಲಕ್ಷ ರೂ. ವರೆಗೆ: ಲೋಕಸಭೆ ಚುನಾವಣೆ ಖರ್ಚಿನ ಮಿತಿ ಹೆಚ್ಚಳ ಯಾವಾಗೆಲ್ಲ ಆಯ್ತು? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Edited By:

Updated on: Mar 30, 2024 | 12:58 PM

ನವದೆಹಲಿ, ಮಾರ್ಚ್​​ 30: ಹಣವಿಲ್ಲದ ಕಾರಣ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಸ್ಪರ್ಧಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿರುವುದು ಕಳೆದ ಕೆಲವು ದಿನಗಳಿಂದ ಚರ್ಚೆಯಲ್ಲಿದೆ. ಈ ಮಧ್ಯೆ, ಪ್ರತಿ ಬಾರಿಯೂ ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳು ಚುನಾವಣೆಯ ಉದ್ದೇಶಕ್ಕೆ ಇಂತಿಷ್ಟು ಮೊತ್ತ ಖರ್ಚು ಮಾಡಬಹುದು ಎಂದು ಚುನಾವಣಾ ಆಯೋಗ ಮಿತಿ ನಿಗದಿಪಡಿಸುತ್ತದೆ. ಈ ಮಿತಿಯನ್ನೂ ಮೀರಿ ಅಭ್ಯರ್ಥಿಗಳು ಅಕ್ರಮವಾಗಿ ಹಣ, ಉಡುಗೊರೆ ಹಂಚುವುದು ಕೂಡ ಗುಟ್ಟಾಗಿ ಏನೂ ಉಳಿದಿಲ್ಲ.

ಆದಾಗ್ಯೂ, ಆಯೋಗ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಖರ್ಚಿಗೆ ಸದ್ಯ ನಿಗದಿಪಡಿಸಿರುವ ಮಿತಿ 95 ಲಕ್ಷ ರೂಪಾಯಿ. ಅದೇ ರೀತಿ ವಿಧಾನಸಭೆ ಚುನಾವಣೆಗೆ 40 ಲಕ್ಷ ರೂ. ಖರ್ಚಿನ ಮಿತಿ ನಿಗದಿಪಡಿಸಲಾಗಿದೆ.

ಹಾಗಾದರೆ ದೇಶದಲ್ಲಿ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಆದಾಗ ಅಭ್ಯರ್ಥಿಯ ಖರ್ಚಿಗೆ ಎಷ್ಟು ಮೊತ್ತ ನಿಗದಿಪಡಿಸಲಾಗಿತ್ತು? ಆಮೇಲೆ ಯಾವಾಗಲೆಲ್ಲ ಚುನಾವಣಾ ಖರ್ಚಿನ ಮಿತಿ ಹೆಚ್ಚು ಮಾಡಲಾಯಿತು? ಈಗ ಎಷ್ಟಾಗಿದೆ ಎಂಬುದರ ಇಣುಕು ನೋಟ ಇಲ್ಲಿದೆ.

  1. 1951-52: ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಲೋಕಸಭೆಯ ಅಭ್ಯರ್ಥಿಗಳು ಗರಿಷ್ಠ 25,000 ರೂ.ಗಳನ್ನು ಖರ್ಚು ಮಾಡಲು ಅವಕಾಶ ನೀಡಲಾಗಿತ್ತು.
  2. 1971: ಹೆಚ್ಚಿನ ರಾಜ್ಯಗಳಲ್ಲಿ ವೆಚ್ಚದ ಮಿತಿಯನ್ನು 35,000 ರೂ.ಗೆ ಹೆಚ್ಚಳ ಮಾಡಲಾಯಿತು.
  3. 1980: ಪ್ರತಿ ಅಭ್ಯರ್ಥಿಗೆ ಗರಿಷ್ಠ 1 ಲಕ್ಷ ರೂ. ಗೆ ಖರ್ಚಿನ ಮಿತಿ ಏರಿಕೆ ಮಾಡಲಾಯಿತು.
  4. 1984: ಕೆಲವು ರಾಜ್ಯಗಳಲ್ಲಿ 1.5 ಲಕ್ಷಕ್ಕೆ ಮತ್ತು ಸಣ್ಣ ರಾಜ್ಯಗಳಲ್ಲಿ 1.3 ಲಕ್ಷ ರೂ.ಗೆ ಏರಿಕೆ ಮಾಡಲಾಯಿತು. ಒಂದರಿಂದ ಎರಡು ಸೀಟುಗಳನ್ನು ಹೊಂದಿರುವ ರಾಜ್ಯಗಳು 1 ಲಕ್ಷಕ್ಕೆ ಮಿತಿಗೊಳಿಸಿದರೆ, ಚಂಡೀಗಢದಂತಹ ಕೇಂದ್ರಾಡಳಿತ ಪ್ರದೇಶಗಳಲ್ಲಿ 50,000 ರೂ. ನಿಗದಿ ಮಾಡಲಾಯಿತು.
  5. 1996: ಹೆಚ್ಚಿನ ರಾಜ್ಯಗಳಿಗೆ ಚುನಾವಣಾ ವೆಚ್ಚದ ಮಿತಿ 4.5 ಲಕ್ಷ ರೂ.ಗೆ ಮಿತಿ ಹೆಚ್ಚಳ.
  6. 1998: ಚುನಾವಣಾ ವೆಚ್ಚದ ಮಿತಿ 15 ಲಕ್ಷ ರೂ.ಗೆ ಹೆಚ್ಚಳ.
  7. 2004: 25 ಲಕ್ಷ ರೂ.ಗೆ ಚುನಾವಣಾ ಖರ್ಚು ಏರಿಕೆ ಮಾಡಲಾಯಿತು.
  8. 2014: 70 ಲಕ್ಷ ರೂ.ಗೆ ಚುನಾವಣಾ ವೆಚ್ಚದ ಮಿತಿ ಹೆಚ್ಚಳ ಮಾಡಲಾಯಿತು.
  9. 2024: ಪ್ರಸ್ತುತ ಚುನಾವಣೆಯಲ್ಲಿ 95 ಲಕ್ಷ ರೂ.ಗೆ ನಿಗದಿ ಮಾಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಚುನಾವಣೆ ಸ್ಪರ್ಧಿಸಲು ಎಷ್ಟು ಹಣ ಬೇಕು? ನಿರ್ಮಲಾ ಹೇಳಿಕೆಯಿಂದ ಮೂಡಿದ ಪ್ರಶ್ನೆಗೆ ಇಲ್ಲಿದೆ ಉತ್ತರ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Sat, 30 March 24

ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More
Loading...
Unable to load recommendations.
Follow Us