Poll of Polls: ಎನ್​​ಡಿಎಗೆ 350ಕ್ಕೂ ಹೆಚ್ಚು ಸೀಟು, ಇಂಡಿಯಾ ಮೈತ್ರಿಕೂಟಕ್ಕೆ ಸಿಗಬಹುದು 125-150 ಸ್ಥಾನ: ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆ

|

Updated on: Jun 01, 2024 | 8:47 PM

ಸೀಟುಗಳ ಸಂಖ್ಯೆಯಲ್ಲಿ ವ್ಯತ್ಯಾಸ ತೋರಿಸುತ್ತಿದ್ದರೂ, ಎರಡು ಎಕ್ಸಿಟ್ ಪೋಲ್‌ಗಳು ಇಂಡಿಯಾ ಮೈತ್ರಿಕೂಟ ಬಣವು ತುಂಬಾ ಹಿಂದುಳಿದಿದೆ ಎಂದು ಭವಿಷ್ಯ ನುಡಿಯುತ್ತಿದೆ. ಎರಡು ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ, ಇಂಡಿಯಾ ಬ್ಲಾಕ್ 125-150 ಸ್ಥಾನಗಳನ್ನು ಪಡೆಯಲಿದೆ.

Poll of Polls: ಎನ್​​ಡಿಎಗೆ 350ಕ್ಕೂ ಹೆಚ್ಚು ಸೀಟು, ಇಂಡಿಯಾ ಮೈತ್ರಿಕೂಟಕ್ಕೆ ಸಿಗಬಹುದು 125-150 ಸ್ಥಾನ: ಭವಿಷ್ಯ ನುಡಿದ ಮತಗಟ್ಟೆ ಸಮೀಕ್ಷೆ
ನರೇಂದ್ರ ಮೋದಿ
Follow us on

ದೆಹಲಿ ಜೂನ್ 01 : ನರೇಂದ್ರ  ಮೋದಿ (Narendra Modi) ಮೂರನೇ ಅವಧಿಗೆ ಪ್ರಧಾನಿಯಾಗಲಿದ್ದಾರೆ ಎಂದು ಮತಗಟ್ಟೆ ಸಮೀಕ್ಷೆಗಳು (Exit Polls) ಹೇಳುತ್ತಿವೆ. ಲೋಕಸಭಾ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಚುನಾವಣೆ ಇಂದು ಸಂಜೆ ಮುಕ್ತಾಯವಾಗುತ್ತಿದ್ದಂತೆ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಸೀಟುಗಳ ಸಂಖ್ಯೆಯಲ್ಲಿ ವ್ಯತ್ಯಾಸ ತೋರಿಸುತ್ತಿದ್ದರೂ, ಎರಡು ಎಕ್ಸಿಟ್ ಪೋಲ್‌ಗಳು ಇಂಡಿಯಾ ಮೈತ್ರಿಕೂಟ (INDIA) ಬಣವು ತುಂಬಾ ಹಿಂದುಳಿದಿದೆ ಎಂದು ಭವಿಷ್ಯ ನುಡಿಯುತ್ತಿದೆ. ಎರಡು ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎ 350ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ, ಇಂಡಿಯಾ ಬ್ಲಾಕ್ 125-150 ಸ್ಥಾನಗಳನ್ನು ಪಡೆಯಲಿದೆ.

ಒಟ್ಟು ನಾಲ್ಕು ಎಕ್ಸಿಟ್ ಪೋಲ್‌ಗಳ ಪ್ರಕಾರ ಎನ್‌ಡಿಎ 365 ಸ್ಥಾನಗಳನ್ನು ಪಡೆಯಲಿದೆ, ಇಂಡಿಯಾ ಮೈತ್ರಿಕೂಟ 142 ಸ್ಥಾನಗಳನ್ನು ಪಡೆಯಲಿದೆ.

ಮತಗಟ್ಟೆ ಸಮಿಕ್ಷೆ ಏನು ಹೇಳುತ್ತದೆ?

ಮತಗಟ್ಟೆ ಸಮೀಕ್ಷೆ ಎನ್​​ಡಿಎ ಇಂಡಿಯಾ ಮೈತ್ರಿಕೂಟ  ಇತರೆ 
ರಿಪಬ್ಲಿಕ್ ಟಿವಿ- ಮ್ಯಾಟ್ರಿಜ್ 353-368 118-133 43-48
ಎನ್​​ಡಿಟಿವಿ 365 142 36
ರಿಪಬ್ಲಿಕ್ ಟಿವಿ-  PMARQ 359 154 30
ಜನ್ ಕೀ ಬಾತ್ 362-392 141-161 10-20

ಜನ್ ಕಿ ಬಾತ್‌ನ ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಗೆ ಗರಿಷ್ಠ ಸಂಖ್ಯೆಯ ಸೀಟುಗಳು ಅಂದರೆ 362-392 ಸೀಟು ಸಿಗಬಹುದು ಎಂದು ಹೇಳಲಾಗಿದೆ. ಅದೇ ವೇಳೆ ಇಂಡಿಯಾ ಮೈತ್ರಿಕೂಟಕ್ಕೆ 141-161 ಸ್ಥಾನಗಳು ಸಿಗಬಹುದು ಎಂದು ಹೇಳಲಾಗಿದ .
ಇಂಡಿಯಾ ನ್ಯೂಸ್-ಡಿ ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಎನ್‌ಡಿಎ 371 ಸ್ಥಾನಗಳನ್ನು ಮತ್ತು ಇಂಡಿಯಾ ಬಣ 125 ಸ್ಥಾನಗಳನ್ನು ಪಡೆಯಬಹುದು. ರಿಪಬ್ಲಿಕ್ ಟಿವಿ- P MARQ ಎನ್‌ಡಿಎಗೆ 359 ಮತ್ತು ಇಂಡಿಯಾ ಬಣಕ್ಕೆ 154 ಸೀಟುಗಳು ಸಿಗಬಹುದು ಎಂದು ಹೇಳಿದೆ.

ಎಲ್ಲಾ ಎಕ್ಸಿಟ್ ಪೋಲ್‌ಗಳು ದಕ್ಷಿಣ ಮತ್ತು ಬಂಗಾಳದಲ್ಲಿ ಎನ್‌ಡಿಎ ಲಾಭ ಪಡೆಯುತ್ತದೆ ಎಂದು ಹೇಳಿವೆ.

ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಅವರೊಂದಿಗಿನ ಮೈತ್ರಿ ಫಲ ನೀಡಿದ್ದು, ರಾಜ್ಯದ 25 ಸ್ಥಾನಗಳಲ್ಲಿ ಎನ್‌ಡಿಎ 18 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿವೆ.

ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ಗೆ ಆದ್ಯತೆ ನೀಡಿದರೂ ಕರ್ನಾಟಕದಲ್ಲಿಯೂ ಬಿಜೆಪಿಗೆ ಹೆಚ್ಚಿನ ಮತ ನೀಡುವ ನಿರೀಕ್ಷೆ ಇದೆ. ತೆಲಂಗಾಣದಲ್ಲಿಯೂ ಸಹ, ವಿಧಾನಸಭಾ ಚುನಾವಣೆಯ ಗೆಲುವು ಮತ್ತು ಕೆ ಚಂದ್ರಶೇಖರ್ ರಾವ್ ಅವರ ಭಾರತ ರಾಷ್ಟ್ರ ಸಮಿತಿಯ ಪತನದ ಲಾಭವನ್ನು ಪಡೆಯಲು ಕಾಂಗ್ರೆಸ್‌ಗೆ ಸಾಧ್ಯವಾಗದಿರಬಹುದು ಎಂದು ಎಕ್ಸಿಟ್ ಪೋಲ್‌ಗಳು ಸೂಚಿಸುತ್ತವೆ.

ಬಿಜೆಪಿಯು ತಮಿಳುನಾಡಿನಲ್ಲಿ ಒಂದರಿಂದ ಏಳು ಸ್ಥಾನಗಳೊಂದಿಗೆ ತನ್ನ ಖಾತೆಯನ್ನು ತೆರೆಯುವ ನಿರೀಕ್ಷೆಯಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.

ಇದನ್ನೂ ಓದಿ: Chanakya Exit Poll 2024: ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಬಹುಮತ? ಚಾಣಕ್ಯ ಮತಗಟ್ಟೆ ಸಮೀಕ್ಷೆ ಹೀಗಿದೆ

ಬಂಗಾಳದಲ್ಲಿ, ಬಿಜೆಪಿ  22 ಸೀಟುಪಡೆಯುವ ಸಾಧ್ಯತೆ ಇದೆ, ಇದು ಮೊದಲ ಬಾರಿಗೆ ರಾಜ್ಯದ ಶಕ್ತಿ ಕೇಂದ್ರವಾದ ತೃಣಮೂಲ ಕಾಂಗ್ರೆಸ್ ಅನ್ನು ಮೀರಿಸುತ್ತದೆ. ರಾಜ್ಯದ 42 ಲೋಕಸಭಾ ಸ್ಥಾನಗಳಲ್ಲಿ ಮಮತಾ ಬ್ಯಾನರ್ಜಿ ಅವರ ಪಕ್ಷವು ಕೇವಲ 19 ಸ್ಥಾನಗಳನ್ನು ಪಡೆಯಬಹುದು.

ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ರಾಷ್ಟ್ರ ರಾಜಧಾನಿ ದೆಹಲಿಯಂತಹ ಭದ್ರಕೋಟೆಗಳಲ್ಲಿ ಪಕ್ಷವು ಪ್ರಾಬಲ್ಯವನ್ನು ಮುಂದುವರೆಸಲಿದೆ.ಕಳೆದ ಚುನಾವಣೆಯಲ್ಲಿ ಎನ್‌ಡಿಎಗೆ ತನ್ನ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ನೀಡಿದ್ದ ಬಿಹಾರದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ತೇಜಸ್ವಿ ಯಾದವ್ ಅವರ ರಾಷ್ಟ್ರೀಯ ಜನತಾ ದಳದ ನೇತೃತ್ವದ ಆಪ್ ಮೈತ್ರಿಕೂಟವು 7 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Sat, 1 June 24