TV9 Polstrat Exit Poll: ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ, ಟಿವಿ9 ಪೋಲ್​ಸ್ಟ್ರಾಟ್ ಎಕ್ಸಿಟ್ ಪೋಲ್ ವಿವರ ಇಲ್ಲಿದೆ

Lok Sabha Elections Exit Poll Details: ಲೋಕಸಭೆ ಚುನಾವಣೆಯ ಅಂತಿಮ ಹಂತದ ಮತದಾನ ಪ್ರಕಟವಾದ ಬೆನ್ನಲ್ಲೇ ಟಿವಿ9 ಪೋಲ್​ಸ್ಟ್ರಾಟ್ ಎಕ್ಸಿಟ್ ಪೋಲ್ ಬಿಡುಗಡೆಯಾಗಿದೆ. ಇದರ ಪ್ರಕಾರ, ಕೇಂದ್ರದಲ್ಲಿ ಮೂರನೇ ಬಾರಿಗೆ ಮೋದಿ ಸರ್ಕಾರ ಬರುವುದು ಖಚಿತವಾಗಿದೆ. ಆದಾಗ್ಯೂ ಈ ಬಾರಿ ಕಾಂಗ್ರೆಸ್, ‘ಇಂಡಿಯಾ’ ಮೈತ್ರಿಕೂಟದ ಬಲ ತುಸು ವೃದ್ಧಿಯಾಗಿದೆ. ಮತಗಟ್ಟೆ ಸಮೀಕ್ಷೆಯ ಪೂರ್ಣ ವಿವರ ಇಲ್ಲಿದೆ.

TV9 Polstrat Exit Poll: ಕೇಂದ್ರದಲ್ಲಿ ಮತ್ತೆ ಮೋದಿ ಸರ್ಕಾರ, ಟಿವಿ9 ಪೋಲ್​ಸ್ಟ್ರಾಟ್ ಎಕ್ಸಿಟ್ ಪೋಲ್ ವಿವರ ಇಲ್ಲಿದೆ
Follow us
Ganapathi Sharma
| Updated By: ನಯನಾ ರಾಜೀವ್

Updated on:Jun 02, 2024 | 8:25 AM

ಬೆಂಗಳೂರು, ಜೂನ್ 1: ಲೋಕಸಭೆ ಚುನಾವಣೆಯ (Lok Sabha Elections) ಕೊನೆಯ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಮತಗಟ್ಟೆ ಸಮೀಕ್ಷೆಗಳು (Exit Poll) ಪ್ರಕಟವಾಗುತ್ತಿವೆ. ಲೋಕಸಭೆಗೆ ಏಳು ಹಂತಗಳಲ್ಲಿ ನಡೆದ ಮತದಾನ ಇಂದು ಕೊನೆಗೊಂಡಿದ್ದು, ಜೂನ್ 4ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ, ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ (TV9 Polstrat Exit Poll Survey Report) ಪ್ರಕಟಗೊಂಡಿದ್ದು, ಆಡಳಿತಾರೂಢ ಎನ್​ಡಿಗೆ ಸಿಹಿ ಸುದ್ದಿ ನೀಡಿದೆ. ಬಿಜೆಪಿ ಸರಳ ಬಹುಮತ ಪಡೆಯಲಿದ್ದು, ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಮೈತ್ರಿಕೂಟ ಅಲ್ಪ ಸ್ಥಾನಗಳಿಗೆ ತೃಪ್ತಿಪಡಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ.

ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಹಿಂದಿ ಹೃದಯಭಾಗದ ರಾಜ್ಯಗಳಲ್ಲಿ ಬಿಜೆಪಿಯ ಓಟ ಮುಂದುವರಿದಿದೆ. ಆದಾಗ್ಯೂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಸೇರಿ ಕೆಲವು ರಾಜ್ಯಗಳಲ್ಲಿ 2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ ಸ್ಥಾನಗಳು ತುಸು ಕಡಿಮೆಯಾಗಿವೆ. ಮತ್ತೊಂದೆಡೆ, ದಕ್ಷಿಣ ರಾಜ್ಯಗಳಲ್ಲಿ ‘ಇಂಡಿಯಾ’ ಮೈತ್ರಿಕೂಟ ಸಾಧನೆ ತೋರಿದೆ. ಕರ್ನಾಟಕ, ತಮಿಳುನಾಡು, ತೆಲಂಗಾಣಗಳಲ್ಲಿ ‘ಇಂಡಿಯಾ’ ಸಾಧನೆ ಉತ್ತಮವಾಗಿದೆ.

ಆದಾಗ್ಯೂ, ದಕ್ಷಿಣದ ರಾಜ್ಯಗಳ ಪೈಕಿ ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿ ಈ ಬಾರಿ ಖಾತೆ ತೆರೆಯುವ ಸಾಧ್ಯತೆ ಇರುವುದು ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆಯಲ್ಲಿ ದೃಢಪಟ್ಟಿದೆ.

ಯಾವ ಪಕ್ಷ, ಮೈತ್ರಿಕೂಟಕ್ಕೆ ಎಷ್ಟು ಸ್ಥಾನ?

ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ, 543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 305 ಸ್ಥಾನ ಗಳಿಸಲಿದೆ. ಎನ್​ಡಿಎ ಮೈತ್ರಿಕೂಟಕ್ಕೆ ಒಟ್ಟು 340 ಸ್ಥಾನ ದೊರೆಯಲಿವೆ. ಮತ್ತೊಂದೆಡೆ, ಕಾಂಗ್ರೆಸ್​ ಈ ಬಾರಿ ತುಸು ಬಲ ವೃದ್ಧಿಸಿಕೊಂಡಿದೆ. ಪಕ್ಷಕ್ಕೆ 65 ಸ್ಥಾನ ದೊರೆಯಲಿದ್ದು, ‘ಇಂಡಿಯಾ’ ಮೈತ್ರಿಕೂಟಕ್ಕೆ 167 ಸ್ಥಾನ ದೊರೆಯಲಿದೆ. ಇತರರು 36 ಸ್ಥಾನ ಗಳಿಸಲಿದ್ದಾರೆ.

ಐದು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್​ಸ್ವೀಪ್

ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ ಗುಜರಾತ್, ಮಧ್ಯ ಪ್ರದೇಶ, ಛತ್ತೀಸ್​ಗಢ, ಉತ್ತರಾಖಂಡ ಹಾಗೂ ದೆಹಲಿಗಳಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಸಾಧನೆ ಮಾಡಿದೆ.

ರಾಜ್ಯ ಒಟ್ಟು ಸ್ಥಾನ ಬಿಜೆಪಿ ಎನ್​ಡಿಎ ಕಾಂಗ್ರೆಸ್ ಇಂಡಿಯಾ ಇತರರು
ಗುಜರಾತ್ 26 26 26 0 0 0
ಮಧ್ಯಪ್ರದೇಶ 29 29 29 0 0 0
ಛತ್ತೀಸ್‌ಗಢ 11 11 11 0 0 0
ಉತ್ತರಾಖಂಡ 5 5 5 0 0 0
ದೆಹಲಿ 7 7 7 0 0 0
ಹರಿಯಾಣ 10 8 8 2 2 0
ಉತ್ತರ ಪ್ರದೇಶ 80 62 66 3 14 0
ರಾಜಸ್ಥಾನ 25 19 19 4 5 1
ಜಾರ್ಖಂಡ್ 14 12 12 0 1 1
ಅಸ್ಸಾಂ 14 11 12 1 1 1
ಹಿಮಾಚಲ ಪ್ರದೇಶ 4 4 4 0 0 0
ಮಹಾರಾಷ್ಟ್ರ 48 18 22 5 25 1
ಕರ್ನಾಟಕ 28 18 20 8 8 0
ಪಶ್ಚಿಮ ಬಂಗಾಳ 42 21 21 0
ತೆಲಂಗಾಣ 17 7 7 8 8 2
ಬಿಹಾರ 40 17 29 2 8 3
ಕೇರಳ 20 1 1 13 19 0
ತಮಿಳುನಾಡು 39 2 4 9 35 0
ಪಂಜಾಬ್ 13 3 3 5 8 2
ಆಂಧ್ರಪ್ರದೇಶ 25 2 12 0 0 13
ಒಡಿಶಾ 21 13 13 1 1 7
ಗೋವಾ 2 2 2 0 0 0
ಕೇಂದ್ರಾಡಳಿತ ಪ್ರದೇಶಗಳು 7 4 4 2 2 1
ಜಮ್ಮು ಮತ್ತು ಕಾಶ್ಮೀರ 5 2 2 0 2 1
ಈಶಾನ್ಯ ಮತ್ತು ಇತರೆ 11 7 7 2 2 2
ಒಟ್ಟು ಸ್ಥಾನಗಳು 543 311 346 65 162 35

ಇದನ್ನೂ ಓದಿ: ಕರ್ನಾಟಕದಲ್ಲಿ ಗ್ಯಾರಂಟಿ ‘ಕೈ’ ಹಿಡಿದನೇ ಮತದಾರ? ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ವಿವರ ಇಲ್ಲಿದೆ

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:44 pm, Sat, 1 June 24

ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್
News9 Global Summit: ನ್ಯೂಸ್9 ಗ್ಲೋಬಲ್ ಸಮಿಟ್ ಎರಡನೇ ದಿನದ ಲೈವ್