TV9 Polstrat Exit Poll: ಕರ್ನಾಟಕದಲ್ಲಿ ಗ್ಯಾರಂಟಿ ‘ಕೈ’ ಹಿಡಿದನೇ ಮತದಾರ? ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ವಿವರ ಇಲ್ಲಿದೆ

Lok Sabha Elections Karnataka Exit Poll: ಲೋಕಸಭೆ ಚುನಾವಣೆಯ ಎಲ್ಲ ಹಂತಗಳ ಮತದಾನ ಮುಕ್ತಾಯವಾಗಿದ್ದು, ಮತಗಟ್ಟೆ ಸಮೀಕ್ಷಾ ವರದಿಗಳೂ ಇದೀಗ ಪ್ರಕಟವಾಗುತ್ತಿವೆ. ಕರ್ನಾಟಕದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಎಷ್ಟು ಸ್ಥಾನ ಸಿಗಬಹುದು? ಕಾಂಗ್ರೆಸ್​​ ಗ್ಯಾರಂಟಿಗೆ ಹೆಚ್ಚು ಮತ ದೊರೆಯಿತೇ? ಕಳೆದ ಬಾರಿಯ ಸ್ಥಾನಗಳಲ್ಲಿ ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗುತ್ತದೆಯೇ? ಈ ಎಲ್ಲ ಪ್ರಶ್ನೆಗಳಿಗೆ ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆಯಲ್ಲಿ ದೊರೆತ ಉತ್ತರ ಇಲ್ಲಿದೆ.

TV9 Polstrat Exit Poll: ಕರ್ನಾಟಕದಲ್ಲಿ ಗ್ಯಾರಂಟಿ ‘ಕೈ’ ಹಿಡಿದನೇ ಮತದಾರ? ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ವಿವರ ಇಲ್ಲಿದೆ
ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ
Follow us
Ganapathi Sharma
|

Updated on:Jun 01, 2024 | 7:32 PM

ಬೆಂಗಳೂರು, ಮೇ 1: ಲೋಕಸಭೆ ಚುನಾವಣೆಯ (Lok Sabha Elections) 7 ಹಂತದ ಮತದಾನ (Voting) ಮುಕ್ತಾಯವಾಗಿದ್ದು ಫಲಿತಾಂಶಕ್ಕೆ ದಿನಗಣನೆ ಆರಂಭವಾಗಿದೆ. ಜೂನ್ 4ರಂದು ಮಂಗಳವಾರ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ (Lok Sabha Election Result) ಪ್ರಕಟವಾಗಲಿದೆ. ಕರ್ನಾಟಕದಲ್ಲಿ 2 ಹಾಗೂ 3ನೇ ಹಂತಗಳಲ್ಲಿ ಲೋಕಸಭೆ ಚುನಾವಣೆಗಳು ನಡೆದಿದ್ದವು. ರಾಜ್ಯದ ಮೊದಲ ಹಂತದಲ್ಲಿ ಏಪ್ರಿಲ್ 26ರಂದು ಹಾಗೂ ಎರಡನೇ ಹಂತದಲ್ಲಿ ಮೇ 7ರಂದು ತಲಾ 14 ರಂತೆ 28 ಕ್ಷೇತ್ರಗಳಿಗೆ ಮತದಾನ ನಡೆದಿತ್ತು.

ಇದೀಗ ದೇಶದಲ್ಲಿ ಅಂತಿಮ ಹಂತದ ಮತದಾನ ಮುಕ್ತಾಯವಾದ ಬೆನ್ನಲ್ಲೇ ವಿವಿಧ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾಗಿವೆ. ಟಿವಿ9 ಪೋಲ್​ಸ್ಟ್ರಾಟ್ ನಡೆಸಿದ ಮತಗಟ್ಟೆ ಸಮೀಕ್ಷೆಯೂ ಬಹಿರಂಗವಾಗಿದೆ. ಕರ್ನಾಟಕದಲ್ಲಿ ಕಳೆದ ಬಾರಿಯಷ್ಟು ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಬಿಜೆಪಿ ಯಶಸ್ವಿಯಾಯಿತೇ? ಆಡಳಿತಾರೂಢ ಕಾಂಗ್ರೆಸ್​ ಗ್ಯಾರಂಟಿಗಳಿಂದಾಗಿ ಮತದಾರರು ‘ಕೈ’ಯತ್ತ ವಾಲಿದರೇ? ಜೆಡಿಎಸ್ ಜತೆಗಿನ ಮೈತ್ರಿಯಿಂದ ಬಿಜೆಪಿಗೆ ಪ್ರಯೋಜನವಾಯಿತೇ? ಈ ಎಲ್ಲ ಪ್ರಶ್ನೆಗಳಿಗೆ ಟಿವಿ9 ಪೋಲ್​ಸ್ಟ್ರಾಟ್ ನಡೆಸಿದ ಮತಗಟ್ಟೆ ಸಮೀಕ್ಷೆ ನೀಡಿದೆ ಉತ್ತರ.

ಕರ್ನಾಟಕದಲ್ಲಿ ತುಸು ಬಾಡಿದ ಕಮಲ!

ಕಳೆದ ಬಾರಿ, ಅಂದರೆ 2019ರ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬರೋಬ್ಬರಿ 25 ಸ್ಥಾನಗಳನ್ನು ಗೆದ್ದು ಬೀಗಿದ್ದ ಬಿಜೆಪಿಗೆ ಈ ಬಾರಿ ತುಸು ಹಿನ್ನಡೆಯಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ತುಸು ಬಲ ವೃದ್ಧಿಸಿಕೊಂಡಿದ್ದರೂ ನಿರೀಕ್ಷಿತ ಸ್ಥಾನ ಗಳಿಸಿಲ್ಲ. ಮತ್ತೊಂದೆಡೆ ಜೆಡಿಎಸ್ ತುಸು ಬಲ ವೃದ್ಧಿಸಿಕೊಂಡಿದೆ ಎಂಬುದು ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆಯಿಂದ ತಿಳಿದುಬಂದಿದೆ.

ಯಾವ ಪಕ್ಷಕ್ಕೆ ಎಷ್ಟು ಸ್ಥಾನ?

ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ ಈ ಬಾರಿ 18 ಸ್ಥಾನಗಳನ್ನು ಪಡೆಯಲಿದ್ದು, ಎನ್​ಡಿಎ 20 ಸ್ಥಾನಗಳನ್ನು ಪಡೆಯಲಿದೆ. ಅತ್ತ ಕಾಂಗ್ರೆಸ್ ಕೇವಲ 8 ಸ್ಥಾನಗಳಿಗೆ ತೃಪ್ತಿಪಡಬೇಕಾಗಿದೆ. ಕಳೆದ ಬಾರಿ 1 ಸ್ಥಾನವನ್ನಷ್ಟೇ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಬಲ ವೃದ್ಧಿಸಿಕೊಂಡಿದೆ. ಜೆಡಿಎಸ್ 2 ಸ್ಥಾನ ಗಳಿಸಲಿದೆ. ಪಕ್ಷೇತರರು ರಾಜ್ಯದಲ್ಲಿ ಒಂದು ಸ್ಥಾನ ಕೂಡ ಗಳಿಸಿಲ್ಲ.

ಇದನ್ನೂ ಓದಿ: ಇಸ್ರೇಲಿ ಸಂಸ್ಥೆಯಿಂದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಭಾವ ಬೀರಲು ಪ್ರಯತ್ನ; ಓಪನ್​ಎಐ ಬಹಿರಂಗ

ಈ ಸಮೀಕ್ಷೆಯ ವರದಿ ಪ್ರಕಾರ, ಕರ್ನಾಟಕದಲ್ಲಿ ಆಡಳಿತಾರೂಢ ಕಾಂಗ್ರೆಸ್ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ​​ ಬಲ ವೃದ್ಧಿಸಿಕೊಂಡಿದೆ. ಆದಾಗ್ಯೂ ಅಧಿಕಾರದಲ್ಲಿದ್ದು ‘ಗ್ಯಾರಂಟಿ’ ಯೋಜನೆಗಳ ಜನಪ್ರಿಯತೆಯ ಲಾಭ ಪಡೆದು 15ರಿಂದ 20 ಸ್ಥಾನ ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದ್ದ ಪಕ್ಷದ ನಾಯಕರಿಗೆ ತುಸು ನಿರಾಸೆ ಮೂಡಿಸುವಂತಿದೆ. ಅಂತಿಮವಾಗಿ, ಮತದಾರ ಯಾರ ಕೈಹಿಡಿದಿದ್ದಾನೆ ಎಂಬುದು ಜೂನ್ 4ರಂದು ಅಧಿಕೃತವಾಗಿ ಗೊತ್ತಾಗಲಿದೆ.

ಲೋಕಸಭೆ ಚುನಾವಣೆ ಸಂಬಂಧಿತ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:35 pm, Sat, 1 June 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ