ಇಸ್ರೇಲಿ ಸಂಸ್ಥೆಯಿಂದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಭಾವ ಬೀರಲು ಪ್ರಯತ್ನ; ಓಪನ್​ಎಐ ಬಹಿರಂಗ

Lok Sabha Elections 2024: ಚಾಟ್‌ಜಿಪಿಟಿಯ ಸೃಷ್ಟಿಕರ್ತರಾದ OpenAI ಭಾರತೀಯ ಚುನಾವಣೆಗಳ ಮೇಲೆ ಇಸ್ರೇಲ್ ಕಂಪನಿಗಳ ಕೈವಾಡದ ಬಗ್ಗೆ ಅಚ್ಚರಿಯ ಮಾಹಿತಿಯನ್ನು ನೀಡಿದೆ. ತನ್ನ ವೆಬ್‌ಸೈಟ್‌ನಲ್ಲಿನ ವರದಿಯಲ್ಲಿ, ಓಪನ್‌ಎಐ ಇಸ್ರೇಲ್‌ನಲ್ಲಿ ರಾಜಕೀಯ ಪ್ರಚಾರ ನಿರ್ವಹಣಾ ಸಂಸ್ಥೆಯಾದ STOIC, ಗಾಜಾ ಸಂಘರ್ಷದ ಜೊತೆಗೆ ಭಾರತೀಯ ಚುನಾವಣೆಗಳಲ್ಲಿ ಕೆಲವು ವಿಷಯವನ್ನು ರಚಿಸಿದೆ ಎಂದು ಹೇಳಿದೆ.

ಇಸ್ರೇಲಿ ಸಂಸ್ಥೆಯಿಂದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಭಾವ ಬೀರಲು ಪ್ರಯತ್ನ; ಓಪನ್​ಎಐ ಬಹಿರಂಗ
ಚುನಾವಣೆImage Credit source: istock
Follow us
|

Updated on:May 31, 2024 | 10:21 PM

ನವದೆಹಲಿ: ಭಾರತದಲ್ಲಿ ಲೋಕಸಭೆ ಚುನಾವಣೆಯ (Lok Sabha Polls 2024) ಕೊನೆಯ ಹಂತದ ಚುನಾವಣೆ ಶನಿವಾರ ನಡೆಯಲಿದೆ. ಚುನಾವಣಾ ಫಲಿತಾಂಶಗಳನ್ನು (Lok Sabha Elections Results) ಘೋಷಿಸುವ ಕೇವಲ 4 ದಿನಗಳ ಮೊದಲು ಶಾಕಿಂಗ್ ಮಾಹಿತಿಯೊಂದು ಬಯಲಾಗಿದೆ. ಭಾರತದಲ್ಲಿ ಚುನಾವಣೆಯ ಮೇಲೆ ಪ್ರಭಾವ ಬೀರಲು ಕೃತಕ ಬುದ್ಧಿಮತ್ತೆ ಮಾದರಿಗಳನ್ನು ಬಳಸಲು ಪ್ರಯತ್ನಿಸಲಾಗಿದೆ ಎಂದು OpenAI ಹೇಳಿಕೊಂಡಿದೆ.

ಇಸ್ರೇಲಿ ಸಂಸ್ಥೆಯೊಂದು ನಡೆಸುತ್ತಿರುವ ನೆಟ್‌ವರ್ಕ್ ಭಾರತೀಯ ಲೋಕಸಭೆ ಚುನಾವಣೆಯ ಸಮಯದಲ್ಲಿ ಬಿಜೆಪಿ ವಿರೋಧಿ ಕಾರ್ಯಸೂಚಿಯನ್ನು ಪೆಡ್ಲಿಂಗ್ ಮಾಡಲು ಪ್ರಯತ್ನಿಸಿ, ವಿಫಲವಾಗಿದೆ ಎಂದು ಓಪನ್‌ಎಐ ಸಂಸ್ಥೆ ಶಾಕಿಂಗ್ ಮಾಹಿತಿಯೊಂದನ್ನು ಬಯಲಿಗೆಳೆದಿದೆ. ಇಸ್ರೇಲಿ ಸಂಸ್ಥೆಯಾದ STOIC ಭಾರತವನ್ನು ಕೇಂದ್ರೀಕರಿಸುವ, ಆಡಳಿತಾರೂಢ ಬಿಜೆಪಿ ಪಕ್ಷವನ್ನು ಟೀಕಿಸುವ ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಶ್ಲಾಘಿಸುವ ಕಾಮೆಂಟ್‌ಗಳನ್ನು ರಚಿಸುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ಚುನಾವಣೆ ಮಾದರಿ ನೀತಿ ಸಂಹಿತೆ ಉಲ್ಲಂಘನೆ: ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು

ಇಸ್ರೇಲಿ ಸಂಸ್ಥೆಯು ಲೋಕಸಭೆ ಚುನಾವಣೆಯನ್ನು ಅಡ್ಡಿಪಡಿಸಲು ಪ್ರಯತ್ನಿಸಿದೆ ಎಂದು OpenAI ಹೇಳಿಕೊಂಡಿದೆ. ಅಲ್ಲದೆ, ಬಿಜೆಪಿ ವಿರೋಧಿ ಕಾರ್ಯಸೂಚಿ ರಚಿಸಿದೆ. ಇಸ್ರೇಲಿ ಸಂಸ್ಥೆಯು ಭಾರತದ ಮೇಲೆ ಕೇಂದ್ರೀಕರಿಸುವ ಕಾಮೆಂಟ್‌ಗಳನ್ನು ಉತ್ಪಾದಿಸಲು ಪ್ರಾರಂಭಿಸಿತು. ಆಡಳಿತಾರೂಢ ಬಿಜೆಪಿ ಪಕ್ಷವನ್ನು ಟೀಕಿಸಿತು ಮತ್ತು ವಿರೋಧ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ಹೊಗಳಿತು ಎಂದು ತಿಳಿಸಿದೆ.

ಭಾರತೀಯ ಚುನಾವಣೆಗಳ ಮೇಲೆ ಕೇಂದ್ರೀಕರಿಸಿದ ಚಟುವಟಿಕೆಯನ್ನು ಮೇ ತಿಂಗಳಲ್ಲಿ ಆರಂಭಿಸಲಾಯಿತು ಎಂದು ವರದಿಯು ಉಲ್ಲೇಖಿಸಿದೆ. ಆ ನೆಟ್‌ವರ್ಕ್ ಅನ್ನು ಇಸ್ರೇಲ್‌ನ ರಾಜಕೀಯ ಪ್ರಚಾರ ನಿರ್ವಹಣಾ ಸಂಸ್ಥೆಯಾದ STOIC ನಿರ್ವಹಿಸುತ್ತದೆ ಎಂದು ತಿಳಿಸಿದೆ.

OpenAI ವರದಿಯು ಸಾರ್ವಜನಿಕ ಅಭಿಪ್ರಾಯವನ್ನು ಕುಶಲತೆಯಿಂದ ಅಥವಾ ರಾಜಕೀಯ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು ಬಳಸಲಾದ ರಹಸ್ಯ ಕಾರ್ಯಾಚರಣೆಗಳಿಗಾಗಿ AI ಅನ್ನು ಬಳಸಿದ ಪ್ರಚಾರಗಳನ್ನು ಉಲ್ಲೇಖಿಸುತ್ತದೆ. ರಹಸ್ಯ ಕಾರ್ಯಾಚರಣೆಗಳಿಗಾಗಿ ವಿಷಯವನ್ನು ರಚಿಸಲು ಮತ್ತು ಸಂಪಾದಿಸಲು ಇಸ್ರೇಲ್‌ನಿಂದ ಕಾರ್ಯನಿರ್ವಹಿಸುವ ಖಾತೆಗಳ ಸಮೂಹವನ್ನು ಬಳಸಲಾಗಿದೆ ಎಂದು ವರದಿಯು ಹೇಳುತ್ತದೆ. ಆ ವಿಷಯವನ್ನು X, ಫೇಸ್​ಬುಕ್, ಇನ್​ಸ್ಟಾಗ್ರಾಂ, ವೆಬ್‌ಸೈಟ್‌ಗಳು ಮತ್ತು ಯೂಟ್ಯೂಬ್​ನಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ದೇವರು ನಿಮ್ಮ ಮುಂದೆ ಪ್ರತ್ಯಕ್ಷವಾದರೆ ಏನು ಮಾಡಬೇಕು? ಚಾಟ್​ ಜಿಪಿಟಿ ನೀಡಿದ ಉತ್ತರ ಇಲ್ಲಿದೆ

OpenAI ಎಂಬುದು ಡಿಸೆಂಬರ್ 2015ರಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಸಂಶೋಧನಾ ಸಂಸ್ಥೆಯಾಗಿದೆ. ಚಾಟ್‌ಜಿಪಿಟಿಯ ಹಿಂದಿರುವ ಕಂಪನಿಯಾದ ಓಪನ್‌ಎಐ, ಕಾಂಗ್ರೆಸ್ ಪರ ಮತ್ತು ಬಿಜೆಪಿ-ವಿರೋಧಿ ವಿಷಯಗಳನ್ನು ಉತ್ಪಾದಿಸಲು ಮತ್ತು ಚುನಾವಣಾ ಪ್ರಕ್ರಿಯೆಯನ್ನು ಅಡ್ಡಿಪಡಿಸುವ ಪ್ರಯತ್ನದಲ್ಲಿ ಆನ್‌ಲೈನ್‌ನಲ್ಲಿ ಹರಡಲು ಅನೇಕ ಪ್ರಚಾರ ಚಟುವಟಿಕೆಗಳಿಗೆ ಈ ಸಂಸ್ಥೆಯು ತಮ್ಮ ಪ್ಲಾಟ್‌ಫಾರ್ಮ್‌ಗಳ ಬಳಕೆಯನ್ನು ಬಳಸಿದೆ ಎಂದು ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 pm, Fri, 31 May 24

ತಾಜಾ ಸುದ್ದಿ
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ಸುದೀಪ್​ರ ‘ಹುಚ್ಚ’ ಸಿನಿಮಾದಲ್ಲಿ ಗೆಳೆಯನ ಪಾತ್ರ ಕೇಳಿದ್ದರು ದರ್ಶನ್
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ವ್ಯಾಪ್ತಿ ಮತ್ತು ಜವಾಬ್ದಾರಿಯ ಬಗ್ಗೆ ಕುಮಾರಸ್ವಾಮಿಗೆ ಮಾಹಿತಿ ಇಲ್ಲ: ಸಚಿವ
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ದರ್ಶನ್ ಪ್ರಕರಣ: ವಿಚಾರಣೆ ಬಳಿಕ ಕಾರ್ತಿಕ್ ಪುರೋಹಿತ್ ಮಾತು
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ರೇಣುಕಾಸ್ವಾಮಿ ಕೊಲೆ ಪ್ರಕರಣ; ಆರೋಪಿ ಪ್ರದೋಶ್ ಸ್ನೇಹಿತನ ವಿಚಾರಣೆ ಅಂತ್ಯ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಚಲುವರಾಯಸ್ವಾಮಿಯ ಲೂಟಿ ಹೊಡೆಯುವ ಕೆಲಸಕ್ಕೆ ನಾನು ಅಡ್ಡಿ? ಕುಮಾರಸ್ವಾಮಿ
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಮೈದುಂಬಿ ಹರಿಯುತ್ತಿರುವ ಶರಾವತಿ, ಜೋಗದ ಜಲಪಾತವೀಗ ರುದ್ರ ರಮಣೀಯ!
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಭೈರತಿ ಸುರೇಶ್ ಮುಡಾದ ಯಾವ ದಾಖಲಾತಿಗಳನ್ನು ಚಾಪರ್​ನಲ್ಲಿ ಒಯ್ದರು?ಹೆಚ್​ಡಿಕೆ
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ಕೀರ್ತಿ ಚಕ್ರ ಸ್ವೀಕರಿಸಿದ ಅಂಶುಮಾನ್ ಸಿಂಗ್ ಪತ್ನಿ ನೋಡಿ ಭಾವುಕರಾದ ಮುರ್ಮು
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ನಗರದಲ್ಲಿ ಶಿವಕುಮಾರ್​ರನ್ನು ಭೇಟಿಯಾದ ಬಿಕೆಯು ವಕ್ತಾರ ರಾಕೇಶ್ ಟಿಕಾಯತ್
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ 
ಪೊಲೀಸರು ರಿಯಲ್ ಎಸ್ಟೇಟ್​ ವ್ಯವಹಾರದಲ್ಲಿ ಶಾಮೀಲಾಗಕೂಡದು: ಸಿದ್ದರಾಮಯ್ಯ