ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ವಾರಾಣಸಿಯಿಂದ 3ನೇ ಅವಧಿಗೆ ನಾಮಪತ್ರ ಸಲ್ಲಿಸಲು ಸಿದ್ಧರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದೆಹಲಿಯಿಂದ ವಾರಾಣಸಿಗೆ (Varanasi) ಪ್ರಯಾಣಿಸಿದ್ದಾರೆ. ಅವರಿಗೆ ರಸ್ತೆಯಲ್ಲಿ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನರು ಡ್ರಮ್, ಆರತಿ, ಜೈಕಾರಗಳೊಂದಿಗೆ ಸ್ವಾಗತಿಸಿದ್ದಾರೆ. ನಾಮಪತ್ರ ಸಲ್ಲಿಕೆಯ ಒಂದು ದಿನ ಮೊದಲೇ ಮೋದಿ ರೋಡ್ ಶೋ ನಡೆಸಿದ್ದಾರೆ. ಇದಾದ ಬಳಿಕ ಕಾಶಿ ವಿಶ್ವನಾಥನ ದೇವಸ್ಥಾನಕ್ಕೆ (Kashi Vishwanath Temple) ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ಮಂಗಳವಾರ ನಾಮಪತ್ರ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಸಜ್ಜಾಗುತ್ತಿದ್ದು, ನಾಮಪತ್ರ ಸಲ್ಲಿಕೆಯ ಮುನ್ನಾದಿನದ ರೋಡ್ ಶೋಗಾಗಿ ಕಾಶಿ ನಗರವು ಸಂಭ್ರಮದಿಂದ ಸಜ್ಜಾಗಿತ್ತು.
VIDEO | PM Modi (@narendramodi) offers prayers at Kashi Vishwanath Temple in Varanasi, Uttar Pradesh. pic.twitter.com/GHJ5P6aYlF
— Press Trust of India (@PTI_News) May 13, 2024
ಇದನ್ನೂ ಓದಿ: ನಾಮಪತ್ರ ಸಲ್ಲಿಕೆ ಒಂದು ದಿನ ಮೊದಲೇ ವಾರಾಣಸಿಯಲ್ಲಿ ಮೋದಿ ರೋಡ್ ಶೋ, ನೇರಪ್ರಸಾರ
Kashi is special… The warmth and affection of the people here is unbelievable! 🙏 https://t.co/Al6lu5mOJI
— Narendra Modi (@narendramodi) May 13, 2024
2014ರಲ್ಲಿ ಈ ಕ್ಷೇತ್ರದಿಂದ ಭಾರೀ ಅಂತರದಿಂದ ಗೆದ್ದಿರುವ ಪ್ರಧಾನಿ ಮೋದಿಯವರು ನಾಳೆ ನಾಮಪತ್ರ ಸಲ್ಲಿಸುವ ಮುನ್ನ ರೋಡ್‌ಶೋ ನಡೆಯುತ್ತಿದೆ. ವಾರಾಣಸಿಯಲ್ಲಿ ಬಿಜೆಪಿಯ 12 ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಹಾಜರಾಗಲಿದ್ದಾರೆ. 2019ರಲ್ಲಿ, ಪಿಎಂ ಮೋದಿ ಅವರು ತಮ್ಮ ಹತ್ತಿರದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ಅವರನ್ನು ಸೋಲಿಸುವ ಮೂಲಕ 6.7 ಲಕ್ಷ ಮತಗಳನ್ನು ಗಳಿಸಿದ್ದರು.
It was not just a road show.
It was a festival for the people of Varanasi. They just love our PM and treat him as a family member.
Hamar Kashi Hamar Modi !! pic.twitter.com/uCOZFLzZBZ
— Sunanda Roy 👑 (@SaffronSunanda) May 13, 2024
ಈ ಬಾರಿ ವಾರಾಣಸಿಯಲ್ಲಿ ಜೂನ್ 1ರಂದು ಕೊನೆಯ ಹಂತದ ಚುನಾವಣೆ ನಡೆಯಲಿದ್ದು, ಜೂನ್ 4ರಂದು ಮತ ಎಣಿಕೆ ನಡೆಯಲಿದೆ.
#WATCH | Uttar Pradesh: Prime Minister Narendra Modi offers prayer at Kashi Vishwanath temple in Varanasi. pic.twitter.com/R7WAnq939d
— ANI (@ANI) May 13, 2024
ಇದನ್ನೂ ಓದಿ: ಕೊಟ್ಟ ಮಾತಿನಂತೆ ಬಾಗಲಕೋಟೆಯ ಯುವತಿಗೆ ಪತ್ರ ಬರೆದ ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಐದು ಕಿಲೋಮೀಟರ್ ಉದ್ದದ ಬೃಹತ್ ರೋಡ್‌ಶೋ ನಡೆಸಿದರು. ಈ ಮೂಲಕ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮುಂಬರುವ ನಾಮಪತ್ರ ಸಲ್ಲಿಕೆಗೆ ವೇದಿಕೆ ಸಿದ್ಧಪಡಿಸಿದರು. ದಾರಿಯುದ್ದಕ್ಕೂ ಮಹಿಳೆಯರ ಸಾಂಪ್ರದಾಯಿಕ ನೃತ್ಯಗಳು ಮತ್ತು ಪುರುಷರಿಂದ ಉತ್ಸಾಹಭರಿತ ಧ್ವಜಾರೋಹಣ ಸೇರಿದಂತೆ ರೋಮಾಂಚಕ ಪ್ರದರ್ಶನಗಳು ಹಬ್ಬದ ವಾತಾವರಣವನ್ನು ಹೆಚ್ಚಿಸಿತ್ತು. ಪುರಾತನ ನಗರದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಎತ್ತಿ ಹಿಡಿಯುವ ಮೂಲಕ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಆಶೀರ್ವಾದ ಪಡೆಯುವ ಮೂಲಕ ರೋಡ್‌ಶೋ ಸಮಾಪ್ತಿಗೊಂಡಿತು.
Narendra Modi ji offering prayers at Kashi Vishwanath temple in Varanasi.
Baba Bholenath, pls bless him with Success that he deserves
It has to be 400 paar and dushman ki haarHar Har Mahadev pic.twitter.com/XiHCyjE3lz
— Sheetal Chopra 🇮🇳 (@SheetalPronamo) May 13, 2024
ವಾರಾಣಸಿ ಬಿಜೆಪಿ ಮತ್ತು ಪ್ರಧಾನಿ ಮೋದಿಗೆ ಅಪಾರ ಮಹತ್ವವನ್ನು ಹೊಂದಿದೆ. ಬಿಜೆಪಿ ಭದ್ರಕೋಟೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ವಾರಾಣಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ಉತ್ತರ ಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಅಜಯ್ ರೈ ಅವರನ್ನು ಕಾಂಗ್ರೆಸ್ ಪಕ್ಷವು ಕಣಕ್ಕಿಳಿಸಿದೆ. ಇದು ಲೋಕಸಭೆಯ ಸ್ಪರ್ಧೆಯಲ್ಲಿ ಪ್ರಧಾನಿಯೊಂದಿಗೆ ಅಜಯ್ ರೈ ಅವರ ಮೂರನೇ ಚುನಾವಣಾ ಮುಖಾಮುಖಿಯಾಗಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ