ನಾಮಪತ್ರ ಸಲ್ಲಿಕೆ ಒಂದು ದಿನ ಮೊದಲೇ ವಾರಾಣಸಿಯಲ್ಲಿ ಮೋದಿ ರೋಡ್ ಶೋ, ನೇರಪ್ರಸಾರ
PM Narendra Modi Roadshow in Varanasi: ಪ್ರಧಾನಿ ನರೇಂದ್ರ ಮೋದಿ ಅವರು 3ನೇ ಬಾರಿ ಆಯ್ಕೆ ಬಯಸಿ ನಾಳೆ ವಾರಾಣಸಿ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ನಾಳೆ ಬೆಳಿಗ್ಗೆ 11:40 ನಿಮಿಷಕ್ಕೆ ಅಭಿಜಿತ್ ಲಗ್ನದಲ್ಲಿ ನಾಮಪತ್ರ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. ಆದ್ರೆ, ಅದಕ್ಕೆ ಒಂದು ದಿನ ಮೊದಲೇ ಮೋದಿ ವಾರಣಾಸಿಯಲ್ಲಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.
ವಾರಾಣಸಿ, (ಮೇ 13) :ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು 3ನೇ ಬಾರಿ ಆಯ್ಕೆ ಬಯಸಿ ನಾಳೆ ವಾರಾಣಸಿ(Varanasi) ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲಿದ್ದಾರೆ. ನಾಳೆ ಬೆಳಿಗ್ಗೆ 11:40 ನಿಮಿಷಕ್ಕೆ ಅಭಿಜಿತ್ ಲಗ್ನದಲ್ಲಿ ನಾಮಪತ್ರ ಸಲ್ಲಿಕೆಗೆ ತಯಾರಿ ನಡೆಸಿದ್ದಾರೆ. ಇದಕ್ಕೂ ಮುನ್ನ ಕಾಶಿಯ ಕಾಲಭೈರವ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಯ ಮುಹೂರ್ತವು ಹಿಂದೂ ಪಂಚಾಂಗದ ಪ್ರಕಾರ ಅಭಿಜಿತ್ ಮುಹೂರ್ತವಾಗಿದ್ದು, ಈ ದಿನ ಅತ್ಯಂತ ಮಂಗಳಕರ ಸಮಯವಾಗಿದೆ. ಹೀಗಾಗಿ, ಈ ಸಮಯದಲ್ಲೇ ಮೋದಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಆದ್ರೆ, ಇದೆಲ್ಲದರ ಒಂದು ದಿನ ಮುಂಚೆಯೇ ಪ್ರಧಾನಿ ನರೇಂದ್ರ ಅವರು ವಾರಾಣಸಿಯಲ್ಲಿ ಭರ್ಜರಿ ರೋಡ್ ಶೋ(Roadshow) ನಡೆಸಿದ್ದು, ಈ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇನ್ನು ಮೋದಿ ರೋಡ್ ಶೋವನ್ನು ನೇರಪ್ರಸಾರದಲ್ಲಿ ನೋಡಿ.

ಕಾಂಗ್ರೆಸ್ ಪಕ್ಷ ಸೇರುವ ಬಗ್ಗೆ ಮಾಧುಸ್ವಾಮಿಯಿಂದ ಗೊಂದಲಮಯ ಹೇಳಿಕೆ

ಅಮೆರಿಕದಲ್ಲಿ ತಮಗೆ ಚಿಕಿತ್ಸೆ ನೀಡಿದ ವೈದ್ಯರಿಗೆ ಸನ್ಮಾನ ಮಾಡಿದ ಶಿವಣ್ಣ

VIDEO: ಮಿಂಚಿನ ದಾಳಿ ಸಂಘಟಿಸಿದ ಬುಮ್ರಾಗೆ ಸಿಕ್ಕ ಸ್ವಾಗತ ಹೇಗಿತ್ತು ನೋಡಿ

ಅಧಿಕಾರ ಯಾವತ್ತಿಗೂ ಶಾಶ್ವತವಲ್ಲ, ನಿರೀಕ್ಷಿಸಿದ್ದೆಲ್ಲ ನಡೆಯಲ್ಲ: ತನ್ವೀರ್
