Rahul Gandhi: ಮದುವೆ ಯಾವಾಗ?; ರಾಯ್ಬರೇಲಿ ಜನರಿಗೆ ನಗುತ್ತಲೇ ಉತ್ತರ ಕೊಟ್ಟ ರಾಹುಲ್ ಗಾಂಧಿ
Lok Sabha Elections 2024: ರಾಹುಲ್ ಗಾಂಧಿ ವಯನಾಡಿನ ಜೊತೆಗೆ ಈ ಬಾರಿ ರಾಯ್ ಬರೇಲಿಯಿಂದಲೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇಂದು ರಾಯ್ ಬರೇಲಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ರಾಹುಲ್ ಗಾಂಧಿ ಜೊತೆಗೆ ಅವರ ಸಹೋದರಿ ಮತ್ತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದರು.
ರಾಯ್ ಬರೇಲಿ: 2024ರ ಲೋಕಸಭೆ ಚುನಾವಣೆಯಲ್ಲಿ ರಾಯ್ ಬರೇಲಿಯ (Rae Bareli) ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ (Rahul Gandhi) ಇಂದು ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ನಡೆದ ರ್ಯಾಲಿಯಲ್ಲಿ ಭಾವೋದ್ವೇಗದ ಭಾಷಣ ಮಾಡಿದರು. ಬೇರೆ ಪಕ್ಷದ ನಾಯಕರ ಮೇಲಿನ ವಾಗ್ದಾಳಿ ಜೊತೆಗೆ ಈ ವೇಳೆ ಕೆಲವು ಲಘುವಾದ ಕ್ಷಣಗಳು ನಡೆದವು. ಅಲ್ಲಿ ಸೇರಿದ್ದ ಜನಸಮೂಹವು ರಾಹುಲ್ ಗಾಂಧಿಯ ಮದುವೆಯ ಬಗ್ಗೆ ಪ್ರಸ್ತಾಪಿಸಿದ್ದು, ನೀವು ಯಾವಾಗ ಮದುವೆಯಾಗುತ್ತೀರಿ? ಎಂದು ಕೇಳಿದರು.
ಅದಕ್ಕೆ ಉತ್ತರ ನೀಡಿದ ರಾಹುಲ್ ಗಾಂಧಿ ಅಬ್ ಜಲ್ದಿ ಹೈ ಕರ್ನಿ ಪಡೆಗಿ (ನೀವಿಷ್ಟು ಕೇಳಿದ ಮೇಲೆ ನಾನು ಶೀಘ್ರದಲ್ಲೇ ಮದುವೆಯಾಗಬೇಕಾಗಿದೆ) ಎಂದು ರಾಹುಲ್ ಗಾಂಧಿ ನಗುತ್ತಲೇ ಹೇಳಿದ್ದಾರೆ. ಇದಕ್ಕೆ ಪ್ರಿಯಾಂಕಾ ಗಾಂಧಿ ಕೂಡ ನಗು ಸೂಸಿದ್ದಾರೆ.
ಇದನ್ನೂ ಓದಿ: ಮೋದಿ ಒಪ್ಪಿದರೆ ನಾನು ಸಿದ್ಧ; ಚುನಾವಣೆ ಕುರಿತ ಚರ್ಚೆಗೆ ತಯಾರೆಂದ ರಾಹುಲ್ ಗಾಂಧಿ
ರಾಯ್ ಬರೇಲಿಯಲ್ಲಿ ನಡೆದ ರ್ಯಾಲಿಯಲ್ಲಿ ರಾಹುಲ್ ಗಾಂಧಿಯ ಸಹೋದರಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಉಪಸ್ಥಿತರಿದ್ದರು. ಮೇ 3ರಂದು ಕಾಂಗ್ರೆಸ್ ಪಕ್ಷ ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಮತ್ತು ಅಮೇಥಿಯಿಂದ ಕೆಎಲ್ ಶರ್ಮಾ ಅವರನ್ನು ಚುನಾವಣಾ ಅಭ್ಯರ್ಥಿಗಳು ಎಂದು ಘೋಷಿಸಿತು. ಪ್ರಿಯಾಂಕಾ ಗಾಂಧಿ ಮತ್ತು ರಾಬರ್ಟ್ ವಾದ್ರಾ ಅವರನ್ನು ಚುನಾವಣಾ ಸ್ಪರ್ಧೆಯಿಂದ ದೂರವಿಟ್ಟಿತು.
“Now I’ll have to get married very soon”
Rahul Gandhi Ji on a question asked by people of Raebareli about his marriage. pic.twitter.com/N9rQQRRcI7
— Shantanu (@shaandelhite) May 13, 2024
ರಾಯ್ ಬರೇಲಿ ಗಾಂಧಿ ಕುಟುಂಬದ ಭದ್ರಕೋಟೆ:
ಸೋನಿಯಾ ಗಾಂಧಿಯವರು 1999ರಲ್ಲಿ ಅಮೇಥಿಯಲ್ಲಿ ಸ್ಪರ್ಧಿಸಿ ಗೆದ್ದರು. 2004ರಲ್ಲಿ ರಾಹುಲ್‌ಗೆ ಅಮೇಥಿ ಕ್ಷೇತ್ರವನ್ನು ಹಸ್ತಾಂತರಿಸಿದರು. ಸೋನಿಯಾ ಗಾಂಧಿಗಿಂತ ಮೊದಲು ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಯ್ಬರೇಲಿಯಲ್ಲಿ 3 ಬಾರಿ ಗೆದ್ದಿದ್ದರು. ಈ ಕ್ಷೇತ್ರದಿಂದ ಇಂದಿರಾ ಗಾಂಧಿ ಅವರ ಪತಿ ಮತ್ತು ಕಾಂಗ್ರೆಸ್ ನಾಯಕ ಫಿರೋಜ್ ಗಾಂಧಿ ಅವರನ್ನು 1952 ಮತ್ತು 1957ರಲ್ಲಿ 2 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: Lok Sabha Polls: ಚುನಾವಣೆ ಫಲಿತಾಂಶದ ನಂತರ ರಾಹುಲ್ ಗಾಂಧಿ ದೇಶ ಬಿಟ್ಟು ಓಡಿ ಹೋಗುತ್ತಾರೆ; ಯೋಗಿ ಆದಿತ್ಯನಾಥ್
ರಾಯ್ ಬರೇಲಿಯ ಮಹಾರಾಜ್‌ಗಂಜ್‌ನಲ್ಲಿ ಭಾವನಾತ್ಮಕ ಭಾಷಣ ಮಾಡಿದ ರಾಹುಲ್ ಗಾಂಧಿ, ನಮ್ಮದು ರಾಯ್ ಬರೇಲಿಯೊಂದಿಗೆ 100 ವರ್ಷಗಳ ಹಳೆಯ ಸಂಬಂಧ. ಕೆಲವು ದಿನಗಳ ಹಿಂದೆ ನಾನು ನನ್ನ ತಾಯಿಯೊಂದಿಗೆ ಕುಳಿತಿದ್ದಾಗ, ನನಗೆ ಇಬ್ಬರು ತಾಯಂದಿರು. ಒಬ್ಬರು ಸೋನಿಯಾ ಗಾಂಧಿ ಮತ್ತು ಇಂದಿರಾ ಗಾಂಧಿ ಎಂದು ನಾನು ವೀಡಿಯೊದಲ್ಲಿ ಹೇಳಿದ್ದೆ. ಇದು ನನ್ನ ತಾಯಿಗೆ ಇಷ್ಟವಾಗಲಿಲ್ಲ. ಮಗುವಿಗೆ ದಾರಿ ತೋರಿಸುವವಳು ಮತ್ತು ರಕ್ಷಿಸುವವಳು ತಾಯಿ ಎಂದು ನಾನು ಅವರಿಗೆ ವಿವರಿಸಿದೆ. ನನ್ನ ತಾಯಿ ಮತ್ತು ಇಂದಿರಾ ಗಾಂಧಿ ಇಬ್ಬರೂ ನನಗಾಗಿ ಇದನ್ನು ಮಾಡಿದ್ದಾರೆ. ಇದು ನನ್ನ ತಾಯಿಯರಿಬ್ಬರ ‘ಕರ್ಮಭೂಮಿ’. ಇದೇ ಕಾರಣಕ್ಕೆ ನಾನು ರಾಯ್ ಬರೇಲಿಯಿಂದ ಸ್ಪರ್ಧಿಸಲು ಬಂದಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Mon, 13 May 24