ಲೋಕಸಭೆ ಚುನಾವಣೆ 2024: ಇದೀಗ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ (Lok Sabha Elections) ಜನರು ಬಿಜೆಪಿ 140 ಸ್ಥಾನಗಳನ್ನು ಪಡೆಯಲು ಪರದಾಡುವಂತೆ ಮಾಡುತ್ತಾರೆ ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ವರಿಷ್ಠ ಮತ್ತು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ (Akhilesh Yadav) ಹೇಳಿದ್ದಾರೆ. ಉತ್ತರ ಪ್ರದೇಶದ ಅಜಂಗಢದಲ್ಲಿ ಚುನಾವಣಾ ರ್ಯಾಲಿ ಬಳಿಕ ಮಾಜಿ ಸಿಎಂ ಅಖಿಲೇಶ್ ಯಾದವ್ ಈ ಹೇಳಿಕೆ ನೀಡಿದ್ದಾರೆ. ಚುನಾವಣಾ ರ್ಯಾಲಿ ವೇಳೆ ಕಾಲ್ತುಳಿತವಾದ ಕಾರಣ ಇಂದು ನಡೆದ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಲೋಕಸಭೆ ಚುನಾವಣೆಯ ರ್ಯಾಲಿಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಉತ್ತರ ಪ್ರದೇಶ ಪೊಲೀಸರು (Uttar Pradesh Police) ಲಾಠಿ ಚಾರ್ಜ್ ಮಾಡಿದ್ದಾರೆ.
”ಪೂರ್ವಾಂಚಲ ಚುನಾವಣೆ ನಡೆಯುವಾಗ ಬಿಜೆಪಿ ವಿರುದ್ಧ ಆರಂಭವಾದ ಮತದಾನ ಕೊನೆಯವರೆಗೂ ನಡೆಯಲಿದ್ದು, ಏಳನೇ ಹಂತ ಮುಗಿಯುವ ವೇಳೆಗೆ ಬಿಜೆಪಿ ಸರ್ವನಾಶವಾಗಲಿದೆ. ಸಾರ್ವಜನಿಕರು ಬಿಜೆಪಿಯನ್ನು 140 ಸ್ಥಾನಗಳಿಗೆ ಪರದಾಡುವಂತೆ ಮಾಡುತ್ತಾರೆ.’’ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಇದನ್ನೂ ಓದಿ: Elections 2024: ಚುನಾವಣೆಯಲ್ಲಿ ಇಂಡಿಯಾ ಬಣ ಗೆದ್ದರೆ ಪ್ರಧಾನಿ ಹೆಸರನ್ನು ನಿರ್ಧರಿಸುತ್ತೇವೆ; ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ
#WATCH | Azamgarh, Uttar Pradesh: Samajwadi Party chief Akhilesh Yadav says, “The voting that has started against BJP will continue till the end when Purvanchal elections are held and by the time the seventh phase is over, BJP will be wiped out… the public will make them crave… pic.twitter.com/rTUH0T67PY
— ANI (@ANI) May 21, 2024
ಇದೀಗ ನಡೆಯುತ್ತಿರುವ ಚುನಾವಣೆಗಳು ಮತ್ತು ಬಿಜೆಪಿಯ ‘400-ಪಾರ್’ ಘೋಷಣೆ ಕುರಿತು ಮಾತನಾಡಿದ ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, “ಇಂಡಿಯಾ ಮೈತ್ರಿಕೂಟವು 300 ಸೀಟುಗಳು ದಾಟಿದೆ. ಇಂಡಿಯಾ ಒಕ್ಕೂಟದ ಸರ್ಕಾರ ಖಂಡಿತ ರಚನೆಯಾಗುತ್ತದೆ ಎಂದು ತಿಳಿದಿರುವ ಕಾರಣ ಪ್ರಧಾನಿ ಮೋದಿಗೆ ಹೇಳಲು ಏನೂ ಉಳಿದಿಲ್ಲ. ಎನ್ಡಿಎ ಸರ್ಕಾರವು 400 ಪಡೆಯುವುದಿರಲಿ ಅವರಿಗೆ 240 ಸ್ಥಾನ ಪಡೆಯುವುದು ಕೂಡ ಕಷ್ಟವಾಗಲಿದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ