ಬಿಎಲ್ ಸಂತೋಷ್ ಭಾಷಣ ಮಾಡುತ್ತಿದ್ದಾಗಲೇ ಎಂಟ್ರಿ ಕೊಟ್ಟ ಪೊಲೀಸ್: ಕಾರ್ಯಕ್ರಮ ಮುಕ್ತಾಯಗೊಳಿಸುವಂತೆ ಸೂಚನೆ
ಗಂಗಾವತಿಯಲ್ಲಿ ನಡೆಯುತ್ತಿದ್ದ ಬಳ್ಳಾರಿ ವಿಭಾಗದ ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮಾವೇಶದಲ್ಲಿ ಬಿ.ಎಲ್.ಸಂತೋಷ್ ಭಾಷಣ ಮಾಡುತ್ತಿದ್ದಾಗಲೇ ಪೊಲೀಸರು ಪ್ರವೇಶ ಮಾಡಿ ಕಾರ್ಯಕ್ರಮ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.

ಕೊಪ್ಪಳ: ಭಾಷಣದ ವೇಳೆ ನೋಟಿಸ್ ನೀಡಿದರೆ ನೀವು ಹೆದರಬೇಡಿ, ನಾನು ಎದುರಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ (BL Santhosh) ಹೇಳಿದರು. ಗಂಗಾವತಿಯಲ್ಲಿ ನಡೆಯುತ್ತಿದ್ದ ಬಳ್ಳಾರಿ ವಿಭಾಗದ ಬಿಜೆಪಿ ಡಿಜಿಟಲ್ ಕಾರ್ಯಕರ್ತರ ಸಮಾವೇಶದಲ್ಲಿ ಬಿ.ಎಲ್.ಸಂತೋಷ್ ಭಾಷಣ ಮಾಡುತ್ತಿದ್ದಾಗಲೇ ಪೊಲೀಸರು ಪ್ರವೇಶ ಮಾಡಿದ್ದಾರೆ. ಕಾರ್ಯಕರ್ತರಿಗೆ ಕಿವಿಮಾತು ಹೇಳಿದ್ದಾಗಲೇ ಚುನಾವಣೆ ಅಧಿಕಾರಿಗಳು ಎಂಟ್ರಿ ನೀಡಿ ಪರವಾನಿಗೆ ಸಮಯ ಮೀರಿದೆ ಭಾಷಣ ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ. ಚುನಾವಣಾಧಿಕಾರಿಗಳಿಂದ ಪರವಾನಿಗೆ ಪಡೆದ ಸಮಯ ಮೀರಿ ಬಿಜೆಪಿ ಸಮಾವೇಶ ಮುಂದುವರೆಸಿತ್ತು. ಹಾಗಾಗಿ ಬಿ.ಎಲ್ ಸಂತೋಷ್ ಭಾಷಣ ಮಾಡುತ್ತಿರುವಾಗ ವೇದಿಕೆಗೆ ಆಗಮಿಸಿ ಕಾರ್ಯಕ್ರಮ ನಿಲ್ಲಿಸಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಸೂಚನೆ ಮೇರೆಗೆ ಬಿ.ಎಲ್ ಸಂತೋಷ್ ಭಾಷಣ ನಿಲ್ಲಿಸಿ ಕಾರ್ಯಕ್ರಮ ಮುಗಿಸಿದರು. ಸಮಾವೇಶದಲ್ಲಿ ಸಾವಿರಾರು ಕಾರ್ಯಕರ್ತರಿಂದ ಮೋದಿ, ಮೋದಿ ಎಂದು ಘೋಷಣೆ ಕೂಗಲಾಯಿತು. ಬಿ.ಎಲ್ ಸಂತೋಷಗೆ ಶಾಸಕರು, ಸಚಿವರು, ಸಂಸದರು ಸಾಥ್ ನೀಡಿದರು.
ಬಿಜೆಪಿ ಟ್ವಿಟರ್, ಪತ್ರಿಕೆ, ಟಿವಿಗಳ ಸ್ಕ್ರೀನ್ ಮೇಲೆ ಹುಟ್ಟಿದ ಪಕ್ಷವಲ್ಲ: ಆನಂದ ಸಿಂಗ್
ಸಚಿವ ಆನಂದ ಸಿಂಗ್ ಮಾತನಾಡಿ, ಬಿಜೆಪಿ ಟ್ವಿಟರ್, ಪತ್ರಿಕೆ, ಟಿವಿಗಳ ಸ್ಕ್ರೀನ್ ಮೇಲೆ ಹುಟ್ಟಿದ ಪಕ್ಷವಲ್ಲ. ಪಕ್ಷದ ಬಗ್ಗೆ ತಿಳಿಯಬೇಕಾದರೆ ಪ್ರಧಾನಿ ಮೋದಿಜಿ ಅವರ ಭಾಷಣ ಕೇಳಬೇಕು. ಇತ್ತೀಚಿಗೆ ಅವರು ದೆಹಲಿಯಲ್ಲಿ ಮಾಡಿದ ಭಾಷಣ ಕೇಳಿದರೆ ಪ್ರತಿಯೊಬ್ಬ ಕಾರ್ಯಕರ್ತರಿಗೂ ಹುಮ್ಮಸ್ಸು ಬರುತ್ತೆ. ಸಾಮಾನ್ಯ ಕಾರ್ಯಕರ್ತನಿಗೂ ಪ್ರಧಾನಿಯವರು ಮನಮಟ್ಟುವಂತೆ ಮಾತನಾಡುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಪಕ್ಷದ ಕಥೆ ಮುಗಿದು ಹೋಗಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಂತ್ಯವಾಗುತ್ತದೆ. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ವಿಜಯ ಭಾವುಟ ಹಾರಿಸಲಿದೆ ಎಂದರು.
ಇದನ್ನೂ ಓದಿ: Karnataka Elections 2023: ವಿಧಾನಸಭಾ ಚುನಾವಣಾ 2023; ನಿರ್ಣಾಯಕ ಪಾತ್ರ ವಹಿಸಲಿರುವ ವಲಸಿಗರು!
ನಾವೆಲ್ಲರು ನಮ್ಮ ಪ್ರಧಾನಿ ಕೈ ಬಲಪಡಿಸಬೇಕಾಗಿದೆ. ಇದರಿಂದ ನಮ್ಮ ದೇಶ ಜಗತ್ತಿನಲ್ಲಿ ವಿಶ್ವಗುರು ಆಗಲಿದೆ. ಸಮಾಜಿಕ ಮಾಧ್ಯಮಗಳ ಮೂಲಕ ಬಿಜೆಪಿಯ ನಾಯಕರ ಬಗ್ಗೆ ಪ್ರಚಾರ ಮಾಡಬೇಕಾಗಿದೆ. ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ರಾಜಹುಲಿ ಅಂತಾ ಹೋಗಳಿದರು. ಸರ್ಜಿಕಲ್ ಸ್ಟ್ರೈಕ್ ಉದಾಹರಣೆ ತೆಗೆದುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುಂಡಿಗೆಯ ಗಂಡು ಎಂದರು.
ಇದನ್ನೂ ಓದಿ: ಜೆಡಿಎಸ್ನ ಮತ್ತೊಂದು ವಿಕೆಟ್ ಪತನ, ಕಾಗೇರಿ ನಿವಾಸಕ್ಕೆ ಭೇಟಿ ನೀಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಿವಲಿಂಗೇಗೌಡ
ಕಾಂಗ್ರೆಸ್ನವರಿಗೆ ಗುಂಡಿಗೆನೂ ಇಲ್ಲ ಗಂಡಸ್ತನನೂ ಇಲ್ಲ ಎಂದು ವ್ಯಂಗ್ಯವಾಡಿದರು. ನಮ್ಮ ವಿಜಯನಗರವನ್ನು ಜಿಲ್ಲೆ ಮಾಡಿದ್ದು ನಮ್ಮ ಯಡಿಯೂರಪ್ಪನವರು. ಹಾಗಾಗಿ ನಾವು ಸರ್ಜಿಕಲ್ ಸ್ಟ್ರೈಕ್ ನಂತೆ ಚುನಾವಣೆಗೆ ತಯಾರಾಗಬೇಕು. ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ಬಾವುಟವನ್ನು ಹಾರಿಸೋಣ ಎಂದು ಹೇಳಿದರು.
ಕೂತುಹಲ ಮೂಡಿಸಿದ ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ, ಬಿ.ಎಲ್ ಸಂತೋಷ್ ಭೇಟಿ
ಮಾಜಿ ಎಂಎಲ್ಸಿ ಕರಿಯಣ್ಣ ಸಂಗಟಿ ಮತ್ತು ಬಿ.ಎಲ್ ಸಂತೋಷ್ ಭೇಟಿ ಕೂತುಹಲ ಮೂಡಿಸಿದ್ದು, ಕೈ ನಾಯಕರನ್ನು ಬಿಜೆಪಿಗೆ ಸೆಳೆದರಾ ಬಿ.ಎಲ್ ಸಂತೋಷ ಎನ್ನುವ ಅನುಮಾನಗಳು ಹುಟ್ಟಿಕೊಂಡಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಳಿಯಲ್ಲಿ ಇಬ್ಬರು ಭೇಟಿ ಮಾಡಿದ್ದಾರೆ. ಕಳೆದ ಭಾರಿ ಜೆಡಿಎಸ್ನಿಂದ ಸ್ಪರ್ಧಿಸಿ ಕಾಂಗ್ರೆಸ್ ಸೋಲಿಗೆ ಕರಿಯಣ್ಣ ಸಂಗಟಿ ಕಾರಣರಾಗಿದ್ದರು. ಹಾಗಾಗಿ ಕರಿಯಣ್ಣ ಒಂದು ವೇಳೆ ಬಿಜೆಪಿಗೆ ಸೇರ್ಪಡೆಯಾದರೆ ಮತ್ತಷ್ಟು ಬಲ ಬರಲಿದೆ. ಹೀಗಾಗಿ ಇಬ್ಬರ ಭೇಟಿ ಕೂತಹಲಕ್ಕೆ ಕಾರಣವಾಗಿದೆ. ಈ ವೇಳೆ ಕರಿಯಣ್ಣಗೆ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಚಿವ ಸಾಲೋಣಿ ನಾಗಪ್ಪ ಸಾಥ್ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:25 pm, Sun, 2 April 23




