Punjab Elections 2022 ಪಂಜಾಬ್​​ನಲ್ಲಿ ಕೇಜ್ರಿವಾಲ್​​​ ನೇತೃತ್ವದ ಆಮ್ ಆದ್ಮಿ ಪಕ್ಷ ಗೆಲುವಿನ ನಗು ಬೀರಲು ಕಾರಣವಾದ 5 ಸಂಗತಿಗಳಿವು

| Updated By: ರಶ್ಮಿ ಕಲ್ಲಕಟ್ಟ

Updated on: Mar 10, 2022 | 1:47 PM

Aam Aadmi Party ಈ ಬಾರಿ ನಾವು ಮೂರ್ಖರಾಗುವುದಿಲ್ಲ, ಭಗವಂತ್ ಮಾನ್ ಮತ್ತು ಕೇಜ್ರಿವಾಲ್‌ಗೆ ಅವಕಾಶ ನೀಡುತ್ತೇವೆ ಎಂಬ ಎಎಪಿ ಘೋಷಣೆಯು ರಾಜ್ಯಾದ್ಯಂತ ಪ್ರತಿಧ್ವನಿಸಿತ್ತು.

Punjab Elections 2022 ಪಂಜಾಬ್​​ನಲ್ಲಿ ಕೇಜ್ರಿವಾಲ್​​​ ನೇತೃತ್ವದ ಆಮ್ ಆದ್ಮಿ ಪಕ್ಷ ಗೆಲುವಿನ ನಗು ಬೀರಲು ಕಾರಣವಾದ 5 ಸಂಗತಿಗಳಿವು
ಅರವಿಂದ ಕೇಜ್ರಿವಾಲ್ ಜತೆ ಭಗವಂತ್ ಮಾನ್
Follow us on

ಅಮೃತಸರ: ಅರವಿಂದ ಕೇಜ್ರಿವಾಲ್ (Arvind Kejriwal) ಅವರ ಆಮ್ ಆದ್ಮಿ ಪಕ್ಷ (AAP) ಭಾರತದ ರಾಜಕೀಯದಲ್ಲಿ 9 ವರ್ಷಗಳ ನಂತರ ಮತ್ತೊಂದು ಬದಲಾವಣೆ ತಂದಿದೆ. 2013ರಲ್ಲಿ ದೆಹಲಿಯಲ್ಲಿ ಅಧಿಕಾರಕ್ಕೇರಿದ ಆಮ್ ಆದ್ಮಿ ಪಕ್ಷ ಇದೀಗ ಪಂಜಾಬ್​​ನಲ್ಲಿ(Punjab) ಗದ್ದುಗೆಗೇರಿದೆ.ಇಲ್ಲಿಯವರೆಗಿನ ಮಾಹಿತಿ ಪ್ರಕಾರ117 ಸದಸ್ಯರ ವಿಧಾನಸಭೆಯಲ್ಲಿ ಎಎಪಿ 89 ಸ್ಥಾನಗಳಲ್ಲಿ ಮುನ್ನಡೆಯೊಂದಿಗೆ ಐತಿಹಾಸಿಕ ಗೆಲುವು ಸಾಧಿಸಿದೆ. ಆಡಳಿತಾರೂಢ ಕಾಂಗ್ರೆಸ್ 13 ಸ್ಥಾನಗಳಿಗೆ ಕುಸಿದಿದೆ. ಶಿರೋಮಣಿ ಅಕಾಲಿದಳ 10 ಸ್ಥಾನಗಳಲ್ಲಿ ಮತ್ತು ಬಿಜೆಪಿ ಮೈತ್ರಿಕೂಟ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಎಎಪಿ ಚುನಾವಣೆಯಲ್ಲಿ ಹಲವು ಎಎಪಿ ಪ್ರಮುಖರು ಸೋತಿದ್ದಾರೆ. ಕಾಂಗ್ರೆಸ್​​ನ ಮುಖ್ಯಮಂತ್ರಿ ಅಭ್ಯರ್ಥಿ ಚರಣ್ ಜಿತ್ ಸಿಂಗ್ ಚನ್ನಿ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆಯಲ್ಲಿದ್ದಾರೆ. ಮಾಜಿ  ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಪಟಿಯಾಲದಲ್ಲಿ ಸೋಲು ಅನುಭವಿಸಿದ್ದರು. ಅಮೃತಸರ ಪೂರ್ವದಲ್ಲಿ ಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮೂರನೇ ಸ್ಥಾನದಲ್ಲಿದ್ದಾರೆ. ಶಿರೋಮಣಿ ಅಕಾಲಿದಳದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಮತ್ತು ಪಕ್ಷದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಕೂಡ ಹಿಂದೆ ಇದ್ದಾರೆ. ಇತ್ತ ಪಂಜಾಬ್ ಆಪ್ ಸಿಎಂ ಅಭ್ಯರ್ಥಿ ಭಗವಂತ್ ಮಾನ್ಗೆ ಜಯಗಳಿಸಿದ್ದಾರೆ.  ಆರಂಭಿಕ ಟ್ರೆಂಡ್ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಕ್ಲೀನ್ ಸ್ವೀಪ್ ಆಗಲಿದೆ ಎಂದು ಸೂಚಿಸುತ್ತಿದೆ. ಹೀಗಿರುವಾಗ ಕಳೆದ ಏಳು ದಶಕಗಳಿಂದ ರಾಜ್ಯವನ್ನು ಆಳಿದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳ (ಎಸ್‌ಎಡಿ) – ಎರಡು ಸಾಂಪ್ರದಾಯಿಕ ಪಕ್ಷಗಳಿಗಿಂತ ಆಮ್  ಆದ್ಮಿ ಪಕ್ಷ ಮುನ್ನಡೆ ಸಾಧಿಸಿ ಪಂಜಾಬ್​​ ನಲ್ಲಿ ಗದ್ದುಗೆಗೇರಲು  ಐದು ಕಾರಣಗಳು ಇಲ್ಲಿವೆ.

1. ಬದಲಾವಣೆಯ ಕೂಗು
1997 ರಿಂದ 2001 ರವರೆಗೆ ಬಿಜೆಪಿಯೊಂದಿಗೆ 24 ವರ್ಷಗಳ ಪಾಲುದಾರಿಕೆಯನ್ನು ಹೊಂದಿದ್ದ ಎಸ್ಎಡಿ ಮತ್ತು 2007 ಮತ್ತು 2012 ರಲ್ಲಿ ಗೆದ್ದ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಸಿದ್ದು ಆಮ್ ಆದ್ಮಿ ಪಕ್ಷದ ಸಾಧನೆ. ರಾಜ್ಯದಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ನೇತೃತ್ವದ ಸರ್ಕಾರವು ಬಾದಲ್ ವಿರುದ್ಧದ ಆರೋಪದಲ್ಲಿ ಮೃದು ಧೋರಣೆಯಿಂದಾಗಿ ಅಕಾಲಿದಳದೊಂದಿಗ ಸಹಭಾಗಿತ್ವದಲ್ಲಿದೆ ಎಂದು ಆರೋಪಿಸಲಾಗಿತ್ತು. ಇದು ಕಾಂಗ್ರೆಸ್ ಮತ್ತು ಅಕಾಲಿಗಳು ಒಂದೇ ನಾಣ್ಯದ ಎರಡು ಮುಖಗಳು ಎಂಬ ನೆಲೆಯಲ್ಲಿ ಗ್ರಹಿಕೆಗೆ ಕಾರಣವಾಯಿತು.
ಈ ಬಾರಿ, ಪಂಜಾಬ್  ಮಾಲ್ವಾದಾದ್ಯಂತ ಜನರು ಬದಲಾವಣೆಗೆ ಮತ ಹಾಕಿದ್ದಾರೆ. ಎರಡು ದೊಡ್ಡ ಪಕ್ಷಗಳ 70 ವರ್ಷಗಳ ಆಡಳಿತವನ್ನು ಮತದಾರರು ನೋಡಿದ್ದಾರೆ, ಆದರೆ ಫಲಿತಾಂಶವನ್ನು ನೀಡಿಲ್ಲ ಎಂಬ ಸಂದೇಶವು ರಾಜ್ಯಾದ್ಯಂತ ಪ್ರತಿಧ್ವನಿಸಿತು. ಹೀಗಾಗಿ ಬೇರೆ ಪಕ್ಷಕ್ಕೆ ಅವಕಾಶ ಕೊಡುವ ಕಾಲ ಎಂಬುದು ಜನರು ತೀರ್ಮಾನಿಸಿದ್ದಾರೆ. “ಇಸ್ ಬಾರ್ ನಾ ಖಾವಾಂಗೆ ಧೋಖಾ, ಭಗವಂತ್ ಮಾನ್ ತೆ ಕೇಜ್ರಿವಾಲ್ ನು ದೇವಾಂಗೇ ಮೌಕಾ (ಈ ಬಾರಿ ನಾವು ಮೂರ್ಖರಾಗುವುದಿಲ್ಲ, ಭಗವಂತ್ ಮಾನ್ ಮತ್ತು ಕೇಜ್ರಿವಾಲ್‌ಗೆ ಅವಕಾಶ ನೀಡುತ್ತೇವೆ)” ಎಂಬ ಎಎಪಿ ಘೋಷಣೆಯು ರಾಜ್ಯಾದ್ಯಂತ ಪ್ರತಿಧ್ವನಿಸಿತ್ತು.

2. ದೆಹಲಿ ಮಾದರಿ
ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ದೆಹಲಿ ಮಾದರಿಯನ್ನು ಪಂಜಾಬ್ ಜನರ ಮುಂದಿಟ್ಟು ಮತಯಾಚಿಸಿದ್ದರು. ದೆಹಲಿಯಲ್ಲಿನ ಗುಣಮಟ್ಟದ ಸರ್ಕಾರಿ ಶಿಕ್ಷಣ, ಆರೋಗ್ಯ, ವಿದ್ಯುತ್ ಮತ್ತು ಅಗ್ಗದ ದರದಲ್ಲಿ ನೀರು ಇವು ನಾಲ್ಕು ವಿಷಯಗಳನ್ನು ಅವರು ಹೈಲೈಟ್ ಮಾಡಿದರು. ಪಂಜಾಬ್ ನಲ್ಲಿ ಕಾಂಗ್ರೆಸ್ ಪಕ್ಷದೊಳಗಿನ ಪೈಪೋಟಿ, ಅಧಿಕಾರ ದಾಹದ ನಡುವೆ ಅಲ್ಲೊಂದು ಬದಲಾವಣೆಯ ಗಾಳಿ ಅಗತ್ಯವಿತ್ತು. ಪಂಜಾಬ್​​ನಲ್ಲಿ ಆರೋಗ್ಯ ಮತ್ತು ಶಿಕ್ಷಣವನ್ನು ಹೆಚ್ಚಾಗಿ  ಖಾಸಗೀಕರಣಗೊಂಡಿರುವುದರಿಂದ ಕೇಜ್ರಿವಾಲ್ ಅವರ ದೆಹಲಿ ಮಾದರಿ ಬಗ್ಗೆ ತಿಳಿದ ಪಂಜಾಬ್ ಜನತೆಯಲ್ಲಿ ಹೊಸತೊಂದು ಆಶಾಭಾವ ಉಂಟಾಯಿತು.

3. ಯುವಕರು ಮತ್ತು ಮಹಿಳೆಯರು
ಹೊಸ ಪಕ್ಷ ಮತ್ತು ‘ಆಮ್ ಆದ್ಮಿ’ ಅಥವಾ ಜನ ಸಮಾನ್ಯರಿಗೆ ಅವಕಾಶ ನೀಡಲು ಬಯಸುವ ಯುವಜನರು ಮತ್ತು ಮಹಿಳಾ ಮತದಾರರಿಂದ ಆಪ್ ಬೆಂಬಲವನ್ನು ಪಡೆದುಕೊಂಡಿದೆ. ರಾಜ್ಯದಲ್ಲಿ ಸ್ಥಳೀಯವಾಗಿ ಹರಡಿರುವ ಭ್ರಷ್ಟಾಚಾರವನ್ನು ಬೇರು ಸಮೇತ ಕಿತ್ತೊಗೆಯುವ ಕೇಜ್ರಿವಾಲ್ ಅವರ ಭರವಸೆಯು “ವ್ಯವಸ್ಥೆಯನ್ನು ಬದಲಾಯಿಸಲು” ಉತ್ಸುಕರಾಗಿರುವ ಯುವಕರಲ್ಲಿ ಪ್ರತಿಧ್ವನಿಸಿತು ಮತ್ತು ಶಿಕ್ಷಣ ಮತ್ತು ಉದ್ಯೋಗಕ್ಕೆ ಒತ್ತು ನೀಡುವ ಆಪ್ ಭರವಸೆಯಲ್ಲಿ ನಂಬಿಕೆ ಇರಿಸಿತು. ಅಂತೆಯೇ, ರಾಜ್ಯದ ಮಹಿಳೆಯರ ಖಾತೆಗಳಿಗೆ ತಿಂಗಳಿಗೆ 1,000 ರೂಪಾಯಿಗಳನ್ನು ಜಮಾ ಮಾಡುವ ಆಪ್ ಭರವಸೆಯು ಮಹಿಳೆಯರ ಮತ ಸೆಳೆಯಲು ಕಾರಣವಾಯಿತು, ಆದರೆ ಅಂತಹ ಜನಪ್ರಿಯ ಭರವಸೆಗಳನ್ನು ಸಾಮಾನ್ಯವಾಗಿ ಮುರಿಯಲು ಮಾಡಲಾಗುತ್ತದೆ ಎಂದು ಹಲವರು ಒಪ್ಪಿಕೊಂಡರು. ಆದರೆ ಅವರು ಮಹಿಳೆಯರನ್ನು ಪ್ರತ್ಯೇಕ ಮತಬ್ಯಾಂಕ್ ಆಗಿ ಓಲೈಸಿದರು.

4.ಸಿಎಂ ಅಭ್ಯರ್ಥಿಯಾಗಿ ಭಗವಂತ್ ಮಾನ್
ಭಗವಂತ್ ಮಾನ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿರುವುದು ಪಕ್ಷಕ್ಕೆ ತನ್ನ ಪ್ರತಿಸ್ಪರ್ಧಿಗಳು ನೀಡಿದ ಹೊರಗಿನ ಟ್ಯಾಗ್ ಅನ್ನು ತೊಡೆದುಹಾಕಲು ಸಹಾಯ ಮಾಡಿತು. ತನ್ನ ರಾಜಕೀಯ ಮತ್ತು ಸಾಮಾಜಿಕ ವಿಡಂಬನೆಯಿಂದ ಅನೇಕ ಪಂಜಾಬಿಗಳ ಹೃದಯದಲ್ಲಿ ಸ್ಥಾನ ಪಡೆದ ಜನಪ್ರಿಯ ಕಾಮಿಡಿನ್ ಮಾನ್, ಯಾವುದೇ ಸಾಂಪ್ರದಾಯಿಕ ರಾಜಕಾರಣಿಗಿಂತ ಭಿನ್ನವಾಗಿ ಮಣ್ಣಿನ ಮಗನ ಚಿತ್ರಣವನ್ನು ಹೊಂದಿದ್ದಾನೆ. ಮಾನ್ ಅವರು ಬಾಡಿಗೆ ಮನೆಯಲ್ಲಿ ಹೇಗೆ ವಾಸಿಸುತ್ತಿದ್ದರು ಎಂಬುದನ್ನು ವಿವರಿಸಿದ್ದು ಜನರ ಹೃದಯವನ್ನು ತಲುಪಲು ಸಹಾಯವಾಯಿತು.

5. ರೈತರ ಆಂದೋಲನ ಮತ್ತು ಮಾಲ್ವಾ
ಮೂರು ವಿವಾದಾಸ್ಪದ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಒಂದು ವರ್ಷಕ್ಕೂ ಹೆಚ್ಚು ಕಾಲದ ರೈತ ಆಂದೋಲನವು ಹಿಂದಿನ ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಿದ ‘ಬಣ’ ವ್ಯವಸ್ಥೆಯನ್ನು ಮುರಿಯುವ ಮೂಲಕ ಸರ್ಕಾರ ಬದಲಾವಣೆಗೆ ನೆಲವನ್ನು ಸಿದ್ಧಪಡಿಸಿತು.
69 ಅಸೆಂಬ್ಲಿ ಸ್ಥಾನಗಳೊಂದಿಗೆ ಮಾಲ್ವಾ ಪ್ರದೇಶದಲ್ಲಿ ವ್ಯಾಪಕವಾದ ಅನುಯಾಯಿಗಳನ್ನು ಹೊಂದಿರುವ ರಾಜ್ಯದ ಅತಿದೊಡ್ಡ ಒಕ್ಕೂಟವಾದ ಬಿಕೆಯು (ಉಗ್ರಹನ್) ಅಧ್ಯಕ್ಷ ಜೋಗಿಂದರ್ ಸಿಂಗ್ ಉಗ್ರನ್, ಇದು ಪ್ರಶ್ನಿಸುವ ಮತದಾರನನ್ನು ಹುಟ್ಟುಹಾಕಿದೆ ಎಂದು ಹೇಳಿದರು. ಸ್ವಾತಂತ್ರ್ಯದ 70 ವರ್ಷಗಳ ನಂತರವೂ ಅವರು ಗೆರೆಗಳನ್ನು ಮೀರಿ ಏಕೆ ನೋಡಬಾರದು ಎಂದು ನಾಯಕರನ್ನು ಕೇಳಲು ಪ್ರಾರಂಭಿಸಿದರು. . ಇಂತಿರುವಾಗ ಎಎಪಿ ಈ ಪ್ರಶ್ನೆಗಳಿಗೆ ಉತ್ತರವನ್ನು ಹೊಂದಿರುವಂತೆ ತೋರುತ್ತಿದೆ.

ಇದನ್ನೂ ಓದಿ: Bhagwant Mann: ಪಂಜಾಬ್​ ಮುಖ್ಯಮಂತ್ರಿ ಗದ್ದುಗೆ ಕಾಮಿಡಿಯನ್​ ಪಾಲಿಗೆ; ಮುಂದಿನ ಸಿಎಂ ಭಗವಂತ್ ಮಾನ್ ರಾಜಕೀಯ ಜರ್ನಿ ಹೀಗಿತ್ತು

Published On - 1:42 pm, Thu, 10 March 22