ಕಾಂಗ್ರೆಸ್ ಸರ್ಕಾರಗಳು ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತಿವೆ: ಪಂಜಾಬ್​​ನಲ್ಲಿ ಮೋದಿ ವಾಗ್ದಾಳಿ

Punjab Assembly Election 2022 ಕಾಂಗ್ರೆಸ್‌ನ ಸ್ಥಿತಿ ನೋಡಿ. ಅವರದೇ ಪಕ್ಷ ಛಿದ್ರವಾಗುತ್ತಿದೆ. ಅವರದೇ ನಾಯಕರೇ ಅವರನ್ನು ಬಯಲಿಗೆಳೆಯುತ್ತಿದ್ದಾರೆ. ಇಷ್ಟೆಲ್ಲಾ ಆಂತರಿಕ ಕಚ್ಚಾಟವಿರುವ ಪಕ್ಷ - ಪಂಜಾಬ್‌ಗೆ ಸ್ಥಿರ ಸರ್ಕಾರ ನೀಡಬಹುದೇ?" ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ

ಕಾಂಗ್ರೆಸ್ ಸರ್ಕಾರಗಳು ರಿಮೋಟ್ ಕಂಟ್ರೋಲ್ ಮೂಲಕ ನಡೆಯುತ್ತಿವೆ: ಪಂಜಾಬ್​​ನಲ್ಲಿ ಮೋದಿ ವಾಗ್ದಾಳಿ
ಜಲಂಧರ್​​ನಲ್ಲಿ ಮೋದಿ
Edited By:

Updated on: Feb 14, 2022 | 6:07 PM

ಜಲಂಧರ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ಪಂಜಾಬ್‌ನಲ್ಲಿ(Punjab  Election) ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದು, ಪಂಜಾಬ್ ನಲ್ಲಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಸರ್ಕಾರ ನಡೆಯದಂತೆ ಅಡ್ಡಿಪಡಿಸಲು ಯತ್ನಿಸಿದ ನಂತರ ಸಿಂಗ್ ಅವರನ್ನು ಅವಮಾನಿಸಿದೆ. ಕಾಂಗ್ರೆಸ್ (Congress) ರಿಮೋಟ್ ಕಂಟ್ರೋಲ್​​ನಲ್ಲಿ ಅಧಿಕಾರ ನಡೆಸುತ್ತದೆ ಎಂದು ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ಕೇಂದ್ರ ಸರ್ಕಾರವು “ರಿಮೋಟ್ ಕಂಟ್ರೋಲ್ ಮೂಲಕ” ಅಮರಿಂದರ್ ಸಿಂಗ್ ಅವರ ಸರ್ಕಾರವನ್ನು ನಡೆಸುತ್ತಿದೆ ಬಗ್ಗೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಗಳನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ” ಕ್ಯಾಪ್ಟನ್ ಸರ್ಕಾರವನ್ನು ದಿಲ್ಲಿಯಿಂದ ನಡೆಸುವುದು ನಮಗೆ ಇಷ್ಟವಿಲ್ಲ ಎಂದು ಅವರು ಹೇಳಿದರು. ಇದರರ್ಥ ಕಾಂಗ್ರೆಸ್ ಸರ್ಕಾರಗಳು ಒಂದು ಕುಟುಂಬದಿಂದ ರಿಮೋಟ್ ಕಂಟ್ರೋಲ್‌ನಿಂದ ನಡೆಸಲ್ಪಡುತ್ತವೆ, ಸಂವಿಧಾನದಿಂದಲ್ಲ” ಎಂದು ಮೋದಿ ಜಲಂಧರ್‌ನಲ್ಲಿ ನಡೆದ ರ್ಯಾಲಿಯಲ್ಲಿ ಹೇಳಿದರು. ಕ್ಯಾಪ್ಟನ್ ಕೇಂದ್ರ ಸರ್ಕಾರದ ಜೊತೆ ಕೆಲಸ ಮಾಡಿದ್ದರೆ, ಅವರು ಸಂವಿಧಾನದ ಅಡಿಯಲ್ಲಿ ಫೆಡರಲಿಸಂನ ತತ್ವವನ್ನು ಅನುಸರಿಸಲಿಲ್ಲವೇ? ಕ್ಯಾಪ್ಟನ್ ನಮ್ಮ ಮಾತನ್ನು ಕೇಳಲಿಲ್ಲ ಆದರೆ ಕೇಂದ್ರ ಸರ್ಕಾರದ ಮಾತು ಕೇಳುತ್ತಾರೆ ಎಂದು  ಕಾಂಗ್ರೆಸ್ ನಾಯಕರು ಹೇಳುತ್ತಾರೆ, ಅವರು ಪಂಜಾಬ್ ಸರ್ಕಾರಕ್ಕೆ ಅಡ್ಡಿಪಡಿಸಿದರು ಮತ್ತು ಅಂತಿಮವಾಗಿ ಕ್ಯಾಪ್ಟನ್ ಅವರನ್ನು ಹೊರಹಾಕಿದರು. ಕಾಂಗ್ರೆಸ್ ಈಗ ತನ್ನ ದುಷ್ಕೃತ್ಯಗಳಿಗೆ ಬೆಲೆ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು.

“ಕಾಂಗ್ರೆಸ್‌ನ ಸ್ಥಿತಿ ನೋಡಿ. ಅವರದೇ ಪಕ್ಷ ಛಿದ್ರವಾಗುತ್ತಿದೆ. ಅವರದೇ ನಾಯಕರೇ ಅವರನ್ನು ಬಯಲಿಗೆಳೆಯುತ್ತಿದ್ದಾರೆ. ಇಷ್ಟೆಲ್ಲಾ ಆಂತರಿಕ ಕಚ್ಚಾಟವಿರುವ ಪಕ್ಷ – ಪಂಜಾಬ್‌ಗೆ ಸ್ಥಿರ ಸರ್ಕಾರ ನೀಡಬಹುದೇ?” ಎಂದು ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.  ಪಂಜಾಬ್ ಹೊಸ ಸರ್ಕಾರಕ್ಕಾಗಿ ಭಾನುವಾರ ಮತದಾನ ನಡೆಯಲಿದೆ.

ಪಿಎಂ ಮೋದಿ ತಮ್ಮ ಪಕ್ಷದ ಪ್ರಚಾರಕ್ಕಾಗಿ ಹೊಸ ಘೋಷಣೆಯನ್ನು ಪ್ರಾರಂಭಿಸಿದರು: “ನವ ಪಂಜಾಬ್, ಬಿಜೆಪಿ ದೇ ನಾಲ್, ನವ ಪಂಜಾಬ್, ನಯೀ ಟೀಮ್ ದೇ ನಾಲ್. (ಬಿಜೆಪಿಯೊಂದಿಗೆ ಹೊಸ ಪಂಜಾಬ್, ಹೊಸ ತಂಡದೊಂದಿಗೆ ಹೊಸ ಪಂಜಾಬ್).

ಕಳೆದ ತಿಂಗಳ ಭದ್ರತಾ ಲೋಪದ ನಂತರ ಪಂಜಾಬ್‌ನಲ್ಲಿ ಪ್ರಧಾನಿ ತಮ್ಮ ಮೊದಲ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ರೈತ ಪ್ರತಿಭಟನಾಕಾರರ ದಿಗ್ಬಂಧನದಿಂದಾಗಿ ರ್ಯಾಲಿಗೆ ಹೋಗುವ ಮಾರ್ಗದಲ್ಲಿ ಫ್ಲೈಓವರ್‌ನಲ್ಲಿ 20 ನಿಮಿಷಗಳ ಕಾಲ ಕಳೆಯಬೇಕಾಯಿತು.

“ನಾನು ದೇವಿ ಕಾ ತಲಾಬ್‌ಗೆ ಭೇಟಿ ನೀಡಲು ಬಯಸಿದ್ದೆ ಆದರೆ ಭದ್ರತೆಯ ಕಾರಣ ಅದನ್ನು ಅನುಮತಿಸಲಾಗುವುದಿಲ್ಲ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ. ಇದು ಪಂಜಾಬ್‌ನಲ್ಲಿ ಭದ್ರತೆಯ ಸ್ಥಿತಿಯಾಗಿದೆ” ಎಂದು ಪ್ರಧಾನಿ ಮೋದಿ ಟೀಕಿಸಿದರು.

ಇದನ್ನೂ ಓದಿ: ಸಂವಿಧಾನಕ್ಕೆ ಬದ್ದವಾಗಿ ದೇಶ ನಡೆಸುತ್ತೇವೆಯೇ ಹೊರತು ಇಸ್ಲಾಮಿಕ್ ಕಾನೂನಿನಲ್ಲಿರುವಂತೆ ಅಲ್ಲ; ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಸಿಎಂ ಯೋಗಿ

Published On - 6:01 pm, Mon, 14 February 22