Hello & welcome from the Brabourne Stadium, CCI for Match No. 5⃣0⃣ of the #TATAIPL 2022. ?
The @RishabhPant17-led @DelhiCapitals take on Kane Williamson's @SunRisers. ? ? #DCvSRH
Which team are you rooting for tonight❓ pic.twitter.com/A1Pa3b6lOP
— IndianPremierLeague (@IPL) May 5, 2022
ಉತ್ತರ ಪ್ರದೇಶದಲ್ಲಿ 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ಮೂರನೇ ಹಂತದ ಮತದಾನ ನಡೆದಿದ್ದು, ಸಂಜೆ 5ಗಂಟೆ ಹೊತ್ತಿಗೆ 57.44ರಷ್ಟು ಮತದಾನ ಆಗಿದೆ.
ಪಂಜಾಬ್ ವಿಧಾನಸಭೆ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಒಟ್ಟು 117 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಸಂಜೆ 5ಗಂಟೆವರೆಗೆ ಶೇ.63.44ರಷ್ಟು ಮತದಾನ ಆಗಿದೆ.
ਪੰਜਾਬ ਵਿਧਾਨ ਸਭਾ ਚੋਣਾਂ 2022
Punjab Assembly Elections 2022Total Average Voter Turnout in 23 Districts of Punjab
Till 05:00 PM-63.44%GO VOTE TODAY!!#govote #AssemblyElections2022 #COVIDsafeElections #TheCEOPunjab #PunjabVotes2022 #EveryVoteCounts @ECISVEEP @SpokespersonECI pic.twitter.com/SPd6rURvlD
— Chief Electoral Officer, Punjab (@TheCEOPunjab) February 20, 2022
ದೇರಾಬಸ್ಸಿ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 292ರಲ್ಲಿ ಕಳೆದ ಒಂದು ಗಂಟೆಯಿಂದಲೂ ಇವಿಎಂ ಕೆಲಸ ಮಾಡುತ್ತಿಲ್ಲವೆಂದು ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಂದಾ ಆರೋಪ ಮಾಡಿದ್ದಾರೆ.
ಪಂಜಾಬ್ನಲ್ಲಿ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್ ಅವರು ಇಂದು ಸತುಜ್ನಲ್ಲಿರುವ ಹಳ್ಳಿಗೆ ಭೇಟಿ ನೀಡಿ, ತಮ್ಮ ತಾಯಿ ಹರ್ಪಲ್ ಕೌರ್ ಆಶೀರ್ವಾದ ಪಡೆದರು. ಬಳಿಕ ಮಾತನಾಡಿದ ಅವರು, ಪಂಜಾಬ್ನಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. ಇದೇ ವೇಳೆ ಮಾತನಾಡಿದ ಭಗವಂತ್ ಮನ್ ತಾಯಿ, ದೇವರ ದಯೆಯಿಂದ ಎಲ್ಲರೂ ನನ್ನ ಮಗನನ್ನು ಪ್ರೀತಿಸುತ್ತಾರೆ. ನಮ್ಮ ಪಾಲಿಗೆ ಈಗಾಗಲೇ ಅವನು ಮುಖ್ಯಮಂತ್ರಿಯಾಗಿದ್ದಾನೆ ಎಂದು ಹೇಳಿದರು.
By God’s grace, everyone loves him. For us, he has already become the CM. People love him: Harpal Kaur, mother of Bhagwant Mann,AAP CM candidate for poll-bound Punjab
If a mother has said this, what else does one want…
Youth,students everyone wants a change:Bhagwant Mann, AAP pic.twitter.com/bnaGTO3ijc— ANI (@ANI) February 20, 2022
ಉತ್ತರ ಪ್ರದೇಶದಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದ್ದು, ಮಧ್ಯಾಹ್ನ 1 ಗಂಟೆ ಹೊತ್ತಿಗೆ ಶೇ.35.8ರಷ್ಟು ಮತದಾನ ಆಗಿದೆ. ಹಾಗೇ, ಪಂಜಾಬ್ನಲ್ಲಿ ಮಧ್ಯಾಹ್ನ 1 ಗಂಟೆವರೆಗೆ ಶೇ.34.1ರಷ್ಟು ಮತದಾನ ಆಗಿದೆ.
ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಮಧ್ಯೆ ಸಮಾಜವಾದಿ ಪಕ್ಷ ಒಂದೇ ಸಮ ವಿವಿಧ ದೂರುಗಳನ್ನು ನೀಡುತ್ತಲೇ ಇದೆ. ಫರುಖಾಬಾದ್ನ ಅಮೃತ್ಪುರ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 38ರಲ್ಲಿರುವ ಇವಿಎಂನಲ್ಲಿ ಸಮಾಜವಾದಿ ಪಕ್ಷದ ಸೈಕಲ್ ಗುರುತು ಇಲ್ಲ ಎಂದು ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಹಾಗೇ, ಕಯಮ್ಗಂಜ್ ವಿಧಾನಸಭೆ ಕ್ಷೇತ್ರದ ಬೂತ್ ಸಂಕ್ಯೆ 416ರಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರಿಗೆ ಮತಚಲಾಯಿಸಲು ಮತಗಟ್ಟೆ ಅಧಿಕಾರಿಗಳು ಬಿಡುತ್ತಿಲ್ಲ ಎಂದೂ ಆರೋಪ ಮಾಡಿದೆ.
ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿಯವರು ಖರಾರ್ನ ಮತಗಟ್ಟೆಯೊಂದರಲ್ಲಿ ಮತಚಲಾಯಿಸಿದರು. ಛನ್ನಿ ಚಮ್ಕೌರ್ ಸಾಹೀಬ್ ಮತ್ತು ಭಾದೌರ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.
Punjab CM Charanjit Singh Channi casts his vote at a polling booth in Kharar. He is contesting the polls from Chamkaur Sahib and Bhadaur constituencies, as a Congress candidate.#PunjabElections2022 pic.twitter.com/GnRqV3k5WE
— ANI (@ANI) February 20, 2022
ಮೊಗಾ ಜಿಲ್ಲೆಯ ಚುನಾವಣಾ ಕೇಂದ್ರಗಳಿಗೆ ಹೋಗದಂತೆ ನಟ ಸೋನು ಸೂದ್ಗೆ ಚುನಾವಣಾ ಆಯೋಗ ನಿರ್ಬಂಧ ವಿಧಿಸಿದೆ. ಮೊಗಾ ವಿಧಾನಸಭಾ ಕ್ಷೇತ್ರದಿಂದ ಸೋನು ಸೂದ್ ಸಹೋದರಿ ಮಾಳವಿಕಾ ಸೂದ್ ಕಾಂಗ್ರೆಸ್ನಿಂದ ಸ್ಪರ್ಧಿಸುತ್ತಿದ್ದಾರೆ. ಸೋನು ಸೂದ್ ಅಲ್ಲಿಗೆ ಹೋದರೆ ಮತದಾರರ ಮೇಲೆ ಪ್ರಭಾವ ಬೀರಿದಂತೆ ಆಗುತ್ತದೆ ಎಂದು ಶಿರೋಮಣಿ ಅಕಾಲಿ ದಳ್ ದೂರು ನೀಡಿದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಈ ನಿರ್ಧಾರ ಪ್ರಕಟಿಸಿದೆ.
ಅಜ್ನಾಲಾ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 59 ನ್ನು ಕೆಲವು ದುಷ್ಕರ್ಮಿಗಳು ವಶಪಡಿಸಿಕೊಂಡಿದ್ದಾರೆ. ಮದ್ಯ ಸೇವಿಸಿಕೊಂಡು ಬಂದು ಹೊರಗಡೆ ಗಲಾಟೆ ಮಾಡುತ್ತಿದ್ದಾರೆ ಎಂದು ಆಪ್ ವಕ್ತಾರ ರಾಘವ್ ಚಂದಾ ತಿಳಿಸಿದ್ದಾರೆ. ಅಲ್ಲದೆ, ಅಟ್ಟಾರಿ, ಸನೌರ್ಗಳಲ್ಲಿ ಇವಿಎಂಗಳು ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ದುರಸ್ತಿ ಮಾಡಬೇಕು ಎಂದೂ ಆಗ್ರಹಿಸಿದ್ದಾರೆ.
ಮತದಾನ ನಡೆಯುತ್ತಿರುವ ಕಾನ್ಪುರದಲ್ಲಿ ಉದ್ಯಮಿಯೊಬ್ಬರು ವಿಭಿನ್ನ ಕ್ರಮ ಕೈಗೊಂಡಿದ್ದಾರೆ. ಸಾಮಾಜಿಕ ಕಾರ್ಯಕರ್ತರೂ ಆಗಿರುವ ರಾಜೇಶ್ ಭಲ್ಲಾ, ಯಾರೆಲ್ಲ ಬಂದು ಮತದಾನ ಮಾಡುತ್ತಿದ್ದಾರೋ ಅವರಿಗೆ ಉಚಿತವಾಗಿ ಉಪಾಹಾರ ನೀಡುತ್ತಿದ್ದಾರೆ. ಚುನಾವಣೆ ಎಂಬುದು ಒಂದು ದೊಡ್ಡ ಹಬ್ಬ. ಇಂದು ಭಾನುವಾರ ರಜೆ ಬೇರೆ ಇದೆ. ಹೀಗಾಗಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತಹಾಕಬೇಕು. ನನಗೂ ರಜೆ ಇರುವುದರಿಂದ ನಾನು ಮತದಾರರಿಗೆ ತಿಂಡಿ ಕೊಡುತ್ತಿದ್ದೇನೆ ಎಂದಿದ್ದಾರೆ.
उत्तर प्रदेश: कानपुर के एक व्यवसाई व समाजसेवी राजेश भल्ला ने एक अनोखी पहल की जहां वह वोट देकर आने वालों को मुफ्त में नाश्ता करा रहे हैं।
उन्होंने बताया, “चुनाव देश का सबसे बड़ा पर्व है और आज छुट्टी भी है। इस छुट्टी में हम मतदाताओं के लिए यह सुविधा उपलब्ध करा रहे हैं।” pic.twitter.com/XWUp9fFFsD
— ANI_HindiNews (@AHindinews) February 20, 2022
ಉತ್ತರ ಪ್ರದೇಶ ಮತ್ತು ಪಂಜಾಬ್ನಲ್ಲಿ ಬಿರುಸಿನಿಂದ ಮತದಾನ ನಡೆಯುತ್ತಿದ್ದು, ಬೆಳಗ್ಗೆ 11ಗಂಟೆವರೆಗೆ ಪಂಜಾಬ್ನಲ್ಲಿ 17.77 ಮತ್ತು ಉತ್ತರ ಪ್ರದೇಶದಲ್ಲಿ ಶೇ.21.18ರಷ್ಟು ಮತದಾನವಾಗಿದೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಇಂದು ಜಸ್ವಂತ್ನಗರದಲ್ಲಿ ಮತದಾನ ಮಾಡಿದರು. ಕರ್ಹಾಲ್ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರು ಇದೇ ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಇಂದು ಮತದಾನ ಮಾಡಿದ ಬಳಿಕ ಮಾತನಾಡಿದ ಅವರು, ಈ ಬಾರಿ ಬಿಜೆಪಿ ಉತ್ತರ ಪ್ರದೇಶದಿಂದ ಖಂಡಿತ ನಿರ್ಮೂಲನೆಯಾಗುತ್ತದೆ. ಉತ್ತರ ಪ್ರದೇಶದ ರೈತರು ಬಿಜೆಪಿ ಯನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ಬಿಜೆಪಿ ಶಾಸಕನೊಬ್ಬನ ಬೆಂಬಲಿಗರು ಸಮಾಜವಾದಿ ಪಕ್ಷದ ಚುನಾವಣಾ ಏಜೆಂಟ್ಗಳ ಬ್ಯಾಗ್ ಮತ್ತು ಮೂರು ಮೊಬೈಲ್ಗಳನ್ನು ಕದ್ದಿದ್ದಾರೆ ಎಂದು ಸಮಾಜವಾದಿ ಪಕ್ಷ ಆರೋಪ ಮಾಡಿದೆ. ಮರಹರಾ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 105 ಮತ್ತು ಇಟಾಹ್ನ ಬೂತ್ ನಂಬರ್ 331 ರಲ್ಲಿ ಈ ಘಟನೆ ನಡೆದಿದೆ. ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಸಮಾಜವಾದಿ ಪಕ್ಷ ಆಗ್ರಹ ಮಾಡಿದೆ.
ನಟ ಸೋನು ಸೂದ್ ಸೋದರಿ, ಪಂಜಾಬ್ನ ಮೋಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಳವಿಕಾ ಸೂದ್ ತಮ್ಮ ಮತ ಚಲಾಯಿಸಿದರು. ಬಳಿಕ ಮಾತನಾಡಿದ ಮಾಳವಿಕಾ, ನಾನು ಮೋಗಾದ ಮಗಳು. ಹಾಗೇ ಒಬ್ಬ ನಾಗರಿಕಳಾಗಿ ನನ್ನ ಮತ ಚಲಾಯಿಸಿದ್ದೇನೆ. ಮೋಗಾವನ್ನು ಅಭಿವೃದ್ಧಿಯೆಡೆಗೆ ತೆಗೆದುಕೊಂಡು ಹೋಗುವುದು ನನ್ನ ಕರ್ತವ್ಯ. ನಾನು ಮತಗಟ್ಟೆಗಳಿಗೆ ತೆರಳಿ, ಜನರನ್ನು ಭೇಟಿಯಾಗುತ್ತೇನೆ. ಅವರೂ ಸಹ ನನ್ನ ಭೇಟಿಗೆ ಕಾಯುತ್ತಿದ್ದಾರೆ ಎಂದು ಹೇಳಿದರು.
#PunjabElections | Malvika Sood, Congress’ candidate from Moga casts her vote at Govt Girls Senior Secondary School here.
She says, “As a citizen & daughter of Moga, it’s my duty to take Moga city forward. I’ll visit booths & meet people, they are waiting for me to visit them.” pic.twitter.com/BVKyaeKzaA
— ANI (@ANI) February 20, 2022
ಉತ್ತರ ಪ್ರದೇಶ ಮತ್ತು ಪಂಜಾಬ್ನಲ್ಲಿ ಮತದಾನ ಮುಂಜಾನೆ 7ಗಂಟೆಯಿಂದ ಪ್ರಾರಂಭವಾಗಿದ್ದು, ಬೆಳಗ್ಗೆ 9ಗಂಟೆವರೆಗೆ ಉತ್ತರ ಪ್ರದೇಶದಲ್ಲಿ ಶೇ.8.15 ಮತ್ತು ಪಂಜಾಬ್ನಲ್ಲಿ ಶೇ.4.8 ರಷ್ಟು ಮತದಾನವಾಗಿದೆ.
ಉತ್ತರಪ್ರದೇಶದ ಫಿರೋಜಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ ನವವಿವಾಹಿತ ದಂಪತಿ ತಮ್ಮ ಮದುವೆಯ ಉಡುಪು, ಅಲಂಕಾರದಲ್ಲೇ ಬಂದು ಮತದಾನ ಮಾಡುವ ಮೂಲಕ ಗಮನಸೆಳೆದರು. ಇವರು ನಿನ್ನೆ ಸಂಜೆ ಮದುವೆಯಾಗಿದ್ದು, ಇಂದು ಯುವತಿ ತನ್ನ ಪತಿಯ ಮನೆಗೆ ಹೋಗುವ ಕಾರ್ಯಕ್ರಮವಿತ್ತು. ಪತಿ ಮನೆಗೆ ಹೋಗುವುದಕ್ಕೂ ಮೊದಲು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ.
A newly-wed bride, Julie cast her vote at polling booth no.305 in Firozabad assembly constituency before leaving for her in-laws’ house. She got married last night and was leaving for her in-laws’ house this morning. #UttarPradeshElection2022 pic.twitter.com/YtRxthyNik
— ANI UP/Uttarakhand (@ANINewsUP) February 20, 2022
ಕಾನ್ಪುರ ಜಿಲ್ಲೆಯ ಹಡ್ಸನ್ ಸ್ಕೂಲ್ನಲ್ಲಿ ಮತದಾನ ಮಾಡಿದ ತಮ್ಮ ಫೋಟೋಗಳನ್ನು ಹಂಚಿಕೊಂಡ ಕಾನ್ಪುರ ಮೇಯರ್ ಪ್ರಮೀಳಾ ಪಾಂಡೆ ವಿರುದ್ಧ ಎಫ್ಐಆರ್ ದಾಖಲಾಗಿದ್ದಾಗಿ ಕಾನ್ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇಹಾ ಪಾಂಡೆ ತಿಳಿಸಿದ್ದಾರೆ. ಪ್ರಮೀಳಾ ಪಾಂಡೆಯವರು ತಾವು ಇವಿಎಂ ಬಟನ್ ಪ್ರೆಸ್ ಮಾಡಿದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಚುನಾವಣಾ ನಿಯಮ ಉಲ್ಲಂಘನೆ ಮಾಡಿದ್ದಾರೆ. ಪಾಂಡೆ ಬಿಜೆಪಿಯವರಾಗಿದ್ದು, ಅವರು ಬಿಜೆಪಿಗೇ ಮತಹಾಕಿದ್ದನ್ನು ಫೋಟೋದಲ್ಲಿ ಕಾಣಬಹುದು. ಹೀಗಾಗಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪಂಜಾಬ್ನ ಅಮೃತ್ಸರ್ನ ಮನಾವಾಲಾದ ಬೂತ್ ನಂಬರ್ 101ರಲ್ಲಿ ಸೊಹ್ನಾ ಮತ್ತು ಮೊಹ್ನಾ ಎಂಬ ಸಯಾಮಿ ಅವಳಿಗಳು ಮತದಾನ ಮಾಡಿ ಗಮನ ಸೆಳೆದರು. ಇವರು ಇದೇ ಮೊದಲ ಬಾರಿಗೆ ತಮ್ಮ ಮತ ಚಲಾಯಿಸಿದ್ದಾರೆ. ಇವರಿಬ್ಬರ ದೇಹ ಒಂದಕ್ಕೊಂದು ಹೊಂದಿಕೊಂಡಿದ್ದರೂ ಕೂಡ ಇಬ್ಬರೂ ಪ್ರತ್ಯೇಕ ಮತದಾರರಾಗಿದ್ದರಿಂದ ಇದೊಂದು ವಿಶೇಷ ಕೇಸ್ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.
Conjoined twins, Sohna and Mohna, cast their votes at polling booth no.101 in Manawala, Amritsar. #PunjabElections pic.twitter.com/qx2pxuJ2N9
— ANI (@ANI) February 20, 2022
ಉತ್ತರ ಪ್ರದೇಶದಲ್ಲ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಹೀಗಾಗಿ ಗೂಂಡಾಗಳಲ್ಲಿ ಈಗಾಗಲೇ ಭಯ ಶುರುವಾಗಿದೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಟ್ವೀಟ್ ಮಾಡಿದ್ದಾರೆ.
गुंडों के बीच जबरदस्त भय है.
एक बार फिर यूपी में बीजेपी तय है. #जय_जय_श्री_राम— Keshav Prasad Maurya (@kpmaurya1) February 20, 2022
ಕಾನ್ಪುರ ದೇಹತ್ ಸಿಖಂದ್ರಾ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 331ರಲ್ಲಿ ಇವಿಎಂ ಸ್ಥಗಿತಗೊಂಡಿದ್ದರಿಂದ ಮತದಾನ ನಡೆಯುತ್ತಿಲ್ಲ ಎಂದು ಸಮಾಜವಾದಿ ಪಕ್ಷ ಹೇಳಿದೆ. ಅಷ್ಟೇ ಅಲ್ಲ, ಮತದಾನ ಸರಾಗವಾಗಿ ನಡೆಯಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ, ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮನವಿ ಮಾಡಿದೆ. ಅಕ್ಬರ್ಪುರ ರಾನಿಯಾ ವಿಧಾನಸಭಾ ಕ್ಷೇತ್ರದ ಬೂತ್ ನಂಬರ್ 307ರಲ್ಲೂ ಇದೇ ಸಮಸ್ಯೆಯಾಗಿದೆ. ಅಷ್ಟೇ ಅಲ್ಲ ಕಯಮ್ಗಂಜ್ ವಿಧಾನಸಭೆ ಕ್ಷೇತ್ರದ ಬೂತ್ ನಂಬರ್ 192 ಮತ್ತು ಇತರ ಮತಗಟ್ಟೆಗಳಲ್ಲೂ ಸಮಸ್ಯೆಯಾಗಿದೆ ಎಂದು ಸಮಾಜವಾದಿ ಪಕ್ಷ ಹೇಳಿದೆ.
ಉತ್ತರ ಪ್ರದೇಶ ಚುನಾವಣೆಯ ಮೂರನೇ ಹಂತದ ಮತದಾನದಲ್ಲಿ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಮತ್ತು ಅವರ ಪತ್ನಿ ಲೂಯಿಸ್ ಖುರ್ಷಿದ್ ಮತ ಚಲಾಯಿಸಿದರು. ಲೂಯಿಸ್ ಖುರ್ಷಿದ್ ಅವರು ಫರುಖಾಬಾದ್ ಸಾದರ್ನ ಅಭ್ಯರ್ಥಿಯಾಗಿದ್ದಾರೆ. ಮತದಾನ ಮಾಡಿದ್ದನ್ನು ನಾನು ಸಂಭ್ರಮಿಸುತ್ತಿದ್ದೇನೆ. ಎಲ್ಲೇ ಹೋಗಿ ನೋಡಿದರೂ ಮಹಿಳೆಯರು ಮತದಾನ ಮಾಡಲು ಹೆಚ್ಚೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಇದು ಸಾಧ್ಯವಾಗಿದ್ದು ಪ್ರಿಯಾಂಕಾ ಗಾಂಧಿಯವರಿಂದ ಎಂದು ಲೂಯಿಸ್ ಹೇಳಿದರು.
Congress leader Salman Khurshid & his wife and party’s candidate from Farrukhabad Sadar, Louise Khurshid vote at a polling booth in the constituency.
“Feeling euphoric. Because of Priyanka Gandhi everywhere I went women expressed interest in voting,” she says.#UPElections2022 pic.twitter.com/SjEaf5H9bP
— ANI UP/Uttarakhand (@ANINewsUP) February 20, 2022
ಪಂಜಾಬ್ ಮತ್ತು ಉತ್ತರ ಪ್ರದೇಶ ಮೂರನೇ ಹಂತದ ಮತದಾನ ಶುರುವಾದ ಬೆನ್ನಲ್ಲೇ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಅದರಲ್ಲೂ ಮೊದಲ ಬಾರಿಗೆ ಮತದಾನ ಮಾಡುತ್ತಿರುವ ಯುವಜನರು ತಪ್ಪದೆ ಹಕ್ಕು ಚಲಾಯಿಸಿ ಎಂದು ಕರೆ ನೀಡಿದ್ದಾರೆ.
The Punjab elections and the third phase of the UP elections are being held today. I call upon all those voting today to do so in large numbers, particularly the youth as well as first time voters.
— Narendra Modi (@narendramodi) February 20, 2022
ಧುರಿಯಿಂದ ಸ್ಪರ್ಧಿಸುತ್ತಿರುವ ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮನ್ ಅವರು ಇಂದು ಮಾತನಾಡಿ, ಪಂಜಾಬ್ ಪಾಲಿಗೆ ಇದು ಮಹತ್ವದ ದಿನ. ಬಿಜೆಪಿ ಮತ್ತು ಕಾಂಗ್ರೆಸ್ಗಳು ಒಟ್ಟಾಗಿ ನನ್ನ ಮತ್ತು ನಮ್ಮ ಪಕ್ಷದ ಮೇಲೆ ಆರೋಪಗಳ ಸುರಿಮಳೆ ಸುರಿಸುತ್ತಿವೆ. ಆದರೆ ಪಂಜಾಬ್ ಜನರಿಗೆ ಎಲ್ಲವೂ ಗೊತ್ತಿದೆ ಎಂದು ಹೇಳಿದ್ದಾರೆ.
ಇಂದು ಮುಂಜಾನೆ ಮತದಾನ ಶುರುವಾಗುವುದಕ್ಕೂ ಮೊದಲು ಪಂಜಾಬ್ ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿ ಖರಾರ್‌ನಲ್ಲಿರುವ ಕಟಲ್‌ಗಢ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ದೇವರು, ಮತದಾರರ ಇಚ್ಛೆಯಂತೆ ನಡೆಯುತ್ತದೆ. ನಾವು ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಿದ್ದೇವೆ. ಪಂಜಾಬ್ಗೆ ಅತ್ಯುತ್ತಮ ಆಡಳಿತ, ಸರ್ಕಾರ ಸಿಗುವಂತೆ ಮಾಡು ಎಂದು ನಾನು ಗುರು ಸಾಹೀಬ್ರಲ್ಲಿ ಬೇಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಪಂಜಾಬ್ ಮತ್ತು ಉತ್ತರ ಪ್ರದೇಶದಲ್ಲಿ ಮುಂಜಾನೆ ಏಳುಗಂಟೆಯಿಂದಲೇ ಮತದಾನ ಪ್ರಾರಂಭವಾಗಿದೆ. ಚುನಾವಣಾ ಅಧಿಕಾರಿಗಳು ಸುಮಾರು 6.30ರಿಂದಲೇ ಮತಗಟ್ಟೆಗಳಲ್ಲಿ ಸಿದ್ಧತೆಯಲ್ಲಿ ತೊಡಗಿದ್ದರು.
ಇಂದು ಪಂಜಾಬ್ ವಿಧಾನಸಭೆ ಚುನಾವಣೆ. ಹಾಗೇ, ಉತ್ತರ ಪ್ರದೇಶದಲ್ಲೂ ಮೂರನೇ ಹಂತದ ಮತದಾನ ನಡೆಯುತ್ತಿದೆ. ಪಂಜಾಬ್ನಲ್ಲಿ ಒಟ್ಟು 117 ವಿಧಾನಸಭಾ ಕ್ಷೇತ್ರದಿಂದ 1304 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಪಂಜಾಬ್ ಸಿಎಂ ಚರಣಜಿತ್ ಸಿಂಗ್ ಛನ್ನಿ, ಆಮ್ ಆದ್ಮಿ ಪಾರ್ಟಿಯ ಭಗವಂತ್ ಮನ್, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಮಾಜಿ ಮುಖ್ಯಮಂತ್ರಿಗಳಾದ ಅಮರಿಂದರ್ ಸಿಂಗ್, ಪ್ರಕಾಶ್ ಸಿಂಗ್ ಬಾದಲ್ ಮತ್ತು ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್ಬೀರ್ ಸಿಂಗ್ ಇತರರು ಇಂದು ಕಣದಲ್ಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಇಂದು16 ಜಿಲ್ಲೆಗಳ 59 ವಿಧಾನಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. 627 ಅಭ್ಯರ್ಥಿಗಳು ಕಣದಲ್ಲಿದ್ದು, 2.15 ಕೋಟಿ ಜನರು ಮತ ಹಾಕಲಿದ್ದಾರೆ. ಮುಖ್ಯವಾಗಿ ಇವತ್ತು ಹತ್ರಾಸ್, ಫಿರೋಜಾಬಾದ್, ಇಟಾ, ಕಸಗಂಜ್, ಮೇನ್ಪುರಿ, ಫರೂಖಾಬಾದ್, ಕನ್ನೌಜ್, ಕರ್ಹಾಲ್ ಗಳಲ್ಲಿ ಇಂದು ಮತದಾನ ಇದೆ. ಕರ್ಹಾಲ್ನಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಸ್ಪರ್ಧಿಸಿದ್ದು, ಬಿಜೆಪಿಯಿಂದ ಎಸ್ಪಿ ಬಾಘೇಲ್ ಪ್ರತಿಸ್ಪರ್ಧಿಯಾಗಿದ್ದಾರೆ.
Published On - 7:55 am, Sun, 20 February 22