‘ರೆಡ್​​ ಡೈರಿಯಲ್ಲಿ ಕರ್ಮಕಾಂಡ’: ರಾಜಸ್ಥಾನದ ಗೆಹ್ಲೋಟ್ ಸರ್ಕಾರ ವಿರುದ್ಧ ಮೋದಿ ವಾಗ್ದಾಳಿ

ವಿಧಾನಸಭಾ ಚುನಾವಣೆಗೆ ಮುನ್ನ, ಆಡಳಿತಾರೂಢ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಅಬ್ಬರದ ಪ್ರಚಾರವನ್ನು ಪ್ರಾರಂಭಿಸಿದ್ದು, ಇದಕ್ಕೆ ಮೋದಿ ನೇತೃತ್ವ ವಹಿಸಿದ್ದಾರೆ. "ರಾಜಸ್ಥಾನದಲ್ಲಿ ಕಮಲ ಅರಳಲಿದೆ" ಎಂದು ಬಿಜೆಪಿಯ ಚುನಾವಣಾ ಚಿಹ್ನೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ರಾಜಸ್ಥಾನದ "ಕೆಂಪು ಡೈರಿ" ವಿವಾದವನ್ನು ಉಲ್ಲೇಖಿಸಿದ ಮೋದಿ ಆ ಡೈರಿಯಲ್ಲಿ ಎಲ್ಲಾ ಕರ್ಮಕಾಂಡಗಳು ಇವೆ ಎಂದು ಹೇಳಿದ್ದಾರೆ.

‘ರೆಡ್​​ ಡೈರಿಯಲ್ಲಿ ಕರ್ಮಕಾಂಡ’: ರಾಜಸ್ಥಾನದ ಗೆಹ್ಲೋಟ್ ಸರ್ಕಾರ ವಿರುದ್ಧ ಮೋದಿ ವಾಗ್ದಾಳಿ
ಜೈಪುರದಲ್ಲಿ ನರೇಂದ್ರ ಮೋದಿ
Follow us
|

Updated on: Sep 25, 2023 | 7:45 PM

ಜೈಪುರ ಸೆಪ್ಟೆಂಬರ್ 25: ಕಳೆದ ಐದು ವರ್ಷಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ಸೋಮವಾರ) ರಾಜಸ್ಥಾನದ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಧಾನಸಭಾ ಚುನಾವಣೆಗೆ ಮುನ್ನ, ಆಡಳಿತಾರೂಢ ಕಾಂಗ್ರೆಸ್ ಅನ್ನು ಅಧಿಕಾರದಿಂದ ಕೆಳಗಿಳಿಸಲು ಬಿಜೆಪಿ ಅಬ್ಬರದ ಪ್ರಚಾರವನ್ನು ಪ್ರಾರಂಭಿಸಿದ್ದು, ಇದಕ್ಕೆ ಮೋದಿ ನೇತೃತ್ವ ವಹಿಸಿದ್ದಾರೆ. “ರಾಜಸ್ಥಾನದಲ್ಲಿ ಕಮಲ ಅರಳಲಿದೆ” ಎಂದು ಬಿಜೆಪಿಯ ಚುನಾವಣಾ ಚಿಹ್ನೆಯನ್ನು ಉಲ್ಲೇಖಿಸಿ ಪ್ರಧಾನಿ ಮೋದಿ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ರಾಜಸ್ಥಾನದ “ರೆಡ್ ಡೈರಿ” (Red Diary) ವಿವಾದವನ್ನು ಉಲ್ಲೇಖಿಸಿದ ಮೋದಿ ಆ ಡೈರಿಯಲ್ಲಿ ಎಲ್ಲಾ ಕರ್ಮಕಾಂಡಗಳು ಇವೆ ಎಂದು ಹೇಳಿದ್ದಾರೆ.

ಜುಲೈನಲ್ಲಿ ರಾಜಸ್ಥಾನ ವಿಧಾನಸಭೆಯಲ್ಲಿ ರೆಡ್ ಡೈರಿ ನಾಟಕೀಯ ದೃಶ್ಯಗಳಿಗೆ ಕಾರಣವಾಯಿತು. ಶಾಸಕ ರಾಜೇಂದ್ರ ಸಿಂಗ್ ಗುಧಾ ಅವರು ಗೆಹ್ಲೋಟ್ ಅವರನ್ನು ಆ ಡೈರಿ ಬಯಲು ಮಾಡುತ್ತದೆ ಎಂದು ಹೇಳಿದ್ದರು. 2020ರ ಸಚಿನ್ ಪೈಲಟ್ ನೇತೃತ್ವದ ದಂಗೆಯ ಸಮಯದಲ್ಲಿ ತನ್ನ ಸರ್ಕಾರವನ್ನು ಉಳಿಸಲು ಶಾಸಕರು, ಪಕ್ಷೇತರರು ಮತ್ತು ಇತರರಿಗೆ ಗೆಹ್ಲೋಟ್ ಮಾಡಿದ ಪಾವತಿಯ ವಿವರಗಳನ್ನು ಒಳಗೊಂಡಿರುವ ಡೈರಿಯು ಮುಖ್ಯಮಂತ್ರಿಯವರ ಆಪ್ತ ಸಹಾಯಕ ಧರ್ಮೇಂದ್ರ ರಾಥೋಡ್ ಅವರದ್ದಾಗಿದೆ ಎಂದು ಗುಧಾ ಆರೋಪಿಸಿದ್ದರು.

ಎಲ್ಲಾ ಕರ್ಮಕಾಂಡ ಕೆಂಪು ಡೈರಿಯಲ್ಲಿವೆ ಎಲ್ಲರೂ ಭ್ರಷ್ಟಾಚಾರ ಮತ್ತು ಕಡಿತದಲ್ಲಿ ತೊಡಗಿದ್ದಾರೆ. ಅಂತಹ ರಾಜ್ಯದಲ್ಲಿ ಯಾರಾದರೂ ಏಕೆ ಹೂಡಿಕೆ ಮಾಡುತ್ತಾರೆ? ಯಾರದ್ದೋ ತಲೆ ಕಡಿಯಲಾಯಿತು. ಸರ್ಕಾರ ಏನನ್ನೂ ಮಾಡಲಿಲ್ಲ, ಅಂತಹ ವಾತಾವರಣವಿದ್ದರೆ ಯಾರಾದರೂ ಏಕೆ ಹೂಡಿಕೆ ಮಾಡುತ್ತಾರೆ. ಕಾಂಗ್ರೆಸ್ ಅಪರಾಧಿಗಳಿಗೆ ಮುಕ್ತ ಹಸ್ತ ನೀಡುತ್ತಿದೆ. ಮಹಿಳೆಯರ ಘನತೆ ಕಾಪಾಡದ ಸರಕಾರವನ್ನು ಕಿತ್ತೊಗೆಯಬೇಕು ಎಂದು ಪ್ರಧಾನಿ ಮೋದಿ ಹೇಳಿದರು.

ಈ ವರ್ಷದ ಕೊನೆಯಲ್ಲಿ ರಾಜಸ್ಥಾನ ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಬಿಜೆಪಿ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ನೇರ ಪೈಪೋಟಿ ನಡೆಸುತ್ತಿದೆ. ಎರಡೂ ಪಕ್ಷಗಳು ರಾಜಸ್ಥಾನದಲ್ಲಿ 1993 ರಿಂದ ಪ್ರತಿ ಚುನಾವಣೆಯಲ್ಲಿ ಪರ್ಯಾಯವಾಗಿ ಸರ್ಕಾರವನ್ನು ರಚಿಸುತ್ತಿವೆ.

ಬಿಜೆಪಿಯ ರಾಜಸ್ಥಾನವು ಮುಖ್ಯವಾಗಿ ಮಹಿಳೆಯರ ವಿರುದ್ಧದ ಅಪರಾಧಗಳನ್ನು ತಡೆಯಲು ಮತ್ತು ಅವರನ್ನು ಸಬಲೀಕರಣಗೊಳಿಸಲು ಕೇಂದ್ರೀಕರಿಸುತ್ತದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಮಹಿಳೆಯರಿಗೆ ಏನೇನೂ ಮಾಡಿಲ್ಲ ಎಂದು ಪಕ್ಷವು ಆಗಾಗ್ಗೆ ಆರೋಪಿಸಿದೆ. ಹಲವು ವರ್ಷಗಳಿಂದ, ಮಹಿಳೆಯರು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ 33 ಪ್ರತಿಶತ ಮೀಸಲಾತಿಗಾಗಿ ಕಾಯುತ್ತಿದ್ದರು. ನಾನು ಇದನ್ನು ಮಾಡಿಲ್ಲ, ಆದರೆ ನಿಮ್ಮ ಮತದ ಶಕ್ತಿ ಅದನ್ನು ಸಾಧಿಸಿದೆ ಎಂದು ಪ್ರಧಾನಿ ಮೋದಿ ಅವರು ಜೈಪುರದಲ್ಲಿ ಪರಿವರ್ತನ್ ಸಂಕಲ್ಪ್ ರ‍್ಯಾಲಿ ಭಾಷಣದಲ್ಲಿ ಮಾತನಾಡಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಮೆಗಾ ರ‍್ಯಾಲಿ: ಎಲ್ಲಾ ಖಾತರಿಗಳನ್ನು ಪೂರೈಸುವ ಭರವಸೆ ನೀಡಿದ ಪ್ರಧಾನಿ ಮೋದಿ

ಭೋಪಾಲ್‌ನಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ನಂತರ ಅವರು ಜೈಪುರ ತಲುಪಿದರು. ಈ ವರ್ಷದ ಕೊನೆಯಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ಮಧ್ಯಪ್ರದೇಶವೂ ಸೇರಿದೆ. ಜೈಪುರದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡುವ ಮೊದಲು, ಪ್ರಧಾನಿ ಮೋದಿ ಅವರು ಬಿಜೆಪಿಯ ಸಿದ್ಧಾಂತವಾದಿ ದೀನದಯಾಳ್ ಉಪಾಧ್ಯಾಯ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಪುಷ್ಪ ನಮನ ಸಲ್ಲಿಸಿದರು.

2018ರಲ್ಲಿ 200 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದ್ದರೆ ಬಿಜೆಪಿ 73 ಸ್ಥಾನಗಳನ್ನು ಪಡೆದುಕೊಂಡಿತ್ತು. ನಂತರ ಕಾಂಗ್ರೆಸ್ ಪಕ್ಷೇತರರು ಮತ್ತು ಬಹುಜನ ಸಮಾಜ ಪಕ್ಷದ ಬೆಂಬಲದೊಂದಿಗೆ ಸರ್ಕಾರ ರಚಿಸಿತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ