5 ವರ್ಷಗಳಲ್ಲಿ ಕಾಂಗ್ರೆಸ್ ರಾಜಸ್ಥಾನದ ಗುರುತನ್ನು ನಾಶಪಡಿಸಿದೆ: ಪ್ರಧಾನಿ ನರೇಂದ್ರ ಮೋದಿ
PM Modi in Rajasthan: ದೇಶಾದ್ಯಂತ ಗ್ಯಾಸ್ ಪೈಪ್‌ಲೈನ್‌ಗಳನ್ನು ಹಾಕುವ ಕೆಲಸವು ಅನಿಲ ಆಧಾರಿತ ಆರ್ಥಿಕತೆಯನ್ನು ಬಲಪಡಿಸುವ ಪ್ರಕ್ರಿಯೆಯಲ್ಲಿದೆ. ಈ ಪೈಪ್‌ಲೈನ್ ರಾಜಸ್ಥಾನದಲ್ಲಿ ಕೈಗಾರಿಕೆಗಳ ವಿಸ್ತರಣೆಗೆ ಸಹಾಯ ಮಾಡುತ್ತದೆ ಮತ್ತು ಸಾವಿರಾರು ಉದ್ಯೋಗಾವಕಾಶಗಳನ್ನು ತರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೆಹಲಿ ಅಕ್ಟೋಬರ್ 02: ಪ್ರಧಾನಿ ಮೋದಿ ಸೋಮವಾರ ರಾಜಸ್ಥಾನದ (Rajasthan) ಚಿತ್ತೋರ್‌ಗಢದಲ್ಲಿ (Chittorgarh) ನಡೆದ ಸಮಾರಂಭದಲ್ಲಿ ಸುಮಾರು ₹ 7,000 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಸಭಿಕರನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಜಸ್ಥಾನದ ಅಭಿವೃದ್ಧಿಯು ಕೇಂದ್ರ ಸರ್ಕಾರದ ಅತಿದೊಡ್ಡ ಆದ್ಯತೆಯಾಗಿದೆ. ರಾಜಸ್ಥಾನದಲ್ಲಿ ಎಕ್ಸ್‌ಪ್ರೆಸ್‌ವೇಗಳು, ಹೆದ್ದಾರಿಗಳು ಮತ್ತು ರೈಲ್ವೇಗಳಂತಹ ಆಧುನಿಕ ಮೂಲಸೌಕರ್ಯಗಳ ಅಭಿವೃದ್ಧಿಗೆ ಕೇಂದ್ರವು ಗಮನಹರಿಸಿದೆ ಎಂದು ಹೇಳಿದ್ದಾರೆ. ಅನಿಲ ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸಲು, ಪ್ರಧಾನಿ ಮೋದಿ ಅವರು ಮೆಹ್ಸಾನಾ-ಭಟಿಂಡಾ-ಗುರುದಾಸ್‌ಪುರ ಗ್ಯಾಸ್ ಪೈಪ್‌ಲೈನ್ ನ್ನು ಮೋದಿ ಉದ್ಘಾಟಿಸಿದ್ದಾರೆ.
ದೇಶಾದ್ಯಂತ ಗ್ಯಾಸ್ ಪೈಪ್‌ಲೈನ್‌ಗಳನ್ನು ಹಾಕುವ ಕೆಲಸವು ಅನಿಲ ಆಧಾರಿತ ಆರ್ಥಿಕತೆಯನ್ನು ಬಲಪಡಿಸುವ ಪ್ರಕ್ರಿಯೆಯಲ್ಲಿದೆ. ಈ ಪೈಪ್‌ಲೈನ್ ರಾಜಸ್ಥಾನದಲ್ಲಿ ಕೈಗಾರಿಕೆಗಳ ವಿಸ್ತರಣೆಗೆ ಸಹಾಯ ಮಾಡುತ್ತದೆ ಮತ್ತು ಸಾವಿರಾರು ಉದ್ಯೋಗಾವಕಾಶಗಳನ್ನು ತರುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Projects being launched from Chittorgarh will have a transformative impact on infrastructure, connectivity and education in Rajasthan and further ‘Ease of Living.’ https://t.co/jKmDRgwuwA
— Narendra Modi (@narendramodi) October 2, 2023
ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಪ್ರಕಾರ, ಸುಮಾರು ₹ 4500 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್ ನಿರ್ಮಿಸಲಾಗಿದೆ. ಪ್ರಧಾನಮಂತ್ರಿಯವರು ಅಬು ರಸ್ತೆಯಲ್ಲಿರುವ HPCL ನ LPG ಸ್ಥಾವರವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈ ಸ್ಥಾವರವು ವರ್ಷಕ್ಕೆ 86 ಲಕ್ಷ ಸಿಲಿಂಡರ್‌ಗಳನ್ನು ತುಂಬಿಸಿ ವಿತರಿಸುತ್ತದೆ. ವರ್ಷಕ್ಕೆ ಸಿಲಿಂಡರ್‌ಗಳನ್ನು ಸಾಗಿಸುವ ಟ್ರಕ್‌ಗಳ ಚಾಲನೆಯಲ್ಲಿ ಸುಮಾರು 0.75 ಮಿಲಿಯನ್ ಕಿಮೀಗಳಷ್ಟು ನಿವ್ವಳ ಕಡಿತವನ್ನು ಉಂಟುಮಾಡುತ್ತದೆ, ಇದು ವರ್ಷಕ್ಕೆ ಸುಮಾರು 0.5 ಮಿಲಿಯನ್ ಟನ್ ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Akshardham: ಅಮೆರಿಕದಲ್ಲಿ ಅಕ್ಷರಧಾಮ ನಿರ್ಮಾಣ, ಶುಭಾಶಯ ಕೋರಿದ ಪ್ರಧಾನಿ ಮೋದಿ, ಬ್ರಿಟನ್ ಪ್ರಧಾನಿ ರಿಷಿ ಸುನಕ್
ಅದೇ ವೇಳೆ ರಾಜಸ್ಥಾನದ ಪ್ರವಾಸೋದ್ಯಮ ಕ್ಷೇತ್ರವನ್ನು ಉತ್ತೇಜಿಸುವ ಘೋಷಣೆಗಳನ್ನೂ ಪ್ರಧಾನಿ ಮಾಡಿದ್ದಾರೆ. ಇಲ್ಲಿ ಹೆಚ್ಚಿನ ಸಾಂಸ್ಕೃತಿಕ ಕೇಂದ್ರಗಳನ್ನು ರಚಿಸುವ ಮೂಲಕ ಪ್ರವಾಸೋದ್ಯಮ ಕೇಂದ್ರಗಳಿಗೆ ಉತ್ತೇಜನ ನೀಡುತ್ತಿದ್ದೇವೆ, ಹೊಸ ಯೋಜನೆಗಳ ಉದ್ಘಾಟನೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ ಎಂದರು.
ಸ್ವದೇಶ್ ದರ್ಶನ್ ಯೋಜನೆಯಡಿಯಲ್ಲಿ ನಾಥದ್ವಾರದಲ್ಲಿ ಅಭಿವೃದ್ಧಿಪಡಿಸಲಾದ ಪ್ರವಾಸೋದ್ಯಮ ಸೌಲಭ್ಯಗಳನ್ನು ಮೋದಿ ದೇಶಕ್ಕೆ ಸಮರ್ಪಿಸಿದರು. ಸಂತ ವಲ್ಲಭಾಚಾರ್ಯರು ಪ್ರಚಾರ ಮಾಡಿದ ಪುಷ್ಟಿಮಾರ್ಗದ ಲಕ್ಷಾಂತರ ಅನುಯಾಯಿಗಳಿಗೆ ನಾಥದ್ವಾರವು ನಂಬಿಕೆಯ ಪ್ರಮುಖ ಕೇಂದ್ರವಾಗಿದೆ. ನಾಥದ್ವಾರದಲ್ಲಿ ಆಧುನಿಕ ‘ಪ್ರವಾಸಿ ವ್ಯಾಖ್ಯಾನ ಮತ್ತು ಸಾಂಸ್ಕೃತಿಕ ಕೇಂದ್ರ’ವನ್ನು ಅಭಿವೃದ್ಧಿಪಡಿಸಲಾಗಿದೆ.
ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ: ಮುಖ್ಯಾಂಶಗಳು
- ಪೂರಾ ರಾಜಸ್ಥಾನ, ಪೂರಾ ಮೇವಾರ್ ಕ್ಯಾ ಸೋಚ್ ರಹಾ ಹೈ, ಯಹಾನ್ ಚಿತ್ತೋರ್‌ಗಢ ಮೇ ಸಾಫ್ ಸಾಫ್ ದಿಖಾಯಿ ದೇತಾ ಹೈ” (ಇಡೀ ರಾಜಸ್ಥಾನ , ಇಡೀ ಮೇವಾರ್ ಏನು ಯೋಚಿಸುತ್ತದೆ ಎಂಬುದು ಚಿತ್ತೋರ್‌ಗಢದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ) ಎಂದು ಮೋದಿ ಭಾಷಣ ಆರಂಭಿಸಿದ್ದಾರೆ.
- ರಾಜ್ಯದಲ್ಲಿ ಆಪಾದಿತ ಪೇಪರ್ ಸೋರಿಕೆ ಮಾಫಿಯಾ ಬಗ್ಗೆ ಮಾತನಾಡಿದ ಮೋದಿ ಇದರಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ವಿಧಿಸುವುದಾಗಿ ಭರವಸೆ ನೀಡಿದರು.
- ನಾವು ಯೋಜನೆಗಳನ್ನು ಮುಂದುವರಿಸುತ್ತೇವೆ ಮತ್ತು ಅವುಗಳನ್ನು ಸುಧಾರಿಸುತ್ತೇವೆ, ಆದರೆ ಭ್ರಷ್ಟಾಚಾರದಲ್ಲಿ ತೊಡಗಿರುವ ಮತ್ತು ಬಡ ಜನರನ್ನು ಲೂಟಿ ಮಾಡಿದವರ ವಿರುದ್ಧ ನಾವು ಖಂಡಿತವಾಗಿಯೂ ತನಿಖೆ ನಡೆಸುತ್ತೇವೆ.
- ಗೆಹ್ಲೋಟ್ ಅವರು ಮುಖ್ಯಮಂತ್ರಿ ಸ್ಥಾನವನ್ನು ತೊರೆಯುತ್ತಿದ್ದಾರೆಂದು ಅವರಿಗೆ ತಿಳಿದಿದೆ, ಅದಕ್ಕಾಗಿಯೇ ಅವರು ಈಗಾಗಲೇ ಬಿಜೆಪಿಯನ್ನು ಅಭಿನಂದಿಸಿದ್ದಾರೆ. ಒಮ್ಮೆ ಬಿಜೆಪಿ ಸರ್ಕಾರ ರಚಿಸಿದರೆ, ಅವರ ಯೋಜನೆಗಳನ್ನು ನಿಲ್ಲಿಸಬಾರದು ಎಂದು ಅವರು ಹೇಳಿದ್ದರು.
- ರಾಜಸ್ಥಾನದಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ನಂತರ ಗಲಭೆಯಂತಹ ಅಪರಾಧ ಚಟುವಟಿಕೆಗಳನ್ನು ನಿಲ್ಲಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ.
- ವಂಚನೆಯಿಂದ ಕಾಂಗ್ರೆಸ್ ಸರ್ಕಾರ ರಚಿಸುವಲ್ಲಿ ಯಶಸ್ವಿಯಾಯಿತು. ಆದರೆ ಅದನ್ನು ನಡೆಸಲು ಸಾಧ್ಯವಾಗಲಿಲ್ಲ. ಇಲ್ಲಿ ಗೆಹ್ಲೋಟ್ ಜಿ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕಾಂಗ್ರೆಸ್ ಅರ್ಧದಷ್ಟು ಅವರ ಕುರ್ಚಿಯನ್ನು ಉರುಳಿಸುವಲ್ಲಿ ನಿರತವಾಗಿದೆ.
- ಕಾಂಗ್ರೆಸ್ ಜಗಳದಲ್ಲಿ ತೊಡಗಿರುವಾಗ ಸಾರ್ವಜನಿಕರನ್ನು ಅದರ ಪಾಡಿಗೆ ಬಿಡಲಾಗಿದೆ. ಅವರು ಒಗ್ಗಟ್ಟಾಗಿ ಉಳಿದುಕೊಂಡಿರುವುದು ರಾಜಸ್ಥಾನವನ್ನು ಲೂಟಿ ಮಾಡುವುದರಲ್ಲಿ ಮಾತ್ರ.
- ಕಳೆದ 5 ವರ್ಷಗಳಲ್ಲಿ, ಕಾಂಗ್ರೆಸ್ ರಾಜಸ್ಥಾನದ ಗುರುತನ್ನು ನಾಶಪಡಿಸಿದೆ.”ಇಲ್ಲಿಂದ ಸುದ್ದಿ ಬಂದಾಗ, ನನಗೆ ತುಂಬಾ ಸಂಕಟವಾಗುತ್ತದೆ. ನಾನು ದುಃಖದ ಹೃದಯದಿಂದ ಹೇಳುತ್ತೇನೆ, ಇಂದು ಅಪರಾಧದ ವಿಷಯಕ್ಕೆ ಬಂದಾಗ, ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ? ನಮ್ಮ ರಾಜಸ್ಥಾನ!”
- “ಪಂಡಾಲ್ ಭಲೇ ಛೋಟಾ ಪದ್ ಗಯಾ, ಮೋದಿ ಕಾ ದಿಲ್ ಬಹೋತ್ ಬಡಾ ಹೈ… ಆಪ್ ಸಬ್ ಮೇರೆ ದಿಲ್ ಮೇ ಬಸ್ತೇ ಹೇ” (ಈ ಪೆಂಡಾಲ್ ತುಂಬಾವ ಚಿಕ್ಕದಾಗಿದ್ದರೂ ಮೋದಿಯ ಹೃದಯ ತುಂಬಾ ದೊಡ್ಡದಾಗಿದೆ. ನೀವು ನನ್ನ ಹೃದಯದಲ್ಲಿದ್ದೀರಿ)
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:48 pm, Mon, 2 October 23