AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಹ್ಲೋಟ್ ಯಾರನ್ನು ಕೊರೊನಾ ಎಂದು ಕರೆದಿದ್ದರೋ ಅವರೊಂದಿಗೇ ತಿರುಗಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ

ಐದು ವರ್ಷಗಳಿಂದ ಕಾಂಗ್ರೆಸ್ ನಿದ್ದೆ ಮಾಡುತ್ತಿದೆ, ರಾಜ್ಯದ ಜನತೆಗೆ ನೀಡಿದ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಲ್ಯಾಪ್ ಟಾಪ್ ನೀಡಿಲ್ಲ, ಸಾಲ ಮನ್ನಾ ಭರವಸೆಯನ್ನೂ ಈಡೇರಿಸಿಲ್ಲ.. ಅಶೋಕ್ ಗೆಹ್ಲೋಟ್ ಅವರ ಸುಳ್ಳು ಮತ್ತು ಲೂಟಿ ಎರಡನ್ನೂ ರಾಜಸ್ಥಾನದ ಜನರು ಅರ್ಥಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

ಗೆಹ್ಲೋಟ್ ಯಾರನ್ನು ಕೊರೊನಾ ಎಂದು ಕರೆದಿದ್ದರೋ ಅವರೊಂದಿಗೇ ತಿರುಗಾಡುತ್ತಿದ್ದಾರೆ: ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ
ರಶ್ಮಿ ಕಲ್ಲಕಟ್ಟ
|

Updated on:Nov 20, 2023 | 9:11 PM

Share

ದೆಹಲಿ ನವೆಂಬರ್ 20: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರು ಸಚಿನ್ ಪೈಲಟ್ (Sachin Pilot) ಅವರನ್ನು ಕೊರೊನಾ ಎಂದು ಕರೆಯುತ್ತಿದ್ದರು. ಈಗ ಅದೇ ಕೊರೊನಾ ರೋಗಿಯೊಂದಿಗೆ ಸುತ್ತಾಡುತ್ತಿದ್ದಾರೆ. ಕೊರೊನಾ ರೋಗಿಯ ಬಳಿ ಹೋದರೆ ಕೊರೊನಾ ಬರುತ್ತದೆ, ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಈಗ ಕೊರೊನಾ ಬಂದಿದೆ. ಕೊರೊನಾದಿಂದ ಕಾಂಗ್ರೆಸ್ ಪಕ್ಷದ ಶ್ವಾಸಕೋಶ ಹಾಳಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad joshi )ಹೇಳಿದ್ದಾರೆ.

ರಾಜಸ್ಥಾನದಲ್ಲಿ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನಾಯಕರ ನಡುವೆ ಒಂದು ಸುತ್ತಿನ ಆರೋಪ ಮತ್ತು ಪ್ರತ್ಯಾರೋಪಗಳು ನಡೆಯುತ್ತಿವೆ. ಇದೀಗ ಕೇಂದ್ರ ಸಚಿವ ಜೋಶಿ ಅವರು ರಾಜಸ್ಥಾನದ ಪ್ರಸ್ತುತ ಸರ್ಕಾರವನ್ನು ತೀವ್ರವಾಗಿ ಗುರಿಯಾಗಿಸಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಜೋಶಿ, ಅಶೋಕ್ ಗೆಹ್ಲೋಟ್ ಸುಳ್ಳು ಹೇಳುತ್ತಿದ್ದಾರೆ, ಅವರ ಸಾರ್ವಜನಿಕ ಸಭೆಗಳಿಗೆ ಜನರು ಹೋಗುತ್ತಿಲ್ಲ, ಜನರು ಅವರ ಮಾತನ್ನು ಕೇಳಲು ಹೋಗುತ್ತಿಲ್ಲ, ರಾಜ್ಯದಲ್ಲಿ ಜಾಹೀರಾತುಗಳನ್ನು ನೀಡಿ ಅಲೆ ಸೃಷ್ಟಿಸುವ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳನ್ನು ಗ್ರಾಮಕ್ಕೆ ಪ್ರವೇಶಿಸಲು ಸಾರ್ವಜನಿಕರು ಬಿಡುತ್ತಿಲ್ಲ . ಇವರು ಸುಳ್ಳು ಹೇಳುವ ಮೂಲಕ ಅಲೆಗಳನ್ನು ಸೃಷ್ಟಿಸುತ್ತಾರೆ ಎಂದಿದ್ದಾರೆ.

ಐದು ವರ್ಷಗಳಿಂದ ಕಾಂಗ್ರೆಸ್ ನಿದ್ದೆ ಮಾಡುತ್ತಿದೆ, ರಾಜ್ಯದ ಜನತೆಗೆ ನೀಡಿದ ಒಂದೇ ಒಂದು ಭರವಸೆಯನ್ನೂ ಈಡೇರಿಸಿಲ್ಲ. ಲ್ಯಾಪ್ ಟಾಪ್ ನೀಡಿಲ್ಲ, ಸಾಲ ಮನ್ನಾ ಭರವಸೆಯನ್ನೂ ಈಡೇರಿಸಿಲ್ಲ. ಅಶೋಕ್ ಗೆಹ್ಲೋಟ್ ಅವರ ಸುಳ್ಳು ಮತ್ತು ಲೂಟಿ ಎರಡನ್ನೂ ರಾಜಸ್ಥಾನದ ಜನರು ಅರ್ಥಮಾಡಿಕೊಂಡಿದ್ದಾರೆ. ಯಾವುದೇ ಸಂದರ್ಭದಲ್ಲೂ ಕಾಂಗ್ರೆಸ್ 56 ಸ್ಥಾನಗಳನ್ನು ದಾಟಲು ಸಾಧ್ಯವಿಲ್ಲ ಎಂಬುದನ್ನು ಗೆಹ್ಲೋಟ್ ಜಿ ಒಪ್ಪಿಕೊಳ್ಳಬೇಕು.

ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚನೆ ಕುರಿತು ಮಾತನಾಡಿದ ಕೇಂದ್ರ ಸಚಿವರು ಕಾಂಗ್ರೆಸ್ ನ ಸುಳ್ಳುಗಳಿಗೆ ಸಾರ್ವಜನಿಕರು ಬೇಸತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಎಂದರು.

ಇದನ್ನೂ ಓದಿ: Fact Check: ವಿಶ್ವಕಪ್ ಪ್ರೆಸೆಂಟೇಷನ್ ಸಮಾರಂಭದಲ್ಲಿ ಪ್ಯಾಟ್ ಕಮಿನ್ಸ್‌ ಕೈಕುಲುಕದೇ ಹೋದರೆ ಮೋದಿ?

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ

ನವೆಂಬರ್ 25 ರಂದು ರಾಜಸ್ಥಾನದ 200 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ. ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ, ಬಿಜೆಪಿ ಅಧಿಕಾರ ಹಿಡಿಯಲು ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ಎರಡೂ ಪಕ್ಷಗಳ ದಿಗ್ಗಜರು ಚುನಾವಣಾ ಕಣಕ್ಕೆ ತಮ್ಮ ಸಂಪೂರ್ಣ ಶಕ್ತಿ ತುಂಬುತ್ತಿದ್ದಾರೆ. ಡಿಸೆಂಬರ್ 3 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:07 pm, Mon, 20 November 23