Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರು, ದಲಿತರ ಮೇಲಿನ ದೌರ್ಜನ್ಯದಲ್ಲಿ ಕಾಂಗ್ರೆಸ್ ರಾಜಸ್ಥಾನವನ್ನು ನಂಬರ್ 1 ಸ್ಥಾನಕ್ಕೇರಿಸಿದೆ: ಮೋದಿ

PM Modi in Jodhpur: ‘ಬಿಜೆಪಿ ಆಯೇಗಿ, ದಂಗೇ ರುಖೇಗಿ (ಬಿಜೆಪಿ ಬರುತ್ತದೆ, ಗಲಭೆ ನಿಲ್ಲುತ್ತದೆ) ಎಂಬ ಘೋಷಣೆಯನ್ನು ನೀಡಿದ ಪ್ರಧಾನಿ ಮೋದಿ, ಜೋಧ್‌ಪುರ ಗಲಭೆಯ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವಾಗ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. "ರಾಮ ನವಮಿ, ಪರಶುರಾಮ ಜಯಂತಿ ಅಥವಾ ಹನುಮ ಜಯಂತಿ ಇರಲಿ, ರಾಜಸ್ಥಾನದಲ್ಲಿ ಈ ಸಂದರ್ಭಗಳಲ್ಲಿ ಕಲ್ಲು ತೂರಾಟ ನಡೆಯದ ಸ್ಥಳವಿಲ್ಲ ಎಂದಿದ್ದಾರೆ ಪ್ರಧಾನಿ.

ಮಹಿಳೆಯರು, ದಲಿತರ ಮೇಲಿನ ದೌರ್ಜನ್ಯದಲ್ಲಿ ಕಾಂಗ್ರೆಸ್ ರಾಜಸ್ಥಾನವನ್ನು ನಂಬರ್ 1 ಸ್ಥಾನಕ್ಕೇರಿಸಿದೆ: ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Oct 05, 2023 | 2:29 PM

ಜೋಧ್​​ಪುರ ಅಕ್ಟೋಬರ್ 05: ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ರಾಜಸ್ಥಾನದ ಜೋಧ್‌ಪುರದಲ್ಲಿ (Jodhpur) ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ್ದು, ತಮ್ಮ ಭಾಷಣದಲ್ಲಿ ಮಹಿಳೆಯರ ವಿರುದ್ಧದ ಅಪರಾಧ, ಅಶೋಕ್ ಗೆಹ್ಲೋಟ್ (Ashok Gehlot) ಸರ್ಕಾರದ ಭ್ರಷ್ಟಾಚಾರದ ‘ ರೆಡ್ ಡೈರಿ’ ಮತ್ತು ಗಲಭೆಗಳ ಬಗ್ಗೆ ಮಾತನಾಡಿದ್ದಾರೆ. ನೀವು ‘ರೆಡ್ ಡೈರಿ’ ಬಗ್ಗೆ ಕೇಳಿದ್ದೀರಾ? ಡೈರಿಯಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿವರಗಳಿವೆ ಎಂದು ಜನರು ಹೇಳುತ್ತಾರೆ ಆದರೆ ಕಾಂಗ್ರೆಸ್ ಡೈರಿಯ ವಿವರಗಳನ್ನು ಬಹಿರಂಗಪಡಿಸಲು ಎಂದಿಗೂ ಬಿಡುವುದಿಲ್ಲ. ‘ರೆಡ್ ಡೈರಿ’ಯ ರಹಸ್ಯವನ್ನು ಬಿಜೆಪಿ ಸರ್ಕಾರದಿಂದ ಮಾತ್ರವೇ ಬಿಚ್ಚಿಡಲು ಸಾಧ್ಯ” ಎಂದು ಪ್ರಧಾನಿ ಹೇಳಿದರು.

‘ಬಿಜೆಪಿ ಆಯೇಗಿ, ದಂಗೇ ರುಖೇಗಿ (ಬಿಜೆಪಿ ಬರುತ್ತದೆ, ಗಲಭೆ ನಿಲ್ಲುತ್ತದೆ) ಎಂಬ ಘೋಷಣೆಯನ್ನು ನೀಡಿದ ಪ್ರಧಾನಿ ಮೋದಿ, ಜೋಧ್‌ಪುರ ಗಲಭೆಯ ಬೆಂಕಿಯಲ್ಲಿ ಹೊತ್ತಿ ಉರಿಯುತ್ತಿರುವಾಗ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ. “ರಾಮ ನವಮಿ, ಪರಶುರಾಮ ಜಯಂತಿ ಅಥವಾ ಹನುಮ ಜಯಂತಿ ಇರಲಿ, ರಾಜಸ್ಥಾನದಲ್ಲಿ ಈ ಸಂದರ್ಭಗಳಲ್ಲಿ ಕಲ್ಲು ತೂರಾಟ ನಡೆಯದ ಸ್ಥಳವಿಲ್ಲ ಎಂದಿದ್ದಾರೆ ಪ್ರಧಾನಿ.

“ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ಒಂದು ಹೆಜ್ಜೆಯೂ ನಡೆಯಲಿಲ್ಲ. ‘ಕುರ್ಸಿ ಕಾ ಖೇಲ್’ ಇಲ್ಲಿ 24 ಗಂಟೆಯೂ ಮುಂದುವರೆಯಿತು. ‘ಲಾಲ್ ಡೈರಿ’ ಬಗ್ಗೆ ನೀವು ಕೇಳಿದ್ದೀರಾ? ಡೈರಿಯಲ್ಲಿ ಎಲ್ಲಾ ದುಷ್ಕೃತ್ಯಗಳಿವೆ ಎಂದು ಜನರು ಹೇಳುತ್ತಾರೆ. ಕಾಂಗ್ರೆಸ್ ಭ್ರಷ್ಟಾಚಾರದ ಡೈರಿಯ ರಹಸ್ಯ ಬಯಲಿಗೆ ಬರಬೇಕೆ?.ಅಪ್ರಾಮಾಣಿಕರಿಗೆ ಶಿಕ್ಷೆಯಾಗಬೇಕೆ?. ಡೈರಿಯ ರಹಸ್ಯ ಬಯಲಿಗೆ ಬರಲು ಬಿಡುವುದೇ ಕಾಂಗ್ರೆಸ್ ಸರ್ಕಾರ? ಸತ್ಯ ಹೊರಬರಬೇಕಾದರೆ ನೀವು ಬಿಜೆಪಿ ಸರ್ಕಾರ ರಚಿಸಬೇಕು ಎಂದಿದ್ದಾರೆ ಮೋದಿ.

ಕಳೆದ ವರ್ಷ, ಈದ್ ಹಬ್ಬಕ್ಕೆ ಮುನ್ನ ಗೆಹ್ಲೋಟ್‌ ಅವರ ತವರು ಜೋಧ್‌ಪುರವನ್ನು ಕೋಮುಗಲಭೆ ಉಂಟಾಗಿತ್ತು. ಆ ವೇಳೆ ಅಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದ್ದು, ನಗರದ 10 ಪೊಲೀಸ್ ಠಾಣೆ ಪ್ರದೇಶಗಳಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಜಲೋರಿ ಗೇಟ್ ವೃತ್ತದಲ್ಲಿ ಇಸ್ಲಾಮಿಕ್ ಧ್ವಜಗಳನ್ನು ಹಾಕುವ ಮೂಲಕ ಉದ್ವಿಗ್ನತೆ ಉಂಟಾಯಿತು, ಇದು ಕಲ್ಲು ತೂರಾಟಕ್ಕೆ ಕಾರಣವಾಯಿತು. ಈ ಗಲಭೆಯಲ್ಲಿ ಐವರು ಪೊಲೀಸರು ಗಾಯಗೊಂಡರು.

ಜಲೋರಿ ಗೇಟ್ ಪ್ರದೇಶದ ಬಳಿ ಅಂಗಡಿಗಳು, ವಾಹನಗಳು ಮತ್ತು ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ಇದನ್ನೂ ಓದಿRed Diary: ಚುನಾವಣೆಗೆ ಸಿದ್ಧವಾಗಿರುವ ರಾಜಸ್ಥಾನದಲ್ಲಿ ಸದ್ದು ಮಾಡುತ್ತಿರುವ ರೆಡ್ ಡೈರಿ; ಏನಿದು ವಿಚಾರ?

ಅಲ್ಪಸಂಖ್ಯಾತ ಸಮುದಾಯದ ಸದಸ್ಯರು ಈದ್ ಧ್ವಜಗಳನ್ನು ಸ್ಥಾಪಿಸುತ್ತಿದ್ದರು. ಅವರು ಸ್ವಾತಂತ್ರ್ಯ ಹೋರಾಟಗಾರ ಬಲ್ಮುಕುಂದ್ ಬಿಸ್ಸಾ ಅವರ ಪ್ರತಿಮೆಯ ಪಕ್ಕದ ವೃತ್ತದಲ್ಲಿ ಧ್ವಜವನ್ನು ಹಾಕಿದರು. ಪರಶುರಾಮ ಜಯಂತಿಗೂ ಮುನ್ನ ಅಲ್ಲಿ ಹಾಕಿದ್ದ ಕೇಸರಿ ಧ್ವಜ ನಾಪತ್ತೆಯಾಗಿದೆ ಎಂದು ಇತರೆ ಸಮುದಾಯದವರು ಆರೋಪಿಸಿದ್ದರಿಂದ ಘರ್ಷಣೆಗೆ ಕಾರಣವಾಯಿತು. ಈ ವಿಷಯವು ಕಲ್ಲು ತೂರಾಟ ಮತ್ತು ಘರ್ಷಣೆಯಾಗಿ ಮಾರ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ, ನಮ್ಮ ವಿಜ್ಞಾನಿಗಳ ಉತ್ತಮ ಕೆಲಸವನ್ನು ಪ್ರದರ್ಶಿಸಿದ್ದಕ್ಕಾಗಿ” ‘ದಿ ವ್ಯಾಕ್ಸಿನ್ ವಾರ್’ ಚಿತ್ರದ ತಯಾರಕರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. “ನಮ್ಮ ವಿಜ್ಞಾನಿಗಳು ಕೋವಿಡ್ -19 ಲಸಿಕೆ ತಯಾರಿಸಲು ಹಗಲು ರಾತ್ರಿ ಹೇಗೆ ಕೆಲಸ ಮಾಡಿದ್ದಾರೆ ಎಂಬುದನ್ನು ಚಲನಚಿತ್ರ ತೋರಿಸುತ್ತದೆ. ಚಲನಚಿತ್ರಗಳನ್ನು ನೋಡಿದ ನಂತರ ಪ್ರತಿಯೊಬ್ಬ ಭಾರತೀಯನು ಹೆಮ್ಮೆಪಡುತ್ತಾನೆ, ”ಎಂದು ಪ್ರಧಾನಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Thu, 5 October 23

ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಹಾಸನ: ಭಾರಿ ಮಳೆಗೆ ಸೋರುತಿಹುದು ರೈಲ್ವೆ ನಿಲ್ದಾಣ ಮಾಳಿಗಿ!
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ಪೈಲಟ್​ ಸಿದ್ಧಾರ್ಥ್​ 10 ದಿನಗಳ ಹಿಂದಷ್ಟೇ ನಿಶ್ಚಿತಾರ್ಥವಾಗಿತ್ತು
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
ತಮ್ಮ 25ನೇ ವಿವಾಹ ವಾರ್ಷಿಕೋತ್ಸವದಲ್ಲಿ ನೃತ್ಯ ಮಾಡುತ್ತಿರುವಾಗ ಹೃದಯಾಘಾತ
Daily Devotional: ಮಡಿಕೆಯಲ್ಲಿ ನೀರಿನ ಮಹತ್ವ ಹಾಗೂ ಅದರ ಹಿಂದಿನ ರಹಸ್ಯ
Daily Devotional: ಮಡಿಕೆಯಲ್ಲಿ ನೀರಿನ ಮಹತ್ವ ಹಾಗೂ ಅದರ ಹಿಂದಿನ ರಹಸ್ಯ
Daily Horoscope: ಈ ರಾಶಿಗಳಿಗೆ ಇಂದು ಅನುಕೂಲಕರವಾದ ದಿನವಾಗಿರಲಿದೆ
Daily Horoscope: ಈ ರಾಶಿಗಳಿಗೆ ಇಂದು ಅನುಕೂಲಕರವಾದ ದಿನವಾಗಿರಲಿದೆ
ಸಾಲ ಮಾಡಿದ್ದೇನೆ, ಎಲ್ಲ ಅಡ ಇಟ್ಟಿದ್ದೇನೆ: ಪರಿಸ್ಥಿತಿ ತಿಳಿಸಿದ ಅಜಯ್ ರಾವ್
ಸಾಲ ಮಾಡಿದ್ದೇನೆ, ಎಲ್ಲ ಅಡ ಇಟ್ಟಿದ್ದೇನೆ: ಪರಿಸ್ಥಿತಿ ತಿಳಿಸಿದ ಅಜಯ್ ರಾವ್
ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್
ಜಿಲ್ಲಾಧಿಕಾರಿ ಕಚೇರಿಯೆದುರು ನಮಾಜ್ ಮಾಡಿದ ವೃದ್ಧೆ; ಸೆಕ್ಯುರಿಟಿ ಸಸ್ಪೆಂಡ್
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
ಮಳೆಯಿಂದ ಕೆರೆಯಂತಾದ ಬೆಂಗಳೂರಿನ ಕಲ್ಯಾಣ ನಗರದ ಓಆರ್​ಆರ್​ ಸರ್ವಿಸ್ ರಸ್ತೆ
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು
‘ದರ್ಶನ್ ಅಪ್ಪಟ ಬಂಗಾರ’: ಡಿ ಬಾಸ್ ವ್ಯಕ್ತಿತ್ವ ವಿವರಿಸಿದ ಗಣೇಶ್ ಕಾಸರಗೋಡು