AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನ ಚುನಾವಣೆಗೆ ಬಿಜೆಪಿ ಸಿದ್ಧತೆ; ಮಧ್ಯರಾತ್ರಿ 2 ಗಂಟೆವರೆಗೆ ನಡೆದಿತ್ತು ಅಮಿತ್ ಶಾ-ನಡ್ಡಾ ಮಾತುಕತೆ

Rajasthan assembly polls: ಸಭೆಯಲ್ಲಿ, ಪಕ್ಷದ ನಾಯಕತ್ವವು ಪ್ರಚಾರದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಘೋಷಿಸುವ , ಬದಲಿಗೆ ಸಂಯೋಜಿತ ನಾಯಕತ್ವದ ವಿಧಾನವನ್ನು ಅನುಸರಿಸಲು ನಿರ್ಧರಿಸಿದೆ. ಈ ಕ್ರಮವು ಪ್ರಾದೇಶಿಕ ನಾಯಕರ ಮಹತ್ವಾಕಾಂಕ್ಷೆಗಳು ಮತ್ತು ಪೈಪೋಟಿಗಳನ್ನು ಹಿಡಿತದಲ್ಲಿಡಲು ಮತ್ತು  ವ್ಯಕ್ತಿಗಿಂತ  ಪಕ್ಷವನ್ನು ಬಲಪಡಿಸುವ ಪ್ರಯತ್ನವಾಗಿದೆ.

ರಾಜಸ್ಥಾನ ಚುನಾವಣೆಗೆ ಬಿಜೆಪಿ ಸಿದ್ಧತೆ; ಮಧ್ಯರಾತ್ರಿ 2 ಗಂಟೆವರೆಗೆ ನಡೆದಿತ್ತು ಅಮಿತ್ ಶಾ-ನಡ್ಡಾ ಮಾತುಕತೆ
ಜೆಪಿ ನಡ್ಡಾ- ಅಮಿತ್ ಶಾ
ರಶ್ಮಿ ಕಲ್ಲಕಟ್ಟ
|

Updated on: Sep 28, 2023 | 1:44 PM

Share

ಜೈಪುರ  ಸೆಪ್ಟೆಂಬರ್ 28: ಮುಂಬರುವ ರಾಜಸ್ಥಾನ ವಿಧಾನಸಭಾ ಚುನಾವಣೆಗೆ(Rajasthan assembly polls)ಪಕ್ಷದ ಕಾರ್ಯತಂತ್ರದ ಕುರಿತು ಬಿಜೆಪಿ (BJP) ಅಧ್ಯಕ್ಷ  ಜೆಪಿ ನಡ್ಡಾ (JP Nadda) ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಜೈಪುರದಲ್ಲಿ ರಾತ್ರಿಯಿಡೀ ಚರ್ಚೆ ನಡೆಸಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಬುಧವಾರ ತಡರಾತ್ರಿ ಜೈಪುರ ಹೋಟೆಲ್‌ನಲ್ಲಿ ಸಭೆ ಆರಂಭಗೊಂಡಿದ್ದು, ಮಧ್ಯರಾತ್ರಿ 2 ಗಂಟೆವರೆಗೆ ಸಭೆ ನಡೆಯಿತು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇಂದ್ರ ಸಚಿವರು ಮತ್ತು ಸಂಸದರನ್ನು ಪೈಪೋಟಿ ಜಾಸ್ತಿ ಇರುವ ಸ್ಥಾನಗಳಲ್ಲಿ ಕಣಕ್ಕಿಳಿಸಲು ಪಕ್ಷ ನಿರ್ಧರಿಸಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮಧ್ಯಪ್ರದೇಶದ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಮೂವರು ಕೇಂದ್ರ ಸಚಿವರು ಮತ್ತು ನಾಲ್ಕು ಸಂಸದರನ್ನು ಬಿಜೆಪಿ ಹೆಸರಿಸಿತ್ತು. ಅದರ ಬೆನ್ನಲ್ಲೇ ಈ ಸಭೆ ನಡೆದಿದೆ.

ಬಿಜೆಪಿಯ ರಾಜಸ್ಥಾನ ಘಟಕದ ಮೂಲಗಳು ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಇತರ ಕೆಲವು ಸಂಸದರನ್ನು ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಸಬಹುದು ಎಂದು ಹೇಳಿದ್ದಾರೆ.

ಸಭೆಯಲ್ಲಿ, ಪಕ್ಷದ ನಾಯಕತ್ವವು ಪ್ರಚಾರದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ಯಾರು ಎಂದು ಘೋಷಿಸುವ , ಬದಲಿಗೆ ಸಂಯೋಜಿತ ನಾಯಕತ್ವದ ವಿಧಾನವನ್ನು ಅನುಸರಿಸಲು ನಿರ್ಧರಿಸಿದೆ. ಈ ಕ್ರಮವು ಪ್ರಾದೇಶಿಕ ನಾಯಕರ ಮಹತ್ವಾಕಾಂಕ್ಷೆಗಳು ಮತ್ತು ಪೈಪೋಟಿಗಳನ್ನು ಹಿಡಿತದಲ್ಲಿಡಲು ಮತ್ತು  ವ್ಯಕ್ತಿಗಿಂತ  ಪಕ್ಷವನ್ನು ಬಲಪಡಿಸುವ ಪ್ರಯತ್ನವಾಗಿದೆ.

ಬಿಜೆಪಿ ಗೆದ್ದರೆ ರಾಜಸ್ಥಾನದ ಮುಖ್ಯಮಂತ್ರಿಯಾಗಬಹುದಾದ ಕೆಲವು ನಾಯಕರಲ್ಲಿ ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ರಾಜ್ಯಸಭಾ ಸಂಸದ ಡಾ.ಕಿರೋಡಿ ಲಾಲ್ ಮೀನಾ ಮತ್ತು ಲೋಕಸಭೆಯ ಸಂಸದರಾದ ದಿಯಾ ಕುಮಾರ್ ಮತ್ತು ಸುಖವೀರ್ ಸಿಂಗ್ ಜೌನ್‌ಪುರಿಯಾ ಸೇರಿದ್ದಾರೆ.

ಎರಡು ಅವಧಿಯ ಮುಖ್ಯಮಂತ್ರಿ ಮತ್ತು ಸಿಂಧಿಯಾ ರಾಜಮನೆತನದ ಸದಸ್ಯೆಯಾಗಿರುವ 70 ವರ್ಷದ ವಸುಂಧರಾ ರಾಜೇ ಅವರು ರಾಜ್ಯದಲ್ಲಿ ಬಿಜೆಪಿಯ ಅತ್ಯಂತ ಪ್ರಭಾವಿ ನಾಯಕಿ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿದ್ದರೂ ಮುಖ್ಯಮಂತ್ರಿ ಸ್ಥಾನ ಅವರಿಗೆ ನೀಡುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ.

ರಾಜಸ್ಥಾನ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲು ಬಿಜೆಪಿಯ ಸಂಸದೀಯ ಮಂಡಳಿಯು ದೆಹಲಿಯಲ್ಲಿ ಸಭೆ ಸೇರಲಿದೆ ಎಂದು ಈ ಬಗ್ಗೆ ತಿಳಿದಿರುವ ಜನರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಶಾ  ಮತ್ತು ನಡ್ಡಾ ಬುಧವಾರ ವಿಶೇಷ ವಿಮಾನದಲ್ಲಿ ಜೈಪುರಕ್ಕೆ ತೆರಳಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿಎಲ್ ಸಂತೋಷ್ ಈ ಹಿಂದೆ ಮಧ್ಯಾಹ್ನ ಆಗಮಿಸಿ ಪಕ್ಷದ ರಾಜ್ಯ ಕೇಂದ್ರ ಕಚೇರಿಯಲ್ಲಿ ಸಭೆ ನಡೆಸಿದರು.

ಶಾ, ನಡ್ಡಾ ಮತ್ತು ಸಂತೋಷ್ ಅವರು ಬಿಜೆಪಿಯ ಪರಿವರ್ತನ್ ಸಂಕಲ್ಪ ಯಾತ್ರೆಗಳಿಗೆ ಗೈರುಹಾಜರಾದ ನಂತರ ಚುನಾವಣೆಗೆ ಮುನ್ನ ಬೆಂಬಲವನ್ನು ಹೆಚ್ಚಿಸಲು ರಾಜೇ ಅವರನ್ನು ಭೇಟಿಯಾದರು. ಸಂಸದೆ ದಿಯಾ ಕುಮಾರಿ ಅವರು ಕೇಂದ್ರ ನಾಯಕರೊಂದಿಗೆ ಯಾವುದೇ ನಿಗದಿತ ಸಭೆಯನ್ನು ನಡೆಸಲಿಲ್ಲ, ಮೂರು ಗಂಟೆಗಳ ಕೋರ್ ಕಮಿಟಿ ಸಭೆ ರಾತ್ರಿ 8 ಗಂಟೆ ಸುಮಾರಿಗೆ ಪ್ರಾರಂಭವಾಗುವ ಮೊದಲು ಸುಮಾರು 10 ನಿಮಿಷಗಳ ಕಾಲ ಅವರನ್ನು ಭೇಟಿ ಮಾಡಿದರು.

ರಾಜ್ಯ ಬಿಜೆಪಿ ಮುಖ್ಯಸ್ಥ ಸಿಪಿ ಜೋಶಿ, ಕೇಂದ್ರ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್, ಕೈಲಾಶ್ ಚೌಧರಿ ಮತ್ತು ಅರ್ಜುನ್ ರಾಮ್ ಮೇಘವಾಲ್, ರಾಜೇ, ವಿರೋಧ ಪಕ್ಷದ ನಾಯಕ ರಾಜೇಂದ್ರ ರಾಥೋಡ್, ಸಂಸದ ರಾಜ್ಯವರ್ಧನ್ ರಾಥೋಡ್ ಮತ್ತು ರಾಜ್ಯ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿ ಸಭೆಯಲ್ಲಿ ಭಾಗವಹಿಸಿದ್ದರು.

ಪಕ್ಷದೊಳಗೆ ಒಗ್ಗಟ್ಟಿನ ಅಗತ್ಯವನ್ನು ಕೇಂದ್ರ ನಾಯಕರು ಒತ್ತಿ ಹೇಳಿದರು. ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ರಾಜ್ಯ ನಾಯಕರನ್ನು ಕೋರಿದರು. ಬಂಡಾಯಗಾರರನ್ನು ನಿರ್ವಹಿಸುವುದು ಸಭೆಯಲ್ಲಿ ಚರ್ಚಿಸಲಾಗಿದೆ ಎಂದು ಬಲ್ಲ ಮೂಲಗಳು ಹೇಳವೆ,

ಎಲ್ಲಾ 200 ಸ್ಥಾನಗಳಲ್ಲಿ ಪಕ್ಷದ ಅವಕಾಶಗಳ ಬಗ್ಗೆ ಚರ್ಚಿಸಲಾಗಿದ್ದು, ಕಳೆದ ಮೂರು ಚುನಾವಣೆಗಳಲ್ಲಿ ಬಿಜೆಪಿ ಗೆಲ್ಲದಿರುವ ಸ್ಥಾನಗಳನ್ನು ಗೆಲ್ಲುವ ತಂತ್ರವನ್ನು ಚರ್ಚಿಸಲಾಗಿದೆ. ಶಾ, ನಡ್ಡಾ ಮತ್ತು ಸಂತೋಷ್ ಅವರು ರಾಜ್ಯ ಉಸ್ತುವಾರಿಗಳೊಂದಿಗೆ ಪ್ರತ್ಯೇಕ ಸಭೆಯಲ್ಲಿ ಆಂತರಿಕ ಸಮೀಕ್ಷೆಯ ಆಧಾರದ ಮೇಲೆ ಪ್ರತಿ ಸ್ಥಾನದ ಕಾರ್ಯತಂತ್ರವನ್ನು ಚರ್ಚಿಸಿದರು ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜಸ್ಥಾನದ ಭಿಲ್ವಾರ ದೇವನಾರಾಯಣ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಲಕೋಟೆ ಹಾಕಿದ್ದರೇ ಪ್ರಧಾನಿ ಮೋದಿ; ಕೊನೆಗೂ ಬಯಲಾಯ್ತು ಸತ್ಯ

ಅಕ್ಟೋಬರ್ 2 ರಂದು ಚಿತ್ತೋರ್‌ಗಢದಲ್ಲಿ ಮತ್ತು ಅಕ್ಟೋಬರ್ 5 ರಂದು ಜೋಧ್‌ಪುರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ಸಾರ್ವಜನಿಕ ಸಭೆಗಳ ಬಗ್ಗೆಯೂ ಚರ್ಚಿಸಲಾಯಿತು. ಮೋದಿ ಸೆಪ್ಟೆಂಬರ್ 2 ರಂದು ಜೈಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ದರು.

ಭಾರತದ ಜನಸಂಖ್ಯೆಯ ಸರಿಸುಮಾರು  ಶೇ 15 ರಷ್ಟಿರುವ ರಾಜಸ್ಥಾನ ಮತ್ತು ಇತರ ನಾಲ್ಕು ರಾಜ್ಯಗಳ ಅಸೆಂಬ್ಲಿ ಚುನಾವಣೆಗಳು ಈ ವರ್ಷ 2024 ರ ಲೋಕಸಭೆಗೆ ಮುನ್ನ ಜನರ ನಿಲುವು ಹೇಗಿದೆ ಎಂಬುದನ್ನು ತೋರಿಸಲಿದೆ

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ