ರಾಜಸ್ಥಾನದ ಭಿಲ್ವಾರ ದೇವನಾರಾಯಣ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ ಲಕೋಟೆ ಹಾಕಿದ್ದರೇ ಪ್ರಧಾನಿ ಮೋದಿ; ಕೊನೆಗೂ ಬಯಲಾಯ್ತು ಸತ್ಯ

ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಣಿಗೆ ಪೆಟ್ಟಿಗೆಯಲ್ಲಿ ಹಣ ಹಾಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೋದಿ ಅವರು ಜನವರಿ 28 ರಂದು ಮಲಸೇರಿ ದೇವದುಂಗರಿಯಲ್ಲಿರುವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಪ್ರಧಾನಿ ಮೋದಿ ಬಿಳಿ ಲಕೋಟೆಯನ್ನು ಹಾಕಿದ್ದರು ಎಂದು ದೇವಾಲಯದ ಅರ್ಚಕರು ಹೇಳಿಕೊಂಡಿದ್ದರು.

Follow us
TV9 Web
| Updated By: Ganapathi Sharma

Updated on: Sep 27, 2023 | 10:58 PM

ಜೈಪುರ, ಸೆಪ್ಟೆಂಬರ್ 27: ರಾಜಸ್ಥಾನದ ಭಿಲ್ವಾರದಲ್ಲಿರುವ ಮಲಸೇರಿ ದೇವಡೂಂಗರಿಯಲ್ಲಿರುವ ದೇವನಾರಾಯಣ ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) 21 ರೂಪಾಯಿ ಕಾಣಿಕೆ ಹಾಕಿರುವ ವಿಷಯಕ್ಕೆ ಸಂಬಂಧಿಸಿ ಹೊಸದೊಂದು ವಿಚಾರ ಬಹಿರಂಗವಾಗಿದೆ. ಪ್ರಧಾನಿ ಮೋದಿ ದೇಣಿಗೆ ಪೆಟ್ಟಿಗೆಯಲ್ಲಿ ಲಕೋಟೆಯಲ್ಲ, ನಗದನ್ನೇ ಹಾಕಿದ್ದಾರೆ ಎಂಬುದು ‘ಟಿವಿ9 ಭಾರತವರ್ಷ್​’ಗೆ ದೊರೆತಿರುವ ವಿಡಿಯೋದಿಂದ ತಿಳಿದುಬಂದಿದೆ. ದೇವಸ್ಥಾನದ ಕಾಣಿಕೆ ಪೆಟ್ಟಿಗೆಯಲ್ಲಿ ಪ್ರಧಾನಿ ಮೋದಿ ಅವರು ಲಕೋಟೆಯನ್ನು ಹಾಕಿದ್ದರು ಮತ್ತು ಅದರಲ್ಲಿ 20 ರೂಪಾಯಿ ನೋಟು ಮತ್ತು ನಾಣ್ಯ ಸೇರಿದಂತೆ 21 ರೂಪಾಯಿ ದೇಣಿಗೆ ಮೊತ್ತ ಪತ್ತೆಯಾಗಿದೆ ಎಂದು ದೇವಸ್ಥಾನದ ಅರ್ಚಕರು ಹೇಳಿಕೊಂಡಿದ್ದರು.

ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಣಿಗೆ ಪೆಟ್ಟಿಗೆಯಲ್ಲಿ ಹಣ ಹಾಕುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೋದಿ ಅವರು ಜನವರಿ 28 ರಂದು ಮಲಸೇರಿ ದೇವದುಂಗರಿಯಲ್ಲಿರುವ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಂದಿದ್ದರು. ದೇವಾಲಯದ ಕಾಣಿಕೆ ಪೆಟ್ಟಿಗೆಯಲ್ಲಿ ಪ್ರಧಾನಿ ಮೋದಿ ಬಿಳಿ ಲಕೋಟೆಯನ್ನು ಹಾಕಿದ್ದರು ಎಂದು ದೇವಾಲಯದ ಅರ್ಚಕರು ಹೇಳಿಕೊಂಡಿದ್ದರು. ಭೇಟಿಯ ಎಂಟು ತಿಂಗಳ ನಂತರ ಸೆಪ್ಟೆಂಬರ್ 25 ರಂದು ದೇವಾಲಯದ ಅರ್ಚಕರು ಕಾಣಿಕೆ ಪೆಟ್ಟಿಗೆಯನ್ನು ತೆರೆದಾಗ ಅದರಲ್ಲಿ ಮೂರು ಲಕೋಟೆಗಳು ಕಂಡುಬಂದವು. ಬಿಳಿ ಲಕೋಟೆ ಪ್ರಧಾನಿ ಮೋದಿಯವರದ್ದು ಎಂದು ಹೇಳಲಾಗಿತ್ತು. ದೇವಸ್ಥಾನದ ಅರ್ಚಕರು ಎಲ್ಲರ ಮುಂದೆ ಲಕೋಟೆಯನ್ನು ತೆರೆದಿದ್ದು, ಅದರಲ್ಲಿ 21 ರೂಪಾಯಿ ಪತ್ತೆಯಾಗಿತ್ತು.

ಇದನ್ನೂ ಓದಿ: ಯೂಟ್ಯೂಬರ್​​​ಗಳೊಂದಿಗೆ ಮೋದಿ ಮಾತು; ಸ್ವಚ್ಛತೆ, ಡಿಜಿಟಲ್ ಪಾವತಿ, ವೋಕಲ್ ಫಾರ್ ಲೋಕಲ್ ಬಗ್ಗೆ ಮಾತನಾಡಿದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿಯವರು ದೇವಸ್ಥಾನದ ಕಾಣಿಕೆ ಡಬ್ಬಕ್ಕೆ ನಗದು ಹಾಕುತ್ತಿರುವಾಗ ಅವರ ಹಿಂದೆ ದೇವಸ್ಥಾನದ ಅರ್ಚಕ ಹೇಮರಾಜ್ ಪೋಸ್ವಾಲ್ ನಿಂತಿರುವುದು ವಿಡಿಯೋದಲ್ಲಿ ಕಂಡು ಬರುತ್ತಿದೆ. ಪ್ರಧಾನಿ ಮೋದಿ ಅವರ ಕೈಯಲ್ಲಿ ಸ್ವಲ್ಪ ಹಣವಿದ್ದು, ಅದನ್ನು ಕಾಣಿಕೆ ಡಬ್ಬದಲ್ಲಿ ಹಾಕುತ್ತಿರುವುದು ಕಂಡುಬಂದಿದೆ.

ದೇವನಾರಾಯಣನ ಜನ್ಮಸ್ಥಳ

ಮಲಸೇರಿ ದೇವಡೂಂಗರಿ ಗುರ್ಜರ್ ಸಮುದಾಯದ ಆರಾಧಕರಾದ ದೇವನಾರಾಯಣನ ಜನ್ಮಸ್ಥಳವೆಂದು ಪರಿಗಣಿಸಲಾಗಿದೆ. 1,111 ವರ್ಷಗಳ ಹಿಂದೆ ದೇವನಾರಾಯಣನ ತಾಯಿ ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಳು ಎಂದು ನಂಬಲಾಗಿದೆ. ನಂತರ ವಿಷ್ಣುವು ಸ್ವತಃ ದೇವನಾರಾಯಣನ ರೂಪದಲ್ಲಿ ಕಾಣಿಸಿಕೊಂಡರು. ಈ ಕಾರಣಕ್ಕಾಗಿಯೇ ಈ ದೇವಾಲಯವು ಗುರ್ಜರ್ ಸಮುದಾಯದ ಜನರಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್