ತೆಲಂಗಾಣ: ಸರ್ಕಾರ ರಚನೆಯಾದರೆ ನಾವು ಶೇ 4 ಮುಸ್ಲಿಂ ಮೀಸಲಾತಿಯನ್ನು ತೆಗೆದುಹಾಕುತ್ತೇವೆ: ಅಮಿತ್ ಶಾ

ನಮ್ಮ ಸರ್ಕಾರ ರಚನೆಯಾದ ತಕ್ಷಣ ನಾವು 4% ಮುಸ್ಲಿಂ ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಮತ್ತು ಅದನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಹಂಚುತ್ತೇವೆ ಎಂದು ನಾವು ನಿರ್ಧರಿಸಿದ್ದೇವೆ. ಕೆಸಿಆರ್ ಓವೈಸಿಗೆ ಹೆದರಿ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸುವುದಿಲ್ಲ. ಆದರೆ ನಾವು ಓವೈಸಿಗೆ ಹೆದರುವುದಿಲ್ಲ. ಹೈದರಾಬಾದ್ ವಿಮೋಚನಾ ದಿನವನ್ನು ರಾಜ್ಯ ದಿನವನ್ನಾಗಿ ಆಚರಿಸುತ್ತೇವೆ

ತೆಲಂಗಾಣ: ಸರ್ಕಾರ ರಚನೆಯಾದರೆ ನಾವು ಶೇ 4 ಮುಸ್ಲಿಂ ಮೀಸಲಾತಿಯನ್ನು ತೆಗೆದುಹಾಕುತ್ತೇವೆ: ಅಮಿತ್ ಶಾ
ಅಮಿತ್ ಶಾ
Follow us
|

Updated on: Nov 20, 2023 | 10:11 PM

ಜಗ್ತಿಯಾಲ್‌ ನವೆಂಬರ್ 20: ತೆಲಂಗಾಣದ (Telangana) ಜಗ್ತಿಯಾಲ್‌ನಲ್ಲಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ನಾಯಕ ಅಮಿತ್ ಶಾ (Amit Shah), ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ಮತ್ತು ಬಿಆರ್‌ಎಸ್ ಮುಖ್ಯಸ್ಥ ಕೆ ಚಂದ್ರಶೇಖರ ರಾವ್ ಅವರು ತಮ್ಮ ಪಕ್ಷವು “ಕುಟುಂಬ ರಾಜಕೀಯ”ತೊಡಗಿದ್ದಾರೆ ಎಂದು ಹೇಳಿದ್ದಾರೆ. ಅದೇ ವೇಳೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಶಾ,  ಮಾಜಿ ಪ್ರಧಾನಿ (ದಿವಂಗತ) ಜವಾಹರಲಾಲ್ ನೆಹರು ಮತ್ತು ಇಂದಿರಾ ಗಾಂಧಿ ಅವರ ಹೆಸರನ್ನೂ ಇಲ್ಲಿ ಹೇಳಿದ್ದಾರೆ.

ಬಿಆರ್ ಎಸ್, ಮಜ್ಲಿಸ್ ಮತ್ತು ಕಾಂಗ್ರೆಸ್ 2G, 3G ಮತ್ತು 4G ಪಕ್ಷಗಳು. 2ಜಿ ಎಂದರೆ ಕೆಸಿಆರ್ ಮತ್ತು ಕೆಟಿಆರ್. 3ಜಿ ಎಂದರೆ ಓವೈಸಿಯ ಅಜ್ಜ, ತಂದೆ ಮತ್ತು ಓವೈಸಿ. 4ಜಿ ಎಂದರೆ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಮತ್ತು ರಾಹುಲ್. ಅದರಲ್ಲಿ ನಿಮ್ಮ ಸ್ಥಾನ ಎಲ್ಲಿದೆ?’’ ಎಂದು ಅಮಿತ್ ಶಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.

ಓವೈಸಿ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಶಾ, ತೆಲಂಗಾಣದಲ್ಲಿ ಸರ್ಕಾರಿ ಉದ್ಯೋಗಗಳು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ 4 ಪ್ರತಿಶತ ಮೀಸಲಾತಿಯನ್ನು ತಮ್ಮ ಪಕ್ಷ ತೆಗೆದುಹಾಕುತ್ತದೆ ಎಂದು ಪ್ರತಿಜ್ಞೆ ಮಾಡಿದರು.

ಕೆಸಿಆರ್ ಓವೈಸಿಗೆ ಹೆದರುತ್ತಿದ್ದರು. ಆದರೆ ಬಿಜೆಪಿ ಹೆದರುವುದಿಲ್ಲ . ಎಐಎಂಐಎಂ ನಾಯಕ ಕೆಸಿಆರ್ ಪಕ್ಷದ “ಸ್ಟೀರಿಂಗ್” ಹೊಂದಿದ್ದರು ಎಂದು ಅವರು ಹೇಳಿದರು.

“ನಮ್ಮ ಸರ್ಕಾರ ರಚನೆಯಾದ ತಕ್ಷಣ ನಾವು 4% ಮುಸ್ಲಿಂ ಮೀಸಲಾತಿಯನ್ನು ತೆಗೆದುಹಾಕುತ್ತೇವೆ ಮತ್ತು ಅದನ್ನು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗೆ ಹಂಚುತ್ತೇವೆ ಎಂದು ನಾವು ನಿರ್ಧರಿಸಿದ್ದೇವೆ. ಕೆಸಿಆರ್ ಓವೈಸಿಗೆ ಹೆದರಿ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸುವುದಿಲ್ಲ. ಆದರೆ ನಾವು ಓವೈಸಿಗೆ ಹೆದರುವುದಿಲ್ಲ. ಹೈದರಾಬಾದ್ ವಿಮೋಚನಾ ದಿನವನ್ನು ರಾಜ್ಯ ದಿನವನ್ನಾಗಿ ಆಚರಿಸುತ್ತೇವೆ.ಓವೈಸಿ ತುಷ್ಟೀಕರಣದ ರಾಜಕಾರಣ ಮಾಡುತ್ತಾರೆ ಅವರ (ಕೆಸಿಆರ್) ಚುನಾವಣಾ ಚಿಹ್ನೆ ಕಾರು, ಆದರೆ ಕೆಸಿಆರ್, ಕೆಟಿಆರ್ ಮತ್ತು ಕವಿತಾ ಅವರ ಬಳಿ ಕಾರ್ ಸ್ಟೀರಿಂಗ್ ಇಲ್ಲ, ಓವೈಸಿ ಜೊತೆ ತೆಲಂಗಾಣವನ್ನು ಕುಟುಂಬ ರಾಜಕಾರಣದಿಂದ ಮುಕ್ತಗೊಳಿಸುತ್ತೇವೆ

ಕೆಸಿಆರ್ ಓವೈಸಿಗೆ ಹೆದರುತ್ತಿದ್ದಾರೆ, ಅದಕ್ಕಾಗಿಯೇ ತೆಲಂಗಾಣದಲ್ಲಿ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸುವುದಿಲ್ಲ.

“ರಝಾಕರರಿಂದದ ನಮ್ಮ ವಿಮೋಚನೆಯನ್ನು ನೆನಪಿಸಿಕೊಳ್ಳಲು ನಾವು ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸಬೇಕಲ್ಲವೇ? ಓವೈಸಿಗೆ ಹೆದರಿ, ಕೆಸಿಆರ್ ಹೈದರಾಬಾದ್ ವಿಮೋಚನಾ ದಿನವನ್ನು ಆಚರಿಸುವುದಿಲ್ಲ. ಆದರೆ ನಾವು ಓವೈಸಿಗೆ ಹೆದರುವುದಿಲ್ಲ. ನಾವು ಇಲ್ಲಿ ಸರ್ಕಾರ ರಚಿಸಿದರೆ ತೆಲಂಗಾಣದಲ್ಲಿ ಹೈದರಾಬಾದ್ ವಿಮೋಚನಾ ದಿನವನ್ನು ರಾಜ್ಯ ದಿನವನ್ನಾಗಿ ಆಚರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:ತೆಲಂಗಾಣ ಚುನಾವಣೆ: ನಿಜಾಮಾಬಾದ್​ನ ಸ್ವತಂತ್ರ ಅಭ್ಯರ್ಥಿ ಆತ್ಮಹತ್ಯೆ

ಏತನ್ಮಧ್ಯೆ, ತೆಲಂಗಾಣ ಪ್ರಣಾಳಿಕೆಯಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಭರವಸೆ ನೀಡಿದ್ದಕ್ಕಾಗಿ ಓವೈಸಿ ಸೋಮವಾರ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಯುಸಿಸಿಗೆ ಸಂಬಂಧಿಸಿದಂತೆ, ಅಮಿತ್ ಶಾ ಅವರು ಆದಿಲಾಬಾದ್, ಖಮ್ಮಮ್ ಮತ್ತು ವಾರಂಗಲ್‌ಗೆ ಹೋಗಿ ಎಲ್ಲಾ ಆದಿವಾಸಿಗಳ ಮಧ್ಯದಲ್ಲಿ ನಿಂತು ಯುಸಿಸಿ ಅನುಷ್ಠಾನದ ಬಗ್ಗೆ ಹೇಳಬೇಕೆಂದು ನಾನು ಬಯಸುತ್ತೇನೆ” ಎಂದು ಓವೈಸಿ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.

ಆದಿವಾಸಿಗಳು ಬಿಜೆಪಿಯನ್ನು ತಿರಸ್ಕರಿಸುತ್ತಾರೆ ಎಂಬ ಕಾರಣಕ್ಕೆ ಈ ವಿಷಯವನ್ನು ಹೇಳಲು ಅವರಿಗೆ ಬೌದ್ಧಿಕ ಧೈರ್ಯವಿಲ್ಲ ಎಂದು ಅವರು ಹೇಳಿದರು. ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಫಲಿತಾಂಶ ಪ್ರಕಟವಾಗಲಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಮಾಡಿದ ಆರೋಪ ಸರಿಯಲ್ಲ: ನಿಖಿಲ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ವಿಡಿಯೋ: ರಾಮ-ಆಂಜನೇಯನ ಮೂರ್ತಿ ಉದ್ಘಾಟಿಸಿದ ಶಿವರಾಜ್ ಕುಮಾರ್
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕೃಷ್ಣ ಭಜನೆ, ಭಾರತೀಯ ನೃತ್ಯದ ಮೂಲಕ ರಷ್ಯಾದಲ್ಲಿ ಪ್ರಧಾನಿ ಮೋದಿಗೆ ಸ್ವಾಗತ
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಕಾಂಗ್ರೆಸ್​ನಿಂದ ಸ್ಪರ್ಧಿಸಿ ಗೆದ್ದರೆ ಮಂತ್ರಿಯಾಗಬಹುದೇ ಯೋಗೇಶ್ವರ್?
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಊಹಾಪೋಹಗಳಿಗೆ ತೆರೆಹಾಡಿದ ಯೋಗೇಶ್ವರ್ ತಮ್ಮ ಚಿಹ್ನೆ ಇನ್ನೂ ನಿರ್ಧರಿಸಿಲ್ಲ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಸುರೇಶ್ ಚುನಾವಣೆ ಸ್ಪರ್ಧೆಯಿಂದ ದೂರವುಳಿಯಲು ನಿರ್ಧರಿಸಿದ್ದಾರೆ: ಬಾಲಕೃಷ್ಣ
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಗಸ್ತು ತಿರುಗುವ ಕುರಿತು ಭಾರತ-ಚೀನಾ ಒಪ್ಪಂದದ ಬಗ್ಗೆ ಸೇನಾ ಮುಖ್ಯಸ್ಥರ ಮಾತು
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಯಾವ ಪಕ್ಷದಿಂದ ಸ್ಪರ್ಧಿಸಬೇಕೆನ್ನುವ ಗೊಂದಲದಲ್ಲಿ ಬಿಜೆಪಿ ನಾಯಕ ಯೋಗೇಶ್ವರ್
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಕೇಕ್​ನಲ್ಲಿ ಮೂಡಿದ ಮರಳು ದಂಧೆಯ ಚಿತ್ರಣ
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್
ಬದೋನಿ ಬ್ಯೂಟಿ... ಅತ್ಯುತ್ತಮ ಡೈವಿಂಗ್ ಕ್ಯಾಚ್ ಹಿಡಿದ ಆಯುಷ್