ತೆಲಂಗಾಣ ಚುನಾವಣೆ: ಇಬ್ರಾಹಿಂಪಟ್ಟಣಂ ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಆರ್‌ಎಸ್ ಕಾರ್ಯಕರ್ತರ ಘರ್ಷಣೆ, ಕಲ್ಲು ತೂರಾಟ

|

Updated on: Nov 09, 2023 | 5:43 PM

ಬಿಆರ್‌ಎಸ್ ಅಭ್ಯರ್ಥಿ ಮಂಚಿರೆಡ್ಡಿ ಕಿಶನ್ ರೆಡ್ಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಲ್ಲಾರೆಡ್ಡಿ ರಂಗಾ ರೆಡ್ಡಿ ಅವರು ಏಕಕಾಲದಲ್ಲಿ ರ್ಯಾಲಿ ನಡೆಸಿದ್ದು ಬೆಂಬಲಿಗರು ನಾಮಪತ್ರ ಕೇಂದ್ರದಲ್ಲಿ ಪರಸ್ಪರ ಮುಖಾಮುಖಿಯಾದಾಗ ಪರಸ್ಪರ ಕಲ್ಲು ತೂರಾಟ ನಡೆಸಿದರು. ಘರ್ಷಣೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.

ತೆಲಂಗಾಣ ಚುನಾವಣೆ: ಇಬ್ರಾಹಿಂಪಟ್ಟಣಂ ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಆರ್‌ಎಸ್ ಕಾರ್ಯಕರ್ತರ ಘರ್ಷಣೆ, ಕಲ್ಲು ತೂರಾಟ
ಇಬ್ರಾಹಿಂಪಟ್ಟಣಂ ಕ್ಷೇತ್ರದಲ್ಲಿ ಘರ್ಷಣೆ
Follow us on

ಹೈದರಾಬಾದ್ ನವೆಂಬರ್ 09: ಇಬ್ರಾಹಿಂಪಟ್ಟಣಂ ವಿಧಾನಸಭಾ ಕ್ಷೇತ್ರದಲ್ಲಿ ಗುರುವಾರ ನಾಮಪತ್ರ ಸಲ್ಲಿಕೆ ವೇಳೆ ಭಾರತ್ ರಾಷ್ಟ್ರ ಸಮಿತಿ (BRS) ಮತ್ತು ತೆಲಂಗಾಣ ಕಾಂಗ್ರೆಸ್ (Telangana Congress)ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಎರಡೂ ಕಡೆಯ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿರುವ ಘಟನೆಯೂ ಇಲ್ಲಿ ನಡೆದಿದೆ. ಈ ಘಟನೆಯಲ್ಲಿ ಎರಡೂ ಕಡೆಯ ಬೆಂಬಲಿಗರು ಮತ್ತು ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ ಎಂದು ಟಿವಿ 9 ತೆಲುಗು ವರದಿ ಮಾಡಿದೆ.

ಬಿಆರ್‌ಎಸ್ ಅಭ್ಯರ್ಥಿ ಮಂಚಿರೆಡ್ಡಿ ಕಿಶನ್ ರೆಡ್ಡಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಮಲ್ಲಾರೆಡ್ಡಿ ರಂಗಾ ರೆಡ್ಡಿ ಅವರು ಏಕಕಾಲದಲ್ಲಿ ರ್ಯಾಲಿ ನಡೆಸಿದ್ದು ಬೆಂಬಲಿಗರು ನಾಮಪತ್ರ ಕೇಂದ್ರದಲ್ಲಿ ಪರಸ್ಪರ ಮುಖಾಮುಖಿಯಾದಾಗ ಪರಸ್ಪರ ಕಲ್ಲು ತೂರಾಟ ನಡೆಸಿದರು. ಘರ್ಷಣೆಯಲ್ಲಿ ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ ಇಬ್ಬರು ಗಾಯಗೊಂಡಿದ್ದಾರೆ.

ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಯಿತು.

ಇದನ್ನೂ ಓದಿ:  ಭಯಾನಕ, ಆತಂಕಕಾರಿ: ಚುನಾವಣಾ ಸಭೆಗೆ ತೆರಳುತ್ತಿದ್ದ ಸಚಿವ ಕೆಟಿಆರ್, ವಾಹನದ ಮೇಲಿಂದ ಮುಗ್ಗರಿಸಿಬಿದ್ದರು! ವಿಡಿಯೋ ನೋಡಿ ​

ಇಬ್ರಾಹಿಂಪಟ್ಟಣಂ ವಿಧಾನಸಭಾ ಕ್ಷೇತ್ರವು ರಂಗಾರೆಡ್ಡಿ ಜಿಲ್ಲೆಯ ಹೈದರಾಬಾದ್‌ನ ಉಪನಗರವಾಗಿದೆ. ರಂಗಾರೆಡ್ಡಿಯ 14 ಕ್ಷೇತ್ರಗಳಲ್ಲಿ ಇದೂ ಒಂದು. ಬಿಆರ್‌ಎಸ್ ಅಭ್ಯರ್ಥಿ ಎಂ.ಕಿಶನ್ ರೆಡ್ಡಿ ಹಾಲಿ ಶಾಸಕ. ನವೆಂಬರ್ 10 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ