ತೆಲಂಗಾಣ ಅಸೆಂಬ್ಲಿ ಚುನಾವಣೆ: 82 ವರ್ಷದ ನಿರಾಶ್ರಿತ ಮಹಿಳೆ ನಾಮಪತ್ರ ಸಲ್ಲಿಕೆ.. ಕಾರಣ ತಿಳಿದ ಅಧಿಕಾರಿಗಳು ಶಾಕ್!

Telangana assembly Elections: ತನಗೆ ನ್ಯಾಯ ದೊರಕಿಸಿಕೊಡುವಂತೆ ಶ್ಯಾಮಲಾ ದೇಶದ ಎಲ್ಲ ಪ್ರಮುಖರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೆ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಅವರು. 82ನೇ ವಯಸ್ಸಿಗೆ ಬಂದಿರುವ ತಮ್ಮ ಮೇಲೆ ತಾರತಮ್ಯ ತೋರುತ್ತಿರುವುದು ಸರಿಯಲ್ಲ ಎಂದ ಅವರು, ತನ್ನ ಗೋಳು, ಸಂಕಟ ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಜಗಿತ್ಯಾಲದಲ್ಲಿ ನಾಮಪತ್ರ ಸಲ್ಲಿಸಿದ್ದಾಗಿ ಹೇಳಿದ್ದಾರೆ.

ತೆಲಂಗಾಣ ಅಸೆಂಬ್ಲಿ ಚುನಾವಣೆ: 82 ವರ್ಷದ ನಿರಾಶ್ರಿತ ಮಹಿಳೆ ನಾಮಪತ್ರ ಸಲ್ಲಿಕೆ.. ಕಾರಣ ತಿಳಿದ ಅಧಿಕಾರಿಗಳು ಶಾಕ್!
82 ವರ್ಷದ ನಿರಾಶ್ರಿತ ಮಹಿಳೆ ನಾಮಪತ್ರ ಸಲ್ಲಿಕೆ.. ಕಾರಣ ತಿಳಿದ ಅಧಿಕಾರಿಗಳು ಶಾಕ್!
Follow us
ಸಾಧು ಶ್ರೀನಾಥ್​
|

Updated on: Nov 08, 2023 | 3:35 PM

ಸ್ವಾತಂತ್ರ್ಯ ಹೋರಾಟಗಾರನ ಪಾಡು ಅಷ್ಟಿಷ್ಟಲ್ಲ. ತನ್ನ ಹಿರಿಯ ಮಗನಿಂದಾಗಿ ತಾನು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಎಲ್ಲರಿಗೂ ಮನವಿ ಮಾಡಿ ಮಾಡಿ ಸಾಕಾಗಿ, ತಮ್ಮ ಇಳಿಯ ವಯಸ್ಸಿನಲ್ಲಿ ತಾಯಿಯೊಬ್ಬರು ಅಂತಿಮವಾಗಿ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ  (telangana-assembly-elections) ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ. ಜಗಿತ್ಯಾಲ ಜಿಲ್ಲಾ ಕೇಂದ್ರದಲ್ಲಿ ನಡೆದಿರುವ ಈ ಪ್ರಸಂಗ ಚುನಾವಣೆ ಹೊಸ್ತಿಲಲ್ಲಿರುವ ತೆಲಂಗಾಣದಾದ್ಯಂತ ಸಂಚಲನ ಮೂಡಿಸಿದೆ. 82 ವರ್ಷದ ಅಜ್ಜಿಯ ನಾಮಪತ್ರ ಸಲ್ಲಿಕೆ ಚರ್ಚೆಯ ವಿಷಯವಾಗಿದೆ. ನಿಜಾಮನಿಂದ ವಿಮೋಚನೆಗಾಗಿ ಹೋರಾಡಿದ ಯೋಧರೊಬ್ಬರ ಪತ್ನಿಯೂ ಆಗಿರುವ ಆಕೆಯ ನಾಮಪತ್ರ ಸಂಚಲನ ಮೂಡಿಸುತ್ತಿದೆ.

ಕರೀಂನಗರ ಜಿಲ್ಲೆಯ ಗಂಗಾಧರ ಮಂಡಲದ ಕುರಿಕ್ಯಾಲಕ್ಕೆ ಸೇರಿದ ಚೇಟಿ ಶ್ಯಾಮಲಾ ಅವರು ಜಗಿತ್ಯಾಲದಲ್ಲಿ ವಾಸಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಮುರಳೀಧರ ರಾವ್ ಅವರ ಪತ್ನಿ ಚೇಟಿ ಶ್ಯಾಮಲಾ ನಾಮಪತ್ರ ಸಲ್ಲಿಸಲು ಕಾರಣಗಳನ್ನು ಹೀಗೆ ವಿವರಿಸಿದ್ದಾರೆ: ಕುಟುಂಬದ ಮನೆಯ ವಿಚಾರದಲ್ಲಿ ಹಿರಿಯ ಮಗನ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ನಾಮಪತ್ರ ಸಲ್ಲಿಸಬೇಕಾಯಿತು ಎಂದು ಶ್ಯಾಮಲಾ ವಿವರಿಸಿದ್ದಾರೆ.

ಹಿರಿಯ ಮಗ ರಾಮರಾವ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಇನ್ನು ಮುಂದೆ ತಾವು ತಮ್ಮ ಮನೆಯಲ್ಲಿ ವಾಸಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ವೃದ್ಧಾಪ್ಯಕ್ಕೆ ಬಂದಾಗ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಹಿರಿಯ ಮಗ ತನ್ನ ಯೋಗಕ್ಷೇಮವನ್ನಾದರೂ ನೋಡಿಕೊಳ್ಳುತ್ತಿಲ್ಲ ಎಂದು ಶ್ಯಾಮಲಾ ಆರೋಪಿಸಿದ್ದಾರೆ.

Also read: ನಾನೇ CM.. ಟಿಕೆಟ್ ಸಿಗದವರು ನಮ್ಮ ಪ್ರಜಾಶಾಂತಿ ಪಕ್ಷ ಸೇರಬಹುದು – ವಿವಾದಿತ ಕೆಎ ಪಾಲ್ ಬಂಪರ್ ಆಫರ್

ತನಗೆ ನ್ಯಾಯ ದೊರಕಿಸಿಕೊಡುವಂತೆ ಶ್ಯಾಮಲಾ ದೇಶದ ಎಲ್ಲ ಪ್ರಮುಖರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ, ಯಾವುದೆ ಪ್ರಯೋಜನವಾಗಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ ಅವರು. 82ನೇ ವಯಸ್ಸಿಗೆ ಬಂದಿರುವ ತಮ್ಮ ಮೇಲೆ ತಾರತಮ್ಯ ತೋರುತ್ತಿರುವುದು ಸರಿಯಲ್ಲ ಎಂದ ಅವರು, ತನ್ನ ಗೋಳು, ಸಂಕಟ ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಜಗಿತ್ಯಾಲದಲ್ಲಿ ನಾಮಪತ್ರ ಸಲ್ಲಿಸಿದ್ದಾಗಿ ಹೇಳಿದ್ದಾರೆ. ತನ್ನ ಹಿರಿಯ ಮಗನಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಆತನಿಂದ ಮನೆಯನ್ನು ಕೊಡಿಸಬೇಕೆಂದು ಬಯಸುವುದಾಗಿ ಅವರು ಕೋರಿದ್ದಾರೆ.

ಮತ್ತೊಂದೆಡೆ ಚೇಟಿ ಶ್ಯಾಮಲಾ ಅವರ ಸಂಬಂಧಿಕರು ಕೂಡ ಬೆದರಿಕೆ ಹಾಕುತ್ತಿದ್ದಾರಂತೆ. ರಾಜ್ಯದ ಮುಖ್ಯಮಂತ್ರಿ ಕೆಸಿಆರ್ ತಮ್ಮ ಸಂಬಂಧಿ ಎಂದು ಹೇಳಿ ಬೆದರಿಕೆ ಹಾಕುತ್ತಿದ್ದಾರೆ ಎಂದು ವಿವರಿಸಿದರು. ಆಸ್ತಿ ವಿಚಾರದಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ನಾಮಪತ್ರ ಸಲ್ಲಿಸಲಾಗಿದೆ ಎಂದು ಹಿರಿಯಜ್ಜಿ ವಿವರಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ