ರಾಹುಲ್ ಗಾಂಧಿ ರೀಡರ್, ಲೀಡರ್ ಅಲ್ಲ; ತೆಲಂಗಾಣದ ಸಚಿವ ಕೆಟಿಆರ್ ತಿರುಗೇಟು
KT Rama Rao: ನಾನು ಅವರನ್ನು ಲೀಡರ್ (ನಾಯಕ) ಎಂದು ಪರಿಗಣಿಸುವುದಿಲ್ಲ, ಅವರನ್ನು ರೀಡರ್ ಎಂದು ಪರಿಗಣಿಸುತ್ತೇನೆ. ಅವರು ಸ್ಕ್ರಿಪ್ಟ್‌ಗಳನ್ನು ಓದಲು ಪ್ರಾರಂಭಿಸುತ್ತಾರೆ. ಅದರಲ್ಲಿ ಏನು ಬರೆದಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸುವುದಿಲ್ಲ ”ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರ ಕೆಟಿ ರಾಮರಾವ್ ಸುದ್ದಿಗಾರರಿಗೆ ತಿಳಿಸಿದರು.
ಹೈದರಾಬಾದ್ ಅಕ್ಟೋಬರ್ 20: ಭಾರತ ರಾಷ್ಟ್ರ ಸಮಿತಿ (BRS) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮಾಡಿದ ಭ್ರಷ್ಟಾಚಾರ ಆರೋಪಕ್ಕೆ ತೆಲಂಗಾಣ ಸಚಿವ ಕೆಟಿ ರಾಮರಾವ್ (KT Rama Rao )ಶುಕ್ರವಾರ ತಿರುಗೇಟು ನೀಡಿದ್ದಾರೆ. ನಾನು ಅವರನ್ನು ಲೀಡರ್ (ನಾಯಕ) ಎಂದು ಪರಿಗಣಿಸುವುದಿಲ್ಲ, ಅವರನ್ನು ರೀಡರ್ ಎಂದು ಪರಿಗಣಿಸುತ್ತೇನೆ. ಅವರು ಸ್ಕ್ರಿಪ್ಟ್‌ಗಳನ್ನು ಓದಲು ಪ್ರಾರಂಭಿಸುತ್ತಾರೆ. ಅದರಲ್ಲಿ ಏನು ಬರೆದಿದ್ದಾರೆ ಎಂಬುದರ ಬಗ್ಗೆ ಗಮನ ಹರಿಸುವುದಿಲ್ಲ ”ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರ ಕೆಟಿ ರಾಮರಾವ್ ಸುದ್ದಿಗಾರರಿಗೆ ತಿಳಿಸಿದರು.
ತೆಲಂಗಾಣದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ರಾಹುಲ್ ಗಾಂಧಿ ಹೇಳುತ್ತಾರೆ. ಅವರ ಪಿಸಿಸಿ ಮುಖ್ಯಸ್ಥ (ರೇವಂತ್ ರೆಡ್ಡಿ) ದಾವೂದ್ ಇಬ್ರಾಹಿಂ ಮತ್ತು ಚಾರ್ಲ್ಸ್ ಶೋಭರಾಜ್ ಗಿಂತ ಹೆಚ್ಚು ಅಪಾಯಕಾರಿ. ರಾಹುಲ್ ಗಾಂಧಿ ಮುಗ್ದ, ಆದ್ದರಿಂದ ಅವರಿಗೆ ಗೊತ್ತಿಲ್ಲ ಎಂದು ಕೆಟಿಆರ್ ಹೇಳಿದರು.
ರಾಹುಲ್ ಗಾಂಧಿ ಅವರು ಯಾತ್ರೆಗಳು ಮತ್ತು ಸಾರ್ವಜನಿಕ ರ‍್ಯಾಲಿಗಳೊಂದಿಗೆ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದಲ್ಲಿ ಅಬ್ಬರದ ಪ್ರಚಾರ ಮಾಡುತ್ತಿದ್ದಾರೆ. ಭ್ರಷ್ಟಾಚಾರದ ಆರೋಪದ ಮೇಲೆ ಆಗಾಗ್ಗೆ BRS ವಿರುದ್ಧ ಟೀಕಾ ಪ್ರಹಾರ ಮಾಡಿ, ಅದನ್ನು ಬಿಜೆಪಿಯ ‘ಬಿ’ ಟೀಮ್ ಎಂದು ರಾಹುಲ್ ಕರೆದಿದ್ದಾರೆ. ಈ ಪ್ರದೇಶದಲ್ಲಿ ತಮ್ಮ ‘ವಿಜಯಭೇರಿ ಯಾತ್ರೆ’ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ಲೋಕಸಭೆಯಲ್ಲಿ ಬಿಆರ್‌ಎಸ್ ಬಿಜೆಪಿಗೆ ತನ್ನ ಬೆಂಬಲವನ್ನು ನೀಡುತ್ತದೆ ಎಂದಿದ್ದಾರೆ.
#WATCH | Allegations of bribery against TMC MP Mahua Moitra | Telangana Minister & BRS leader KT Rama Rao says, “…What is the issue – whether the questions being asked in the Parliament are right or wrong, if the Government has answers to the questions. Why is the Government… pic.twitter.com/iKdFzkaY8v
— ANI (@ANI) October 20, 2023
ಬಿಆರ್‌ಎಸ್, ಬಿಜೆಪಿ ಮತ್ತು ಎಐಎಂಐಎಂ ಪರಸ್ಪರ ಸಹಾಯ ಮಾಡುತ್ತವೆ. ಬಿಜೆಪಿ ಮತ್ತು ಎಐಎಂಐಎಂಗೆ ಮತ ಹಾಕುವುದು ಎಂದರೆ ಬಿಆರ್‌ಎಸ್‌ಗೆ ಮತ ಹಾಕುವುದು. ನನ್ನ ವಿರುದ್ಧ 24 ಪ್ರಕರಣಗಳಿವೆ. ನಾನು ಬಿಜೆಪಿ ಎದುರು ನಿಂತಿದ್ದಕ್ಕೆ ನನ್ನ ಲೋಕಸಭಾ ಸದಸ್ಯತ್ವ ರದ್ದಾಗಿದೆ, ನನ್ನ ಮನೆಯನ್ನು ಕಸಿದುಕೊಳ್ಳಲಾಗಿದೆ. ಮತ್ತೊಂದೆಡೆ, ಕೆಸಿಆರ್ ಅವರನ್ನು ಇಡಿ, ಸಿಬಿಐ ಅಥವಾ ಐಟಿ ಪ್ರಶ್ನಿಸಿಲ್ಲ. ಅದು ಜಿಎಸ್‌ಟಿಯಾಗಲಿ ಅಥವಾ ರೈತರ ಮಸೂದೆಯಾಗಲಿ,ಲೋಕಸಭೆಯಲ್ಲಿ ಬಿಆರ್‌ಎಸ್ ಬಿಜೆಪಿಯನ್ನು ಬೆಂಬಲಿಸುತ್ತದೆ ಎಂದು ರಾಹುಲ್ ಹೇಳಿದ್ದಾರೆ.
ನಿರ್ಣಾಯಕ ರಾಜ್ಯ ಇಲಾಖೆಗಳು ಕೆಸಿಆರ್ ಅವರ ಕುಟುಂಬದ ನಿಯಂತ್ರಣದಲ್ಲಿದೆ ಎಂದು ಗಮನಿಸಿದ ಕಾಂಗ್ರೆಸ್ ನಾಯಕ, ಈ ಚುನಾವಣೆಯು “ದೊರಾಲಾ” (ಊಳಿಗಮಾನ್ಯ ಪ್ರಭುಗಳು) ತೆಲಂಗಾಣ ಮತ್ತು “ಪ್ರಜಾಲ” (ಜನರ) ತೆಲಂಗಾಣ ನಡುವಿನ ಘರ್ಷಣೆಯನ್ನು ಪ್ರತಿನಿಧಿಸುತ್ತದೆ ಎಂದು ಹೈಲೈಟ್ ಮಾಡಿದ್ದಾರೆ.
ಇದನ್ನೂ ಓದಿ: ನಟಿ, ಬಿಜೆಪಿ ಹಿರಿಯ ನಾಯಕಿ ವಿಜಯಶಾಂತಿ ಟ್ವೀಟ್, ತೆಲಂಗಾಣ ಬಿಜೆಪಿಯಲ್ಲಿ ಸಂಚಲನ
ಈಗ, ಈ ಚುನಾವಣೆಯು ದೊರಾಲ ತೆಲಂಗಾಣ ಮತ್ತು ಪ್ರಜಾಲ ತೆಲಂಗಾಣ ನಡುವಿನ ಹೋರಾಟವಾಗಿದೆ. ಕೆಸಿಆರ್ ಕುಟುಂಬವು ಭೂಮಿ, ಮರಳು ಮತ್ತು ಮದ್ಯಕ್ಕೆ ಸಂಬಂಧಿಸಿದ ಪ್ರಮುಖ ಇಲಾಖೆಗಳನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ” ಎಂದು ಅವರು ಹೇಳಿದರು.
ಬಿಆರ್‌ಎಸ್ ಬಿಜೆಪಿಯ ಬಿ ಟೀಮ್ ಅಲ್ಲ, ಕಾಂಗ್ರೆಸ್ ದೇಶದ ಸಿ ಟೀಮ್ ಎಂದು ಕೆಟಿಆರ್ ಈ ಹಿಂದೆ ಹೇಳಿದ್ದರು. “ಸಿ ಟೀಮ್ ಎಂದರೆ ಚೋರ್ (ಕಳ್ಳ) ತಂಡ” ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷರು ಹೈದರಾಬಾದ್‌ನ ತೆಲಂಗಾಣ ಭವನದಲ್ಲಿ ಸಭೆಯನ್ನು ಉದ್ದೇಶಿಸಿ ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ