‘ನನ್ನನ್ನು ಹುಚ್ಚು ನಾಯಿ ಓಡಿಸಿದ ರೀತಿ ಬಿಜೆಪಿಯಿಂದ ಓಡಿಸಿದ್ರು: ಅಳಲು ತೋಡಿಕೊಂಡ ಎಂ.ಪಿ. ಕುಮಾರಸ್ವಾಮಿ
‘ಬಿಜೆಪಿಯಿಂದ ನನ್ನನ್ನು ಹುಚ್ಚು ನಾಯಿ ಓಡಿಸಿದ ರೀತಿ ಓಡಿಸಿದ್ರು, ಪಕ್ಷದಲ್ಲಿ ನನ್ನನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಇದಕ್ಕೆಲ್ಲಾ ಸಿ.ಟಿ.ರವಿ ಹಾಗೂ ಪ್ರಾಣೇಶ್ ಕಾರಣ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.
ಉತ್ತರ ಕನ್ನಡ/ಚಿಕ್ಕಮಗಳೂರು: ‘ಬಿಜೆಪಿಯಿಂದ ನನ್ನನ್ನು ಹುಚ್ಚು ನಾಯಿ ಓಡಿಸಿದ ರೀತಿ ಓಡಿಸಿದ್ರು, ಪಕ್ಷದಲ್ಲಿ ನನ್ನನ್ನು ಅತ್ಯಂತ ಹೀನಾಯವಾಗಿ ನಡೆಸಿಕೊಂಡಿದ್ದಾರೆ. ಇದಕ್ಕೆಲ್ಲಾ ಸಿ.ಟಿ.ರವಿ ಹಾಗೂ ಪ್ರಾಣೇಶ್ ಕಾರಣ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ(mudigere MLA MP Kumaraswamy) ಹೇಳಿದರು. ‘ಮುಂದಿನ ಬಾರಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ. ನನಗೆ ಇನ್ನೂ ವಯಸ್ಸಾಗಿಲ್ಲ, ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ನಾಳೆ(ಏ.15) ಸಂಜೆ ವೇಳೆಗೆ ಈ ಕುರಿತು ತೀರ್ಮಾನಿಸುತ್ತೇನೆ ಎಂದಿದ್ದಾರೆ.
ಇಂದು(ಏ.14) ಶಿರಸಿಯಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಅವರೇ ಜನ ಕಳುಹಿಸಿ, ಜಗಳ ಮಾಡಿಸಿ, ನನ್ನ ಮೇಲೆ ಕೆಟ್ಟ ಅಭಿಪ್ರಾಯ ಬರುವ ರೀತಿ ಮಾಡಿದ್ರು, ಅವರು ಪಕ್ಷ ಉಳಿಸಲ್ಲ, ಸಿ.ಟಿ ರವಿ ಬಿಜೆಪಿಗೆ ಮಾರಕ ಎಂದು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಸಿ.ಟಿ.ರವಿ ವಿರುದ್ದ ಹರಿಹಾಯ್ದಿದ್ದಾರೆ.
ಹೌದು ಈ ಬಾರಿ ವಿಧಾನಸಭೆ ಚುನಾವಣೆ ಟಿಕೆಟ್ ಕೈತಪ್ಪಿದ್ದಕ್ಕೆ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಅವರು ಬಿಜೆಪಿಗೆ ರಾಜೀನಾಮೆ ನೀಡಿದ್ದರು. ಎಂಪಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ಮೂಡಿಗೆರೆಯಿಂದ ಕಣಕ್ಕಿಳಿಯಲು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಕ್ಷೇತ್ರದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಬಿಜೆಪಿ ಹೈಕಮಾಂಡ್, ದೀಪಕ್ ದೊಡ್ಡಯ್ಯ ಎನ್ನುವರಿಗೆ ಟಿಕೆಟ್ ಘೋಷಣೆ ಮಾಡಿತ್ತು. ಇದರಿಂದ ಅಸಮಧಾನಗೊಂಡ ಎಂಪಿ ಕುಮಾರಸ್ವಾಮಿ ಅವರು ನಿನ್ನೆ(ಏಪ್ರಿಲ್ 13) ಶಾಸಕ ಸ್ಥಾನದ ಜೊತೆಗೆ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ಇನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ಎಂ.ಪಿ.ಕುಮಾರಸ್ವಾಮಿ, ಯಡಿಯೂರಪ್ಪ ಇಲ್ಲದೆ ಬಿಜೆಪಿ 50 ಸ್ಥಾನವೂ ಗೆಲ್ಲುವುದಿಲ್ಲ. ಇನ್ನೆರಡು ದಿನಗಳಲ್ಲಿ ಕಾರ್ಯಕರ್ತರ ಜತೆ ಚರ್ಚಿಸಿ ಮುಂದಿನ ನಿರ್ಧಾರ ತಿಳಿಸುತ್ತೇನೆ. ನಾನೇನು ಸನ್ಯಾಸಿ ಅಲ್ಲ, ರಾಜಕೀಯ ಮಾಡಿ ತೋರಿಸುತ್ತೇನೆ ಎಂದು ಬಿಜೆಪಿಗೆ ಸವಾಲು ಹಾಕಿದ್ದರು.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Fri, 14 April 23