ಲಖನೌ: ಉತ್ತರ ಪ್ರದೇಶದ ಚುನಾವಣೆ (UP Assembly Election) ಗುರುವಾರ ಆರಂಭವಾಗಿದ್ದು, ರಾಜ್ಯದ ಪಶ್ಚಿಮ ಭಾಗದ 11 ಜಿಲ್ಲೆಗಳಲ್ಲಿ 58 ವಿಧಾನಸಭಾ ಸ್ಥಾನಗಳಿಗೆ ಮತದಾನ (Voting) ನಡೆಯಲಿದೆ. ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ ಈ ಕ್ಷೇತ್ರಗಳಲ್ಲಿ ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭವಾಗಲಿದೆ. ಸಂಜೆ 6 ಗಂಟೆಗೆ ಮತದಾನ ಮುಕ್ತಾಯವಾಗಲಿದೆ. ಶಾಮ್ಲಿ, ಹಾಪುರ್, ಗೌತಮ್ ಬುದ್ಧ ನಗರ, ಮುಜಾಫರ್‌ನಗರ, ಮೀರತ್, ಬಾಗ್‌ಪತ್, ಘಾಜಿಯಾಬಾದ್, ಬುಲಂದ್‌ಶಹರ್, ಅಲಿಘರ್, ಮಥುರಾ ಮತ್ತು ಆಗ್ರಾ ಜಿಲ್ಲೆಗಳಲ್ಲಿ ಚುನಾವಣೆ ನಡೆಯಲಿದೆ. ಮತಗಟ್ಟೆಗೆ ಹೋಗುವ ಮುನ್ನ ಮತ ಚಲಾಯಿಸುವ ಎಲ್ಲಾ ಮತದಾರರು, ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಹೇಗೆ ಪರಿಶೀಲಿಸಬಹುದು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಮತದಾರರು ಪಟ್ಟಿಯಲ್ಲಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು: ಭಾರತದ ಚುನಾವಣಾ ಆಯೋಗದ ವೆಬ್‌ಸೈಟ್ electoralsearch.in ಗೆ ಲಾಗಿನ್ ಮಾಡಿ. ನೀವು ಮತದಾರರ ಫೋಟೋ ಗುರುತಿನ ಚೀಟಿ (EPIC) ಸಂಖ್ಯೆಯನ್ನು ಹೊಂದಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ಅವಲಂಬಿಸಿ ನಿಮ್ಮ ವಿವರಗಳನ್ನು ಹುಡುಕಲು ಎರಡು ಮಾರ್ಗಗಳಿವೆ.
EPIC ಸಂಖ್ಯೆ ಹೊಂದಿದ್ದರೆ
ವೆಬ್‌ಸೈಟ್‌ನಲ್ಲಿ, ‘EPIC ಸಂಖ್ಯೆಯಿಂದ ಹುಡುಕಿ’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ
ನಿಮ್ಮ EPIC ಸಂಖ್ಯೆ, ರಾಜ್ಯ, ಕ್ಯಾಪ್ಚಾ ಪಠ್ಯವನ್ನು ನಮೂದಿಸಿ ಹುಡುಕಿ
EPIC ಸಂಖ್ಯೆ ಮತ್ತು ಬೂತ್ ವಿಳಾಸ ಸೇರಿದಂತೆ ವಿವರಗಳನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ
ವಿವರಗಳನ್ನು ಡೌನ್‌ಲೋಡ್ ಮಾಡಲು Print Voter Information ಕ್ಲಿಕ್ ಮಾಡಿ
EPIC ಸಂಖ್ಯೆ ಇಲ್ಲದೇ ಇದ್ದರೆ ಹೀಗೆ ಮಾಡಿ
ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಮತ್ತು Search by Details ಕ್ಲಿಕ್ ಮಾಡಿ
ಹೆಸರು, ತಂದೆಯ ಹೆಸರು, ವಯಸ್ಸು, ಹುಟ್ಟಿದ ದಿನಾಂಕ, ಲಿಂಗ, ರಾಜ್ಯ, ಜಿಲ್ಲೆ ಮತ್ತು ವಿಧಾನಸಭಾ ಕ್ಷೇತ್ರದಂತಹ ವಿವರಗಳನ್ನು ನಮೂದಿಸಿ
ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು ‘ Search ‘ ಕ್ಲಿಕ್ ಮಾಡಿ
EPIC ಸಂಖ್ಯೆ ಮತ್ತು ಮತಗಟ್ಟೆ ವಿಳಾಸ ಸೇರಿದಂತೆ ವಿವರಗಳು ಡಿಸ್ ಪ್ಲೇ ಆಗುತ್ತವೆ
ಸೂಚನೆಗಳನ್ನು ಡೌನ್‌ಲೋಡ್ ಮಾಡಲು ‘Print Voter Information’ ಕ್ಲಿಕ್ ಮಾಡಿ
EPIC ಸಂಖ್ಯೆ ಎಂದರೇನು?
EPIC ಎಂದರೆ Electors Photo Identification Card ಮತ್ತು ಅದರ ಸಂಖ್ಯೆ ಮತದಾರರ ಗುರುತಿನ ಚೀಟಿ ಸಂಖ್ಯೆ. ಇದು ನಿಮ್ಮ ಮತದಾರರ ಗುರುತಿನ ಚೀಟಿಯಲ್ಲಿನ ಫೋಟೋದ ಮೇಲೆ ನೇರವಾಗಿ ಪ್ರದರ್ಶಿಸಲ್ಪಡುತ್ತದೆ.
e-EPIC ಅಥವಾ ಡಿಜಿಟಲ್ ಮತದಾರರ ಗುರುತಿನ ಚೀಟಿ
ಕಳೆದ ವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನದಂದು ಭಾರತದ ಚುನಾವಣಾ ಆಯೋಗವು ಇ-ಇಪಿಐಸಿ (Electronic Electoral Photo Identity Card) ಕಾರ್ಯಕ್ರಮವನ್ನು ಪ್ರಾರಂಭಿಸಿತು. ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಮಣಿಪುರ ಮತ್ತು ಗೋವಾದಲ್ಲಿ ಮುಂಬರುವ ಐದು ರಾಜ್ಯಗಳ ಚುನಾವಣೆಗಳಿಗೆ ಮತದಾರರು ಈ ಡಿಜಿಟಲ್ ಆಯ್ಕೆಯನ್ನು ಪಡೆಯಬಹುದು.
ಇದನ್ನೂ ಓದಿ: Video: ಮೊದಲ ಹಂತದ ಮತದಾನಕ್ಕೆ ಪ್ರಚಾರ ಮುಕ್ತಾಯವಾದ ಬೆನ್ನಲ್ಲೇ ಯಮುನಾ ಪೂಜೆ ನೆರವೇರಿಸಿದ ಪ್ರಿಯಾಂಕಾ ಗಾಂಧಿ; ವೇದ ಮಂತ್ರ ಪಠಣ