ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ (Yogi Adityanath) ಅವರು ಶುಕ್ರವಾರ ಗೋರಖ್‌ಪುರ ಸದರ್ (Gorakhpur Sadar)ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲಿದ್ದಾರೆ. ಆದಿತ್ಯನಾಥ ಅವರು ಗುರುವಾರ ಸಂಜೆ ನಗರಕ್ಕೆ ಆಗಮಿಸಿದ್ದರು. ನಾಮಪತ್ರ ಸಲ್ಲಿಕೆ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah), ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಸಿಂಗ್ ಉಪಸ್ಥಿತರಿರುತ್ತಾರೆ. ಅಮಿತ್ ಶಾ ಅವರು ಇಂದು ಮಧ್ಯಾಹ್ನ ಗೋರಖ್‌ಪುರಕ್ಕೆ ತಲುಪಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ನಗರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ಮಾಧ್ಯಮ ಘಟಕದ ಉಸ್ತುವಾರಿ ಬಚ್ಚಾ ಪಾಂಡೆ ಪ್ರಕಾರ, ನಾಮಪತ್ರ ಸಲ್ಲಿಸುವ ಮೊದಲು, ಯೋಗಿ ಅವರು ಮಹಾರಾಣಾ ಪ್ರತಾಪ್ ಇಂಟರ್ ಕಾಲೇಜು ಮೈದಾನದಲ್ಲಿ ಕೊವಿಡ್ ಪ್ರೋಟೋಕಾಲ್‌ಗಳನ್ನು ಪಾಲಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಅವರು ಗೋರಖ್‌ಪುರ ಕ್ಲಬ್‌ನಲ್ಲಿ ಮತದಾರರ ಜಾಗೃತಿ ಸಮಾವೇಶ ಮತ್ತು ನಿಪಾಲ್ ವಸತಿಗೃಹದಲ್ಲಿ ಪ್ರಬುದ್ಧ ವರ್ಗ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಿಜೆಪಿ ಉತ್ತರ ಪ್ರದೇಶದಲ್ಲಿ ಇತಿಹಾಸವನ್ನು ಪುನರಾವರ್ತಿಸಲು ಹೊರಟಿದೆ. 2014, 2017 ಮತ್ತು 2019 ರ ಚುನಾವಣೆಗಳಲ್ಲಿ ಉತ್ತರ ಪ್ರದೇಶದ ಜನರು ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಅಭಿವೃದ್ಧಿಯನ್ನು ಆಯ್ಕೆ ಮಾಡಿದರು ಮತ್ತು ಸಂಪೂರ್ಣ ಬಹುಮತವನ್ನು ನೀಡಿದರು. ಇಂದು ಸಿಎಂ ಯೋಗಿ ನಾಮಪತ್ರ ಸಲ್ಲಿಸುವ ಮೂಲಕ ಬಿಜೆಪಿ 300 ಪಾರ್ (300 ಸೀಟುಗಳಿಗಿಂತ ಹೆಚ್ಚು ಸೀಟು ಗಿಟ್ಟಿಸುವ) ಸಂಕಲ್ಪದೊಂದಿಗೆ ಮುನ್ನಡೆಯುತ್ತಿದೆ ಎಂದು ಗೋರಖ್ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ ಹೇಳಿದ್ದಾರೆ.
Union Home Minister & BJP leader Amit Shah and Uttar Pradesh CM Yogi Adityanath show victory sign at the public rally venue in Gorakhpur
CM Adityanath will file his nomination from Gorakhpur Urban Assembly constituency today. pic.twitter.com/2qAmq2fgnN
— ANI UP/Uttarakhand (@ANINewsUP) February 4, 2022
2013ರಲ್ಲಿ ನನ್ನನ್ನು ಬಿಜೆಪಿ (ಯುಪಿ) ಉಸ್ತುವಾರಿಯನ್ನಾಗಿ ಮಾಡಿದಾಗ ಪತ್ರಕರ್ತರು ಚುನಾವಣೆಯಲ್ಲಿ ಬಿಜೆಪಿಎರಡಂಕಿಯನ್ನೂ ಮುಟ್ಟುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ, ವಿಪಕ್ಷಗಳೇ ಎರಡಂಕಿ ಮುಟ್ಟಲಿಲ್ಲ. ಉತ್ತರ ಪ್ರದೇಶದ ಮೂರೇ ಜಾಗಗಳಲ್ಲಿ ಈಗ ಮಾಫಿಯಾ ಕಂಡು ಬರುತ್ತದೆ.ಅದರಲ್ಲಿ ಒಂದು ಜೈಲು,ಉತ್ತರ ಪ್ರದೇಶದ ಹೊರಗೆ ಅಥವಾ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಪಟ್ಟಿಯಲ್ಲಿ. ಉತ್ತರ ಪ್ರದೇಶವನ್ನು ಮಾಫಿಯಾ ಆಳುತ್ತಿತ್ತು, ಪೊಲೀಸರು ಅವರಿಗೆ ಹೆದರುತ್ತಿದ್ದರು. ಇಂದು ಮಾಫಿಯಾ ಶರಣಾಗಲು ಪೊಲೀಸ್ ಠಾಣೆಗೆ ಬರುತ್ತಿದೆ ಎಂದಿದ್ದಾರೆ ಅಮಿತ್ ಶಾ.
ಇದನ್ನೂ ಓದಿ: ಸೇನಾ ಸಮವಸ್ತ್ರ ಧರಿಸಿದ್ದ ಪ್ರಧಾನಿ ಮೋದಿಗೆ ಉತ್ತರ ಪ್ರದೇಶ ಕೋರ್ಟ್ನಿಂದ ನೋಟಿಸ್; ಶಿಕ್ಷಾರ್ಹ ಅಪರಾಧವೆಂದ ಅರ್ಜಿದಾರ ವಕೀಲ
Published On - 12:22 pm, Fri, 4 February 22