ಪ್ರಧಾನಿ ಮೋದಿಯಿಂದಾಗಿ ಕೊವಿಡ್ ಸಂಕಷ್ಟದಲ್ಲೂ ಎಲ್ಲರ ಮನೆಗೆ ಲಕ್ಷ್ಮಿ ಪ್ರವೇಶವಾಗಿದೆ; ಅಮಿತ್ ಶಾ
Uttar Pradesh Assembly Elections 2022: ಕಳೆದ ಎರಡು ವರ್ಷಗಳ ಕೊವಿಡ್‌ನಲ್ಲಿ ಲಕ್ಷ್ಮಿ ದೇವಿಯು ಕಮಲದ ಮೇಲೆ ಕುಳಿತು ಪ್ರತಿ ಮನೆಗೆ ಬಂದಳು. ಇದಕ್ಕೆ ಪ್ರಧಾನಿ ಮೋದಿಯವರೇ ಕಾರಣ ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.
ಲಕ್ನೋ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಪ್ರಯತ್ನದಿಂದಾಗಿ ಕೊವಿಡ್ ಸಾಂಕ್ರಾಮಿಕದ ಎರಡು ವರ್ಷಗಳ ಅವಧಿಯಲ್ಲಿಯೂ ಪ್ರತಿ ಮನೆಯ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಉತ್ತರ ಪ್ರದೇಶದ ಅಟ್ರೌಲಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಕಳೆದ ಎರಡು ವರ್ಷಗಳ ಕೊವಿಡ್‌ನಲ್ಲಿ ಲಕ್ಷ್ಮಿ ದೇವಿಯು ಕಮಲದ ಮೇಲೆ ಕುಳಿತು ಪ್ರತಿ ಮನೆಗೆ ಬಂದಳು. ಇದಕ್ಕೆ ಪ್ರಧಾನಿ ಮೋದಿಯವರೇ ಕಾರಣ” ಎಂದು ಅಮಿತ್ ಶಾ ಬಣ್ಣಿಸಿದ್ದಾರೆ.
ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದವರು ಎಂದಿಗೂ ಬಡವರ ಬಗ್ಗೆ ಯೋಚಿಸುವುದಿಲ್ಲ ಮತ್ತು ಅಭಿವೃದ್ಧಿಗೆ ಏನನ್ನೂ ಮಾಡುವುದಿಲ್ಲ. ಕೇವಲ ನಮ್ಮ ಸರ್ಕಾರವನ್ನು ಟೀಕಿಸುವುದರಲ್ಲೇ ಆ ಪಕ್ಷಗಳ ನಾಯಕರು ಕಾಲ ಕಳೆಯುತ್ತಿದ್ದಾರೆ. ಈ ಬುವಾ-ಭಟಿಜಾ ಏನು ಮಾಡಿದ್ದಾರೆ? ಎಂದು ನಾನು ನಿಮ್ಮನ್ನು ಕೇಳುತ್ತೇನೆ. ಗ್ಯಾಸ್, ಶೌಚಾಲಯ, ವಿದ್ಯುತ್, ಮನೆ ಇದನ್ನೆಲ್ಲ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ.
ನೀವೆಲ್ಲ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದೀಯಾ ಅಲ್ವಾ? ಅಖಿಲೇಶ್ ಯಾದವ್ ಇದು ಬಿಜೆಪಿಯ ಲಸಿಕೆ ಎಂದು ಹೇಳುತ್ತಿದ್ದರು. ಕೊನೆಗೆ ಅವರು ಕೂಡ ಕೊವಿಡ್ ಲಸಿಕೆ ಹಾಕಿಸಿಕೊಂಡರು ಎಂದು ಅಮಿತ್ ಶಾ ಲೇವಡಿ ಮಾಡಿದ್ದಾರೆ.
#WATCH| When Congress governed for 10yrs, Pakistan invaded our country & beheaded our jawans. Then PM Manmohan Singh didn’t do anything. But after Uri & Pulwama attacks, PM Modi eliminated terrorists in Pakistan with a surgical strike in 10 days: Home Min Amit Shah, in Atrauli,UP pic.twitter.com/bTPyJcM8Jo
— ANI UP/Uttarakhand (@ANINewsUP) February 2, 2022
ಇಂದು ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ 10 ವರ್ಷಗಳ ಕಾಲ ಅಧಿಕಾರದಲ್ಲಿದ್ದಾಗ ಪಾಕಿಸ್ತಾನವು ನಮ್ಮ ದೇಶದ ಮೇಲೆ ದಾಳಿ ಮಾಡಿ ನಮ್ಮ ಜವಾನರ ಶಿರಚ್ಛೇದ ಮಾಡಿತು. ಆಗ ಪ್ರಧಾನಿ ಮನಮೋಹನ್ ಸಿಂಗ್ ಏನನ್ನೂ ಮಾಡಲಿಲ್ಲ. ಆದರೆ, ಉರಿ ಮತ್ತು ಪುಲ್ವಾಮಾ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ 10 ದಿನಗಳಲ್ಲಿ ಸರ್ಜಿಕಲ್ ಸ್ಟ್ರೈಕ್ ಮೂಲಕ ಪಾಕಿಸ್ತಾನದಲ್ಲಿ ಭಯೋತ್ಪಾದಕರನ್ನು ಹೊಡೆದುರುಳಿಸಿದರು ಎಂದು ಅಮಿತ್ ಶಾ ಹೇಳಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23, 27, ಮಾರ್ಚ್ 3 ಮತ್ತು 7ರಂದು ಮತದಾನ ನಡೆಯಲಿದೆ. ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ.
ಅಮರಿಂದರ್ ಸಿಂಗ್ ರಾಜೀನಾಮೆ ಬಳಿಕ ನಾನೇ ಸಿಎಂ ಆಗಬೇಕೆಂಬುದು ಶಾಸಕರ ಆಯ್ಕೆಯಾಗಿತ್ತು; ಸುನಿಲ್ ಜಖಾರ್
Published On - 4:46 pm, Wed, 2 February 22