ಅಮಿತ್ ಶಾ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಹೇಳಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಜತೆ ಸಂಪರ್ಕ ಬೆಳೆಸಿಕೊಂಡಿದ್ದ ಸುಕೇಶ್ ಚಂದ್ರಶೇಖರ್
Jacqueline Fernandez ಈ ಕರೆಯನ್ನು ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯಿಂದ ಮಾಡಲಾಗಿದೆ. ತನಿಖೆಯ ಪ್ರಕಾರ ವಂಚನೆಯ ಕರೆ ಮತ್ತು ಇದನ್ನು ಆರೋಪಿ ಸುಕೇಶ್ ಚಂದ್ರಶೇಖರ್ ಅವರು ಮಾಡಿದ್ದಾರೆ" ಎಂದು ಇಡಿ ಹೇಳಿದೆ.
ದೆಹಲಿ: ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ ಜಯಲಲಿತಾ (J Jayalalithaa)ಅವರ ರಾಜಕೀಯ ಕುಟುಂಬದಿಂದ ಬಂದವರು ಎಂದು ಹೇಳಿಕೊಂಡಿರುವ ಸುಕೇಶ್ ಚಂದ್ರಶೇಖರ್ (Sukesh Chandrashekhar ಅವರು ನಟಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez) ಅವರೊಂದಿಗೆ ಸ್ನೇಹ ಬೆಳೆಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿ ಸಂಖ್ಯೆಯನ್ನು ನಕಲಿಸಿ “ವಂಚನೆ” ಕರೆ ಮಾಡಿದ್ದಾರೆ. ಈತನ ವಿರುದ್ಧ ಹಣ ಅಕ್ರಮ ವರ್ಗಾವಣೆ ವಿರೋಧಿ ಕಾನೂನಿನ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (Enforcement directorate) ತಿಳಿಸಿದೆ. ಏಜೆನ್ಸಿಯು ಈ ವರ್ಷ ಎರಡು ಬಾರಿ 36 ವರ್ಷದ ಜಾಕ್ವೆಲಿನ್ ಫರ್ನಾಂಡಿಸ್ ಅವರ ಹೇಳಿಕೆಯನ್ನು ದಾಖಲಿಸಿದೆ. ಅಲ್ಲಿ ಚಂದ್ರಶೇಖರ್ ತನ್ನನ್ನು “ಶೇಖರ್ ರತ್ನ ವೇಲಾ” ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಸಂಸ್ಥೆ ಹೇಳಿದೆ. ಈ ತಿಂಗಳ ಆರಂಭದಲ್ಲಿ ಅಕ್ರಮ ಹಣ ವರ್ಗಾವಣೆ ವಿರೋಧಿ ಕಾಯ್ದೆಯಡಿಯಲ್ಲಿ (PMLA) ವಿಶೇಷ ನ್ಯಾಯಾಲಯದ ಮುಂದೆ ಏಜೆನ್ಸಿಯು ಆರೋಪಪಟ್ಟಿ ಸಲ್ಲಿಸಿದೆ. ಜಾರಿ ನಿರ್ದೇಶನಾಲಯವು ಚಂದ್ರಶೇಖರ್, ಅವರ ಪತ್ನಿ ಲೀನಾ ಮರಿಯಾ ಪಾಲ್, ಇತರ ಆರು ಮಂದಿಯನ್ನು ಹೆಸರಿಸಿದೆ. “ಅವನು ( ಚಂದ್ರಶೇಖರ್) ಡಿಸೆಂಬರ್ (2020) ಮತ್ತು ಜನವರಿ, 2021 ರಲ್ಲಿ ಹಲವು ವಾರಗಳಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದನು. ಆದರೆ ಅವಳು ಅವನಿಗೆ ಪ್ರತಿಕ್ರಿಯಿಸಲಿಲ್ಲ. ಅನೇಕ ಕರೆಗಳು ಬಂದಿದ್ದವು, ಆದರೆ ಯಾರ ಕರೆ ಎಂಬುದು ಗೊತ್ತಿಲ್ಲದ ಕಾರಣ ಆಕೆ ಕರೆ ಸ್ವೀಕರಿಸಿರಲಿಲ್ಲ ಎಂದು ಏಜೆನ್ಸಿ ಹೇಳಿದೆ.
“ಅವಳ ಮೇಕಪ್ ಕಲಾವಿದ ಶಾನ್ ಮುತ್ತತ್ತಿಲ್ ಅವರನ್ನು ನಂತರ ಸರ್ಕಾರಿ ಕಚೇರಿಯಿಂದ ಸಂಪರ್ಕಿಸಲಾಯಿತು. ಜಾಕ್ವೆಲಿನ್ ಫರ್ನಾಂಡಿಸ್ ಅವರು ಶೇಖರ್ ಅವರನ್ನು ಸಂಪರ್ಕಿಸಬೇಕು ಮತ್ತು ಅವರು ಪ್ರಮುಖ ವ್ಯಕ್ತಿಯಾಗಿರುವುದರಿಂದ ಮತ್ತು ಅವರೊಂದಿಗೆ ಮಾತನಾಡಲು ಬಯಸುತ್ತಾರೆ ಎಂದು ತಿಳಿಸಲಾಯಿತು” ಎಂದು ಏಜೆನ್ಸಿ ಹೇಳಿದೆ. ಹಲವಾರು ಹಿಂದಿ ಚಲನಚಿತ್ರಗಳಲ್ಲಿ ನಟಿಸಿರುವ ಶ್ರೀಲಂಕಾದ ಪ್ರಜೆ ಜಾಕ್ವೆಲಿನ್ ನಂತರ ಆಪಾದಿತ ಆರೋಪಿಯನ್ನು ಸಂಪರ್ಕಿಸಿದರು. “ಅವರು ತಮ್ಮ ಕುಟುಂಬದೊಂದಿಗೆ ಸನ್ ಟಿವಿಯ ಮಾಲೀಕ ಎಂದು ಜಾಕ್ವೆಲಿನ್ ಗೆ ಪರಿಚಯಿಸಿಕೊಂಡರು” ” ಚಂದ್ರಶೇಖರ್ ಅವರು ಜಯಲಲಿತಾ ಅವರ ರಾಜಕೀಯ ಕುಟುಂಬದವರು ಮತ್ತು ಅವರು ಚೆನ್ನೈನಿಂದ ಬಂದವರು ಎಂದು ಪರಿಚಯಿಸಿಕೊಂಡಿದ್ದರು.
ನಾನು ನಿಮ್ಮ ದೊಡ್ಡ ಅಭಿಮಾನಿ, ದಕ್ಷಿಣದ ಚಲನಚಿತ್ರೋದ್ಯಮದಲ್ಲಿ ಸಿನಿಮಾ ಮಾಡಬೇಕು. ಸನ್ ಟಿವಿಯಾಗಿ ನಾನು ಅನೇಕ ಯೋಜನೆಗಳನ್ನು ಹೊಂದಿದ್ದೇನೆ ಎಂದು ಚಂದ್ರಶೇಖರ್ ಜಾಕ್ವೆಲಿನ್ ಗೆ ಹೇಳಿದ್ದರು. ಆಕೆಯ ಮೇಕಪ್ ಆರ್ಟಿಸ್ಟ್‌ಗೆ “ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯಿಂದ ಕರೆ ಬಂದಿದೆ, ಆ ಮೂಲಕ ಶೇಖರ್ ಅಲಿಯಾಸ್ ಸುಕೇಶ್ ಚಂದ್ರಶೇಖರ್ ಸರ್ಕಾರದಲ್ಲಿ ಅತ್ಯಂತ ಪ್ರಮುಖ ವ್ಯಕ್ತಿಯಾಗಿರುವುದರಿಂದ ಅವರನ್ನು ಸಂಪರ್ಕಿಸಲು ಕೇಳಲಾಯಿತು” ಎಂದು ಸಂಸ್ಥೆ ಹೇಳಿದೆ.
“ಈ ಕರೆಯನ್ನು ಗೃಹ ಸಚಿವ ಅಮಿತ್ ಶಾ ಅವರ ಕಚೇರಿಯಿಂದ ಮಾಡಲಾಗಿದೆ. ತನಿಖೆಯ ಪ್ರಕಾರ ವಂಚನೆಯ ಕರೆ ಮತ್ತುಇದನ್ನು ಆರೋಪಿ ಸುಕೇಶ್ ಚಂದ್ರಶೇಖರ್ ಅವರು ಮಾಡಿದ್ದಾರೆ” ಎಂದು ಸಂಸ್ಥೆ ಹೇಳಿದೆ. ತರುವಾಯ ಆಕೆಯ ಮೇಕಪ್ ಕಲಾವಿದ ಚಂದ್ರಶೇಖರ್ ಅವರ ಮೊಬೈಲ್ ಸಂಖ್ಯೆಯನ್ನು ಜಾಕ್ವೆಲಿನ್ ಅವರೊಂದಿಗೆ ಹಂಚಿಕೊಂಡರು ನಂತರ ಅವರು ಸಂಪರ್ಕಕ್ಕೆ ಬಂದರು ಎಂದು ಇಡಿ ಹೇಳಿದೆ.
ಆಗಸ್ಟ್ ಮತ್ತು ಅಕ್ಟೋಬರ್‌ನಲ್ಲಿ ದಾಖಲಾದ ತನ್ನ ಹೇಳಿಕೆಯಲ್ಲಿ ಗುಚ್ಚಿ ಮತ್ತು ಶನೆಲ್‌ನಿಂದ ಮೂರು ಡಿಸೈನರ್ ಬ್ಯಾಗ್‌ಗಳು, ಎರಡು ಗುಚ್ಚಿ ಜಿಮ್ ವೇರ್ ಔಟ್‌ಫಿಟ್‌ಗಳು, ಒಂದು ಜೋಡಿ ಲೂಯಿ ವಿಟಾನ್ ಬೂಟುಗಳು, ಎರಡು ಜೋಡಿ ವಜ್ರದ ಕಿವಿಯೋಲೆಗಳು ಬಹು-ಬಣ್ಣದ ಕಲ್ಲುಗಳ ಬ್ರೇಸ್ಲೆಟ್ ಮತ್ತು ಎರಡು ಹರ್ಮ್ಸ್ ಬ್ರೇಸ್ಲೆಟ್ ಸ್ವೀಕರಿಸಿದ್ದೇನೆ ಎಂದು ನಟಿ ಇಡಿಗೆ ತಿಳಿಸಿದ್ದಾರೆ. ಅದೇ ರೀತಿ ಸ್ವೀಕರಿಸಿದ ಮಿನಿ ಕೂಪರ್ ಕಾರನ್ನು ನಟಿ ಫೆಡರಲ್ ಆಂಟಿ ಮನಿ ಲಾಂಡರಿಂಗ್ ಏಜೆನ್ಸಿಗೆ ಹಿಂತಿರುಗಿಸಿದ್ದಾರೆ.
ಫೆಬ್ರವರಿಯಿಂದ ಈ ವರ್ಷ ಆಗಸ್ಟ್ 7 ರಂದು (ದೆಹಲಿ ಪೊಲೀಸರು) ಬಂಧಿಸುವವರೆಗೂ ಚಂದ್ರಶೇಖರ್ ಜಾಕ್ವೆಲಿನ್ ಅವರೊಂದಿಗೆ “ನಿಯಮಿತ ಸಂಪರ್ಕ”ದಲ್ಲಿದ್ದರು ಎಂದು ಸಂಸ್ಥೆ ತನ್ನ ತನಿಖೆಯಲ್ಲಿ ಕಂಡುಹಿಡಿದಿದೆ. ಈ ಪ್ರಕರಣದಲ್ಲಿ ಅಪರಾಧದ ಆದಾಯದ ಹಣದ ಎಲ್ಲಿಂದ ಬಂತು ಎಂದು ಇಡಿ ತನಿಖೆ ನಡೆಸುತ್ತಿದೆ.
ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರವರ್ತಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ವ್ಯಕ್ತಿಗಳು ಸೇರಿದಂತೆ ಕೆಲವು ಶ್ರೀಮಂತರನ್ನು ವಂಚಿಸಿದ ಆರೋಪದ ಮೇಲೆ ಚಂದ್ರಶೇಖರ್ ಮತ್ತು ಅವರ ಪತ್ನಿ ದೆಹಲಿ ಪೊಲೀಸರು ಮತ್ತು ಇಡಿ ತನಿಖೆ ನಡೆಸುತ್ತಿದೆ.
ಚಂದ್ರಶೇಖರ್ ಅವರು ಇಲ್ಲಿನ ರೋಹಿಣಿ ಜೈಲಿನಲ್ಲಿದ್ದಾಗ, ಫೋನ್ ವಂಚನೆ ತಂತ್ರಜ್ಞಾನವನ್ನು ಬಳಸಿಕೊಂಡು ಸುಲಿಗೆ ದಂಧೆಯನ್ನು ನಡೆಸುತ್ತಿದ್ದರು ಎಂದು ಏಜೆನ್ಸಿಗಳ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣದಲ್ಲಿ ದಂಪತಿ ಮತ್ತು ಇಬ್ಬರು ಸಹ ಆರೋಪಿಗಳಾದ ಪ್ರದೀಪ್ ರಮ್ನಾನಿ ಮತ್ತು ದೀಪಕ್ ರಾಮನಾನಿ ಮತ್ತು ಇತ್ತೀಚೆಗೆ ಚಂದ್ರಶೇಖರ್ ಅವರ ಸಹವರ್ತಿ ಪಿಂಕಿ ಇರಾನಿ ಅವರನ್ನು ಇಡಿ ಬಂಧಿಸಿತ್ತು.
ಆಗಸ್ಟ್‌ನಲ್ಲಿ ಏಜೆನ್ಸಿಯು ಚಂದ್ರಶೇಖರ್ ಅವರ ಕೆಲವು ಸಂಸ್ಥೆಗಳ ಮೇಲೆ ದಾಳಿ ನಡೆಸಿತು. ಚೆನ್ನೈನಲ್ಲಿ ಸಮುದ್ರಕ್ಕೆ ಎದುರಾಗಿರುವ ಬಂಗಲೆ, ₹ 82.5 ಲಕ್ಷ ನಗದು ಮತ್ತು ಹನ್ನೆರಡು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಂಡಿದೆ.
ಚಂದ್ರಶೇಖರ್ “ನುರಿತ ಕಳ್ಳ” ಎಂದು ಹೇಳಿಕೆಯಲ್ಲಿ ಹೇಳಿಕೊಂಡಿದ್ದು, ಸುಮಾರು ₹ 200 ಕೋಟಿ ಮೊತ್ತದ ಕ್ರಿಮಿನಲ್ ಪಿತೂರಿ, ವಂಚನೆ ಮತ್ತು ಸುಲಿಗೆ ಪ್ರಕರಣದಲ್ಲಿ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಂದ್ರಶೇಖರ್ ಈ ವಂಚನೆಯ ಮಾಸ್ಟರ್‌ಮೈಂಡ್. ಅವರು 17 ನೇ ವಯಸ್ಸಿನಿಂದಲೂ ಅಪರಾಧ ಜಗತ್ತಿನ ಭಾಗವಾಗಿದ್ದಾರೆ. ಅವರ ವಿರುದ್ಧ ಅನೇಕ ಎಫ್‌ಐಆರ್‌ಗಳಿವೆ ಎಂದು ಇಡಿ ಹೇಳಿದೆ.
ಜೈಲಿನಲ್ಲಿದ್ದರೂ ಚಂದ್ರಶೇಖರ್ ಜನರನ್ನು “ಕಳ್ಳತನ ಮಾಡುವುದನ್ನು ನಿಲ್ಲಿಸಲಿಲ್ಲ” ಎಂದು ಅದು ಹೇಳಿದೆ. “ಅವನು (ಜೈಲಿನಲ್ಲಿ ಅಕ್ರಮವಾಗಿ ಸಂಪಾದಿಸಿದ ಸೆಲ್‌ಫೋನ್ ಬಳಸಿ) ತಂತ್ರಜ್ಞಾನದ ಸಹಾಯದಿಂದ ಜನರನ್ನು ವಂಚಿಸಲು ವಂಚನೆಯ ಕರೆಗಳನ್ನು ಮಾಡಿದನು. ಏಕೆಂದರೆ ಕರೆ ಮಾಡಿದ ಫೋನ್ ಸಂಖ್ಯೆಯ ಹಿರಿಯ ಸರ್ಕಾರಿ ಅಧಿಕಾರಿಗಳಿಗೆ ಸೇರಿದ್ದು ಎಂದು ಡಿಸ್ಪ್ಲೇ ಆಗುತ್ತಿತ್ತು . “ಈ ವ್ಯಕ್ತಿಗಳೊಂದಿಗೆ (ಜೈಲಿನಿಂದ) ಮಾತನಾಡುವಾಗ, ಆತ ಜನರಿಗೆ ಸಹಾಯ ಮಾಡುವ ಸರ್ಕಾರಿ ಅಧಿಕಾರಿ ಎಂದು ಹೇಳಿಕೊಂಡಿದ್ದ” ಎಂದು ಇಡಿ ಹೇಳಿದೆ.
ಇದನ್ನೂ ಓದಿ: Jacqueline Fernandez: ವಂಚನೆ ಪ್ರಕರಣದ ಕಿಂಗ್ ಪಿನ್ ಜತೆ ಕಿಸ್ಸಿಂಗ್; ನಟಿ ಜಾಕ್ವೆಲಿನ್ಗೆ ನೋಟಿಸ್
Published On - 11:52 am, Tue, 14 December 21