ಲೆಕ್ಕಕ್ಕಿಲ್ಲ ಎಂದುಕೊಳ್ಳಬೇಡಿ, 2007 ಚುನಾವಣೆ ನೆನಪಿಸಿಕೊಳ್ಳಿ; ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳಿಗೆ ಮಾಯಾವತಿ ಎಚ್ಚರಿಕೆ

ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ದಲಿತ ವಿರೋಧಿಯಾಗಿವೆ. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಕೆಟ್ಟ ಸ್ವರೂಪದ ಆಡಳಿತ ಕೊಡುತ್ತದೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸರಿಯಾಗಿ ಇರುವುದಿಲ್ಲ ಎಂದು ಹೇಳಿದರು.

ಲೆಕ್ಕಕ್ಕಿಲ್ಲ ಎಂದುಕೊಳ್ಳಬೇಡಿ, 2007 ಚುನಾವಣೆ ನೆನಪಿಸಿಕೊಳ್ಳಿ; ಪ್ರತಿಸ್ಪರ್ಧಿ ರಾಜಕೀಯ ಪಕ್ಷಗಳಿಗೆ ಮಾಯಾವತಿ ಎಚ್ಚರಿಕೆ
ಮಾಯಾವತಿ
TV9kannada Web Team

| Edited By: Lakshmi Hegde

Feb 03, 2022 | 6:17 PM

ಅಂತೂ-ಇಂತು ಬಹುಜನ ಸಮಾಜ ಪಾರ್ಟಿ(Bahujan Samaj Party) ಮುಖ್ಯಸ್ಥೆ ಮಾಯಾವತಿ (Mayawati ) ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಉತ್ತರ ಪ್ರದೇಶದ ಚುನಾವಣೆ (Uttar Pradesh Assembly Election) ಏಳು ಹಂತದಲ್ಲಿ ನಡೆಯಲಿದ್ದು, ಕೆಲವೇ ದಿನಗಳ ಮತದಾನ ಪ್ರಾರಂಭವಾಗಲಿದೆ. ಉತ್ತರಪ್ರದೇಶದಲ್ಲಿ ಬಿಜೆಪಿ-ಸಮಾಜವಾದಿ ಪಕ್ಷಗಳು ಈಗಾಗಲೇ ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿವೆ. ಆದರೆ ಬಹುಜನ ಸಮಾಜವಾದಿ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಇನ್ನೂ ಸಕ್ರಿಯವಾಗಿ ಕಣಕ್ಕೆ ಇಳಿದಿರಲಿಲ್ಲ. ಸ್ವಲ್ಪ ತಡವಾಗಿಯಾದರೂ ಅವರೀಗ ಆಗ್ರಾದಿಂದ ತಮ್ಮ ಪ್ರಚಾರ ಶುರು ಮಾಡಿದ್ದಾರೆ. ಪ್ರತಿಸ್ಪರ್ಧಿ ಪಕ್ಷಗಳಿಗಿಂತ ತುಂಬ ತಡವಾಗಿ ತಾವು ಚುನಾವಣಾ ಕಣಕ್ಕೆ ಇಳಿದರೂ, ನಾನೇನೂ ಸುಮ್ಮನೆ ಕುಳಿತಿರಲಿಲ್ಲ ಎಂದು ಒತ್ತಿ ಹೇಳಿದ್ದಾರೆ. ಅಂದರೆ ಉತ್ತರ ಪ್ರದೇಶದಲ್ಲಿ ಮಾಯಾವತಿಯವರ ಬಹುಜನ ಸಮಾಜವಾದಿ ಪಾರ್ಟಿ ಸಕ್ರಿಯವಾಗಿಲ್ಲ ಎಂದು ಮತದಾರರಿಗೆ ಹೇಳುತ್ತಿದ್ದ ಪ್ರತಿಪಕ್ಷಗಳಿಗೆ ಸೂಕ್ಷ್ಮವಾಗಿಯೇ ತಿರುಗೇಟು ಕೊಟ್ಟಿದ್ದಾರೆ.  

ಬಹುಜನ ಸಮಾಜ ಪಾರ್ಟಿ ಈ ಚುನಾವಣೆಯಲ್ಲಿ ಲೆಕ್ಕಕ್ಕಿಲ್ಲ ಎಂದು ಯಾರೂ ಭಾವಿಸುವುದು ಬೇಡ. ಬಿಎಸ್​ಪಿ ಶಕ್ತಿ ಕುಂದಿಲ್ಲ. ತುಂಬ ನಿರ್ಲಕ್ಷಿಸಬೇಡಿ. ಮುಂದಿನ ಚುನಾವಣೆಯಲ್ಲಿ 2007ರ ಚುನಾವಣೆಯಲ್ಲಿ ನಡೆದ ಅಚ್ಚರಿಯೇ  ಮತ್ತೊಮ್ಮೆ ಎದುರಾಗಬಹುದು. ಆಗಲೂ ಸಹ ಎಲ್ಲ ರಾಜಕೀಯ ಪಕ್ಷಗಳೂ ಮತ್ತು ಮಾಧ್ಯಮಗಳೂ ಕೂಡ ನಮ್ಮನ್ನು ನಿರ್ಲಕ್ಷಿಸಿದ್ದವು. ಬಳಿಕ ನಾವೇ ಅಧಿಕಾರ ಹಿಡಿದೆವು ಎಂದು ಪ್ರತಿಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ತಮ್ಮ ಪಕ್ಷ ಗೆದ್ದು, ತಾವೇ ಸಿಎಂ ಆಗುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದಿದ್ದಾರೆ.

ಉತ್ತರಪ್ರದೇಶದಲ್ಲಿ ಚುನಾವಣೆ ರಾಜಕೀಯ ಇಷ್ಟು ಗರಿಗೆದರಿದ್ದರೂ, ತಾವು ಇಲ್ಲಿಗೆ ಬಾರದೆ ಇರುವುದಕ್ಕೆ ಕಾರಣ ತಿಳಿಸಿದ ಮಾಯಾವತಿ, ಕೊವಿಡ್ 19 ಜಾಸ್ತಿ ಇದ್ದುದರಿಂದ ದೆಹಲಿಯಿಂದ ಲಖನೌಗೆ ಬರಲು ಸಾಧ್ಯವಾಗಿರಲಿಲ್ಲ. ಕೊರೊನಾ ಕಡಿಮೆಯಾಗುತ್ತಿದ್ದಂತೆ ಇಲ್ಲಿಗೆ ಬಂದೆ. ಆದರೆ ಕಳೆದ ವರ್ಷ ನಾನು ಲಖನೌದಲ್ಲೇ ಇದ್ದೆ. ನಾನು ನನ್ನ ಪಕ್ಷವನ್ನು ಪುನರ್ನಿಮಿಸಿದ್ದೇನೆ. ಮತಗಟ್ಟೆ ಮಟ್ಟದ ಸಮಿತಿಗಳು, ಕಾರ್ಯಕರ್ತರನ್ನು ಒಗ್ಗೂಡಿಸಿದ್ದೇನೆ ಎಂದು ಹೇಳಿದರು.

ಪ್ರತಿಸ್ಪರ್ಧಿ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ದಲಿತ ವಿರೋಧಿಯಾಗಿವೆ. ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಕೆಟ್ಟ ಸ್ವರೂಪದ ಆಡಳಿತ ಕೊಡುತ್ತದೆ. ಅಷ್ಟೇ ಅಲ್ಲ ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸರಿಯಾಗಿ ಇರುವುದಿಲ್ಲ ಎಂದು ಹೇಳಿದರು. ಬಿಜೆಪಿ  ಪ್ರತಿವಲಯವನ್ನೂ ಖಾಸಗಿಕರಣ ಮಾಡುತ್ತಿದೆ. ಮೀಸಲಾತಿಗಳನ್ನು ತೆಗೆದುಹಾಕುತ್ತಿದೆ. ಕಾಂಗ್ರೆಸ್ ಪಕ್ಷ ಡಾ. ಅಂಬೇಡ್ಕರ್​ ಅವರ ಕೊಡುಗೆಗಳನ್ನು ಎಂದಿಗೂ ಅರ್ಥ ಮಾಡಿಕೊಂಡಿಲ್ಲ. ಕಾಂಗ್ರೆಸ್​ನವರು ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಅವರಿಗೆ ಭಾರತರತ್ನವನ್ನೂ ನೀಡಲಿಲ್ಲ. 1990ರಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡು, ಕಾಂಗ್ರೆಸ್ ಸೋಷಿಯಲಿಸ್ಟ್​  ಪಾರ್ಟಿ ಅಧಿಕಾರಕ್ಕೆ ಬಂದಾಗಲೇ ಅಂಬೇಡ್ಕರ್​ ಅವರಿಗೆ ಭಾರತ ರತ್ನ ಸಿಕ್ಕಿತು ಎಂದು ಮಾಯಾವತಿ ಹೇಳಿದ್ದಾರೆ.

ಉತ್ತರಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಫೆ.10ರಿಂದ ಒಟ್ಟು ಏಳುಹಂತದಲ್ಲಿ ಮತದಾನ ನಡೆಯಲಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಗೋರಖ್​ಪುರದಿಂದಲೇ ಸ್ಪರ್ಧಿಸಲಿದ್ದು, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್​ ಕರ್ಹಾಲ್​ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ. ಅವರು ಇದೇ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಉತ್ತರ ಪ್ರದೇಶದಲ್ಲಿ ಮನೆಮನೆ ಪ್ರಚಾರ ಶುರು ಮಾಡಿಕೊಂಡಿವೆ. ಅಲ್ಲಿ ಆ ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಇದನ್ನೂ ಓದಿ: ಬಿಗ್​ ಬಾಸ್​ ದಿವ್ಯಾ ಸುರೇಶ್​ ನಟನೆಯ ‘ರೌಡಿ ಬೇಬಿ’ ಚಿತ್ರ ಫೆ.11ಕ್ಕೆ ರಿಲೀಸ್​; ಸದ್ದು ಮಾಡ್ತಿದೆ ಟ್ರೇಲರ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada