ಗೋಮೂತ್ರ ಕುಡಿದು ಸಿದ್ಧವಾಗಿರಿ: ಸಂಸತ್ ಭಾಷಣಕ್ಕೆ ಮುನ್ನ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಟ್ವೀಟ್
. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ನಿರುದ್ಯೋಗದಿಂದ ವಿದೇಶಾಂಗ ನೀತಿಯವರೆಗಿನ ಸಮಸ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ ಒಂದು ದಿನದ ನಂತರ ಮೊಯಿತ್ರಾ ತಮ್ಮ ಭಾಷಣದ ಸುಳಿವು ನೀಡಿ ಟ್ವೀಟ್ ಮಾಡಿದ್ದಾರೆ
ದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ (Mahua Moitra) ಇಂದು ಲೋಕಸಭೆಯಲ್ಲಿ ತಮ್ಮ ಭಾಷಣದಲ್ಲಿ ಏನು ಹೇಳಲಿದ್ದಾರೆ ಎಂಬ ಸುಳಿವು ನೀಡಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ನಿರುದ್ಯೋಗದಿಂದ ವಿದೇಶಾಂಗ ನೀತಿಯವರೆಗಿನ ಸಮಸ್ಯೆಗಳ ಬಗ್ಗೆ ಸರ್ಕಾರದ ವಿರುದ್ಧ ಟೀಕಾಪ್ರಹಾರ ಮಾಡಿದ ಒಂದು ದಿನದ ನಂತರ ಮೊಯಿತ್ರಾ ತಮ್ಮ ಭಾಷಣದ ಸುಳಿವು ನೀಡಿ ಟ್ವೀಟ್ ಮಾಡಿದ್ದಾರೆ. ಇಂದು ಸಂಜೆ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣದ ಚರ್ಚೆಯಲ್ಲಿ ಮಾತನಾಡುತ್ತಿದ್ದೇನೆ. ಟೀಕಿಸುವ ತಂಡವನ್ನು ಸಿದ್ಧಗೊಳಿಸಲು ಮತ್ತು ಆದೇಶದ ಕಾಲ್ಪನಿಕ ಅಂಶಗಳನ್ನು ಓದಲು ಬಿಜೆಪಿಗೆ ಸುಳಿವು ನೀಡಲು ಬಯಸುತ್ತೇನೆ. ಗೋಮೂತ್ರವನ್ನು ಕುಡಿಯಿರಿ ಎಂದು ಮೊಯಿತ್ರಾ ಟ್ವೀಟ್ ಮಾಡಿದ್ದಾರೆ. ಮೊಯಿತ್ರಾ ಅವರು ಬಿಜೆಪಿಯ ಸಾಮಾಜಿಕ ಮಾಧ್ಯಮ ಟ್ರೋಲ್ ಗಳಿಗೆ, ವಿಪಕ್ಷಗಳ ಐಟಿ ಸೆಲ್ ಟೀಕೆಗಳಿಗೆ ತಕ್ಕ ಉತ್ತರ ಕೊಡುತ್ತಿರುತ್ತಾರೆ. ಪಶ್ಚಿಮ ಬಂಗಾಳದ ಕೃಷ್ಣನಗರದ ಸಂಸದೆ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೇಲೆ ಮತ್ತಷ್ಟು ವಾಗ್ದಾಳಿ ನಡೆಸುವುದಾಗಿ ಸೂಚಿಸಿದರು.
Am speaking this evening in Lok Sabha on President’s Address.
Just wanted to give early heads up to @BJP to get heckler team ready & read up on imaginary points of order. Drink some gaumutra shots too.
— Mahua Moitra (@MahuaMoitra) February 3, 2022
ವಿದೇಶಾಂಗ ನೀತಿಯ ಮೇಲೆ ಮೋದಿ ಸರ್ಕಾರದ ವಿರುದ್ಧ ಗಾಂಧಿಯವರು ಬುಧವಾರ ತೀವ್ರ ವಾಗ್ದಾಳಿ ನಡೆಸಿದ್ದರು. ಬಿಜೆಪಿ ಸರ್ಕಾರ “ಚೀನಾ ಮತ್ತು ಪಾಕಿಸ್ತಾನವನ್ನು ಒಟ್ಟಿಗೆ ತಂದಿದ್ದಾರೆ” ಎಂದು ಆರೋಪಿಸಿದರು, ಇದಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಹುಲ್ ಗೆ ಇತಿಹಾಸದ ಪಾಠ ಎಂದು ಟ್ವೀಟ್ ಮಾಡಿದ್ದರು.
ಮೊಯಿತ್ರಾ ಅವರ ಸಹೋದ್ಯೋಗಿ ಮತ್ತು ಸಂಸದ ಸೌಗತ ರಾಯ್ ಬುಧವಾರ ತೃಣಮೂಲ ಕಾಂಗ್ರೆಸ್ ನೊಂದಿಗೆ ಕೇಂದ್ರ ಯಾವ ರೀತಿ ವರ್ತಿಸುತ್ತಿದೆ ಎಂಬುದಕ್ಕೆ ಉದಾಹರಣೆ ನೀಡಿ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರಗಳೊಂದಿಗೆ ಭಿನ್ನಾಭಿಪ್ರಾಯದಿಂದ ಕೆಲಸ ಮಾಡುವ ರಾಜ್ಯಪಾಲರನ್ನು ಕೇಂದ್ರವು ನೇಮಿಸುತ್ತಿದೆ ಎಂದು ರಾಯ್ ಆರೋಪಿಸಿದರು.
“ಕೇಂದ್ರವು ರಾಜ್ಯಪಾಲರನ್ನು ಏಕೆ ಹೇರಿದೆ? ತಮಿಳುನಾಡಿನಲ್ಲಿ ಸಚಿವರಿಗೆ ಅಗೌರವ ತೋರುವ ರಾಜ್ಯಪಾಲರ ವಿರುದ್ಧ ದೂರುಗಳಿವೆ. ಮಹಾರಾಷ್ಟ್ರದಲ್ಲಿ, ಮಹಾರಾಷ್ಟ್ರ ಸರ್ಕಾರಕ್ಕೆ ತೊಂದರೆ ನೀಡುವ ರಾಜ್ಯಪಾಲರಿದ್ದಾರೆ. ಪ್ರತಿದಿನ ಟ್ವೀಟ್ ಮಾಡುವ ರಾಜ್ಯಪಾಲರು ನಮಗಿದ್ದಾರೆ ಎಂದು ರಾಯ್ ಲೋಕಸಭೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಆರೋಪಗಳಿಗೆ ಪ್ರತಿಕ್ರಿಯಿಸಿ ಇತಿಹಾಸದ ಪಾಠ ಹೇಳಿದ ವಿದೇಶಾಂಗ ಸಚಿವ ಎಸ್ ಜೈಶಂಕರ್
Published On - 6:02 pm, Thu, 3 February 22