AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾನತೆಯ ಪ್ರತಿಮೆ ಸ್ಥಾಪನೆ: ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಲಿರುವ ಅಮೋಘ ಕ್ಷಣ! ಏನಿದರ ಆಳ-ಅಗಲ?

Sri Ramanujacharya Statue of Equality: ಸ್ವಾಮಿ ರಾಮಾನುಜಾಚಾರ್ಯರು ಭಾರತದಲ್ಲಿ ಭಕ್ತಿ ಚಳವಳಿಗೆ ಸುವರ್ಣ ಶಿಖರವನ್ನು ನಿರ್ಮಿಸಿದರು. ಅವರ ಕೃಪೆಯಿಂದ ಸಮಾಜದ ಪ್ರತಿಯೊಬ್ಬರೂ ನಾರಾಯಣ ಮಂತ್ರವನ್ನು ಜಪಿಸುವಂತಾಗಿದೆ. ಈ ಗುರುವಿನಿಂದಾಗಿ ಎಲ್ಲರಿಗೂ ಮುಕ್ತಿ ಅಷ್ಟಾಕ್ಷರಿ ಮಂತ್ರ ‘ಓಂ ನಮೋ ನಾರಾಯಣಾಯ’ ಲಭಿಸಿತು. ಎಲ್ಲರ ಶ್ರೇಯೋಭಿವೃದ್ಧಿಗಾಗಿ ರಾಮಾನುಜಾಚಾರ್ಯರು ವೇದಗಳ ಸಾರವನ್ನು 9 ಗ್ರಂಥಗಳ ರೂಪದಲ್ಲಿ ಪ್ರಸ್ತುತಪಡಿಸಿದರು.

ಸಮಾನತೆಯ ಪ್ರತಿಮೆ ಸ್ಥಾಪನೆ: ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡಲಿರುವ ಅಮೋಘ ಕ್ಷಣ! ಏನಿದರ ಆಳ-ಅಗಲ?
ಸಮಾನತೆಯ ಪ್ರತಿಮೆ
S Chandramohan
| Updated By: ಸಾಧು ಶ್ರೀನಾಥ್​|

Updated on:Feb 03, 2022 | 2:51 PM

Share

ವಿಶ್ವ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲಿರುವ ಅಮೋಘ ಘಟನೆಗೆ ಸಾಕ್ಷಿಯಾಗಲು ಭಾರತ ಸಜ್ಜಾಗಿದೆ. ” ಸಮಾನತೆ ಪ್ರತಿಮೆ ” (Statue of Equality) ಎಂದು ಕರೆಯಲ್ಪಡುವ 11 ನೇ ಶತಮಾನದ ಸುಧಾರಕ ಮತ್ತು ವೈಷ್ಣವ ಸಂತ ರಾಮಾನುಜಾಚಾರ್ಯರ (Sri Ramanujacharya) 216 ಅಡಿ ಎತ್ತರದ ಪ್ರತಿಮೆಯ ಮೇಲೆ ಅಂತಿಮ ಸ್ಪರ್ಶದ ಕೆಲಸಗಳು ಮುಗಿದಿವೆ. ತೆಲಂಗಾಣದ ಶಂಶಾಬಾದ್‌ನ ಮುಚ್ಚಿಂತಲ್​ದಲ್ಲಿ (Muchinthal) ವಿಸ್ತಾರವಾದ 45 ಎಕರೆ ಪ್ರದೇಶದಲ್ಲಿ ನೆಲೆಗೊಂಡಿರುವ ಈ ಪ್ರತಿಮೆ ಮತ್ತು ದೇವಾಲಯದ ಸಂಕೀರ್ಣವು ತ್ರಿದಂಡಿ ಶ್ರೀ ಚಿನ್ನ ಜೀಯರ್ ಸ್ವಾಮೀಜಿ (Sri Chinna Jeeyar Swamy) ಅವರ ಕಲ್ಪನೆಯಾಗಿದೆ. ಇದು ನೆಲದಿಂದ ತುದಿಯವರೆಗೆ ವಿಶ್ವದ ಎರಡನೇ ಅತಿ ಎತ್ತರದ, ಕುಳಿತಿರುವ ಭಂಗಿಯ ಪ್ರತಿಮೆಯಾಗಿದೆ. ಇದು 216 ಅಡಿಗಳಷ್ಟು ಎತ್ತರದಲ್ಲಿದೆ.

ಶ್ರೀ ರಾಮಾನುಜಾಚಾರ್ಯರ ಸಹಸ್ರಮಾನೋತ್ಸವದ (Ramanujacharya Sahasrabdi) ಅಂಗವಾಗಿ, 1003 ನೇ ಜನ್ಮದಿನದ ಸ್ಮರಣಾರ್ಥವಾಗಿ, 14 ದಿನಗಳ ಕಾರ್ಯಕ್ರಮವು ಫೆಬ್ರವರಿ 2 ರಿಂದ ಪ್ರಾರಂಭಗೊಂಡಿದೆ. ಯಜ್ಞ, ಹವನ ಅರ್ಪಣೆಗಳು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು. ಸಾಮೂಹಿಕ ಮಂತ್ರ ಪಠಣ ನಡೆಯುತ್ತಿದೆ. ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮತ್ತು ತ್ರಿದಂಡಿ ಚಿನ್ನ ಜೀಯರ್ ಸ್ವಾಮೀಜಿ ಅವರು ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಮಾನತೆಯ ಪ್ರತಿಮೆಯನ್ನು ಫೆಬ್ರವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅನಾವರಣಗೊಳಿಸುವರು. ಫೆಬ್ರವರಿ 13 ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು 120 ಕೆಜಿ ತೂಕದ ರಾಮಾನುಜಾಚಾರ್ಯರ ಚಿನ್ನದ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.

ಸಮಾನತೆಯ ಪ್ರತಿಮೆ ತೆಲಂಗಾಣದ ಶಂಶಾಬಾದ್‌ನಲ್ಲಿದೆ. 45 ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಒಟ್ಟು ನಾಲ್ಕು ಬೃಹತ್ ಪ್ರವೇಶ ದ್ವಾರಗಳು ಹಾಗೂ ಸುಮಾರು 3000 ವಾಹನಗಳ ಪಾರ್ಕಿಂಗ್ ಸ್ಥಳವಿದೆ. ಪ್ರವೇಶ ದ್ವಾರದ ವಿನ್ಯಾಸವನ್ನು ತೆಲಂಗಾಣದ ವಿಶಿಷ್ಟವಾದ ‘ಕಾಗಡಿಯಾ’ ಶೈಲಿಯಲ್ಲಿ ಮಾಡಲಾಗಿದೆ. 18 ಅಡಿ ಮುಖ್ಯದ್ವಾರದಲ್ಲಿ ಹನುಮಾನ್ ಮತ್ತು ಗರುಡನ ಎತ್ತರದ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಸಂದರ್ಶಕರ ಅನುಕೂಲಕ್ಕಾಗಿ ಪ್ರವೇಶ ಟಿಕೆಟ್ ಕೌಂಟರ್ ಬಳಿಯೇ ಲಗೇಜ್‌, ಚೆಕ್-ಇನ್ ಕೌಂಟರ್ ಅನ್ನು ಸ್ಥಾಪಿಸಲಾಗಿದೆ.

216 ಅಡಿ ಎತ್ತರದ “ಶ್ರೀ ರಾಮಾನುಜಾಚಾರ್ಯ ಸ್ವಾಮಿ”ಯ ಪ್ರತಿಮೆ ಯೋಜನೆಯ ಪ್ರಮುಖ ಅಂಶಗಳೆಂದರೇ, 216 ಅಡಿ ಎತ್ತರದ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ತಾಮ್ರದಿಂದ ಮಾಡಿದ 42 ಅಡಿ ಎತ್ತರದ ಸಂಗೀತ ಕಾರಂಜಿಯನ್ನು ನಿರ್ಮಿಸಲಾಗಿದೆ. ಬಲಿಪೀಠದಲ್ಲಿ ಶ್ರೀ ರಾಮಾನುಜಾಚಾರ್ಯರ 54 ಇಂಚು ಎತ್ತರದ ಚಿನ್ನದ ದೇವರ ಪ್ರತಿಮೆ ಇದೆ. 24 ಕ್ಯಾರೆಟ್ ನ 120 ಕೆ.ಜಿ. ಚಿನ್ನ ಬಳಸಿ ದೇವರ ಪ್ರತಿಮೆ ನಿರ್ಮಾಣ ಮಾಡಲಾಗಿದೆ. 108 ದಿವ್ಯ ದೇಶಂ ಹಾಗೂ ಸ್ಪೂರ್ತಿ ಕೇಂದ್ರ ನಿರ್ಮಾಣ ಮಾಡಲಾಗಿದೆ. ಸಂಕೀರ್ಣದಲ್ಲಿ ಆನ್ ಲೈನ್ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದೆ. ಓಮ್ನಿಮ್ಯಾಕ್ಸ್ ಥಿಯೇಟರ್ ನಿರ್ಮಿಸಲಾಗಿದೆ.

ಪ್ರತಿಮೆಯು 108 ‘ದಿವ್ಯ ದೇಶಂ’ ಮಾದರಿ ದೇವಾಲಯಗಳಿಂದ ಸುತ್ತುವರೆದಿರುತ್ತದೆ. ಭದ್ರಿನಾಥ, ಮುಕ್ತಿನಾಥ, ಅಯೋಧ್ಯೆ, ಬೃಂದಾವನ, ಕುಂಭಕೋಣಂ, ತಿರುಮಲ, ಶ್ರೀರಂಗಂ, ಕಂಚಿ ಮತ್ತು ಇತರ ದೇವಾಲಯ ಮಾದರಿಗಳಿಂದ ಸುತ್ತುವರಿದಿದೆ. ಅಸ್ತಿತ್ವದಲ್ಲಿರುವ ದೇವಾಲಯಗಳಲ್ಲಿ ದೇವತೆಗಳ ಮತ್ತು ರಚನೆಗಳ ವಿಗ್ರಹಗಳನ್ನು ಆಕಾರದಲ್ಲಿ ನಿರ್ಮಿಸಲಾಗಿದೆ.

ಪ್ರತಿಯೊಂದು ಸಂಖ್ಯೆಗೂ ತನ್ನದೇ ಆದ ಪ್ರಾಮುಖ್ಯತೆ ಮತ್ತು ಮೌಲ್ಯವಿದೆ. ಅದೇ ರೀತಿಯಲ್ಲಿ ಸಂಖ್ಯೆ 9 ಅವಿನಾಶಿಯಾಗಿದೆ. ಭಗವತ್ ಗೀತೆಯ 9 ನೇ ಅಧ್ಯಾಯವು ದೇವರು ಮತ್ತು ಮಾನವರ ನಡುವಿನ ಸಂಬಂಧವನ್ನು 9 ವಿಭಿನ್ನ ಪದಗಳಲ್ಲಿ ಹೇಳುತ್ತದೆ ಎನ್ನುತ್ತಾರೆ ಶ್ರೀತ್ರಿದಂಡಿ ಚಿನ್ನ ಜೀಯರ್ ಸ್ವಾಮೀಜಿ.

ಸಮಾನತೆಯ ಪ್ರತಿಮೆ ನಿರ್ಮಿಸಿದ್ದು ಏಕೆ? ರಾಮಾನುಜಾಚಾರ್ಯರ ಕಾಲದಲ್ಲಿ ದೇವಸ್ಥಾನಗಳು ಸಮಾಜದ ಒಂದು ವರ್ಗದ, ಒಂದು ನಿರ್ದಿಷ್ಟ ಜಾತಿಯ ನಿಯಂತ್ರಣದಲ್ಲಿ ಆಡಳಿತದ ಕೇಂದ್ರಗಳಾಗಿದ್ದವು. ರಾಮಾನುಜಾಚಾರ್ಯರು, ಉಳಿದ ಜಾತಿಗಳಿಗೆ ಸೇರಿದ ವ್ಯಕ್ತಿಗಳಿಗೆ 50% ಕಾರ್ಯಗಳನ್ನು ಹಂಚುವ ಮೂಲಕ ಒಳಗೊಳ್ಳುವಿಕೆಯನ್ನು ಪ್ರೋತ್ಸಾಹಿಸಿದರು. ಆದುದರಿಂದಲೇ, ಅಂದಿನಿಂದ ದೇವಾಲಯಗಳಿಗೆ ಪ್ರವೇಶಿಸಲು ಜಾತಿಯ ಆಧಾರದ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಅವರು ಎಲ್ಲಾ ಜಾತಿಗಳ ನಡುವೆ ಸಮಾನತೆ ಇರುವಂತೆ ನೋಡಿಕೊಂಡರು. ರಾಮಾನುಜಾಚಾರ್ಯರು ಜಾತಿಗೆ ಪ್ರಾಮುಖ್ಯತೆ ಕೊಡದೇ, ಮಂತ್ರವನ್ನು ಎಲ್ಲರೊಂದಿಗೆ ಹಂಚಿಕೊಂಡರು. ಅವರು ಬಯಸಿದ ಏಕೈಕ ಅರ್ಹತೆ ಅವರಲ್ಲಿ ಶ್ರದ್ಧೆ ಮತ್ತು ಕಲಿಯಲು ಉತ್ಸುಕರಾಗಿರುವುದು ಮಾತ್ರ. ಎಲ್ಲಾ ಜಾತಿಗಳ ಜನರು ದೇವಾಲಯಗಳ ನಿರ್ವಹಣೆಯಲ್ಲಿ ಪಾತ್ರವನ್ನು ವಹಿಸಬೇಕೆಂದು ರಾಮಾನುಜಾಚಾರ್ಯರು ಹೇಳಿದರು ಎಂದು ವಿವರಿಸುತ್ತಾರೆ ಶ್ರೀತ್ರಿದಂಡಿ ಚಿನ್ನ ಜೀಯರ್ ಸ್ವಾಮೀಜಿ.

ರಾಮಾನುಜಾಚಾರ್ಯರು ಯಾರು? ವೈಷ್ಣವ ಧರ್ಮದ ಜ್ಯೋತಿ ಹೊತ್ತ ಶ್ರೀ ರಾಮಾನುಜಾಚಾರ್ಯರು ಭಕ್ತಿ ಚಳವಳಿಯ ಬೋಧಕರಾಗಿದ್ದರು. ಜಗತ್ತು ಭ್ರಮೆ ಎಂಬ ಮಾಯಾವಾದದ ಪರಿಕಲ್ಪನೆಯನ್ನು ದೂರಮಾಡಿ ಅನೇಕ ತಪ್ಪು ಕಲ್ಪನೆಗಳನ್ನೂ ನಿವಾರಿಸಿದರು. 1017 ರಲ್ಲಿ ಶ್ರೀಪೆರಂಬದೂರಿನಲ್ಲಿ ಜನಿಸಿದ ರಾಮಾನುಜಾಚಾರ್ಯರು ಭಾರತದಾದ್ಯಂತ ಪ್ರಯಾಣಿಸಿದರು. ಎಲ್ಲಾ ವರ್ಗಗಳ ಜೀವನ ವಿಧಾನವನ್ನು ಅರ್ಥ ಮಾಡಿಕೊಂಡಿದ್ದರು. ಅದೇ ಸಮಯದಲ್ಲಿ, ವೈಯಕ್ತಿಕ ಅಗತ್ಯಗಳನ್ನು ಕೇಂದ್ರೀಕರಿಸಿದರು. ಸಾವಿರಾರು ವರ್ಷಗಳ ಹಿಂದೆಯೇ ಅಸ್ಪೃಶ್ಯತೆಯ ವಿರುದ್ಧದ ಆಧ್ಯಾತ್ಮಿಕ ಆಂದೋಲನಕ್ಕೆ ಭಗವಂತ ಮಾನವರೂಪದಲ್ಲಿ ಇದ್ದಾನೆ ಎಂದು ಪ್ರೇರೇಪಿಸಿದ ಕ್ರಾಂತಿಕಾರಿ ವ್ಯಕ್ತಿ.

ಸ್ವಾಮಿ ರಾಮಾನುಜಾಚಾರ್ಯರು ಭಾರತದಲ್ಲಿ ಭಕ್ತಿ ಚಳವಳಿಗೆ ಸುವರ್ಣ ಶಿಖರವನ್ನು ನಿರ್ಮಿಸಿದರು. ಅವರ ಕೃಪೆಯಿಂದ ಸಮಾಜದ ಪ್ರತಿಯೊಬ್ಬರೂ ನಾರಾಯಣ ಮಂತ್ರವನ್ನು ಜಪಿಸುವಂತಾಗಿದೆ. ಈ ಗುರುವಿನಿಂದಾಗಿ ಎಲ್ಲರಿಗೂ ಮುಕ್ತಿ ಅಷ್ಟಾಕ್ಷರಿ ಮಂತ್ರ ‘ಓಂ ನಮೋ ನಾರಾಯಣಾಯ’ ಲಭಿಸಿತು. ಎಲ್ಲರ ಶ್ರೇಯೋಭಿವೃದ್ಧಿಗಾಗಿ ರಾಮಾನುಜಾಚಾರ್ಯರು ವೇದಗಳ ಸಾರವನ್ನು 9 ಗ್ರಂಥಗಳ ರೂಪದಲ್ಲಿ ಪ್ರಸ್ತುತಪಡಿಸಿದರು. ಅವರ ಸ್ವಂತ ಹೃದಯದ ಪರಿಶುದ್ಧತೆಯು, ಅವರ ಮಾರ್ಗದರ್ಶಕರು, ಆಡಳಿತಗಾರರು, ಅಧಿಕಾರಿಗಳು, ಗಣ್ಯರು ಮತ್ತು ಸಾಮಾನ್ಯ ವ್ಯಕ್ತಿಗಳು ಭಕ್ತಿ, ದೈವಿಕ ಪ್ರೀತಿಯ ಹಾದಿಯನ್ನು ತುಳಿಯಲು ಮನವೊಲಿಸಲು ಅನುವು ಮಾಡಿಕೊಟ್ಟಿತು.

STATUE OF EQUALITY | ಹೈದ್ರಾಬಾದ್​​ನಲ್ಲಿ ಶ್ರೀ ರಾಮಾನುಜಾಚಾರ್ಯರ ಪ್ರತಿಮೆ ಅನಾವರಣ

Published On - 2:07 pm, Thu, 3 February 22

ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಈ ದಿನದಂದು ಗುಟ್ಕಾ, ಸಿಗರೇಟ್ ಸಿಗಲ್ಲ: ಎಲ್ಲವೂ ಬಂದ್​ ಬಂದ್
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಬಿ ಸರೋಜಾ ದೇವಿ ಅವರ ಯಾವ ಸಿನಿಮಾ ಸಿಎಂಗೆ ಇಷ್ಟ?
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ಸರೋಜಾ ದೇವಿಯವರನ್ನು ನಮ್ಮೂರ ಮಗಳು ಎಂದು ಕರೆದ ಶಿವಕುಮಾರ್
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ನಟಿ ಬಿ. ಸರೋಜಾದೇವಿ ಅಂತ್ಯಕ್ರಿಯೆ: ಮಣ್ಣಲ್ಲಿ ಮಣ್ಣಾದ ‘ಅಭಿನಯ ಸರಸ್ವತಿ’
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ಪರಸ್ಪರ ಸಮ್ಮತಿಯಿಂದ ಡಿವೋರ್ಸ್ ಪಡೆದುಕೊಳ್ಳಲು ಮುಂದಾಗಿರುವ ಪತಿ-ಪತ್ನಿ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ರೈತರು ಸ್ವಯಂಪ್ರೇರಿತರಾಗಿ ಮುಂದಾದರೆ ಮಾತ್ರ ಜಮೀನು ಖರೀದಿ: ಸಿಎಂ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸುರ್ಜೇವಾಲಾ ಕರೆದು ಮಾತಾಡಿದರೆ ಅದರಲ್ಲಿ ತಪ್ಪೇನಿಲ್ಲ: ಜಾರಕಿಹೊಳಿ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಸರೋಜಾದೇವಿ ಎಲ್ಲರೊಂದಿಗೆ ಪ್ರೀತಿಯಿಂದ ಮಾತಾಡುತ್ತಿದ್ದರು: ಸಿದ್ದರಾಮಯ್ಯ
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
ಹಾಲ್​ನಲ್ಲಿ ಪತಿಯೊಂದಿಗೆ ಸರೋಜಾ ದೇವಿ ಮತ್ತು ತಂದೆ-ತಾಯಿಯವರ ಫೋಟೋ!
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್
W,W,W: ಟೆಸ್ಟ್​ನಲ್ಲಿ ಹ್ಯಾಟ್ರಿಕ್... ಹೊಸ ಇತಿಹಾಸ ಬರೆದ ಬೋಲ್ಯಾಂಡ್