ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್​ ಬಿಜೆಪಿ ಸೇರ್ಪಡೆ; ಸಮಾಜವಾದಿ ಪಕ್ಷಕ್ಕೆ ಇದು ಬಹುದೊಡ್ಡ ಹಿನ್ನಡೆ !

Aparna Yadav: ಅಪರ್ಣಾ ಯಾದವ್​ ಬಿಜೆಪಿ ಸೇರುವ ಬಗ್ಗೆ ಹಲವು ದಿನಗಳಿಂದಲೂ ಮಾತು ಕೇಳಿಬರುತ್ತಿತ್ತು. ಆದರೆ ಯಾವುದೇ ವಿಷಯವೂ ದೃಢಪಟ್ಟಿರಲಿಲ್ಲ.ಇನ್ನು ಕಳೆದ ವಾರ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಮೂರು ಸಚಿವರು ಸೇರಿ ಹಲವು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮುಲಾಯಂ ಸಿಂಗ್ ಯಾದವ್ ಸೊಸೆ ಅಪರ್ಣಾ ಯಾದವ್​ ಬಿಜೆಪಿ ಸೇರ್ಪಡೆ; ಸಮಾಜವಾದಿ ಪಕ್ಷಕ್ಕೆ ಇದು ಬಹುದೊಡ್ಡ ಹಿನ್ನಡೆ !
ಅಪರ್ಣಾ ಯಾದವ್​
TV9kannada Web Team

| Edited By: Lakshmi Hegde

Jan 19, 2022 | 11:10 AM

ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಾಂ ಸಿಂಗ್​ ಯಾದವ್​ ಸೊಸೆ ಅಪರ್ಣಾ ಯಾದವ್ (Aparna Yadav)​ ಇಂದು ಬಿಜೆಪಿ ಸೇರ್ಪಡೆಯಾದರು. ಇಂದು ಉತ್ತರಪ್ರದೇಶದ ಉಪಮುಖ್ಯಮಂತ್ರಿ ಕೇಶವ್​ ಪ್ರಸಾದ್ ಮೌರ್ಯ ಮತ್ತು ಬಿಜೆಪಿ ಉತ್ತರಪ್ರದೇಶ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್​ ಸಿಂಗ್​ ನೇತೃತ್ವದಲ್ಲಿ ಅಪರ್ಣಾ ಬಿಜೆಪಿಗೆ ಸೇರಿದ್ದಾರೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಹಾಗೇ, ಸಮಾಜವಾದಿ ಪಕ್ಷಕ್ಕೆ ಬಹುದೊಡ್ಡ ಹಿನ್ನಡೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. ಅಪರ್ಣಾ ಯಾದವ್​ ಅವರು  ಮುಲಾಯಾಂ ಸಿಂಗ್​ ಕಿರಿಯ ಪುತ್ರ ಪ್ರತೀಕ್​ ಯಾದವ್​ ಪತ್ನಿ. ಇವರು 2017ರ ವಿಧಾನಸಭೆ ಚುನಾವಣೆಯಲ್ಲಿ ಲಖನೌದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಆಗ ಬಿಜೆಪಿಯ ಬಹುಗುಣ ಜೋಶಿ ವಿರುದ್ಧ ಸೋತಿದ್ದರು. ಇವರ ಪತಿ ಪ್ರತೀಕ್​ ಯಾದವ್​ ರಾಜಕೀಯದಿಂದ ದೂರವುಳಿದಿದ್ದಾರೆ. 

ಅಪರ್ಣಾ ಯಾದವ್​ ಬಿಜೆಪಿ ಸೇರುವ ಬಗ್ಗೆ ಹಲವು ದಿನಗಳಿಂದಲೂ ಮಾತು ಕೇಳಿಬರುತ್ತಿತ್ತು. ಆದರೆ ಯಾವುದೇ ವಿಷಯವೂ ದೃಢಪಟ್ಟಿರಲಿಲ್ಲ.ಇನ್ನು ಕಳೆದ ವಾರ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಮೂರು ಸಚಿವರು ಸೇರಿ ಹಲವು ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಇಬ್ಬರು ಶಾಸಕರು ಈಗಾಗಲೇ ಎಸ್​ಪಿಯಿಂದ ಬಿಜೆಪಿಗೆ ಬಂದಿದ್ದಾರೆ. ಈ ಮಧ್ಯೆ ಹರ್ಯಾಣ ಬಿಜೆಪಿ ಉಸ್ತುವಾರಿ ಅರುಣ್​ ಯಾದವ್​ ನಿನ್ನೆ ಟ್ವೀಟ್ ಮಾಡಿ, ಮುಲಾಯಂ ಸಿಂಗ್ ಯಾದವ್​ ಅವರ ಕಿರಿಯ ಪುತ್ರ ಪ್ರತೀಕ್​ ಯಾದವ್ ಪತ್ನಿ ಅಪರ್ಣಾ ಯಾದವ್​ ಬುಧವಾರ ಬಿಜೆಪಿ ಸೇರಲಿದ್ದಾರೆ. ಈ ವೇಳೆ ಯೋಗಿ ಆದಿತ್ಯನಾಥ್​ ಕೂಡ ಇರುವರು ಎಂದು ತಿಳಿಸಿದ್ದಾರೆ.

ಸಾಲುಸಾಲು ಬಿಜೆಪಿ ಶಾಸಕರು ಪಕ್ಷ ಬಿಟ್ಟಿದ್ದರಿಂದ ಉಂಟಾಗಿರುವ ಹಾನಿಯನ್ನು ಸರಿಪಡಿಸಿಕೊಳ್ಳಲು ಬಿಜೆಪಿಗೆ ಇದೊಂದು ಸದಾವಕಾಶ. ಹಿಂದುಳಿದ ವರ್ಗಗಳ ನಾಯಕರಾಗಿದ್ದ ಸ್ವಾಮಿ ಪ್ರಸಾದ್​ ಮೌರ್ಯ ಬಿಜೆಪಿ ಸೇರುತ್ತಿದ್ದಂತೆ, ಅವರ ಹಿಂದೆ ಹಲವರು ಹೋಗಿದ್ದರು. ಇದು ಬಿಜೆಪಿ ಪಾಲಿಗೂ ನುಂಗಲಾರದ ತುತ್ತು. ಅವರು ಬಿಜೆಪಿ ಬಿಡುತ್ತಿದ್ದಂತೆ,  ಇತರ ಹಿಂದುಳಿದ ವರ್ಗಕ್ಕೆ ಸೇರಿದವರ ಮತ ಗಳಿಸಲು ಬಿಜೆಪಿ ಇನ್ನಿಲ್ಲದಂತೆ ಪ್ರಯತ್ನ ಮಾಡುವ ಸ್ಥಿತಿ ಬಂದಿದೆ. ಇನ್ನು ಅಪರ್ಣಾ ಯಾದವ್​ ಸಮಾಜವಾದಿ ಪಕ್ಷ ಬಿಟ್ಟಿದ್ದು ಆ ಪಕ್ಷಕ್ಕೆ ಹಿನ್ನೆಡೆಯೂ ಹೌದು. ಫೆ.10ರಿಂದ ಒಟ್ಟು ಏಳುಹಂತದಲ್ಲಿ ಉತ್ತರಪ್ರದೇಶ ಚುನಾವಣೆ ನಡೆಯಲಿದ್ದು, ಮಾರ್ಚ್​ 10ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ: ದೇವನಹಳ್ಳಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೂದಲಳತೆ ಅಂತರದಲ್ಲಿ ತಪ್ಪಿದ ಭಾರಿ‌ ಅನಾಹುತ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada