ಉತ್ತರ ಪ್ರದೇಶ ಚುನಾವಣೆ: ಟಿಎಂಸಿ ಕಣದಲ್ಲಿಲ್ಲ, ಅಖಿಲೇಶ್ ಜೊತೆ ವರ್ಚುವಲ್ ಸುದ್ದಿಗೋಷ್ಠಿ ನಡೆಸಲಿದ್ದಾರೆ ಮಮತಾ
Uttar Pradesh Assembly election 2022 ಲಖನೌ ಮತ್ತು ವಾರಣಾಸಿಯಲ್ಲಿ ನಡೆಯಲಿರುವ ವರ್ಚುವಲ್ ಪತ್ರಿಕಾಗೋಷ್ಠಿಗಾಗಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲು ಫೆಬ್ರವರಿ 8 ರಂದು ಮಮತಾ ಬ್ಯಾನರ್ಜಿ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ.
ಲಖನೌ: ತೃಣಮೂಲ ಕಾಂಗ್ರೆಸ್ ಮತ್ತು ಅದರ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamata Banerjee) ಅವರು ಮುಂಬರುವ ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ(Uttar Pradesh Assembly election) ಸ್ಪರ್ಧಿಸಲು ಉತ್ಸುಕರಾಗಿಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಕಿರಣ್ಮೋಯ್ ನಂದಾ ಹೇಳಿದ್ದಾರೆ. ಬಂಗಾಳದ ಮಾಜಿ ಸಚಿವ ಮತ್ತು ಸಮಾಜವಾದಿ ಪಕ್ಷದ ಉಪಾಧ್ಯಕ್ಷರಾಗಿರುವ ನಂದಾ, ಲಖನೌ ಮತ್ತು ವಾರಣಾಸಿಯಲ್ಲಿ ನಡೆಯಲಿರುವ ವರ್ಚುವಲ್ ಪತ್ರಿಕಾಗೋಷ್ಠಿಗಾಗಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಲು ಫೆಬ್ರವರಿ 8 ರಂದು ಬ್ಯಾನರ್ಜಿ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಹೇಳಿದರು. “ಟಿಎಂಸಿ ಮತ್ತು ಮಮತಾ ಬ್ಯಾನರ್ಜಿ ಉತ್ತರ ಪ್ರದೇಶದಲ್ಲಿ ಸ್ಪರ್ಧಿಸಲು ಬಯಸುವುದಿಲ್ಲ. ಎಲ್ಲಾ ಸ್ಥಾನಗಳನ್ನು ಅಖಿಲೇಶ್ ಯಾದವ್‌ಗೆ ನೀಡಲಾಗುವುದು ಎಂದು ನಂದಾ ಹೇಳಿರುವುದಾಗಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. 2021 ರ ಚುನಾವಣೆಗೆ ಮುನ್ನ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ಗೆ ಪ್ರಚಾರ ಮಾಡಲು ಯಾದವ್ ಅವರು ಎಸ್‌ಪಿಯ ರಾಜ್ಯಸಭಾ ಸಂಸದೆ ಮತ್ತು ಹಿರಿಯ ನಟಿ ಜಯಾ ಬಚ್ಚನ್ ಅವರನ್ನು ಪಕ್ಷದ ರಾಯಭಾರಿಯಾಗಿ ಬಂಗಾಳಕ್ಕೆ ಕಳುಹಿಸಿದ್ದರು. ಬಂಗಾಳದ ಆಚೆಗೆ ತನ್ನ ನೆಲೆಯನ್ನು ವಿಸ್ತರಿಸುವ ಪ್ರಯತ್ನದಲ್ಲಿ, ತೃಣಮೂಲ ಕಾಂಗ್ರೆಸ್ ಗೋವಾದಲ್ಲಿ ಬಿರುಸಿನ ಪ್ರಚಾರ ಮಾಡುತ್ತಿದೆ.
Mamata Banerjee will be visiting Uttar Pradesh on Feb 8 to meet SP chief Akhilesh Yadav for a virtual press conference to be held in Lucknow&Varanasi. TMC & Mamata Banerjee don’t want to contest in UP. All seats will be given to Akhilesh Yadav: Kiranmoy Nanda, SP Vice-President pic.twitter.com/xemhJXBfPs
— ANI (@ANI) January 18, 2022
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಯಶಸ್ಸಿನ ನಂತರ, ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷಕ್ಕೆ ಟಿಎಂಸಿ ತನ್ನ ಬೆಂಬಲವನ್ನು ಘೋಷಿಸಿದೆ. ಟಿಎಂಸಿ ವರಿಷ್ಠೆ ಫೆಬ್ರವರಿ 8 ರಂದು ಲಖನೌದಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ವರ್ಚುವಲ್ ಸಭೆಯನ್ನು ನಡೆಸಲಿದ್ದಾರೆ. ಅದೇ ದಿನ ಅವರು ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಆ ನಂತರ ಮಮತಾ ಬ್ಯಾನರ್ಜಿ ವಾರಣಾಸಿಯಲ್ಲಿ ಅಖಿಲೇಶ್ ಯಾದವ್ ಜೊತೆ ಸಭೆ ನಡೆಸಲಿದ್ದಾರೆ. ಈ ಮೂಲಕ ಉತ್ತರ ಪ್ರದೇಶ ಚುನಾವಣಾ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ ಎರಡು ಬಾರಿ ಹೋಗಲಿದ್ದಾರೆ. ಮಂಗಳವಾರ ಸಮಾಜವಾದಿ ಪಕ್ಷದ ಉಪಾಧ್ಯಕ್ಷ ಕಿರಣ್ಮೋಯ್ ನಂದಾ ಅವರು ಮಮತಾ ಬ್ಯಾನರ್ಜಿ ಅವರನ್ನು ಕಾಳಿಘಾಟ್‌ನಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾದರು. ಸಭೆಯ ನಂತರ ಕಿರಣ್ಮೋಯ್ ನಂದಾ ಅವರು, ಉತ್ತರ ಪ್ರದೇಶದಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ, ಆದರೆ ಎಸ್ಪಿಗೆ ಬೆಂಬಲ ನೀಡುವುದಾಗಿ ಟಿಎಂಸಿ ಸ್ಪಷ್ಟವಾಗಿ ಹೇಳಿದೆ ಎಂದಿದ್ದಾರೆ. ಇಡೀ ದೇಶದ ಕಣ್ಣು ಉತ್ತರ ಪ್ರದೇಶ ಚುನಾವಣೆಯ ಮೇಲಿದೆ ಎಂದು ಕಿರಣ್ಮೋಯ್ ನಂದ್ ಹೇಳಿದ್ದಾರೆ.
ಎಸ್‌ಪಿ ಮತ್ತು ತೃಣಮೂಲ ಕಾಂಗ್ರೆಸ್ ಒಟ್ಟಾಗಿ ಬಿಜೆಪಿಯನ್ನು ಸೋಲಿಸಲಿದೆ. ಟಿಎಂಸಿ ಯಾವುದೇ ಸ್ಥಾನಗಳನ್ನು ಕೇಳಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿಯನ್ನು ಬೆಂಬಲಿಸಲಿದ್ದಾರೆ. ಲಖನೌ ನಂತರ ಮಮತಾ ಬ್ಯಾನರ್ಜಿ ವಾರಣಾಸಿಗೆ ಹೋಗಲಿದ್ದಾರೆ ಮತ್ತು ಅಲ್ಲಿಯೂ ವರ್ಚುವಲ್ ಸಭೆ ನಡೆಸಲಿದ್ದಾರೆ ಎಂದು ಅವರು ಹೇಳಿದರು. ಆದರೂ ಅದರ ದಿನಾಂಕವನ್ನು ಇನ್ನೂ ನಿರ್ಧರಿಸಲಾಗಿಲ್ಲ. ಮಮತಾ ಬ್ಯಾನರ್ಜಿ ಅವರು ಬಂಗಾಳದ ನಾಯಕಿ ಮಾತ್ರವಲ್ಲ, ಇಡೀ ದೇಶದ ನಾಯಕಿ. ಉತ್ತರ ಪ್ರದೇಶ ಚುನಾವಣೆಯಲ್ಲಿ ಟಿಎಂಸಿ ಎಸ್‌ಪಿಗೆ ಬೆಂಬಲ ನೀಡಲಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.
ನಾವೆಲ್ಲರೂ ಒಟ್ಟಾಗಿ ಬಿಜೆಪಿಯನ್ನು ಸೋಲಿಸಬೇಕು ಎಂದು ಕಿರಣ್ಮೋಯ್ ನಂದಾ ಹೇಳಿದ್ದಾರೆ. ಇದಕ್ಕಾಗಿ ವರ್ಚುವಲ್ ಸಭೆ ನಡೆಸಲಾಗುವುದು. ಹಿಂದಿನ ದಿನ ಅಖಿಲೇಶ್ ಯಾದವ್ ಅವರು ಮಮತಾ ಬ್ಯಾನರ್ಜಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಉತ್ತರ ಪ್ರದೇಶದಲ್ಲಿ ಒಂದೇ ಒಂದು ಸಭೆಗೂ ಅವಕಾಶ ನೀಡುತ್ತಿಲ್ಲ. ವರ್ಚುವಲ್ ಸಭೆಗಳು ಮತ್ತು ಮನೆ ಬಾಗಿಲಿಗೆ ಪ್ರಚಾರಗಳ ಮೂಲಕ ಮಾತ್ರ ಭಾಷಣಗಳನ್ನು ನೀಡಲಾಗುವುದು. ಕೊರೊನಾ ಕಾರಣ ಚುನಾವಣಾ ಪ್ರಚಾರಕ್ಕೆ ಅವಕಾಶ ನೀಡುತ್ತಿಲ್ಲ.ಪ್ರಧಾನಿ ಮೋದಿಯವರ ಸಭೆಗಳಿಗೆ ಜನರು ಇಲ್ಲ, ಆದರೆ ಅಖಿಲೇಶ್ ಯಾದವ್ ಅವರ ಸಭೆಗಳಿಗೆ ಜನ ಸೇರುತ್ತಿದ್ದಾರೆ. ಹೀಗಾಗಿ ಪ್ರಚಾರ ಸ್ಥಗಿತಗೊಳಿಸಲಾಗುತ್ತಿದೆ ಎಂದು ನಂದಾ ಆರೋಪಿಸಿದ್ದಾರೆ.
Published On - 6:30 pm, Tue, 18 January 22