ಸ್ತಬ್ಧಚಿತ್ರಗಳ ಆಯ್ಕೆ, ನಿರಾಕರಣೆ ನಮ್ಮ ಕೆಲಸವಲ್ಲ, ಇಂಥ ಪತ್ರ ಬರೆಯಬೇಡಿ ; ಮಮತಾ ಬ್ಯಾನರ್ಜಿ, ಸ್ಟಾಲಿನ್​ ಪತ್ರಕ್ಕೆ ಕೇಂದ್ರದ ಖಡಕ್​ ಪ್ರಕಟಣೆ

ರಾಜ್ಯಗಳ ಪ್ರಾದೇಶಿಕ ಹೆಮ್ಮೆಯನ್ನು ಅವಮಾನಿಸುವ ಉದ್ದೇಶದಿಂದ ಮತ್ತು ಅಲ್ಲಿನ ಜನರಿಗೆ ಅವಮಾನ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಸ್ತಬ್ಧಚಿತ್ರಗಳನ್ನು ನಿರಾಕರಣೆ ಮಾಡಿದೆ ಎಂಬರ್ಥದಲ್ಲಿ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸ್ತಬ್ಧಚಿತ್ರಗಳ ಆಯ್ಕೆ, ನಿರಾಕರಣೆ ನಮ್ಮ ಕೆಲಸವಲ್ಲ, ಇಂಥ ಪತ್ರ ಬರೆಯಬೇಡಿ  ; ಮಮತಾ ಬ್ಯಾನರ್ಜಿ, ಸ್ಟಾಲಿನ್​ ಪತ್ರಕ್ಕೆ ಕೇಂದ್ರದ ಖಡಕ್​ ಪ್ರಕಟಣೆ
ಎಂ.ಕೆ.ಸ್ಟಾಲಿನ್ ಮತ್ತು ಮಮತಾ ಬ್ಯಾನರ್ಜಿ
Follow us
TV9 Web
| Updated By: Lakshmi Hegde

Updated on:Jan 18, 2022 | 10:56 AM

ಈ ವರ್ಷದ ಗಣರಾಜ್ಯೋತ್ಸವದಲ್ಲಿ ನಡೆಯುವ ಪರೇಡ್( Republic Day Parade)​ನಿಂದ ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ಮತ್ತು ಕೇರಳದ ಸ್ತಬ್ಧ ಚಿತ್ರಗಳನ್ನು (tableaux) ಹೊರಗಿಡಲಾಗಿದ್ದು, ಈ ವಿಚಾರದಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳು ಪ್ರತ್ಯೇಕವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹೀಗೆ ಪತ್ರ ಬರೆದ ಬೆನ್ನಲ್ಲೇ, ಕೇಂದ್ರ ಸರ್ಕಾರ ತಿರುಗಿ ಒಂದು ಖಡಕ್​ ಪ್ರಕಟಣೆ ಹೊರಡಿಸಿದೆ. ಗಣರಾಜ್ಯೋತ್ಸವದಲ್ಲಿ ಸ್ತಬ್ಧಚಿತ್ರಗಳನ್ನು ಹೊರಗಿಟ್ಟಿದ್ದು ಕೇಂದ್ರ ಸರ್ಕಾರ ಎಂಬುದು ರಾಜ್ಯ ಸರ್ಕಾರಗಳ ತಪ್ಪು ಕಲ್ಪನೆ. ಕೇಂದ್ರ ಸರ್ಕಾರ ತಮ್ಮ ಪ್ರಾದೇಶಿಕ ಹೆಮ್ಮೆಗೆ ಅವಮಾನ ಮಾಡಿವೆ ಎಂಬರ್ಥದಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳು ಪತ್ರಬರೆದಿದ್ದು ಖೇದನೀಯ ಎಂದು ತನ್ನ ಪ್ರಕಟಣೆಯಲ್ಲಿ ಹೇಳಿದೆ.

ತಮ್ಮ ರಾಜ್ಯಗಳ ಸ್ತಬ್ಧ ಚಿತ್ರಗಳನ್ನು ಗಣರಾಜ್ಯೋತ್ಸವದ ಪರೇಡ್​ನಿಂದ ಹೊರಗಿಡಲಾಗಿದೆ ಎಂದು ಕೇರಳ, ತಮಿಳುನಾಡು ಮತ್ತು ಪಶ್ಚಿಮಬಂಗಾಳ ರಾಜ್ಯಗಳು ಹೇಳಿವೆ. ಹಾಗಂತ ಈ ಬಾರಿಯ ಪರೇಡ್​ನಲ್ಲಿ ಭಾಗವಹಿಸುವ ಸ್ತಬ್ಧ ಚಿತ್ರಗಳ ಪಟ್ಟಿಯನ್ನು ಇನ್ನೂ ಕೇಂದ್ರ ರಕ್ಷಣಾ ಸಚಿವಾಲಯ ಬಿಡುಗಡೆ ಮಾಡಿಲ್ಲ. ಹಾಗಿದ್ದಾಗ್ಯೂ ಸಹ ಇದು ಮೂರು ರಾಜ್ಯಗಳು ತಮ್ಮ ಸ್ತಬ್ಧಚಿತ್ರ ತಿರಸ್ಕರಿಸಿದ್ದಾಗಿ ಹೇಳಿಕೊಂಡಿವೆ. ಅದರಲ್ಲೂ ಸ್ಟಾಲಿನ್​ ಮತ್ತುಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಪತ್ರ ಬರೆದು, ನಮ್ಮ ರಾಜ್ಯದ ಜನರಿಗೆ ಇದರಿಂದ ತೀವ್ರ ನೋವಾಗಿದೆ ಎಂದು ಹೇಳಿಕೊಂಡಿದ್ದರು.

ಇದೀಗ ಕೇಂದ್ರ ಸರ್ಕಾರ ಒಂದು ಪ್ರಕಟಣೆ ಹೊರಡಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಇರುವ ಸಣ್ಣಪುಟ್ಟ ಭಿನ್ನಾಭಿಪ್ರಾಯದ ಫಲಿತಾಂಶವಾಗಿ ಹೀಗೆ ಆಯಾ ರಾಜ್ಯಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಲಾಗುತ್ತದೆ ಎಂಬಂತೆ ಬಿಂಬಿಸಿ ರಾಜ್ಯ ಸರ್ಕಾರಗಳು ಪತ್ರ ಬರೆಯುತ್ತಿವೆ. ಆದರೆ ಇದು ಖಂಡಿತ ಸರಿಯಲ್ಲ. ಇಡೀ ದೇಶದ ಏಕತೆಗೆ ಹೊಡೆತ ಕೊಡುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.  ಈ ರಾಜ್ಯಗಳ ಪ್ರಾದೇಶಿಕ ಹೆಮ್ಮೆಯನ್ನು ಅವಮಾನಿಸುವ ಉದ್ದೇಶದಿಂದ ಮತ್ತು ಅಲ್ಲಿನ ಜನರಿಗೆ ಅವಮಾನ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಸ್ತಬ್ಧಚಿತ್ರಗಳನ್ನು ನಿರಾಕರಣೆ ಮಾಡಿದೆ ಎಂಬರ್ಥದಲ್ಲಿ ಮುಖ್ಯಮಂತ್ರಿಗಳು ಪತ್ರ ಬರೆದಿದ್ದಾರೆ. ಇಂಥದ್ದೊಂದು ಪತ್ರ ಸಾಮಾನ್ಯವಾಗಿ ಪ್ರತಿವರ್ಷ ಬರುತ್ತದೆ. ಮುಖ್ಯಮಂತ್ರಿಗಳು ಸಕಾರಾತ್ಮಕ ಅಜೆಂಡಾ ಹೊಂದಿಲ್ಲ. ಬದಲಿಗೆ ತಪ್ಪಾದ ಮಾಹಿತಿಯಿಂದ ಪ್ರತಿವರ್ಷವೂ ಮಾಡಿದ ತಪ್ಪನ್ನೇ ಮಾಡುತ್ತಿವೆ ಎಂದು  ಕೇಂದ್ರ ಸರ್ಕಾರ ಹೇಳಿದೆ.

ಪ್ರತಿಬಾರಿಯೂ ಸ್ತಬ್ಧಚಿತ್ರಗಳ ಪ್ರಸ್ತಾವನೆಗೆ ಸಮಯದ ಗಡುವು ಕೊಟ್ಟಿಡಲಾಗುತ್ತದೆ. ಹೀಗೆ ಸಮಯ ಮಿತಿಯಿಂದಾಗಿ ಕೆಲವೇ ಪ್ರಸ್ತಾವನೆಗಳನ್ನು ಮಾತ್ರ ಸ್ವೀಕರಿಸಬಹುದಾಗಿದೆ. ಈ ಬಾರಿ ಕೊಟ್ಟ ಗಡುವಲ್ಲಿ ಒಟ್ಟು 56 ಪ್ರಪೋಸಲ್​​ಗಳನ್ನು ಸ್ವೀಕಾರ ಮಾಡಲಾಗಿತ್ತು. ಅದರಲ್ಲಿ 21ನ್ನು ಶಾರ್ಟ್​ಲಿಸ್ಟ್​ ಮಾಡಲಾಗಿದೆ. ಅದಕ್ಕಿಂತ ಕೊನೆಗೆ ಬಂದವುಗಳನ್ನು ನಿರಕಾರಿಸುವುದು ಅನಿವಾರ್ಯ ಎಂದೂ ಕೇಂದ್ರ ಸರ್ಕಾರ ಹೇಳಿದೆ. ಅಷ್ಟಕ್ಕೂ ಹೇಳಬೇಕೆಂದರೆ, ಗಣರಾಜ್ಯೋತ್ಸವದ ಪರೇಡ್​​ಗಾಗಿ ಸ್ತಬ್ಧಚಿತ್ರಗಳ ಆಯ್ಕೆ ಮಾಡುವುದು ಮೋದಿ ಸರ್ಕಾರದ ಕೆಲಸವಲ್ಲ. ವಿವಿಧ ರಾಜ್ಯ ಸರ್ಕಾರಗಳು, ಕೇಂದ್ರ ಇಲಾಖೆಗಳು ಕಳಿಸುವ ಸ್ತಬ್ಧಚಿತ್ರಗಳನ್ನು ಆಯ್ಕೆ, ನಿರಾಕರಣೆ ಮಾಡಲು ಒಂದು ತಜ್ಞರ ಸಮಿತಿ ಇರುತ್ತದೆ. ಅದರಲ್ಲಿ ಕಲೆ, ಶಿಲ್ಪಕಲೆ, ಸಂಸ್ಕೃತಿ, ಸಂಗೀತ, ವಾಸ್ತುಶಿಲ್ಪ, ನೃತ್ಯ ಕ್ಷೇತ್ರಗಳಲ್ಲಿ ನುರಿತವರು ಇರುತ್ತಾರೆ. ಪ್ರತಿ ಸ್ತಬ್ಧಚಿತ್ರದ ಥೀಮ್, ಪರಿಕಲ್ಪನೆ, ವಿನ್ಯಾಸವನ್ನಾಧರಿಸಿ ಈ ಸಮಿತಿಯೇ ಮೊದಲು ಶಿಫಾರಸ್ಸು ಮಾಡುತ್ತದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:  ಗಣರಾಜ್ಯೋತ್ಸವ ಪರೇಡ್​​ನಿಂದ ತಮಿಳುನಾಡಿನ ಸ್ತಬ್ಧಚಿತ್ರ ಹೊರಗೆ: ಮೋದಿ ಮಧ್ಯ ಪ್ರವೇಶ ಒತ್ತಾಯಿಸಿ ಸ್ಟಾಲಿನ್ ಪತ್ರ

Published On - 9:55 am, Tue, 18 January 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್