IRCTC: ಭಾರತೀಯ ರೈಲ್ವೆಯಿಂದ 385 ರೈಲುಗಳು ರದ್ದು; ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಹೀಗೆ ಪರಿಶೀಲಿಸಿ

IRCTC: ಭಾರತೀಯ ರೈಲ್ವೆಯಿಂದ 385 ರೈಲುಗಳು ರದ್ದು; ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಹೀಗೆ ಪರಿಶೀಲಿಸಿ
ಭಾರತೀಯ ರೈಲ್ವೆ (ಪ್ರಾತಿನಿಧಿಕ ಚಿತ್ರ)

IRCTC ಈ ಪೈಕಿ ದೆಹಲಿ, ಮಹಾರಾಷ್ಟ್ರ, ಗುಜರಾತ್ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಂಜಾಬ್, ಅಸ್ಸಾಂ ಮತ್ತು ಬಿಹಾರ ನಡುವೆ ಕಾರ್ಯನಿರ್ವಹಿಸುವ ರೈಲುಗಳು ರದ್ದಾಗಿವೆ

TV9kannada Web Team

| Edited By: Rashmi Kallakatta

Jan 18, 2022 | 11:26 AM

ಭಾರತೀಯ ರೈಲ್ವೇಯು (Indian Railways) ಇಂದು (ಜನವರಿ 18) ರಂದು 385 ರೈಲುಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. 22 ರ ಮೂಲ ನಿಲ್ದಾಣವನ್ನು ಬದಲಾಯಿಸಿದೆ ಮತ್ತು ಕಾರ್ಯಾಚರಣಾ ಕಾರಣಗಳು ಮತ್ತು ಮಂಜಿನ ವಾತಾವರಣದಿಂದಾಗಿ 20 ಅನ್ನು ಅಲ್ಪಾವಧಿಗೆ ನಿಲ್ಲಿಸಲಾಗಿದೆ. ಈ ಪೈಕಿ ದೆಹಲಿ, ಮಹಾರಾಷ್ಟ್ರ, ಗುಜರಾತ್ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಂಜಾಬ್, ಅಸ್ಸಾಂ ಮತ್ತು ಬಿಹಾರ ನಡುವೆ ಕಾರ್ಯನಿರ್ವಹಿಸುವ ರೈಲುಗಳು ರದ್ದಾಗಿವೆ. ಇದಕ್ಕೂ ಮುನ್ನ ಜನವರಿ 15 ರಿಂದ ಜನವರಿ 22 ರವರೆಗೆ ಉತ್ತರ ಪ್ರದೇಶ, ಬಿಹಾರ ಮತ್ತು ಜಾರ್ಖಂಡ್ ಮೂಲಕ ಹಾದುಹೋಗುವ ವಿವಿಧ ರೈಲುಗಳನ್ನು ರೈಲ್ವೇ ರದ್ದುಗೊಳಿಸಿದೆ. ಲಖನೌ-ಆಲಂನಗರ ವಿಭಾಗದಲ್ಲಿ ಇಂಟರ್‌ಲಾಕ್ ಮಾಡುವ ಕಾರ್ಯ ನಡೆಯುತ್ತಿರುವುದರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಅದೇ ರೀತಿ ಛತ್ತೀಸ್‌ಗಢ ಮತ್ತು ಬಿಹಾರ ಮೂಲಕ ಹಾದುಹೋಗುವ 17 ಕ್ಕೂ ಹೆಚ್ಚು ಎಕ್ಸ್‌ಪ್ರೆಸ್ ರೈಲುಗಳನ್ನು ಸಹ ರದ್ದುಗೊಳಿಸಲಾಗಿದೆ. ರೈಲ್ವೆ ಅಧಿಕಾರಿಗಳು 5 ರೈಲುಗಳ ವೇಳಾಪಟ್ಟಿಯನ್ನು ಬದಲಾಯಿಸಿದ್ದಾರೆ ಮತ್ತು 4 ರೈಲುಗಳ ಮಾರ್ಗವನ್ನು ಬದಲಾಯಿಸಿದ್ದಾರೆ. ಆಗ್ನೇಯ ಮಧ್ಯ ರೈಲ್ವೆಯ ರಾಯ್‌ಪುರ-ಬಿಲಾಸ್‌ಪುರ ವಿಭಾಗದ ಖಾರ್ಸಿಯಾ-ರಾಬರ್ಟ್‌ಸನ್ ವಿಭಾಗದಲ್ಲಿ ನಾಲ್ಕನೇ ಮಾರ್ಗದ ಕಾಮಗಾರಿ ನಡೆಯುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕೆಲಸವು ರೈಲ್‌ಪುರ-ಬಿಲಾಸ್‌ಪುರ ವಿಭಾಗದಲ್ಲಿ ವಿವಿಧ ರೈಲುಗಳ ಕಾರ್ಯಾಚರಣೆಯ ಮೇಲೆ ಪರಿಣಾಮ ಬೀರಿದೆ.

ಪ್ರಯಾಣಿಕರು https://enquiry.indianrail.gov.in/mntes ಗೆ ಭೇಟಿ ನೀಡುವಂತೆ  ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಇದಲ್ಲದಿದ್ದರೆ ಈ ರೈಲುಗಳ ಆಗಮನ-ನಿರ್ಗಮನದ ವಿವರಗಳನ್ನು ಪಡೆಯಲು NTES ಅಪ್ಲಿಕೇಶನ್ ಬಳಸಬಹುದು.

ಭಾರತೀಯ ರೈಲ್ವೆ ಪ್ರಕಾರ ನೀವು IRCTC ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೆ, ನಿಮ್ಮ ರೈಲು ರದ್ದಾಗಿದ್ದರೆ ನೀವು ಇ-ಟಿಕೆಟ್ ಅನ್ನು ರದ್ದುಗೊಳಿಸುವ ಅಗತ್ಯವಿಲ್ಲ ಏಕೆಂದರೆ ಟಿಕೆಟ್ ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ . 3 ರಿಂದ 7 ದಿನಗಳಲ್ಲಿ ನಿಮ್ಮ ಟಿಕೆಟ್ ಹಣ ನಿಮ್ಮ ಬ್ಯಾಂಕ್‌ಗೆ ಪಾವತಿ ಆಗುತ್ತದೆ. ಆದರೆ ನೀವು PRS ಕೌಂಟರ್ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಿದ್ದರೆ, ನೀವು PRS ಕೌಂಟರ್‌ಗೆ ಭೇಟಿ ನೀಡಿ ಮತ್ತು ಸಂಬಂಧಿತ ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ಟಿಕೆಟ್ ಹಣವನ್ನು ವಾಪಸ್ ಪಡೆಯಬೇಕಾಗುತ್ತದೆ.

ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಪರಿಶೀಲಿಸುವುದು ಹೇಗೆ?

ಹಂತ 1: https://enquiry.indianrail.gov.in/mntes/ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ

ಹಂತ 2: ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ Exceptional Trains ಆಯ್ಕೆಮಾಡಿ ಮತ್ತು ರದ್ದುಗೊಳಿಸಲಾದ ರೈಲುಗಳ ಮೇಲೆ ಕ್ಲಿಕ್ ಮಾಡಿ

ಹಂತ 3: ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಸಂಪೂರ್ಣವಾಗಿ ಅಥವಾ ಭಾಗಶಃ ಆಯ್ಕೆಯನ್ನು ಆಯ್ಕೆಮಾಡಿ.

ಇದನ್ನೂ ಓದಿ:  ಸ್ಟಿರಾಯ್ಡ್ ಬಳಕೆ ಬೇಡ, ಕೆಮ್ಮು ಮುಂದುವರಿದರೆ ಪರೀಕ್ಷಿಸಿ: ಕೊವಿಡ್ ಚಿಕಿತ್ಸೆಯ ಪರಿಷ್ಕೃತ ಮಾರ್ಗಸೂಚಿ

Follow us on

Related Stories

Most Read Stories

Click on your DTH Provider to Add TV9 Kannada