ಗಣರಾಜ್ಯೋತ್ಸವದಂದು ಭಯೋತ್ಪಾದಕ ಸಂಚು, ಪ್ರಧಾನಿ ಮೋದಿಗೆ ಬೆದರಿಕೆ ಇದೆ: ಗುಪ್ತಚರ ಸಂಸ್ಥೆ

ಲಷ್ಕರ್-ಎ-ತೈಯಬಾ, ದಿ ರೆಸಿಸ್ಟೆನ್ಸ್ ಫೋರ್ಸ್, ಜೈಶ್-ಎ-ಮೊಹಮ್ಮದ್, ಹರ್ಕತ್-ಉಲ್-ಮುಜಾಹಿದ್ದೀನ್ ಮತ್ತು ಹಿಜ್ಬ್-ಉಲ್-ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಗುಂಪುಗಳು ಭಯೋತ್ಪಾದಕ ಬೆದರಿಕೆಯ ಹಿಂದೆ ಇವೆ ಎಂದು ಮಾಹಿತಿಯಲ್ಲಿದೆ.

ಗಣರಾಜ್ಯೋತ್ಸವದಂದು ಭಯೋತ್ಪಾದಕ ಸಂಚು, ಪ್ರಧಾನಿ ಮೋದಿಗೆ ಬೆದರಿಕೆ ಇದೆ: ಗುಪ್ತಚರ ಸಂಸ್ಥೆ
ನರೇಂದ್ರ ಮೋದಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 18, 2022 | 12:00 PM

ದೆಹಲಿ:  ಗಣರಾಜ್ಯೋತ್ಸವ ದಿನದಂದು (Republic Day)  ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಇತರ ಗಣ್ಯರ ಜೀವಕ್ಕೆ ಬೆದರಿಕೆಯೊಡ್ಡುವ ಸಂಭಾವ್ಯ ಭಯೋತ್ಪಾದನೆಯ ಸಂಚು ಬಗ್ಗೆ ಗುಪ್ತಚರ ಸಂಸ್ಥೆಗಳಿಗೆ ಮಾಹಿತಿ ಲಭಿಸಿದೆ. ಗುಪ್ತಚರ ಸಂಸ್ಥೆಗಳ ಒಂಬತ್ತು ಪುಟಗಳ ಗುಪ್ತಚರ ಮಾಹಿತಿಯ ಅದರ ಪ್ರತಿ ಇಂಡಿಯಾ ಟುಡೇಗೆ ಲಭ್ಯವಾಗಿದ್ದು ಭಾರತದ 75 ನೇ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳುವ ಪ್ರಧಾನಿ ಮೋದಿ ಮತ್ತು ಇತರ ಗಣ್ಯರಿಗೆ ಬೆದರಿಕೆ ಇದೆ ಎಂದು ಸೂಚಿಸಿದೆ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಐದು ಮಧ್ಯ ಏಷ್ಯಾದ ದೇಶಗಳಾದ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ನಾಯಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಸಾಧ್ಯತೆಯಿದೆ.  ಪಾಕಿಸ್ತಾನ/ಅಫ್ಘಾನಿಸ್ತಾನ-ಪಾಕಿಸ್ತಾನ ಪ್ರದೇಶದ ಮೂಲದ ಗುಂಪುಗಳಿಂದ ಬೆದರಿಕೆ ಬಂದಿದೆ ಎಂದು ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಈ ಗುಂಪುಗಳು ಹೆಚ್ಚು ಸ್ಥಾನದಲ್ಲಿರುವ ಗಣ್ಯರನ್ನು ಗುರಿಯಾಗಿಸಿಕೊಂಡು ಸಾರ್ವಜನಿಕ ಸಭೆಗಳು, ನಿರ್ಣಾಯಕ ಸಂಸ್ಥೆಗಳು ಮತ್ತು ಜನನಿಬಿಡ ಸ್ಥಳಗಳನ್ನು ವಿಧ್ವಂಸಕ/ಅಡೆತಡೆ ಮಾಡುವ ಗುರಿಯನ್ನು ಹೊಂದಿದ್ದವು. ಡ್ರೋನ್‌ಗಳ ಮೂಲಕವೂ ದಾಳಿಗೆ ಯತ್ನಿಸಬಹುದು.

ಲಷ್ಕರ್-ಎ-ತೈಯಬಾ, ದಿ ರೆಸಿಸ್ಟೆನ್ಸ್ ಫೋರ್ಸ್, ಜೈಶ್-ಎ-ಮೊಹಮ್ಮದ್, ಹರ್ಕತ್-ಉಲ್-ಮುಜಾಹಿದ್ದೀನ್ ಮತ್ತು ಹಿಜ್ಬ್-ಉಲ್-ಮುಜಾಹಿದ್ದೀನ್‌ನಂತಹ ಭಯೋತ್ಪಾದಕ ಗುಂಪುಗಳು ಭಯೋತ್ಪಾದಕ ಬೆದರಿಕೆಯ ಹಿಂದೆ ಇವೆ ಎಂದು ಮಾಹಿತಿಯಲ್ಲಿದೆ.

ಪಾಕಿಸ್ತಾನ ಮೂಲದ ಖಲಿಸ್ತಾನಿ ಗುಂಪುಗಳು ಪಂಜಾಬ್‌ನಲ್ಲಿ ಉಗ್ರಗಾಮಿ ಕೃತ್ಯಗಳನ್ನು ಪುನಶ್ಚೇತನಗೊಳಿಸಲು ಕಾರ್ಯಕರ್ತರನ್ನು ಸಜ್ಜುಗೊಳಿಸುತ್ತಿವೆ ಎಂದು ಮಾಹಿತಿಯಲ್ಲಿ ಹೇಳಿದೆ. ಅವರು ಪಂಜಾಬ್ ಮತ್ತು ಇತರ ರಾಜ್ಯಗಳಲ್ಲಿ ಉದ್ದೇಶಿತ ದಾಳಿಗಳನ್ನು ಯೋಜಿಸಿದ್ದಾರೆ. ಫೆಬ್ರವರಿ 2021 ರಲ್ಲಿ ಸ್ವೀಕರಿಸಿದ ಮಾಹಿತಿಯ ಪ್ರಕಾರ, ಖಲಿಸ್ತಾನಿ ಭಯೋತ್ಪಾದಕ ಗುಂಪುಗಳು ಪ್ರಧಾನ ಮಂತ್ರಿಯ ಸಭೆ ಮತ್ತು ಪ್ರವಾಸದ ಸ್ಥಳಗಳ ಮೇಲೆ ದಾಳಿ ಮಾಡಲು ಯೋಜಿಸುತ್ತಿವೆ.

ಇದನ್ನೂ ಓದಿ:  Davos Summit: ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾರತದ ಕೊರೊನಾ ಹೋರಾಟ ವಿವರಿಸಿದ ಪ್ರಧಾನಿ ನರೇಂದ್ರ ಮೋದಿ