ಸ್ಟಿರಾಯ್ಡ್ ಬಳಕೆ ಬೇಡ, ಕೆಮ್ಮು ಮುಂದುವರಿದರೆ ಪರೀಕ್ಷಿಸಿ: ಕೊವಿಡ್ ಚಿಕಿತ್ಸೆಯ ಪರಿಷ್ಕೃತ ಮಾರ್ಗಸೂಚಿ

ಸ್ಟಿರಾಯ್ಡ್‌ಗಳಂತಹ ಔಷಧಗಳು ಅತಿ ಬೇಗ, ಹೆಚ್ಚಿನ ಪ್ರಮಾಣದಲ್ಲಿ ಅಥವಾ ಅಗತ್ಯಕ್ಕಿಂತ ಹೆಚ್ಚು ಕಾಲ ಬಳಸಿದಾಗ ಆಕ್ರಮಣಕಾರಿ ಮ್ಯೂಕಾರ್ಮೈಕೋಸಿಸ್ ಅಥವಾ 'ಕಪ್ಪು ಶಿಲೀಂಧ್ರ' ದಂತಹ ಸೆಕೆಂಡರಿ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಪರಿಷ್ಕೃತ ಮಾರ್ಗಸೂಚಿಗಳು ಹೇಳಿವೆ.

ಸ್ಟಿರಾಯ್ಡ್ ಬಳಕೆ ಬೇಡ, ಕೆಮ್ಮು ಮುಂದುವರಿದರೆ ಪರೀಕ್ಷಿಸಿ: ಕೊವಿಡ್ ಚಿಕಿತ್ಸೆಯ ಪರಿಷ್ಕೃತ ಮಾರ್ಗಸೂಚಿ
ಕೊವಿಡ್-19 ರೋಗಿ (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 18, 2022 | 10:45 AM

ದೆಹಲಿ: ಕೊವಿಡ್ ರೋಗಿಗಳಿಗೆ ವೈದ್ಯರು ಸ್ಟಿರಾಯ್ಡ್​​ಗಳನ್ನು(Steroids) ನೀಡುವುದನ್ನು ನಿಲ್ಲಿಸಬೇಕು  ಎಂದು ಕೊರೊನಾವೈರಸ್ (Coronavirus) ಚಿಕಿತ್ಸೆಗಾಗಿ ಅದರ ಪರಿಷ್ಕೃತ ಕ್ಲಿನಿಕಲ್ ಮಾರ್ಗಸೂಚಿಗಳಲ್ಲಿ ಸರ್ಕಾರ ಹೇಳಿದೆ. ಕೊವಿಡ್ ಕಾರ್ಯಪಡೆ ಮುಖ್ಯಸ್ಥರು ಎರಡನೇ ಅಲೆಯ ಸಮಯದಲ್ಲಿ ಅತಿಯಾದ ಸ್ಟಿರಾಯ್ಡ್  ಬಳಕೆಗೆ ವಿಷಾದ ವ್ಯಕ್ತಪಡಿಸಿದ ದಿನಗಳ ನಂತರ ಈ ಸೂಚನೆ ಬಂದಿದೆ. ಸ್ಟಿರಾಯ್ಡ್‌ಗಳಂತಹ ಔಷಧಗಳು ಅತಿ ಬೇಗ, ಹೆಚ್ಚಿನ ಪ್ರಮಾಣದಲ್ಲಿ ಅಥವಾ ಅಗತ್ಯಕ್ಕಿಂತ ಹೆಚ್ಚು ಕಾಲ ಬಳಸಿದಾಗ ಆಕ್ರಮಣಕಾರಿ ಮ್ಯೂಕಾರ್ಮೈಕೋಸಿಸ್ ಅಥವಾ ‘ಕಪ್ಪು ಶಿಲೀಂಧ್ರ’ ದಂತಹ ಸೆಕೆಂಡರಿ ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು ಎಂದು ಪರಿಷ್ಕೃತ ಮಾರ್ಗಸೂಚಿಗಳು ಹೇಳಿವೆ. “ಸೌಮ್ಯ, ಮಧ್ಯಮ ಮತ್ತು ತೀವ್ರ” ಎಂಬ ಮೂರು ರೀತಿಯ ಸೋಂಕುಗಳಿಗೆ ಅಗತ್ಯವಿದ್ದಲ್ಲಿ ಔಷಧಿಗಳ ಡೋಸ್‌ಗಳನ್ನು ವಿವರಿಸುತ್ತಾ, ಎರಡು-ಮೂರು ವಾರಗಳಿಗಿಂತ ಹೆಚ್ಚು ಕಾಲ ಕೆಮ್ಮು ಮುಂದುವರಿದರೆ, ಕ್ಷಯರೋಗ ಮತ್ತು ಇತರ ಪರಿಸ್ಥಿತಿಗಳಿಗಾಗಿ ರೋಗಿಗಳನ್ನು ಪರೀಕ್ಷಿಸಬೇಕು ಎಂದು ಮಾರ್ಗಸೂಚಿಗಳು ಹೇಳುತ್ತವೆ. ಕಳೆದ ವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೀತಿ ಆಯೋಗ ಸದಸ್ಯ (ಆರೋಗ್ಯ) ಮತ್ತು ಕೊವಿಡ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ ವಿ ಕೆ ಪಾಲ್ ಸ್ಟಿರಾಯ್ಡ್‌ಗಳಂತಹ ಔಷಧಗಳ “ಅತಿಯಾದ ಬಳಕೆ ಮತ್ತು ದುರುಪಯೋಗ” ದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ಪರಿಷ್ಕೃತ ಮಾರ್ಗದರ್ಶನದ ಪ್ರಕಾರ ಉಸಿರಾಟದ ತೊಂದರೆ ಇಲ್ಲದೆ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಲಕ್ಷಣಗಳು ಅಥವಾ ಹೈಪೋಕ್ಸಿಯಾವನ್ನು ಸೌಮ್ಯ ಕಾಯಿಲೆ ಎಂದು ವರ್ಗೀಕರಿಸಲಾಗಿದೆ ಮತ್ತು ಮನೆಯಲ್ಲಿ ಪ್ರತ್ಯೇಕತೆ ಮತ್ತು ಆರೈಕೆಯನ್ನು ಸಲಹೆ ಮಾಡಲಾಗಿದೆ.

ಸೌಮ್ಯವಾದ ಕೊವಿಡ್‌ನಿಂದ ಬಳಲುತ್ತಿರುವವರು ಉಸಿರಾಟದ ತೊಂದರೆ, ತೀವ್ರತರವಾದ ಜ್ವರ ಅಥವಾ ಐದು ದಿನಗಳಿಗಿಂತ ಹೆಚ್ಚು ಕಾಲ ತೀವ್ರವಾದ ಕೆಮ್ಮನ್ನು ಹೊಂದಿದ್ದರೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು.

90-93 ಪ್ರತಿಶತದ ನಡುವೆ ಏರಿಳಿತದ ಆಮ್ಲಜನಕದ ಸ್ಯಾಚುರೇಷನ್ ಇದ್ದು ಉಸಿರಾಟದ ತೊಂದರೆ ಇರುವವರನ್ನು ಮಧ್ಯಮ ಪ್ರಕರಣಗಳಾಗಿ ಪರಿಗಣಿಸಲಾಗುತ್ತದೆ. ಅಂತಹ ರೋಗಿಗಳಿಗೆ ಆಮ್ಲಜನಕದ ಬೆಂಬಲವನ್ನು ನೀಡಬೇಕು.

ಪ್ರತಿ ನಿಮಿಷಕ್ಕೆ 30 ಕ್ಕಿಂತ ಹೆಚ್ಚು ಉಸಿರಾಟದ ಪ್ರಮಾಣ, ಉಸಿರಾಟದ ತೊಂದರೆ ಅಥವಾ ಕೋಣೆಯ ಗಾಳಿಯಲ್ಲಿ ಶೇಕಡಾ 90 ಕ್ಕಿಂತ ಕಡಿಮೆ ಆಮ್ಲಜನಕದ ಶುದ್ಧತ್ವವನ್ನು ತೀವ್ರ ಕಾಯಿಲೆ ಎಂದು ಪರಿಗಣಿಸಬೇಕು ಮತ್ತು ಅಂತಹ ರೋಗಿಗಳಿಗೆ ಉಸಿರಾಟದ ಬೆಂಬಲದ ಅಗತ್ಯವಿರುವುದರಿಂದ ಅವರನ್ನು ಐಸಿಯುಗೆ ಸೇರಿಸಬೇಕಾಗುತ್ತದೆ ಎಂದು ಮಾರ್ಗಸೂಚಿಯಲ್ಲಿ ಹೇಳಿದೆ.

ಅಂತಹ ರೋಗಿಗಳಿಗೆ ಉಸಿರಾಟದ ಬೆಂಬಲವನ್ನು ನೀಡಬೇಕು. ನಾನ್-ಇನ್ವೇಸಿವ್ ವೆಂಟಿಲೇಷನ್ (ಎನ್‌ಐವಿ) – ಹೆಲ್ಮೆಟ್ ಅಥವಾ ಫೇಸ್ ಮಾಸ್ಕ್ ಇಂಟರ್‌ಫೇಸ್ ಲಭ್ಯತೆಯ ಆಧಾರದ ಮೇಲೆ  ಉಸಿರಾಟದ ಕೆಲಸ ಕಡಿಮೆಯಿದ್ದರೆ ಆಮ್ಲಜನಕದ ಅವಶ್ಯಕತೆಗಳನ್ನು ಹೆಚ್ಚಿಸುವವರಲ್ಲಿ ಪರಿಗಣಿಸಬಹುದು.

ಪರಿಷ್ಕೃತ ಮಾರ್ಗಸೂಚಿಗಳು ತುರ್ತು ಬಳಕೆಯ ದೃಢೀಕರಣ (EUA) ಅಥವಾ “ಮಧ್ಯಮದಿಂದ ತೀವ್ರ” ಕಾಯಿಲೆ ಇರುವ ರೋಗಿಗಳಲ್ಲಿ ಮತ್ತು ಯಾವುದೇ ರೋಗಲಕ್ಷಣದ ಪ್ರಾರಂಭದ 10 ದಿನಗಳಲ್ಲಿ ಮೂತ್ರಪಿಂಡ ಅಥವಾ ಯಕೃತ್ತಿನ ಅಪಸಾಮಾನ್ಯ ಕ್ರಿಯೆಯಿಲ್ಲದ ರೋಗಿಗಳಲ್ಲಿ ರೆಮ್‌ಡೆಸಿವಿರ್‌ನ ಆಫ್-ಲೇಬಲ್ ಬಳಕೆಯನ್ನು ಶಿಫಾರಸು ಮಾಡುವುದನ್ನು ಮುಂದುವರಿಸುತ್ತವೆ.

ಆಮ್ಲಜನಕದ ಬೆಂಬಲ ಇಲ್ಲದ ರೋಗಿಗಳಿಗೆ ಈ ಔಷಧದ ಬಳಸುವುದನ್ನು ಇದು ಎಚ್ಚರಿಸಿದೆ.

ಮಾರ್ಗಸೂಚಿಗಳ ಪ್ರಕಾರ ಇಯುಎ ಅಥವಾ ಆಫ್-ಲೇಬಲ್ ಔಷಧಿ ಟೋಸಿಲಿಜುಮಾಬ್ ಬಳಕೆಯನ್ನು ತೀವ್ರವಾದ ಕಾಯಿಲೆಯ ಉಪಸ್ಥಿತಿಯಲ್ಲಿ ಬಳಸಲು ಪರಿಗಣಿಸಬಹುದು. ಅಂದರೆ ತೀವ್ರ ರೋಗ ಅಥವಾ ತೀವ್ರ ನಿಗಾ ಘಟಕದ (ICU) ಪ್ರವೇಶದ ಪ್ರಾರಂಭದ 24 ರಿಂದ 48 ಗಂಟೆಗಳ ಒಳಗೆ.

60 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ ಹೃದಯರಕ್ತನಾಳದ ಕಾಯಿಲೆ, ಅಧಿಕ ರಕ್ತದೊತ್ತಡ ಮತ್ತು ಪರಿಧಮನಿಯ ಕಾಯಿಲೆ, ಮಧುಮೇಹ ಮೆಲ್ಲಿಟಸ್ ಮತ್ತು ಇತರ ಇಮ್ಯುನೊಕೊಂಪ್ರೊಮೈಸ್ಡ್ ಸ್ಟೇಟ್ಸ್, ಉದಾಹರಣೆಗೆ ಎಚ್ಐವಿ, ಸಕ್ರಿಯ ಕ್ಷಯ, ದೀರ್ಘಕಾಲದ ಶ್ವಾಸಕೋಶ, ಮೂತ್ರಪಿಂಡ ಅಥವಾ ಯಕೃತ್ತಿನ ಕಾಯಿಲೆ, ಸೆರೆಬ್ರೊವಾಸ್ಕುಲರ್ ಕಾಯಿಲೆ ಅಥವಾ ಸ್ಥೂಲಕಾಯ- ಇವು ತೀವ್ರ ರೋಗ ಮತ್ತು ಮರಣಕ್ಕೆ ಹೆಚ್ಚಿನ ಅಪಾಯವಿದೆ ಎಂದು ಮಾರ್ಗಸೂಚಿಗಳು ಹೇಳಿವೆ.

ಇದನ್ನೂ ಓದಿ: ಆಂಧ್ರಪ್ರದೇಶ ವಿರೋಧ ಪಕ್ಷದ ನಾಯಕ, ಟಿಡಿಪಿ ಮುಖ್ಯಸ್ಥ ಎನ್​.ಚಂದ್ರಬಾಬು ನಾಯ್ಡುರಿಗೆ ಕೊರೊನಾ ಸೋಂಕು

Published On - 10:25 am, Tue, 18 January 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್