ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಹೋಳಿ, ದೀಪಾವಳಿಗೆ ಉಚಿತ ಎಲ್​​ಪಿಜಿ ಸಿಲಿಂಡರ್​: ರಾಜನಾಥ್​ ಸಿಂಗ್​ ಘೋಷಣೆ

ಈ ಜನ ಏನು ಬೇಕೋ ಅದನ್ನು ಮಾತನಾಡುತ್ತಿರಲಿ, ವಾಸ್ತವ ನಮಗೆ ಗೊತ್ತಿದೆಯಲ್ಲ ಸಾಕು ಎಂದು ಪ್ರಧಾನಿ ನರೇಂದ್ರ ಮೋದಿ ನನಗೆ ಹೇಳಿದ್ದರು. ಹಾಗಾಗಿ ಒಬ್ಬ ರಕ್ಷಣಾ ಸಚಿವನಾಗಿಯೂ ಕೂಡ ನಾನು ಸುಮ್ಮನಿದ್ದೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಹೋಳಿ, ದೀಪಾವಳಿಗೆ ಉಚಿತ ಎಲ್​​ಪಿಜಿ ಸಿಲಿಂಡರ್​: ರಾಜನಾಥ್​ ಸಿಂಗ್​ ಘೋಷಣೆ
ರಾಜನಾಥ್ ಸಿಂಗ್​
Follow us
TV9 Web
| Updated By: Lakshmi Hegde

Updated on:Feb 19, 2022 | 4:55 PM

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Assembly Elction)ಮೂರನೇ ಹಂತದ ಮತದಾನಕ್ಕೆ ಇನ್ನೊಂದೇ ದಿನ ಬಾಕಿ ಇದ್ದು, ನಾಳೆ (ಫೆ.20) 16 ಜಿಲ್ಲೆಗಳ 59 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಇಂದು ಗೋಂಡಾದ ಕರ್ನಲ್‌ಗಂಜ್‌ನಲ್ಲಿ ಚುನಾವಣಾ ರ್ಯಾಲಿ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್​, ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿವರ್ಷವೂ ಹೋಳಿ ಹುಣ್ಣಿಮೆ ಮತ್ತು ದೀಪಾವಳಿ ಹಬ್ಬಗಳಂದು ಉಚಿತವಾಗಿ ಎಲ್​​ಪಿಜಿ ಸಿಲಿಂಡರ್​ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ರಾಜನಾಥ್​ ಸಿಂಗ್​,  ನರೇಂದ್ರ ಮೋದಿಯವರು ಭಾರತದ ಪ್ರಧಾನಮಂತ್ರಿಯಾದ ಮೇಲೆ ಚೀನಾ ಮತ್ತು ಪಾಕಿಸ್ತಾನ ದೇಶಗಳು ಸ್ನೇಹಿತರಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳುತ್ತಿದ್ದಾರೆ. ಆದರೆ ವಾಸ್ತವ ಏನೆಂದರೆ, ರಾಹುಲ್​ ಗಾಂಧಿ ಪ್ರಾಚೀನ ಭಾರತದ ಇತಿಹಾಸ ಓದಿಕೊಂಡಿಲ್ಲ. ಅವರು ಆಧುನಿಕ ಭಾರತದ ಇತಿಹಾಸವನ್ನಾದರೂ ಓದಿಕೊಳ್ಳಬೇಕು ಎಂದು ರಾಜನಾಥ್​ ಸಿಂಗ್ ವಾಗ್ದಾಳಿ ನಡೆಸಿದರು.  ಅಷ್ಟೇ ಅಲ್ಲ, ಪಾಕಿಸ್ತಾನ ಅಕ್ರಮವಾಗಿ ವಶಪಡಿಸಿಕೊಂಡಿದ್ದ ಶಕ್ಸಗಾಮ್​ ಕಣಿವೆಯನ್ನು ಚೀನಾಕ್ಕೆ ಹಸ್ತಾಂತರ ಮಾಡಿದ್ದು, ಜವಾಹರ್​ ಲಾಲ್​ ನೆಹರೂ ಅವರು ಪ್ರಧಾನಿಯಾಗಿದ್ದಾಗ. ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಕಾರಾಕೋರಂ ಹೆದ್ದಾರಿ ನಿರ್ಮಾಣಗೊಂಡಿದ್ದು ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿದ್ದು ಮನಮೋಹನ್​ ಸಿಂಗ್​ ಪ್ರಧಾನಿಯಾಗಿದ್ದಾಗಲೇ ಹೊರತು ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾದ ಮೇಲೆ ಅಲ್ಲ ಎಂದೂ ರಕ್ಷಣಾ ಸಚಿವರು ವಿವರಿಸಿದ್ದಾರೆ.

ಗಲ್ವಾನ್​ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷದ ಬಗ್ಗೆ ಮಾತನಾಡಿದ ರಾಜನಾಥ್​ ಸಿಂಗ್​, ರಾಹುಲ್ ಗಾಂಧಿ ಸಂಸತ್ತಿನಲ್ಲಿ ಗಲ್ವಾನ್​ ಕಣಿವೆ ಸಂಘರ್ಷದ ಬಗ್ಗೆ ಮಾತನಾಡುವಾಗ, ಭಾರತದ ಅತಿ ಹೆಚ್ಚು ಯೋಧರು ಹುತಾತ್ಮರಾಗಿದ್ದಾರೆ. ಆದರೆ ಚೀನಾದ 3-4 ಸೈನಿಕರಷ್ಟೇ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಆದರೆ ಇದು ನಿಜಕ್ಕೂ ನೋವಿನ ಸಂಗತಿ. ಒಬ್ಬ ರಕ್ಷಣಾ ಸಚಿವನಾಗಿ ನಾನು ಇದಕ್ಕೆ ಯಾವುದೇ ಉತ್ತರ ಕೊಡಲಿಲ್ಲ. ಯಾಕೆಂದರೆ ಈ ಜನ ಏನು ಬೇಕೋ ಅದನ್ನು ಮಾತನಾಡುತ್ತಿರಲಿ, ವಾಸ್ತವ ನಮಗೆ ಗೊತ್ತಿದೆಯಲ್ಲ ಸಾಕು ಎಂದು ಪ್ರಧಾನಿ ನರೇಂದ್ರ ಮೋದಿ ನನಗೆ ಹೇಳಿದ್ದರು. ಕೊನೆಗೆ ಆಸ್ಟ್ರೇಲಿಯಾದ ಮಾಧ್ಯಮವೇ ಒಂದು ತನಿಖಾ ವರದಿ ಪ್ರಕಟಿಸಿದ್ದು, ಗಲ್ವಾನ್​ ಸಂಘರ್ಷದಲ್ಲಿ ಚೀನಾದ 38-50 ಚೀನಾದ ಸೈನಿಕರು ಹತ್ಯೆಯಾಗಿದ್ದನ್ನು ಪ್ರಕಟಿಸಿದೆ ಎಂದು ತಿಳಿಸಿದರು.

ಅಷ್ಟೇ ಅಲ್ಲ, ಈ ಹಿಂದೆ ಭಾರತ ಜಾಗತಿಕ ವೇದಿಕೆಯಲ್ಲಿ ಯಾವುದೇ ಮಾತುಗಳನ್ನಾಡಿದರೂ ಅದನ್ನು ಉಳಿದ ರಾಷ್ಟ್ರಗಳು ಕಿವಿಮೇಲೆ ಹಾಕಿಕೊಳ್ಳುತ್ತಿರಲಿಲ್ಲ. ಆದರೆ ಈಗ ಭಾರತ ಆಡುವ ಮಾತುಗಳನ್ನು ಎಲ್ಲ ರಾಷ್ಟ್ರಗಳೂ ಗಮನವಿಟ್ಟು ಕೇಳುತ್ತವೆ. ನಮ್ಮ ದೇಶ ದುರ್ಬಲವಾಗಿ ಉಳಿದಿಲ್ಲ. ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ರಾಜನಾಥ್​ ಸಿಂಗ್​ ಹೇಳಿದರು.

ಇದನ್ನೂ ಓದಿ: ಈ ಭಯೋತ್ಪಾದಕ ಭಗತ್ ಸಿಂಗ್, ಅಂಬೇಡ್ಕರ್ ಕನಸನ್ನು ನನಸಾಗಿಸುತ್ತಿದ್ದಾನೆ; ವಿರೋಧಿಗಳಿಗೆ ಕೇಜ್ರಿವಾಲ್ ತಿರುಗೇಟು

Published On - 4:27 pm, Sat, 19 February 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್