Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಮಾಜವಾದಿ ಪಕ್ಷಕ್ಕೆ 3 ಬಿಎಸ್​​ಪಿ ನಾಯಕರು, ಪೂರ್ವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸೇರ್ಪಡೆ

ಹರಿಶಂಕರ್ ತಿವಾರಿಯವರ ಪುತ್ರ ವಿನಯ್ ಶಂಕರ್ ತಿವಾರಿ ಅವರು ಚಿಲ್ಲುಪರ್ ಕ್ಷೇತ್ರದ ಶಾಸಕರಾಗಿದ್ದಾರೆ, ಕುಶಾಲ್ ಸಂತ ಕಬೀರ್ ನಗರದ ಮಾಜಿ ಸಂಸದರಾಗಿದ್ದರೆ, ಗಣೇಶ್ ಶಂಕರ್ ಪಾಂಡೆ ಅವರು ಬಿಎಸ್‌ಪಿ ಸರ್ಕಾರದ ಸಮಯದಲ್ಲಿ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿದ್ದರು.

ಸಮಾಜವಾದಿ ಪಕ್ಷಕ್ಕೆ 3 ಬಿಎಸ್​​ಪಿ ನಾಯಕರು, ಪೂರ್ವ ಉತ್ತರ ಪ್ರದೇಶದ ಬಿಜೆಪಿ ಶಾಸಕ ಸೇರ್ಪಡೆ
ಸಮಾಜವಾದಿ ಪಕ್ಷಕ್ಕೆ ಸೇರಿದ ಬಿಎಸ್ಪಿ ನಾಯಕರು
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Dec 12, 2021 | 6:21 PM

ಲಖನೌ: ಉತ್ತರ ಪ್ರದೇಶದ 2022 ರ ಚುನಾವಣೆಯ(Uttar Pradesh2022 polls) ಪೂರ್ವ ವಲಯದ ಕದನವು ಹೆಚ್ಚು ಆಸಕ್ತಿದಾಯಕವಾಗುತ್ತಿದ್ದು, ಬಹುಜನ ಸಮಾಜ ಪಕ್ಷದ(BSP) ಮೂವರು ಬ್ರಾಹ್ಮಣ ನಾಯಕರು ಮತ್ತು ಈ ಪ್ರದೇಶದ ಬಿಜೆಪಿ (BJP) ಶಾಸಕರೊಬ್ಬರು ಭಾನುವಾರ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.  ಸಂತ ಕಬೀರ್ ನಗರದ ಖಲೀಲಾಬಾದ್ ಕ್ಷೇತ್ರದ ಬಿಜೆಪಿ ಶಾಸಕ ದಿಗ್ವಿಜಯ್ ನರೇನ್ ಚೌಬೆ, ಬಿಎಸ್‌ಪಿ ನಾಯಕರಾದ ವಿನಯ್ ಶಂಕರ್ ತಿವಾರಿ (ಬಿಎಸ್‌ಪಿ ಶಾಸಕ) ಕುಶಾಲ್ ತಿವಾರಿ ಮತ್ತು ಗಣೇಶ್ ಶಂಕರ್ ಪಾಂಡೆ (ಯುಪಿ ವಿಧಾನ ಪರಿಷತ್ತಿನ ಮಾಜಿ ಅಧ್ಯಕ್ಷ) ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಸಮ್ಮುಖದಲ್ಲಿ ಲಖನೌದಲ್ಲಿರುವ ರಾಜ್ಯ ಪ್ರಧಾನ ಕಚೇರಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡರು. ವಿನಯ್, ಕುಶಾಲ್ ಮತ್ತು ಗಣೇಶ್ ಸಮಾಜವಾದಿ ಪಕ್ಷಕ್ಕೆ ಹೋಗುತ್ತಿದ್ದಾರೆ ಎಂಬುದು ಉತ್ತರಪ್ರದೇಶ ರಾಜಕೀಯ ವಲಯಗಳಲ್ಲಿ ಸ್ಪಷ್ಟವಾದ ನಂತರ ಅವರನ್ನು ಕಳೆದ ವಾರ ಬಿಎಸ್‌ಪಿ ಉಚ್ಛಾಟಿಸಿತ್ತು. ಹರಿಶಂಕರ್ ತಿವಾರಿಯವರ ಪುತ್ರ ವಿನಯ್ ಶಂಕರ್ ತಿವಾರಿ ಅವರು ಚಿಲ್ಲುಪರ್ ಕ್ಷೇತ್ರದ ಶಾಸಕರಾಗಿದ್ದಾರೆ. ಕುಶಾಲ್ ಸಂತ ಕಬೀರ್ ನಗರದ ಮಾಜಿ ಸಂಸದರಾಗಿದ್ದರೆ, ಗಣೇಶ್ ಶಂಕರ್ ಪಾಂಡೆ ಅವರು ಬಿಎಸ್‌ಪಿ ಸರ್ಕಾರದ ಸಮಯದಲ್ಲಿ ವಿಧಾನ ಪರಿಷತ್ತಿನ ಅಧ್ಯಕ್ಷರಾಗಿದ್ದರು.ಹರಿಶಂಕರ್ ಕೂಡ ಶೀಘ್ರದಲ್ಲೇ ಎಸ್‌ಪಿ ಸೇರಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ವಿನಯ್ ಮತ್ತು ಕುಶಾಲ್ ಅವರು ಗೋರಖ್‌ಪುರದ ಪೂರ್ವ ಉತ್ತರ ಪ್ರದೇಶದ ಪ್ರಭಾವಿ ನಾಯಕರಾದ ಹರಿಶಂಕರ್ ತಿವಾರಿಯವರ ಪುತ್ರರಾಗಿದ್ದರೆ, ಗಣೇಶ್ ಹರಿಶಂಕರ್ ತಿವಾರಿಯವರ ಸೋದರಳಿಯರಾಗಿದ್ದಾರೆ. ಹರಿಶಂಕರ್ ತಿವಾರಿ ಅವರು ಭಾರತೀಯ ರಾಜಕೀಯ ಇತಿಹಾಸದಲ್ಲಿ ಜೈಲಿನಿಂದ ಶಾಸಕಾಂಗಕ್ಕೆ ಆಯ್ಕೆಯಾದ ಮೊದಲ ಸಾರ್ವಜನಿಕ ವ್ಯಕ್ತಿ. 1985ರಲ್ಲಿ ಚಿಲ್ಲುಪಾರ್‌ನಿಂದ ಪ್ರಥಮ ಬಾರಿಗೆ ಆಯ್ಕೆಯಾದ ಅವರು 23 ವರ್ಷಗಳ ಕಾಲ ಅವಿರೋಧವಾಗಿ ವಿಧಾನಸಭೆಯ ಸದಸ್ಯರಾಗಿದ್ದರು. ತಿವಾರಿ ಯುಪಿಯಲ್ಲಿ ಬ್ರಾಹ್ಮಣ ರಾಜಕಾರಣದ ಪ್ರಸಿದ್ಧ ಮುಖವಾಗಿದ್ದಾರೆ. ಅವರು ಯುಪಿಯಲ್ಲಿ ಬಿಜೆಪಿ, ಬಿಎಸ್‌ಪಿ ಮತ್ತು ಎಸ್‌ಪಿ ಸರ್ಕಾರಗಳಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.

ಅಕ್ಟೋಬರ್‌ನಲ್ಲಿ ಲಖನೌನಲ್ಲಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸಮ್ಮುಖದಲ್ಲಿ ಅಮಾನತುಗೊಂಡ ಆರು ಬಿಎಸ್‌ಪಿ ಶಾಸಕರು ಸಮಾಜವಾದಿ ಪಕ್ಷಕ್ಕೆ ಸೇರಿದರು. ಈ ಶಾಸಕರಲ್ಲಿ ಹರಗೋವಿಂದ್ ಭಾರ್ಗವ್, ಮುಜ್ತಾಬಾ ಸಿದ್ದಿಕಿ, ಹಕೀಮ್ ಲಾಲ್ ಬಿಂದ್, ಅಸ್ಲಾಂ ರೈನಿ, ಸುಷ್ಮಾ ಪಟೇಲ್ ಮತ್ತು ಅಸ್ಲಾಂ ಚೌಧರಿ ಸೇರಿದ್ದಾರೆ.

2022ರಲ್ಲಿ ಉತ್ತರ ಪ್ರದೇಶ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ಹಿಂದೆ, ಉತ್ತರ ಪ್ರದೇಶದಲ್ಲಿ 2017 ರ ಅಸೆಂಬ್ಲಿ ಚುನಾವಣೆಯಲ್ಲಿ, 403 ಸ್ಥಾನಗಳ ಉತ್ತರ ಪ್ರದೇಶ ಅಸೆಂಬ್ಲಿಯಲ್ಲಿ ಭಾರತೀಯ ಜನತಾ ಪಕ್ಷ 312 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಸಮಾಜವಾದಿ ಪಕ್ಷ (ಎಸ್ಪಿ) 47 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಹುಜನ ಸಮಾಜ ಪಕ್ಷ (ಬಿಎಸ್ಪಿ) 19 ಸ್ಥಾನಗಳನ್ನು ಗೆದ್ದುಕೊಂಡಿತು. ಕಾಂಗ್ರೆಸ್ ಕೇವಲ ಏಳು ಸ್ಥಾನಗಳನ್ನು ಗೆದ್ದಿತ್ತು. ಉಳಿದ ಸ್ಥಾನಗಳನ್ನು ಇತರೆ ಅಭ್ಯರ್ಥಿಗಳು ತಮ್ಮದಾಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​​ನಲ್ಲಿ ನಡೆದ ಭಾರತದ ಮೊದಲ ಕಟಿಂಗ್ ಎಡ್ಜ್ ಶ್ವಾಸಕೋಶ ಕಸಿ ಯಶಸ್ವಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್