UP Election 2022: ಗೋರಖ್‌ಪುರದಿಂದ ನಾಮಪತ್ರ ಸಲ್ಲಿಸಿದ ಯೋಗಿ ಆದಿತ್ಯನಾಥ

| Updated By: ರಶ್ಮಿ ಕಲ್ಲಕಟ್ಟ

Updated on: Feb 04, 2022 | 3:22 PM

Yogi Adityanath ಉತ್ತರ ಪ್ರದೇಶ ಚುನಾವಣೆಗೆ ಹೋರಾಡಲು ತನ್ನ ಮೊದಲ ಔಪಚಾರಿಕ ಹೆಜ್ಜೆಯನ್ನು ಇಡುವ ಮೊದಲು, ಐದು ಬಾರಿ ಸಂಸದರಾಗಿರುವ ಆದಿತ್ಯನಾಥ  ಗೋರಖನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು

UP Election 2022: ಗೋರಖ್‌ಪುರದಿಂದ ನಾಮಪತ್ರ ಸಲ್ಲಿಸಿದ ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ
Follow us on

ಗೋರಖ್‌ಪುರ: ಯೋಗಿ ಆದಿತ್ಯನಾಥ (Yogi Adityanath) ಅವರು ತಮ್ಮ ಮೊದಲ ರಾಜ್ಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಉತ್ತರ ಪ್ರದೇಶದ ಗೋರಖ್‌ಪುರದಿಂದ (Gorakhpur)ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಕೂಡಾ ಆದಿತ್ಯನಾಥ ಅವರ ಜತೆಗಿದ್ದರು. ಉತ್ತರ ಪ್ರದೇಶ ಚುನಾವಣೆಗೆ ಹೋರಾಡಲು ತನ್ನ ಮೊದಲ ಔಪಚಾರಿಕ ಹೆಜ್ಜೆಯನ್ನು ಇಡುವ ಮೊದಲು, ಐದು ಬಾರಿ ಸಂಸದರಾಗಿರುವ ಆದಿತ್ಯನಾಥ  ಗೋರಖನಾಥ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಅಲ್ಲಿ ಅವರು ಪ್ರಧಾನ ಅರ್ಚಕರಾಗಿದ್ದು ಮತ್ತು ಹವನ ಮಾಡಿದರು. ಪೂರ್ವ ಉತ್ತರ ಪ್ರದೇಶದ ಗೋರಖ್‌ಪುರ ಯೋಗಿ ಆದಿತ್ಯನಾಥ ಅವರ ಭದ್ರಕೋಟೆಯಾಗಿದ್ದು, ಇಲ್ಲಿಂದ ಅವರು ಸ್ಪರ್ಧಿಸಿದ ಎಲ್ಲಾ ಸಂಸತ್ ಚುನಾವಣೆಯನ್ನು ಗೆದ್ದಿದ್ದಾರೆ. ಪೂರ್ವ ಉತ್ತರ ಪ್ರದೇಶದಿಂದ ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷಕ್ಕೆ ಪ್ರತಿಸ್ಪರ್ಧಿಯಾಗಿ ಅನೇಕ ಗಮನಾರ್ಹ ಹಿಂದುಳಿದ ಜಾತಿಗಳ ನಾಯಕರನ್ನು ಕಳೆದುಕೊಂಡ ನಂತರ ಅಮಿತ್ ಶಾ ಮತ್ತು ಹಲವಾರು ಬಿಜೆಪಿ ನಾಯಕರು ಪಕ್ಷದ ಶಕ್ತಿ  ಪ್ರದರ್ಶನಕ್ಕಾಗಿ ಉತ್ತರ ಪ್ರದೇಶಕ್ಕೆ  ಬಂದಿದ್ದಾರೆ. ಇಲ್ಲಿಯವರೆಗೆ ಗೋರಖ್‌ಪುರ ಚುನಾವಣಾ ಕಣದಲ್ಲಿ ಯೋಗಿ ಆದಿತ್ಯನಾಥ ಅವರ ಪ್ರತಿಸ್ಪರ್ಧಿಯಾಗಿ ಭೀಮ್ ಆರ್ಮಿಯ ಚಂದ್ರಶೇಖರ್ ಆಜಾದ್ ಇದ್ದಾರೆ. ಯೋಗಿ ಆದಿತ್ಯನಾಥ ಎದುರು ಸಮಾಜವಾದಿ ಪಕ್ಷ ಇನ್ನೂ ತನ್ನ ಅಭ್ಯರ್ಥಿಯನ್ನು ಹೆಸರಿಸಿಲ್ಲ.


ಚುನಾವಣಾ ಕಚೇರಿಗೆ ಭೇಟಿ ನೀಡುವ ಮೊದಲು, ಅಮಿತ್ ಶಾ ಉತ್ತರ ಪ್ರದೇಶ ಮುಖ್ಯಮಂತ್ರಿಯೊಂದಿಗೆ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾ ಅವರನ್ನು ಹೊಗಳಿದರು.

ಯೋಗಿ ಆದಿತ್ಯನಾಥ ಉತ್ತರ ಪ್ರದೇಶವನ್ನು ಮಾಫಿಯಾಗಳಿಂದ ಮುಕ್ತಗೊಳಿಸಿದ್ದಾರೆ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ. 25 ವರ್ಷಗಳ ನಂತರ ಯೋಗಿ ಆದಿತ್ಯನಾಥ ಅವರು ಉತ್ತರ ಪ್ರದೇಶದಲ್ಲಿ ಕಾನೂನಿನ ಆಳ್ವಿಕೆಯನ್ನು ಸ್ಥಾಪಿಸಿದರು ಎಂದು ಅಮಿತ್ ಶಾ ಹೇಳಿದರು.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಶಾ, ಯೋಗಿ ಆಳ್ವಿಕೆಯಲ್ಲಿ ‘ಗೂಂಡಾ ರಾಜ್’ ಅನ್ನು ತಡೆಹಿಡಿಯಲಾಗಿದೆ ಮತ್ತು ಮುಕ್ತಾರ್ ಅನ್ಸಾರಿ, ಅಜಮ್ ಖಾನ್ ಮತ್ತು ಅತೀಕ್ ಅಹ್ಮದ್ ಅವರಂತಹ ಜನರು ತಮ್ಮ ತಪ್ಪುಗಳಿಗಾಗಿ ಶಿಕ್ಷೆಗೆ ಗುರಿಯಾಗುತ್ತಾರೆ ಎಂದು ಹೇಳಿದರು.

ಗೋರಖ್‌ಪುರದಲ್ಲಿ ಬಿಜೆಪಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಗೃಹ ಸಚಿವರು ಮೋದಿ ಸರ್ಕಾರದ ಸಮಾಜ ಕಲ್ಯಾಣ ಯೋಜನೆಗಳಾದ ಪ್ರಧಾನ್ ಮಂತ್ರಿ ಉಜ್ವಲ ಯೋಜನೆ, ಆಯುಷ್ಮಾನ್ ಭಾರತ್ ಮತ್ತು ಕೊವಿಡ್-19 ಲಸಿಕೆ ಅಭಿಯಾನವನ್ನು ಹೈಲೈಟ್ ಮಾಡಿದರು. ಅದು ಉತ್ತರ ಪ್ರದೇಶದ ಜನರಿಗೆ ಅಪಾರವಾಗಿ ಸಹಾಯ ಮಾಡಿದೆ. ರಾಜ್ಯದಲ್ಲಿ ಆದಿತ್ಯನಾಥ ನೇತೃತ್ವದ ಸರ್ಕಾರವು ಎಲ್ಲಾ ಕಲ್ಯಾಣ ಯೋಜನೆಗಳು ಸಕಾಲದಲ್ಲಿ ಅಗತ್ಯವಿರುವವರಿಗೆ ತಲುಪುವುದನ್ನು ಖಚಿತಪಡಿಸಿದೆ ಎಂದು ಶಾ ಹೇಳಿದರು.

ಇದನ್ನೂ ಓದಿ: ಬಿಜೆಪಿ ಉತ್ತರ ಪ್ರದೇಶದಲ್ಲಿ ಇತಿಹಾಸವನ್ನು ಪುನರಾವರ್ತಿಸಲು ಹೊರಟಿದೆ: ಅಮಿತ್ ಶಾ

 

Published On - 2:51 pm, Fri, 4 February 22