AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Uttar Pradesh Election 2022: ಬಿಜೆಪಿಯಿಂದ 8 ಬಂಡಾಯ ನಾಯಕರು ಇಂದು ಸಮಾಜವಾದಿ ಪಕ್ಷ ಸೇರ್ಪಡೆ ಸಾಧ್ಯತೆ

ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ರಾಜೀನಾಮೆ ನೀಡಿದ್ದು ಮತ್ತು ಮರುದಿನ ಧರಂ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದರು. ಒಂದೇ ರೀತಿಯ ರಾಜೀನಾಮೆ ಪತ್ರಗಳಲ್ಲಿ ಎಲ್ಲಾ ಸಚಿವರು ಮತ್ತು ಶಾಸಕರು, ಬಿಜೆಪಿ  ದಲಿತರು ಮತ್ತು ಹಿಂದುಳಿದವರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.

Uttar Pradesh Election 2022: ಬಿಜೆಪಿಯಿಂದ 8 ಬಂಡಾಯ ನಾಯಕರು ಇಂದು ಸಮಾಜವಾದಿ ಪಕ್ಷ ಸೇರ್ಪಡೆ ಸಾಧ್ಯತೆ
ಅಖಿಲೇಶ್ ಯಾದವ್
TV9 Web
| Updated By: ರಶ್ಮಿ ಕಲ್ಲಕಟ್ಟ|

Updated on:Jan 14, 2022 | 10:41 AM

Share

ಲಖನೌ: ಉತ್ತರ ಪ್ರದೇಶ (Uttar Pradesh) ಬಿಜೆಪಿಯಲ್ಲಿ (BJP)  ಸಾಲುಸಾಲು ರಾಜೀನಾಮೆ ಬರುತ್ತಿದ್ದು ಕಳೆದ ಐದು ವರ್ಷಗಳಲ್ಲಿ ಸರ್ಕಾರವು ಹಿಂದುಳಿದ ಸಮುದಾಯಗಳಿಗಾಗಿ ಕೆಲಸ ಮಾಡಿಲ್ಲ ಎಂದು ಆರೋಪಿಸಿ ಸಚಿವರು ಮತ್ತು ಇಬ್ಬರು ಶಾಸಕರು ಗುರುವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.  ಆಯುಷ್ ಸಚಿವ ಮತ್ತು ಸಹರಾನ್‌ಪುರದ ನಕೂರ್ ಕ್ಷೇತ್ರದ ಶಾಸಕ ಧರಂ ಸಿಂಗ್ ಸೈನಿ (Dharam Singh Saini), ಫಿರೋಜಾಬಾದ್‌ನ ಶಿಕೋಹಾಬಾದ್‌ನ ಶಾಸಕ ಮುಖೇಶ್ ವರ್ಮಾ (Mukesh Verma) ಮತ್ತು ಲಖಿಂಪುರದ ಧೌರಾಹ್ರಾ ಶಾಸಕ ಅವಸ್ತಿ ಬಾಲ ಪ್ರಸಾದ್ (Awasthi Bala Prasad) ಗುರುವಾರ ರಾಜೀನಾಮೆ ನೀಡಿದ ಮೂವರು ಬಿಜೆಪಿ ಶಾಸಕರು.  ಶೋಹರತ್‌ಗಢದ ಬಿಜೆಪಿ ಮಿತ್ರ ಪಕ್ಷವಾದ ಅಪ್ನಾ ದಳ (ಎಸ್) ಶಾಸಕ ಅಮರ್ ಸಿಂಗ್ ಚೌಧರಿ(Amar Singh Chaudhary) ಕೂಡ ಸಮಾಜವಾದಿ ಪಕ್ಷ ಸೇರಲು (Samajwadi Party) ತಮ್ಮ ಪಕ್ಷವನ್ನು ತೊರೆದರು. ಹಿಂದುಳಿದ ಜಾತಿಯ ನಾಯಕ ಚೌಧರಿ ಅವರು ಗುರುವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದರು. ಮೂರು ದಿನಗಳಲ್ಲಿ ಮೂರು ಸಚಿವರು ರಾಜೀನಾಮೆ ನೀಡಿದ್ದು ಸೈನಿಯ ಮೂರನೆಯವರಾಗಿದ್ದಾರೆ.

ಸ್ವಾಮಿ ಪ್ರಸಾದ್ ಮೌರ್ಯ ಮಂಗಳವಾರ ರಾಜೀನಾಮೆ ನೀಡಿದ್ದು ಮತ್ತು ಮರುದಿನ ಧರಂ ಸಿಂಗ್ ಚೌಹಾಣ್ ರಾಜೀನಾಮೆ ನೀಡಿದ್ದರು. ಒಂದೇ ರೀತಿಯ ರಾಜೀನಾಮೆ ಪತ್ರಗಳಲ್ಲಿ ಎಲ್ಲಾ ಸಚಿವರು ಮತ್ತು ಶಾಸಕರು, ಬಿಜೆಪಿ  ದಲಿತರು ಮತ್ತು ಹಿಂದುಳಿದವರನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದರು.

ಅವಸ್ತಿ ಬಾಲ ಪ್ರಸಾದ್ ಪಕ್ಷ ತೊರೆದ ಒಂಬತ್ತನೇ ಶಾಸಕರಾದರು. ಪ್ರಸಾದ್ ಗುರುವಾರ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ಸಮಾಜವಾದಿ ಪಕ್ಷದ ವಕ್ತಾರ ಮತ್ತು ಎಂಎಲ್‌ಸಿ ಉದಯವೀರ್ ಸಿಂಗ್ ಹೇಳಿದ್ದಾರೆ.

ಒಂಬತ್ತು ಶಾಸಕರ ಪೈಕಿ ಎಂಟು ಮಂದಿ ಶುಕ್ರವಾರ ಅಖಿಲೇಶ್ ಯಾದವ್ ಸಮ್ಮುಖದಲ್ಲಿ ಎಸ್‌ಪಿ ಸೇರುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ. ರಾಜೀನಾಮೆಯನ್ನು ಘೋಷಿಸಿದ ನಂತರ, ಸೈನಿ ಕೂಡ ಎಸ್ ಪಿ ಮುಖ್ಯಸ್ಥರನ್ನು ಭೇಟಿಯಾದರು.

ಶಾಸಕರು ಮತ್ತು ಸಚಿವರ ರಾಜೀನಾಮೆ ಕುರಿತು ಮಾತನಾಡಿದ ರಾಜ್ಯ ಬಿಜೆಪಿ ವಕ್ತಾರ ರಾಕೇಶ್ ತ್ರಿಪಾಠಿ “ಮುಂಬರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸ್ಪರ್ಧಿಸಲಿದೆ. ಡಬಲ್ ಇಂಜಿನ್ ಸರ್ಕಾರ ಮಾಡಿದ ಕೆಲಸವನ್ನು ನಾವು ಜನರಿಗೆ ತಲುಪಿಸಲಿದ್ದೇವೆ. ಮಾದರಿ ನೀತಿ ಸಂಹಿತೆ ಘೋಷಣೆಯಾದ ನಂತರ ಪಕ್ಷ ತೊರೆಯುತ್ತಿರುವವರು ಅವಕಾಶವಾದಿಗಳಾಗಿದ್ದು, ಈ ಹಿಂದೆ ಅನೇಕರಂತೆ ಸ್ವಾರ್ಥಕ್ಕಾಗಿ ಬಿಜೆಪಿ ತೊರೆದು ಜನರಿಂದ ತಿರಸ್ಕೃತರಾಗುತ್ತಾರೆ. 2017ರಲ್ಲಿ ಮಾಡಿದಂತೆ ಸಂಪೂರ್ಣ ಬಹುಮತದೊಂದಿಗೆ ರಾಜ್ಯದಲ್ಲಿ ಸರ್ಕಾರ ರಚಿಸುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದಿದ್ದಾರೆ.

ನಿಶಾದ್ ಸಮುದಾಯದ ಮುಖೇಶ್ ವರ್ಮಾ ತಮ್ಮ ರಾಜೀನಾಮೆ ಪತ್ರದಲ್ಲಿ, ಕಳೆದ ಐದು ವರ್ಷಗಳಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಾಯಕರ ಬಗ್ಗೆ ಸರ್ಕಾರ ಗಮನ ಹರಿಸಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ರಾಜ್ಯ ಮುಖ್ಯಸ್ಥ ಸ್ವತಂತ್ರ ದೇವ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನೂ ಉಲ್ಲೇಖಿಸಿರುವ ವರ್ಮಾ  “ಕಳೆದ ಐದು ವರ್ಷಗಳಲ್ಲಿ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನಾಯಕರಿಗೆ ಯಾವುದೇ ಗಮನ ನೀಡಲಾಗಿಲ್ಲ ಮತ್ತು ಅವರಿಗೆ ಸರಿಯಾದ ಗೌರವವನ್ನು ನೀಡಲಾಗಿಲ್ಲ ಎಂದು ನಿಮಗೆ ಈ ರೀತಿ ತಿಳಿಸುತ್ತಿದ್ದೇನೆ. ಇದಲ್ಲದೇ ದಲಿತರು, ಹಿಂದುಳಿದವರು, ರೈತರು, ನಿರುದ್ಯೋಗಿ ಯುವಕರು, ಸಣ್ಣ ಮತ್ತು ಮಧ್ಯಮ ಮಟ್ಟದ ವ್ಯಾಪಾರಿಗಳನ್ನು ರಾಜ್ಯ ಸರಕಾರ ನಿರ್ಲಕ್ಷಿಸಿದೆ. ರಾಜ್ಯ ಸರ್ಕಾರದ ಧೋರಣೆಯಿಂದಾಗಿ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬರೆದಿದ್ದಾರೆ.  ಈ ಹಿಂದೆ ರಾಜ್ಯ ಸಂಪುಟಕ್ಕೆ ರಾಜೀನಾಮೆ ನೀಡಿದ ಸ್ವಾಮಿ ಪ್ರಸಾದ್ ಮೌರ್ಯ ಅವರನ್ನು ಬೆಂಬಲಿಸುವುದಾಗಿ ವರ್ಮಾ ಹೇಳಿದರು, “ಮೌರ್ಯ ಅವರು ಹಿಂದುಳಿದಮತ್ತು ಶೋಷಿತ ಸಮುದಾಯಗಳ ನಾಯಕ” ಎಂದು ಹೇಳಿದ್ದಾರೆ.

ಇದನ್ನೂ ಓದಿ:  ಈಗ ಉತ್ತರ ಪ್ರದೇಶದತ್ತ ನೋಡಿ: ಬಿಜೆಪಿ ನಾಯಕರ ಪಕ್ಷಾಂತರಕ್ಕೆ ಶರದ್​ ಪವಾರ್ ವ್ಯಂಗ್ಯ

Published On - 10:32 am, Fri, 14 January 22

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ