AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AMUL Recruitment 2022: ಅಮುಲ್ ಕಂಪೆನಿಯಲ್ಲಿ ಉದ್ಯೋಗಾವಕಾಶ: ವಾರ್ಷಿಕ ವೇತನ 5 ಲಕ್ಷ ರೂ.

AMUL Recruitment 2022: ಈ ನೇಮಕಾತಿ ಅಡಿಯಲ್ಲಿ ಸಹಾಯಕ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್ amul.com ಮೂಲಕ ಅರ್ಜಿ ಸಲ್ಲಿಸಬಹುದು.

AMUL Recruitment 2022: ಅಮುಲ್ ಕಂಪೆನಿಯಲ್ಲಿ ಉದ್ಯೋಗಾವಕಾಶ: ವಾರ್ಷಿಕ ವೇತನ 5 ಲಕ್ಷ ರೂ.
AMUL Recruitment 2022
TV9 Web
| Updated By: ಝಾಹಿರ್ ಯೂಸುಫ್|

Updated on: May 17, 2022 | 8:20 PM

Share

AMUL Recruitment 2022: ವಿಶ್ವದ ಅತಿದೊಡ್ಡ ಹಾಲು ಸಹಕಾರಿ ಸಂಸ್ಥೆಯಾದ ಅಮುಲ್ (AMUL) ತನ್ನ ಕಂಪೆನಿಯಲ್ಲಿನ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿ ಅಡಿಯಲ್ಲಿ ಸಹಾಯಕ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್ amul.com ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗ: ವಿವರಗಳು: ಹುದ್ದೆಯ ಹೆಸರು ಮತ್ತು ಸಂಖ್ಯೆ: 3 ಅಕೌಂಟ್ ಸಹಾಯಕ ಹುದ್ದೆಗಳು

ಉದ್ಯೋಗದ ಸ್ಥಳ: ಲಕ್ನೋ, ಜಮ್ಶೆಡ್‌ಪುರ

ಇದನ್ನೂ ಓದಿ
Image
HAL Recruitment: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್​ನಲ್ಲಿದೆ ಉದ್ಯೋಗಾವಕಾಶ
Image
IOCL recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Image
Indian Army MNS Recruitment 2022: ಭಾರತೀಯ ಸೇನೆಯ ನರ್ಸಿಂಗ್ ಹುದ್ದೆಗಳಿಗೆ ಅರ್ಜಿ ಆಹ್ವಾನ
Image
ONGC Recruitment 2022: ಒಎನ್​ಜಿಸಿಯ 3600 ಹುದ್ದೆಗಳಿಗೆ ಅರ್ಜಿ ಆಹ್ವಾನ

ವೇತನ ಶ್ರೇಣಿ : ವಾರ್ಷಿಕ ವೇತನ 4,00,000 ರೂ.ಗಳಿಂದ 5,00,000 ರೂ. ವರೆಗೆ ಸಿಗಲಿದೆ.

ವಯೋಮಿತಿ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 28 ವರ್ಷಗಳನ್ನು ಮೀರಬಾರದು.

ವಿದ್ಯಾರ್ಹತೆ: ಪ್ರಥಮ ದರ್ಜೆ ಅಂಕಗಳೊಂದಿಗೆ B.Com (ಕಾಮರ್ಸ್ ಪದವಿ), M.Com, MBA/PGDM ಉತ್ತೀರ್ಣರಾಗಿರಬೇಕು. ಲೆಕ್ಕಪತ್ರ ನಿರ್ವಹಣೆ, ತೆರಿಗೆ, ಹಣಕಾಸು ನಿರ್ವಹಣೆ ಇತ್ಯಾದಿಗಳಲ್ಲಿ ಕೆಲಸದ ಅನುಭವ ಹೊಂದಿರಬೇಕು. ಕಂಪ್ಯೂಟರ್ ಕೌಶಲ್ಯವನ್ನೂ ಹೊಂದಿರಬೇಕು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ / ವೈದ್ಯಕೀಯ ಪರೀಕ್ಷೆ / ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು amul.com ಗೆ ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಪ್ರಮು ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 2, 2022.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಹೆಚ್ಚಿನ ಉದ್ಯೋಗ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.