ಭಾರತೀಯ ವಾಯುಪಡೆ (IAF) ‘ಗ್ರೂಪ್ C ಸಿವಿಲಿಯನ್ ಹುದ್ದೆ’ಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಸಂಬಂಧಪಟ್ಟ ಕೇಂದ್ರಗಳು/ ಘಟಕಗಳಿಗೆ ಕಳುಹಿಸುವ ಮೂಲಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ವಾಯುಪಡೆಯಲ್ಲಿ 5 ಬಾಣಸಿಗರ (ಅಡುಗೆ) ಹುದ್ದೆಗಳನ್ನು ಭರ್ತಿ ಮಾಡುತ್ತದೆ. ‘ಉದ್ಯೋಗ ಸುದ್ದಿ/ ರೋಜ್‌ಗಾರ್ ಸಮಾಚಾರ್’ ನಲ್ಲಿ ಈ ಜಾಹೀರಾತು ಪ್ರಕಟವಾದ ದಿನಾಂಕದಿಂದ 30 ದಿನಗಳೊಳಗೆ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು. ಅರ್ಹತೆ, ಆಯ್ಕೆ ಪ್ರಕ್ರಿಯೆ ಮತ್ತು ಇತರ ವಿವರಗಳಿಗಾಗಿ ಕೆಳಗೆ ಓದಿ.
ಅರ್ಹತೆಯ ಮಾನದಂಡ:
ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ ಮೆಟ್ರಿಕ್ಯುಲೇಷನ್‌ನಲ್ಲಿ ಪ್ರಮಾಣಪತ್ರ ಅಥವಾ ಕ್ಯಾಟರಿಂಗ್‌ನಲ್ಲಿ ಡಿಪ್ಲೊಮಾವನ್ನು ಪಡೆದಿರಬೇಕು. ವ್ಯಾಪಾರದಲ್ಲಿ 1 ವರ್ಷದ ಅನುಭವವಿರಬೇಕು. ಹುದ್ದೆಗೆ ಅರ್ಜಿ ಸಲ್ಲಿಸಲು ವಯೋಮಿತಿ 18 ವರ್ಷದಿಂದ 25 ವರ್ಷದೊಳಗಿನವರಾಗಿರಬೇಕು.
ಆಯ್ಕೆ ಪ್ರಕ್ರಿಯೆ:
ಎಲ್ಲಾ ಅರ್ಜಿಗಳನ್ನು ವಯಸ್ಸಿನ ಮಿತಿ, ಕನಿಷ್ಠ ವಿದ್ಯಾರ್ಹತೆ, ದಾಖಲೆಗಳು ಮತ್ತು ಪ್ರಮಾಣಪತ್ರಗಳ ಆಧಾರದಲ್ಲಿ ಪರಿಶೀಲಿಸಲಾಗುತ್ತದೆ. ನಂತರ ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗಾಗಿ ಕರೆ ನೀಡಲಾಗುತ್ತದೆ. ಈ ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಬೇಕಾಗುತ್ತದೆ. ಲಿಖಿತ ಪರೀಕ್ಷೆಯು ಜನರಲ್ ಇಂಟಲಿಜೆನ್ಸ್- ರೀಸನಿಂಗ್, ನ್ಯೂಮರಿಕಲ್ ಆಪ್ಟಿಟ್ಯೂಡ್, ಜನರಲ್ ಇಂಗ್ಲಿಷ್, ಜನರಲ್ ಅವೇರ್ನೆಸ್ ಮತ್ತು ಟ್ರೇಡ್/ಪೋಸ್ಟ್ ಸಂಬಂಧಿತ ಪ್ರಶ್ನೆಗಳನ್ನು ಆಧರಿಸಿರುತ್ತದೆ. ಇವುಗಳನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ.
ಇದನ್ನೂ ಓದಿ:
Job Alert: ಬ್ಯಾಂಕ್ ಆಫ್ ಬರೋಡಾದಲ್ಲಿದೆ ವಿವಿಧ ಉದ್ಯೋಗಾವಕಾಶ; ಸಂಪೂರ್ಣ ಮಾಹಿತಿ ಇಲ್ಲಿದೆ
ಜನರ ಕುತೂಹಲ ತಣಿಸಿದ ಗೂಗಲ್!; 2021ರಲ್ಲಿ ರಿಲೇಷನ್ಶಿಪ್ ಬಗ್ಗೆ ಅತ್ಯಂತ ಹೆಚ್ಚು ಕೇಳಲಾದ ಪ್ರಶ್ನೆಗಳು ಇಲ್ಲಿವೆ ನೋಡಿ