AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Army Ordnance Corps Recruitment 2024 : ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ನಲ್ಲಿ 723 ಹುದ್ದೆಗಳು ಖಾಲಿ, ಇಲ್ಲಿದೆ ಮಾಹಿತಿ

ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ನಲ್ಲಿ ಖಾಲಿಯಿರುವ ಮೆಟೀರಿಯಲ್‌ ಅಸಿಸ್ಟಂಟ್‌, ಜೂನಿಯರ್‌ ಆಫೀಸ್‌ ಅಸಿಸ್ಟಂಟ್‌, ಟ್ರೇಡ್ಸ್‌ಮ್ಯಾನ್‌ ಮೇಟ್‌ ಸೇರಿದಂತೆ ಒಟ್ಟು 723 ಹುದ್ದೆಗಳ ಭರ್ತಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಗಳು ಹುದ್ದೆಗಳ ವಿವರ, ನೇಮಕಾತಿ ಪ್ರಕ್ರಿಯೆ, ಅರ್ಹತಾ ಮಾನದಂಡಗಳು, ಆಯ್ಕೆ ವಿಧಾನ ಮತ್ತು ಮಾಸಿಕ ವೇತನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ.

Army Ordnance Corps Recruitment 2024 : ಆರ್ಮಿ ಆರ್ಡಿನೆನ್ಸ್ ಕಾರ್ಪ್ಸ್ ನಲ್ಲಿ 723 ಹುದ್ದೆಗಳು ಖಾಲಿ, ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Edited By: |

Updated on: Dec 03, 2024 | 10:45 AM

Share

ಭಾರತೀಯ ಸೇನೆಗೆ ಸಾಮಗ್ರಿ ಮತ್ತು ವ್ಯವಸ್ಥಾಪನಾ ಬೆಂಬಲ ಒದಗಿಸುವ ಆರ್ಮಿ ಆರ್ಡನೆನ್ಸ್ ಕಾರ್ಪ್ಸ್ ನೇರ ನೇಮಕಾತಿ ಆಧಾರದ ಮೇಲೆ ಗ್ರೂಪ್ ‘ಸಿ’ ಹುದ್ದೆಗಳ ಭರ್ತಿಗೆ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಇದರಡಿಯಲ್ಲಿ ಮೆಟೀರಿಯಲ್‌ ಅಸಿಸ್ಟಂಟ್‌, ಜೂನಿಯರ್‌ ಆಫೀಸ್‌ ಅಸಿಸ್ಟಂಟ್‌, ಟ್ರೇಡ್ಸ್‌ಮ್ಯಾನ್‌ ಮೇಟ್‌ ಸೇರಿದಂತೆ ಒಟ್ಟು 723 ಹುದ್ದೆಗಳು ಖಾಲಿಯಿದ್ದು, ಪಿಯುಸಿ, ಎಸ್ಎಸ್ ಎಲ್ ಸಿ ಪೂರ್ಣಗೊಳಿಸಿರುವ ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 22 ರೊಳಗೆ ಅಧಿಕೃತ ವೆಬ್ಸೈಟ್ ಗೆ ಭೇಟಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ ಹಾಗೂ ಶೈಕ್ಷಣಿಕ ಅರ್ಹತೆಗಳು

* ಮೆಟೀರಿಯಲ್‌ ಅಸಿಸ್ಟಂಟ್‌ ವಿಭಾಗದಲ್ಲಿ ಖಾಲಿಯಿರುವ 19 ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಪದವಿ ಪೂರ್ಣಗೊಳಿಸಿರಬೇಕು.

* ಜೂನಿಯರ್‌ ಆಫೀಸ್‌ ಅಸಿಸ್ಟಂಟ್‌ ವಿಭಾಗದಲ್ಲಿ 27 ಹುದ್ದೆಗಳು ಹಾಗೂ ಟೆಲಿ ಆಪರೇಟರ್‌ ಗ್ರೇಡ್‌ II ವಿಭಾಗದಲ್ಲಿ 14 ಹುದ್ದೆಗಳು ಖಾಲಿಯಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪಿಯುಸಿ ವಿದ್ಯಾಭ್ಯಾಸ ಹೊಂದಿರಬೇಕು.

* ಸಿವಿಲ್‌ ಮೋಟರ್‌ ಡ್ರೈವರ್‌ ಡಿಪಾರ್ಟ್ಮೆಂಟ್ ನಲ್ಲಿ 4 ಹುದ್ದೆಗಳು, ಫೈರ್‌ಮ್ಯಾನ್‌ ವಿಭಾಗದಲ್ಲಿ 247 ಹುದ್ದೆಗಳು, ಕಾರ್ಪೆಂಟರ್‌ ಹಾಗೂ ಜಾಯಿನರ್‌ ವಿಭಾಗದಲ್ಲಿ 7 ಹುದ್ದೆಗಳು, ಪೈಂಟರ್‌ ಹಾಗೂ ಡೆಕೊರೇಟರ್‌ ವಿಭಾಗದಲ್ಲಿ 5 ಹುದ್ದೆಗಳು, ಎಂಟಿಎಸ್‌ ವಿಭಾಗದಲ್ಲಿ 11 ಹುದ್ದೆಗಳು ಹಾಗೂ ಟ್ರೇಡ್ಸ್‌ಮ್ಯಾನ್‌ ಮೇಟ್‌ ವಿಭಾಗದಲ್ಲಿ 389 ಹುದ್ದೆಗಳು ಖಾಲಿಯಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸ್ ಎಸ್ ಎಲ್ ಸಿ ಪಾಸ್ ಆಗಿರುವುದು ಕಡ್ಡಾಯವಾಗಿದೆ.

ವಯೋಮಿತಿ

* ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ ವಯಸ್ಸು 27 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಪಿಡಬ್ಲ್ಯುಬಿಡಿ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.

ಅರ್ಜಿ ಶುಲ್ಕ, ಆಯ್ಕೆ ವಿಧಾನ ಹಾಗೂ ಮಾಸಿಕ ವೇತನ

* ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

* ಅಭ್ಯರ್ಥಿಗಳಿಗೆ ಹುದ್ದೆಗಳ ಅನುಗುಣವಾಗಿ 18,000 ರೂ. – 92,300 ರೂ. ಮಾಸಿಕ ವೇತನ ನೀಡಲಾಗುತ್ತದೆ.

ಪ್ರಮುಖ ದಿನಾಂಕಗಳು

* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಡಿಸೆಂಬರ್ 2, 2024

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಡಿಸೆಂಬರ್ 22, 2024

ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ