BECIL Recruitment 2022: BECIL ನಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 32 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Mar 10, 2022 | 10:41 PM

BECIL Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು, becil.com ನಲ್ಲಿ BECIL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.

BECIL Recruitment 2022: BECIL ನಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 32 ಸಾವಿರ ರೂ.
BECIL Recruitment 2022
Follow us on

BECIL Recruitment 2022: ಬ್ರಾಡ್​ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್ (BECIL)ನ ತಾಂತ್ರಿಕ ಸಹಾಯಕ/ತಂತ್ರಜ್ಞ (ಅನಸ್ತೇಶಿಯಾ/ಆಪರೇಷನ್ ಥಿಯೇಟರ್), ಲ್ಯಾಬ್ ಅಟೆಂಡೆಂಟ್ Gr II, ವೈದ್ಯಕೀಯ ತಂತ್ರಜ್ಞ, ಕ್ಯಾಷಿಯರ್, ರೇಡಿಯೋಗ್ರಾಫಿಕ್ ತಂತ್ರಜ್ಞ ಗ್ರೇಡ್-I ಮತ್ತು ಇತರರು ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು, becil.com ನಲ್ಲಿ BECIL ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.

BECIL Recruitment 2022: ಹುದ್ದೆಗಳ ವಿವರಗಳು:
ತಾಂತ್ರಿಕ ಸಹಾಯಕ/ತಂತ್ರಜ್ಞ (ಅನಸ್ತೇಶಿಯಾ/ಆಪರೇಷನ್ ಥಿಯೇಟರ್) – 41 ಹುದ್ದೆಗಳು
ಲ್ಯಾಬ್ ಅಟೆಂಡೆಂಟ್ Gr. II – 3 ಹುದ್ದೆಗಳು
ವೈದ್ಯಕೀಯ ತಂತ್ರಜ್ಞ – 34 ಹುದ್ದೆಗಳು
ಕ್ಯಾಷಿಯರ್ – 6 ಹುದ್ದೆಗಳು
ರೇಡಿಯೋಗ್ರಾಫಿಕ್ ತಂತ್ರಜ್ಞ ಗ್ರೇಡ್-I – 1 ಹುದ್ದೆ
ಸೀನಿಯರ್ ಮೆಕ್ಯಾನಿಕ್ (A/C&R) – 1 ಹುದ್ದೆ

BECIL Recruitment 2022: ಅರ್ಹತಾ ಮಾನದಂಡಗಳು:
ತಾಂತ್ರಿಕ ಸಹಾಯಕ/ತಂತ್ರಜ್ಞ (ಅನಸ್ತೇಶಿಯಾ/ಆಪರೇಷನ್ ಥಿಯೇಟರ್)- 5 ವರ್ಷಗಳ ಅನುಭವದೊಂದಿಗೆ OT ತಂತ್ರಗಳಲ್ಲಿ B.Sc.ಪದವಿ ಹೊಂದಿರಬೇಕು.
ಲ್ಯಾಬ್ ಅಟೆಂಡೆಂಟ್ Gr II – ಅಭ್ಯರ್ಥಿಗಳು ವಿಜ್ಞಾನ ವಿಷಯದೊಂದಿಗೆ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಸಂಬಂಧಿತ ಕ್ಷೇತ್ರದಲ್ಲಿ 2 ವರ್ಷಗಳ ಅನುಭವದೊಂದಿಗೆ ವೈದ್ಯಕೀಯ ಲ್ಯಾಬ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಮಾಡಿರಬೇಕು.
ವೈದ್ಯಕೀಯ ದಾಖಲೆ ತಂತ್ರಜ್ಞ – ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ B.Sc ಪದವಿಯನ್ನು ಹೊಂದಿರಬೇಕು. ಅಲ್ಲದೆ ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ ಮಾಡಿರಬೇಕು.
ಕ್ಯಾಷಿಯರ್ – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ವಾಣಿಜ್ಯ ಅಥವಾ ತತ್ಸಮಾನ ಪದವಿ ಮತ್ತು ಕಂಪ್ಯೂಟರ್ ಅಪ್ಲಿಕೇಶನ್‌ನಲ್ಲಿ ಪ್ರಾವೀಣ್ಯತೆ ಹೊಂದಿರಬೇಕು.
ರೇಡಿಯೋಗ್ರಾಫಿಕ್ ತಂತ್ರಜ್ಞ ಗ್ರೇಡ್-I – ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ/ಸಂಸ್ಥೆಯಿಂದ ರೇಡಿಯೋಗ್ರಫಿಯಲ್ಲಿ B.Sc ಅಥವಾ ಮಾನ್ಯತೆ ಪಡೆದ ಸಂಸ್ಥೆಯಿಂದ ರೇಡಿಯೋಗ್ರಫಿಯಲ್ಲಿ 2 ವರ್ಷಗಳ ಡಿಪ್ಲೋಮಾ ಮಾಡಿರಬೇಕು.
ಸೀನಿಯರ್ ಮೆಕ್ಯಾನಿಕ್ (A/C&R) – ಮೆಟ್ರಿಕ್ಯುಲೇಷನ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಕನಿಷ್ಠ 12 ತಿಂಗಳ ITI / ರೆಫ್ರಿಜರೇಶನ್ ಮತ್ತು ಮಾನ್ಯತೆ ಪಡೆದ ಇನ್ಸ್ಟಿಟ್ಯೂಟ್ / ಪಾಲಿಟೆಕ್​ನಿಂದ ಹವಾನಿಯಂತ್ರಣದಲ್ಲಿ ಡಿಪ್ಲೋಮಾ ಪ್ರಮಾಣಪತ್ರ ಹೊಂದಿರಬೇಕು.

BECIL Recruitment 2022: ವಯೋಮಿತಿ:
ತಾಂತ್ರಿಕ ಸಹಾಯಕ/ತಂತ್ರಜ್ಞ (ಅನಸ್ತೇಶಿಯಾ/ಆಪರೇಷನ್ ಥಿಯೇಟರ್)- 25 ರಿಂದ 35 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಲ್ಯಾಬ್ ಅಟೆಂಡೆಂಟ್ Gr. II – 18 ರಿಂದ 27 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೈದ್ಯಕೀಯ ದಾಖಲೆ ತಂತ್ರಜ್ಞ – 18 ರಿಂದ 30 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಕ್ಯಾಷಿಯರ್ – 21 ರಿಂದ 30 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ರೇಡಿಯೋಗ್ರಾಫಿಕ್ ತಂತ್ರಜ್ಞ ಗ್ರೇಡ್- I – 21 ರಿಂದ 35 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಹಿರಿಯ ಮೆಕ್ಯಾನಿಕ್ (A/C&R) – 18 ರಿಂದ 40 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

BECIL Recruitment 2022: ವೇತನ:
ತಾಂತ್ರಿಕ ಸಹಾಯಕ/ತಂತ್ರಜ್ಞ (ಅನಸ್ತೇಶಿಯಾ/ಆಪರೇಷನ್ ಥಿಯೇಟರ್) – ರೂ.33,450/-
ಲ್ಯಾಬ್ ಅಟೆಂಡೆಂಟ್ Gr.II – ರೂ.19,900/-
ವೈದ್ಯಕೀಯ ದಾಖಲೆ ತಂತ್ರಜ್ಞ – ರೂ.23,550/-
ಕ್ಯಾಷಿಯರ್ – ರೂ.23,550/-
ರೇಡಿಯೋಗ್ರಾಫಿಕ್-ಟೆಕ್ನಿಷಿಯನ್ ರೂ. 33,450/-
ಸೀನಿಯರ್ ಮೆಕ್ಯಾನಿಕ್ (A/C&R)- ರೂ. 23,550/-

BECIL Recruitment 2022: ಪ್ರಮುಖ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11 ಮಾರ್ಚ್ 2022

BECIL Recruitment 2022: ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: IPL 2022: ಐಪಿಎಲ್​ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!

ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!

ಇದನ್ನೂ ಓದಿ: RCB ತಂಡವನ್ನು ಮುನ್ನಡೆಸಿದ 5 ನಾಯಕರುಗಳು ಯಾರೆಲ್ಲಾ ಗೊತ್ತಾ?

(BECIL Recruitment 2022: Vacancies Out For 96 Posts)