BRO Recruitment 2022: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನೇಮಕಾತಿ: ವೇತನ 56 ಸಾವಿರ ರೂ.

| Updated By: ಝಾಹಿರ್ ಯೂಸುಫ್

Updated on: Jun 25, 2022 | 2:48 PM

BRO Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಾರ್ಡರ್ ರೋಡ್ಸ್ ಆರ್ಗನೈಸೇಶನ್​ನ ಅಧಿಕೃತ ವೆಬ್‌ಸೈಟ್ bro.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿನಂತಿವೆ.

BRO Recruitment 2022: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನೇಮಕಾತಿ: ವೇತನ 56 ಸಾವಿರ ರೂ.
BRO Recruitment 2022
Follow us on

BRO Recruitment 2022: ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO) ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಮಲ್ಟಿ ಸ್ಕಿಲ್ಡ್ ವರ್ಕರ್ ಮತ್ತು ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಾರ್ಡರ್ ರೋಡ್ಸ್ ಆರ್ಗನೈಸೇಶನ್​ನ ಅಧಿಕೃತ ವೆಬ್‌ಸೈಟ್ bro.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿನಂತಿವೆ.

ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳು- 1178

ಇದರಲ್ಲಿ 147 ಮೇಸನ್‌ಗಳು, 155 ನರ್ಸಿಂಗ್ ಸಹಾಯಕರು ಮತ್ತು 499 ಡ್ರೈವರ್ ಇಂಜಿನ್ ಸ್ಟ್ಯಾಟಿಕ್ ಹುದ್ದೆಗಳನ್ನು ಮಲ್ಟಿ ಸ್ಕಿಲ್ಡ್ ವರ್ಕರ್ ಪಟ್ಟಿಯಲ್ಲಿ ಸೇರಿಸಲಾಗಿದೆ. ಹಾಗೆಯೇ 377 ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗಳಿವೆ.

ಇದನ್ನೂ ಓದಿ
ರಾಜ್ಯ ಬೀಜ ನಿಗಮದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ: ವೇತನ 42 ಸಾವಿರ ರೂ.
Agniveer Recruitment 2022: ಭಾರತೀಯ ಸೇನೆಯ ಅಗ್ನಿವೀರ್ ನೇಮಕಾತಿಯ ಅಧಿಸೂಚನೆ ಪ್ರಕಟ
SCI Recruitment 2022: ಸುಪ್ರೀ ಕೋರ್ಟ್ ನೇಮಕಾತಿ: ಪದವಿ ಹೊಂದಿರುವವರಿಗೆ ಅವಕಾಶ, ವೇತನ 63 ಸಾವಿರ ರೂ.
Indian Navy recruitment 2022: ನೌಕಾಪಡೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ

ವಿದ್ಯಾರ್ಹತೆ:

-10ನೇ ತರಗತಿ ಉತ್ತೀರ್ಣರಾಗಿ ಐಟಿಐ ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಡ್ರೈವರ್ ಎಂಜಿನ್ ಸ್ಟ್ಯಾಟಿಕ್ ಮತ್ತು ಮೇಸನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

-ನರ್ಸಿಂಗ್ ಸಹಾಯಕ ಹುದ್ದೆಗಳಿಗೆ, ನರ್ಸಿಂಗ್ ಮಿಡ್‌ವೈಫರಿ ಪ್ರಮಾಣಪತ್ರದೊಂದಿಗೆ 12 ನೇ ತೇರ್ಗಡೆಯಾಗಿರಬೇಕು. ಅಥವಾ ಫಾರ್ಮಸಿಯಲ್ಲಿ ಪ್ರಮಾಣಪತ್ರ ಹೊಂದಿರಬೇಕು.

-12 ನೇ ಪಾಸ್‌ ಆದವರು ಮತ್ತು ಸ್ಟೋರ್ ಕೀಪರ್ ಬಗ್ಗೆ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಸ್ಟೋರ್ ಕೀಪರ್ ಟೆಕ್ನಿಕಲ್‌ಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ:

18 ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆದರೆ, ಮಲ್ಟಿ ಸ್ಕಿಲ್ಡ್ ವರ್ಕರ್ ಹುದ್ದೆಗಳಿಗೆ 25 ವರ್ಷಗಳವರೆಗೆ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ.

ವೇತನ:

ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 18 ರಿಂದ 56 ಸಾವಿರದವರೆಗೆ ವೇತನ ಸಿಗಲಿದೆ.

ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜುಲೈ 22, 2022

ಆಯ್ಕೆ ಪ್ರಕ್ರಿಯೆ:

-ಲಿಖಿತ ಪರೀಕ್ಷೆ
-ದೈಹಿಕ ದಕ್ಷತೆಯ ಪರೀಕ್ಷೆ
-ಪ್ರಾಯೋಗಿಕ ಪರೀಕ್ಷೆ (ವ್ಯಾಪಾರ ಪರೀಕ್ಷೆ)
-ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳ (PME) ಆಧಾರದ ಮೇಲೆ ನೇಮಕಾತಿ ನಡೆಯಲಿದೆ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.